LatestMysore

ಕೆ.ಆರ್‌.ನಗರದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಶಾಸಕ ಡಿ‌.ರವಿಶಂಕರ್

ಕೆ.ಆರ್‌.ನಗರ(ಜಿಟೆಕ್ ಶಂಕರ್): ಹಾಸನದಿಂದ ಮೈಸೂರಿಗೆ ತೆರಳುವ ಸಮಯದಲ್ಲಿ ಕೆ.ಆರ್‌.ನಗರ ಪಟ್ಟಣಕ್ಕೆ ಆಗಮಿಸಿದ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಶಾಸಕ ಡಿ‌.ರವಿಶಂಕರ್ ಸ್ವಾಗತಿಸಿದರು.

ಪಟ್ಟಣದ ಪುರಸಭೆ ವೃತ್ತಕ್ಕೆ  ಗೃಹ ಸಚಿವರು ಆಗಮಿಸಿದಾಗ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಚಿವರ ಪರ ಜಯಕಾರದ ಘೋಷಣೆ ಮೊಳಗಿಸಿದರು. ಕ್ಷೇತ್ರದ ಕಾಂಗ್ರೆಸ್ ಮತ್ತು ಜನತೆಯ ಪರವಾಗಿ ಗೃಹ ಸಚಿವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಹಾರ ಹಾಕಿದ ಶಾಸಕರು ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು. ಈ ಸಮಯದಲ್ಲಿ ಮಾತನಾಡಿದ ಜಿ.ಪರಮೇಶ್ವರ್ ಶಾಸಕ ಡಿ.ರವಿಶಂಕರ್ ಕ್ಷೇತ್ರದ ಅಭಿವೃದ್ದಿಗೆ ಉತ್ರಮವಾಗಿ ಕೆಲಸ ಮಾಡುತ್ತಿದ್ದು ಅವರಿಗೆ ಸದಾ ನನ್ನ ಬೆಂಬಲ ಇದ್ದು  ಇಲಾಖೆಯ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಪೊಲೀಸ್ ಠಾಣೆ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ನೆರವು ನೀಡಲು ಸಿದ್ದನಿದ್ದು ನನ್ನ ಸಹೋದರ ಸಮಾನರಾಗಿರುವ ಡಿ.ರವಿಶಂಕರ್ ಅವರಿಗೆ ನನ್ನ ಸಲಹೆ ಮತ್ತು ಆಶೀರ್ವಾದ ನಿರಂತರವಾಗಿ ಇರಲಿದೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್‌.ಕುಮಾರ್,  ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಬಳ್ಳೂರುಮೂರ್ತಿ, ದಲಿತ ಮುಖಂಡ ಹೆಚ್.ಎಸ್.ವೇಣುಗೋಪಾಲ್, ಹೊಸಕೋಟೆ ಚೆಲುವರಾಜು, ಪುರಸಭೆ ಮಾಜಿ ಸದಸ್ಯರಾದ ನಟರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಗ್ರಾ.ಪಂ.ಮಾಜಿ ಸದಸ್ಯ ಎಂ.ಎಸ್.ಅನಂತ್, ಕಾಂಗ್ರೆಸ್ ಮುಖಂಡರಾದ ಪುಟ್ಟು, ಚಲುವರಾಜು, ತಿಪ್ಪೂರು ಮಂಜುನಾಥ್ ಮತ್ತಿತರರು ಇದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want