ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡರಿಂದ ಮುಸ್ಲಿಂಬಾಂಧವರಿಗೆ ಡ್ರೈಪ್ರೂಟ್ಸ್ ವಿತರಣೆ

ಕೆ.ಆರ್.ನಗರ(ಜಿಟೆಕ್ ಶಂಕರ್) : ಕ್ಷೇತ್ರದ ಮುಸ್ಲಿಂ ಭಾಂದವರಿಗೆ ರಂಜಾನ್ ಹಬ್ಬದ ಹಬ್ಬದ ಅಂಗವಾಗಿ ಶಾಸಕ ಡಿ.ರವಿಶಂಕರ್ ಕೊಡಮಾಡಿದ ಡ್ರೈಫುಡ್ಸ್ ಬಾಕ್ಸ್ ಗಳನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ವಿತರಣೆ ಮಾಡಿದರು.
ಪಟ್ಟಣದ ಮುಸ್ಲಿಂ ಬಡಾವಣೆಯ ಜಾಮಿಯ ಮಸೀದಿಯ ಮುಂದೆ ಇರುವ ಉದ್ಯಾನವನ ಆವರಣದಲ್ಲಿ ಬುಧವಾರ ಬಾಕ್ಸ್ ಗಳನ್ನು ವಿತರಿಸಿ ಮಾತನಾಡಿದ ಅವರು ಇಸ್ಲಾಂ ಕ್ಯಾಲೆಂಡರಿನ ಅತ್ಯಂತ ಪವಿತ್ರವಾದ 9 ನೇ ತಿಂಗಳಿನಲ್ಲಿ ಮುಸ್ಲಿಂ ಬಾಂದವರು 30 ದಿನಗಳ ಕಾಲ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಲಿದ್ದು ಇದು ಆತ್ಮ ಶುದ್ದಿ ಮಾಡುತ್ತದೆ ಎಂದರು.
ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಬಾಂಧವರು ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸಿ ಭೋಜನ ಸವಿಯುವುದರಿಂದ ಇದು ಪರಸ್ಪರ ಸಾಮರಸ್ಯವನ್ನು ಹೆಚ್ಚಿಸಲಿದ್ದು ನಿಷ್ಕಳಂಕ ಮನಸ್ಸಿನವರಾಗಲು ಪ್ರಯತ್ನಿಸುವಂತೆ ಮನಸ್ಸನ್ನು ಪ್ರೇರೇಪಣೆ ಗೊಳಿಸುತ್ತದೆ ಎಂದು ತಿಳಿಸಿದರು.
ಉಪವಾಸದ ಸಂದರ್ಭದಲ್ಲಿ ತಮ್ಮ ಸಂಪಾದನೆಯ ಅಲ್ಪ ಭಾಗವನ್ನು ಬಡವರು ಮತ್ತು ಸಂಕಷ್ಟದಲ್ಲಿರುವವರಿಗೆ ದಾನ ಮಾಡುವ ಉದ್ದಾರತೆ ಹೆಚ್ಚಿಸಿ ಸಹಾನುಭೂತಿ ಉಂಟಾಗುವಂತೆ ಮಾಡುವ ಈ ಸಮಯ ಅತ್ಯಂತ ಮಹತ್ವ ಪೂರ್ಣವಾದದ್ದು ಎಂದು ಹೇಳಿದರು.
ಭಗವಂತನನ್ನು ಪೂಜಿಸಿ, ಪ್ರಾರ್ಥಿಸಿ ರಂಜಾನ್ ಆಚರಣೆ ಮಾಡುವ ಭಾಂದವರಿಗೆ ನಮ್ಮಕುಟುಂಬದ ವತಿಯಿಂದ ಅಲ್ಪ ಉಡುಗೊರೆ ನೀಡುತ್ತಿದ್ದು ದಯಾಮಯನಾದ ಅಲ್ಲಾ ಸರ್ವರಿಗೂ ಸಕಲ ಸನ್ಮಂಗಳ ಉಂಟು ಮಾಡಲೆಂದು ಆರೈಸಿದರು.

ಆ ನಂತರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರುಗಳು ಪಟ್ಟಣದ ಸೇರಿದಂತೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಎಲ್ಲಾ ಗ್ರಾಮಗಳಿಗೂ ತೆರಳಿ ಮುಸ್ಲಿಂ ಭಾಂದವರ ಕುಟುಂಬಗಳಿಗೆ ಡ್ರೈ ಪುಡ್ಸ್ ಬಾಕ್ಸ್ ಗಳನ್ನು ವಿತರಣೆ ಮಾಡಿ ರಂಜಾನ್ ಶುಭಾಷಯ ಕೋರಿದರು.
ಜಾಮಿಯಾ ಮಸೀದಿಯ ಧರ್ಮ ಗುರು ತಬ್ರೇಜ್ ಹಝರತ್, ಕಮಿಟಿ ಕಾರ್ಯದರ್ಶಿ ಅಪ್ಸರ್ ಬಾಬು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್ ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಪುರಸಭೆ ಮಾಜಿ ಸದಸ್ಯ ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಕಾಂಗ್ರೆಸ್ ಮುಖಂಡರಾದ ನವೀದ್, ಅಪ್ಪಾಜಿಗೌಡ ಮತ್ತಿತರರು ಇದ್ದರು.







