LatestMysore

ಬಿಸಿಲಿನಲ್ಲಿ ತಂಪಾದ ಆಹಾರ ಪದಾರ್ಥ ಸೇವನೆ ಆರೋಗ್ಯಕ್ಕೆ ಸಹಕಾರಿ: ಬೇಬಿಮಹೇಶ್

 ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಬಿರು ಬೇಸಿಗೆಯ ಬಿಸಿಲಿನಲ್ಲಿ ಸಾರ್ವಜನಿಕರು ತಂಪಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಮೂಲಕ ಬಿಸಿಲಿನಿಂದ ರಕ್ಷಣೆ ಪಡೆದು ಆರೋಗ್ಯ ಕಾಪಾಡಿಕೊಳ್ಳುವಂತೆ ಸುಗ್ಗನಹಳ್ಳಿಯ ವಿಜೇತ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷೆ ಬೇಬಿಮಹೇಶ್ ಕಿವಿಮಾತು ಹೇಳಿದರು.

ಸುಗ್ಗನಹಳ್ಳಿ ಗ್ರಾಮದಲ್ಲಿರುವ ಶಾಲಾವರಣದಲ್ಲಿ ಶಾಲಾಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ವಿಶೇಷ ಆಹಾರಮೇಳದಲ್ಲಿ ಮಕ್ಕಳಿಗೆ ಬೇಸಿಗೆ ಸಮಯದಲ್ಲಿ ಯಾವ ಆಹಾರಪದಾರ್ಥಗಳನ್ನು ಉಪಯೋಗಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಅತಿಯಾದ ಬಿಸಿಲು ಹಿರಿಯರು ಹಾಗೂ ಮಕ್ಕಳಮೇಲೆ ಪರಿಣಾಮ ಬೀರುವುದರಿಂದ ಎಲ್ಲಾದರೂ ಹೊರ ಹೋದ ಸಂಧರ್ಭದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆದು ಸಂಚಾರಮಾಡುವಂತೆ ಅಲ್ಲದೆ ಪೋಷಕರು ಮಕ್ಕಳಿಗೆ ಬಿಸಿಲಿನ ತಾಪದಿಂದ ದೂರವಿಟ್ಟು ತಂಪಾದ ಆಹಾರಪಾನೀಯಗಳನ್ನು ನೀಡುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವಂತೆ ಕಿವಿಮಾತು ಹೇಳಿದರು.

ಬೇಸಿಗೆ ಸಮಯದಲ್ಲಿ ಸಿಗುವ ತಾಜಾ ಹಣ್ಣಿನ ಜ್ಯೂಸ್, ಎಳನೀರು, ಮಜ್ಜಿಗೆ, ಪಾನಕ, ಹಲವಾರು ಹಣ್ಣಿನಿಂದ ತಯಾರುಮಾಡಿದ ಜ್ಯೂಸ್ ಹಾಗೂ ತರಕಾರಿ ಹಣ್ಣುಗಳ ಸಲಾಡ್‌ಗಳನ್ನು ತಯಾರುಮಾಡಿದ್ದ ಮಕ್ಕಳು ಇದನ್ನು ಮಾರಾಟಮಾಡಿ ಶಾಲಾಹಂತದಲ್ಲಿ ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳುವಲ್ಲಿ ಮಾಡಿದ ಯತ್ನ ಶ್ಲಾಘನೀಯವಾಗಿದೆ ಎಂದರು.

ಈ ಸಂಧರ್ಭದಲ್ಲಿ ಮಕ್ಕಳಿಂದ ತಂಪು ಪಾನೀಯ, ಸಲಾಡ್ ಹಾಗೂ ಇತರೆ ಹಣ್ಣುತರಕಾರಿ ಜ್ಯೂಸ್‌ಗಳನ್ನು ಪಡೆದು ಅದರ ರುಚಿಯನ್ನು ಸವಿದ ಪೋಷಕರು, ಶಿಕ್ಷಕರು ಶಾಲಾ ಆಡಳಿತ ಮಂಡಳಿ ಬೇಸಿಗೆ ಸಮಯದಲ್ಲಿ ಮಾಡಿರುವ ಇಂತಹ ಕಾರ್ಯಕ್ರಮ ಶಾಲಾ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನದೊಂದಿಗೆ ಬೇಸಿಗೆ ಸಮಯದಲ್ಲಿ ಎಲ್ಲರ ಮನಸ್ಸಿನೊಂದಿಗೆ ದೇಹವನ್ನು ತಂಪುಮಾಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹೆಚ್.ಸಿ.ಮಹೇಶ್, ಶಿಕ್ಷಕಿಯರಾದ ಹಾಜೀರಾ ಬೀಬಿ, ರಶ್ಮಿ, ಅಶ್ವಿನಿ, ಫಿಜಾ, ರಕ್ಷಿತಾ, ಮಹಾದೇವಿ, ಪವಿತ್ರ, ರಂಜಿತಾ, ಫೌಜಿಯಾ, ಶ್ಯಾಮಲಾ, ಸಿಬ್ಬಂದಿ ಮಂಜುನಾಥ್, ಮನು, ಪ್ರಜ್ವಲ್, ಕಲಾವತಿ, ವಿನೋದ, ಕೋಮಲಾ, ಮತ್ತಿತರರು ಹಾಗೂ ಪೋಷಕರು ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want