Cinema

ಕಾಂತಾರ ಕರಾಮತ್… ಇದು ಕಾಂತಾರ ಸಿನಿಮಾ ಕುರಿತ ಕವನ… ಒಮ್ಮೆ ಓದಿ ಬಿಡಿ…

ಕಾಂತಾರ ಕರಾಮತ್

ತಲೆಬಾಗಿತು ಇಡೀಜಗತ್

ನಿನ್ನೆಮೊನ್ನೆಯ ಪಡ್ಡೆಹುಡುಗ

ರಾತ್ರೋರಾತ್ರಿ ಜಗತ್ಪ್ರಸಿದ್ಧ ಗಿಡುಗ

ಯುವ ಚಿತ್ರೋದ್ಯಮಿ ಕನ್ನಡಿಗ

ಸಿನಿಮಾ ಪ್ರಪಂಚದ ಗಾರುಡಿಗ!

ಆದರೆ….

ಎಷ್ಟುಮಂದಿಗೆ ಗೊತ್ತು ಈತನ

ಸ್ವಂತಿಕೆ ಹಿಂದಿರುವ ಶ್ರಮದಾನ

ಹಗಲು ರಾತ್ರಿ ಶ್ರದ್ಧಾ ಭಕ್ತಿ ಸಿರಿತನ

ಸರಳ ಸಜ್ಜನಿಕೆ ಸಮೂರ್ತ ಹಿರಿತನ

ನಿಷ್ಠೆ ಪ್ರತಿಷ್ಠೆ ಗುರಿಸಾಧನೆ ಸಂಪದ

ಸಂಸ್ಕೃತಿ ಪರಂಪರೆಯ ಪರಮಪದ

ಪರಿಶ್ರಮದ ಅಪರಿಮಿತ ಬದ್ಧತೆ

ಪರಿಪೂರ್ಣ ಪ್ರಾಮಾಣಿಕ ಪಕ್ವತೆ

FLASH BACK…?

ಅಂದು ಆಗ ಇವನ:

ಅಂತರಾಳ ಅರಿಯದಾದ

ಮೂರ್ಖ ಶಿಖಾಮಣಿಗಳೇ

ಅರ್ಹತೆ ಅರ್ಥೈಸಿಕೊಳ್ಳದ

ಸ್ವಾರ್ಥ ಮೂರ್ತಿಗಳೇ

ಯೋಗ್ಯತೆ ಅಳೆಯದಾದ

ಸ್ವಪ್ರತಿಷ್ಠೆ ಅ-ಯೋಗ್ಯರೇ

ಪ್ರಶಾಂತನ(ಶೆಟ್ಟಿ) ಪ್ರತಿಭೆಗೆ ತಕ್ಕ

ಪುರಸ್ಕಾರ ನೀಡದೇಹೋದ

ಮೂಗು ಮುರಿದು ಮೂತಿ ತಿರುವಿದ

ಮಹಾಸುಳ್ಳಿನ ಮುಳ್ಳುಗಳೇ

ಕಾಲಕಸದಂತೆ ಕಸದ ಬುಟ್ಟಿಗೆಸೆದ

ಹೀಗಳೆದು ಜರಿದ ಜಳ್ಳುಪೊಳ್ಳುಗಳೇ

ಡೌಲುಢಂಬಾಚಾರ ತೋರಿದ

ಗತ್ತು ಗಮ್ಮತ್ತಿನ ಕಳ್ಳಮಳ್ಳರೇ….?

ಇಂದು ಈಗ ಇವನನ್ನ:

ಕಸದಿಂದ ರಸತೆಗೆದ

ಹೊನ್ನಗಟ್ಟಿ ರಿಷಭಶೆಟ್ಟಿ ನೀನು

ಸಾಧನೆಯ ಶತಮಾನದ

ಪ್ರತಿಭಾವಂತ ಪುರುಷ ನೀನು

ನವನವೀನ ನವರತ್ನದ

ಅನರ್ಘ್ಯದಾ ಮುತ್ತು ನೀನು

ಎಲ್ಲರಿಗೂ.. ಬೇಕಾದ

ಎಲ್ಲರೊಳ್ ಒಂದಾದ ಜಾಣ ನೀನು

ಹೀಗೆ…ಇಂದ್ರಚಂದ್ರ ಎಂದೆಲ್ಲ ನಿನ್ನನ್ನು

ಹೊ(ಬೊ)ಗಳುತ್ತ ಹೊನ್ನಶೂಲಕ್ಕೇರಿಸುವ

ಹೊಗಳುಭಟ್ಟರಾದ ಗೋಸುಂಬೆಗಳಾದ

ಆ…ಅವರುಗಳೇ, ಈ…ಇವರುಗಳು?

ಸರಿ-ತಪ್ಪು, ರಕ್ಷೆ-ಶಿಕ್ಷೆ, ಇತ್ಯಾದಿಯನ್ನು

ಕಾಲವೆ ನಿರ್ಣಯಿಸುತ್ತೆ, ಕಾದು ನೋಡೋಣ!

FLASH FRONT LOOK……..?

38 ವರ್ಷಗಳಿಂದ ಪ್ರಕಟಿಸದ

ಫ್ರಂಟ್ ಲೈನ್

ಮ್ಯಾಗಝೀನ್ ಮುಖಪುಟ ಲೇಖನ

92 ವರ್ಷಗಳಿಂದ ಸಾಧಿಸದ

ಸ್ಯಾಂಡಲ್‌ ವುಡ್

ಸರ್ವತೋಮುಖ ಸುಗಂಧ ಲೇಪನ

103 ವರ್ಷಗಳಿಂದ ಆಗಿರದ

ಇಂಡಿಯನ್ ಫಿಲ್ಮ್ ವರ್ಲ್ಡ್

ಸರ್ವ ಶ್ರೇಷ್ಠ ಜೇಷ್ಠ ಮಾಪನ

128 ವರ್ಷಗಳಿಂದ ಆಗಿರದ

ಸಿನಿಪ್ರಪಂಚ ಹಾಲಿವುಡ್

ಸಾರ್ವಕಾಲಿಕ ಹೊಸ ಚೇತನ

ಮುಂತಾದ ಅನೇಕ ದಾಖಲೆ

ಕಂಡು ಕೇಳಿ

ಬೆರಗಾಗಿ ಬೆಪ್ಪರಾಗಿ ತೆಪ್ಪಗಾದರು…?

The FLASH FUTURE ……?

ಭವಿಷ್ಯತ್ಕಾಲದಲ್ಲಿ ಮುಂದೊಂದಿನ

ಸಾಧಾರಣ ಶೆಟ್ಟರ

ಅ-ಸಾಧಾರಣ ಕಾಂತಾರ

ಪ್ರಪಂಚದಾದ್ಯಂತ ಎಲ್ಲದರಲ್ಲು

ನಂಬರ್ 1, ಆಸ್ಕರನ್ನೂ ಗೆಲ್ಲು

ಅಂಥ ಇಂಥ..ಜನರಿಂದ

ಯಾವುದೇ ಕಾಲ್ತುಳಿತಕ್ಕೆ

ಕಾಲೆಳೆಯುವವರ ಸೆಳೆತಕ್ಕೆ

ಸಿಲುಕದಂತೆ ಕಾಪಾಡು ದೊರೆ

ಓ…ಕಾಂತಾರ ದೇವರೇ…?!

admin
the authoradmin

23 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

Translate to any language you want