LatestMysore

ಗೋವಿಂದರಾವ್ ಮೆಮೋರಿಯಲ್ ಕಾಲೇಜಿನಲ್ಲಿ ಕಾಳಿಹುಂಡಿ ಶಿವಕುಮಾರ್ ರವರ  ಪತ್ರಿಕೆಗಳ ಸಂಗ್ರಹಕ್ಕೆ ವ್ಯವಸ್ಥೆ

ಮೈಸೂರು: ಮೈಸೂರಿನ ಲೇಖಕ  ಕಾಳಿಹುಂಡಿ ಶಿವಕುಮಾರ್  ಕಳೆದ 25 ವರ್ಷಗಳಿಂದ  ಸಂಗ್ರಹಿಸಿರುವ ವಿವಿಧ ಕವಿ ಲೇಖಕರ, ಪುಸ್ತಕಗಳು ಮತ್ತು ವಾರಪತ್ರಿಕೆ, ಮಾಸ ಮಾಸಪತ್ರಿಕೆಗಳನ್ನು ಮೈಸೂರಿನ ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜ್ ನ ಮೊದಲ ಮಹಡಿಯಲ್ಲಿ ಸಂಗ್ರಹ ಮಾಡಿರುವ ಪುಸ್ತಕಗಳನ್ನು ಒಂದೆಡೆ ಇಡಲು ವ್ಯವಸ್ಥೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಆವರಣಕ್ಕೆ  ಹಾಸನ ಜಿಲ್ಲೆಯ ಸಾಹಿತಿಗಳಾದ ಗೊರೂರು ಅನಂತರಾಜುರವರು ಭೇಟಿಕೊಟ್ಟು ಗ್ರಂಥಾಲಯಕ್ಕೆ ಒಂದಿಷ್ಟು ಪುಸ್ತಕಗಳನ್ನ ಉಡುಗೊರೆಯಾಗಿ ನೀಡಿದರು. ಕಾಳಿಹುಂಡಿ ಶಿವಕುಮಾರ್ ಅವರ ಕೊಂಡು ಓದುವ, ಸಂಗ್ರಹಿಸುವ ಹವ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್  ಹಾಜರಿದ್ದು  ಮಾತನಾಡುತ್ತಾ ಈ ಕಾಲೇಜಿನ ಆವರಣದಲ್ಲಿರುವ ಮೊದಲ ಮಹಡಿಯಲ್ಲಿ ಇವರಿಗೆ ಸ್ಥಳಾವಕಾಶ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯವಸ್ಥಿತವಾಗಿ ಸಂಗ್ರಹಿಸಲು ನೆರವಾಗುವುದಾಗಿ ತಿಳಿಸಿದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡುತ್ತಾ ಇವರ ಬೃಹತ್ ಸಂಗ್ರಹಕ್ಕೆ ಕಪಾಟುಗಳು, ಬೀರುಗಳನ್ನು ಸಾರ್ವಜನಿಕರು, ದಾನಿಗಳು ನೀಡಿದ್ದಲ್ಲಿ ಮತ್ತಷ್ಟು ವ್ಯವಸ್ಥಿತವಾಗಿ ಪುಸ್ತಕ ಮ್ಯಾಗಜಿನ್ ಗಳನ್ನು ಜೋಡಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇವುಗಳ ಜೊತೆಗೆ ಮತ್ತೆ ಎರಡು ಮೂರು ಕಡೆ ಕಳೆದ 30 ವರ್ಷಗಳ ದಿನಪತ್ರಿಕೆಗಳನ್ನು ಕೂಡ ಸಂಗ್ರಹಿಸಿದ್ದು, ಅವುಗಳನ್ನು ಕೂಡಾ ವ್ಯವಸ್ಥಿತವಾಗಿ ಇರಿಸಬೇಕಿದೆ..

ನಾಡು ನುಡಿ ಸಂಸ್ಕೃತಿಗೆ ಸಂಬಂಧಿಸಿದಂತೆ  ಅನೇಕ ಚಿತ್ರ- ಲೇಖನಗಳನ್ನು ಶಿವಕುಮಾರ್ ಸಂಗ್ರಹಿಸಿದ್ದಾರೆ. ಇವರಿಗೆ ಉದಾರವಾಗಿ ನೆರವು ಸಹಕಾರ ಓದುಗರು  ನೀಡಬೇಕಿದೆ ಎಂದರು. ಮತ್ತು ಮುಂದಿನ ದಿನಗಳಲ್ಲಿ ಸಾರ್ವಜನಿಕರು ಬಂದು ಓದಲು ಕಾಲೇಜು ಆಡಳಿತ ಮಂಡಳಿ ಯೋಚಿಸಲಿ ಎಂದರು.

ಲೇಖಕ ಕಾಳಿಹುಂಡಿ ಶಿವಕುಮಾರ್  ಮಾತನಾಡಿ ನನ್ನ ಸಂಗ್ರಹಕ್ಕೆ ಸ್ಥಳಾವಕಾಶ ನೀಡಿದ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು.

admin
the authoradmin

Leave a Reply

Translate to any language you want