ಬೆಂಗಳೂರು: ಮಹಿಳೆಯೊಬ್ಬಳು ತನ್ನ ತಂದೆ ತಮ್ಮಂದಿರೊಂದಿಗೆ ಸೇರಿ ತನ್ನ ಗಂಡ ಮತ್ತು ಗಂಡನ ಸಹೋದರನ ಮೇಲೆ ಮಾರಕಾಸ್ತ್ರಗಳಿಗೆ ಹಲ್ಲೆ ನಡೆಸಿದ ಪರಿಣಾಮ ಗಂಡನ ಸಹೋದರ(ಬಾವ) ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಖ್ಯಾತಿ ಜ್ಯೋತಿಷಿ ಕಮಲಾಕರ್ ಭಟ್ ಅವರ ಹೆಸರು ತಳಕು ಹಾಕಿಕೊಂಡಿದ್ದು ಅವರು ಸೇರಿದಂತೆ ಏಳು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

ಬೆಳ್ಳಂಬೆಳಗ್ಗೆ ಖಾಸಗಿ ವಾಹಿನಿಗಳಲ್ಲಿ ಕಾಣಿಸಿಕೊಂಡು ಭವಿಷ್ಯ ಹೇಳುತ್ತಿದ್ದ ಕಮಲಾಕರ ಭಟ್ ಗೆ ಮಹೇಶ್ ನಾಯ್ಕ್ ಎಂಬ ವಿವಾಹಿತ ಮಹಿಳೆಯ ಜೊತೆಗೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಇದೀಗ ಆತನ ಮೇಲೆ ಬಂದಿರುವ ಆರೋಪದ ಕುರಿತಂತೆ ನೋಡಿದ್ದೇ ಆದರೆ ಎಲ್ಲರ ಮನೆ ಒಳ್ಳೇದು ಮಾಡುತ್ತೇನೆಂದು ಸಲಹೆ ನೀಡುತ್ತಿದ್ದ ಆತ ಇದೀಗ ಮತ್ತೊಂದು ಮನೆ ಹಾಳು ಮಾಡಿದ್ದಲ್ಲದೆ, ಕೊಲೆ ಆರೋಪವನ್ನು ಹೊತ್ತುಕೊಳ್ಳುವಂತಾಗಿದೆ.

ಈ ಪ್ರಕರಣದ ಬಗ್ಗೆ ನೋಡುತ್ತಾ ಹೋಗಿದ್ದೇ ಆದರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜ್ಯೋತಿಷಿಯಾಗಿರುವ ಕಮಲಾಕರ್ ಭಟ್ ಮಹೇಶ್ ನಾಯ್ಕ್ ಎಂಬಾತನ ಪತ್ನಿ ಸುಚಿತ್ರಾ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಮಹೇಶ್ ನಾಯಕ್ ನನ್ನು ಬಿಟ್ಟು ಶಿವಮೊಗ್ಗಕ್ಕೆ ಬಂದಿದ್ದಳೆಂದೂ ಅಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಿದ್ದಳು. ಕಮಲಾಕರ ಭಟ್ ಗೂರೂಜಿ ಸಂಬಂಧ ಹೊಂದಿದ್ದು ಆಕೆಯ ಮನೆಗೆ ಗುರೂಜಿ ಆಗಾಗ್ಗೆ ಬಂದು ಹೋಗುತ್ತಿದ್ದನು.
ಸುಚಿತ್ರಾ ಜೊತೆ ಪ್ರತ್ಯೇಕ ಕೋಣೆಯಲ್ಲಿ ಮಲಗುತ್ತಿದ್ದ ಬಗ್ಗೆ ಮಕ್ಕಳು ತಂದೆಗೆ ಮೆಸೇಜ್ ಮೂಲಕ ತಿಳಿಸಿದ್ದಲ್ಲದೆ ತಾಯಿ ಮತ್ತು ಗುರೂಜಿ ಜೊತೆ ಸೇರಿ ತಾಯಿ ಹಿಂಸೆ ನೀಡುತ್ತಿರುವುದಾಗಿ ಹೇಳಿದ್ದರು.

ಆ ನಂತರ ತಾಯಿಯೊಂದಿಗಿದ್ದ ಮಕ್ಕಳು ಶಿವಮೊಗ್ಗದಿಂದ ಸಿದ್ದಾಪುರಕ್ಕೆ ಹೋಗಿದ್ದು, ಆ ನಂತರ ಮಕ್ಕಳನ್ನು ಕರೆದೊಯ್ದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ತಂದೆ ಮಹೇಶ್ ನಾಯಕ್ ಮಾಹಿತಿ ನೀಡಿದ್ದು, ಪೊಲೀಸರು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮುಂದೆ ಮಗಳನ್ನು ಹಾಜರಿಪಡಿಸಿದ್ದರು.
ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ರಾತ್ರಿ ಸುಚಿತ್ರಾ ಮತ್ತು ಆಕೆಯ ತಂದೆ ಸೇರಿ ಇತರ ನಾಲ್ವರು ಚಾಕು ಹಿಡಿದು ಏಕಾಏಕಿ ಮಹೇಶ್ ನಾಯಕ್ ಮನೆಗೆ ನುಗ್ಗಿದ್ದು, ಅವರನ್ನು ತಡೆದ ಮಹೇಶ್ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ , ಅವರ ಸಹೋದರ ವಸಂತ್ ನಾಯ್ಕ ತಡೆಯಲು ಬಂದಿದ್ದು ಅವರಿಗೆ ಚಾಕುವಿನಿಂದ ಇರಿದ ಪರಿಣಾಮ ಅವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮಹೇಶ್ ನಾಯಕ್ ಹಾಗೂ ಕುಮಾರ್ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಘಟನೆ ಸಂಬಂಧ ವಸಂತ್ ಅತ್ತಿಗೆ ಸಂಧ್ಯ ನಾಯ್ಕ ದೂರು ನೀಡಿದ್ದು ಈ ದೂರಿನಡಿ ಆರೋಪಿಗಳಾದ ಸುಚಿತ್ರಾ, ಲೋಕನಾಥ್, ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಒಟ್ಟು ಏಳು ಜನರನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.








