CinemaLatest

ಬೆಳ್ಳಿತೆರೆ-ಕಿರುತೆರೆಯ ಮೇಲೆ ಮತ್ತು ಹಿಂದೆ ಶಕ್ತಿಯಾಗಿ ನಿಂತವರಿಗೊಂದು ಸಲಾಮ್ ಇರಲಿ…

ಸಿನಿಮಾ, ನಾಟಕ ಹೀಗೆ ಯಾವುದೇ ಇರಲಿ ಅದರ ಹಿಂದೆ ಕಾಣದ ನೂರಾರು ಕೈಗಳು ಕೆಲಸ ಮಾಡುತ್ತಿರುತ್ತವೆ. ಅವರೆಲ್ಲರ ಶ್ರಮವೇ ಯಶಸ್ಸಿಗೆ ಕಾರಣವಾಗಿರುತ್ತದೆ. ಒಂದು ಸಿನಿಮಾ ಯಶಸ್ಸು ಕಂಡಿದೆ ಎಂದರೆ ಅದರಲ್ಲಿ ನಟಿಸಿದ ಕಲಾವಿದರ ಜೊತೆಗೆ ಅದನ್ನು ಮಟ್ಟಕ್ಕೆ ಕೊಂಡೊಯ್ದವರನ್ನು ನೆನಪಿಸಿಕೊಳ್ಳಬೇಕಾಗುತ್ತದೆ.

ನಾಟಕ ಸಿನಿಮಾ, ಯಕ್ಷಗಾನ, ನೃತ್ಯನಾಟಕ, ನೃತ್ಯ, ಹರಿಕಥೆ, ಶಿವಕಥೆ ಮುಂತಾದ ಪ್ರತಿಯೊಂದು ಕಾರ್ಯಕ್ರಮಗಳ ಮನರಂಜನೆಗೆ, ಸಾಂಸ್ಕೃತಿಕ ಅಥವ ಆಧ್ಯಾತ್ಮಿಕ  ಕಲಾ ಪ್ರದರ್ಶನಗಳ ಯಶಸ್ಸಿಗೆ, ತೆರೆಯ ಮೇಲಿನ ನಾಯಕ-ನಾಯಕಿ (ಹೀರೊ-ಹೀರೋಯಿನ್) ಆದಿಯಾಗಿ ನೂರಾರು ಸಹಕಲಾವಿದರು ಎಷ್ಟುಮುಖ್ಯ ಮತ್ತು ಕಾರಣಕರ್ತರೋ, ಹಾಗೆಯೇ ತೆರೆಯ(ಹಿಂದೆ) ಮರೆಯಲ್ಲಿ ಇರುವ ನಿರ್ಮಾಪಕ ನಿರ್ದೇಶಕ ಸಂಗೀತ ನಿರ್ದೇಶಕ ಛಾಯಾಗ್ರಾಹಕ ಸಂಕಲನಕಾರ ಸಾಹಸ/ನೃತ್ಯ ನಿರ್ದೇಶಕ ಹಿನ್ನೆಲೆ ಗಾಯಕ ಸಾಹಿತಿ ವಸ್ತ್ರ-ಅಲಂಕಾರ ಮುಂತಾದ ಪಾರಿಭಾಷಿಕ ವರ್ಗದ(ತಾಂತ್ರಿಕ ವಿಭಾಗದ)ನೂರಾರು ತಂತ್ರ (ಯಂತ್ರ)ಜ್ಞ ಕಲಾವಿದರೂ ಅಷ್ಟೇಮುಖ್ಯ ಮತ್ತು ಕಾರಣಕರ್ತರು ಎಂಬುದು ನಗ್ನಸತ್ಯ!

ಪ್ರೇಕ್ಷಕರಿಗೆ- ಅಭಿಮಾನಿಗಳಿಗೆ ತೆರೆಯ ಮೇಲಿನ ಕಲಾವಿದರೇ ಪಂಚ ಪ್ರಾಣವಾಗಿದ್ದು, ತೆರೆಮರೆಯ ಕಲಾವಿದರು ಕೊಂಚ ಪ್ರಾಣವಾಗಿದ್ದಾರೆ ಎಂಬುದೂ ಕಟುಸತ್ಯ! ಸರ್ಕಾರದ, ಸಾರ್ವಜನಿಕರ, ಸಂಘ-ಸಂಸ್ಥೆಗಳ ಶಹಬ್ಬಾಸ್ಗಿರಿ ಶ್ಲಾಘನೆ ಜನಪ್ರಿಯತೆ ಪ್ರಶಸ್ತಿ ಬಹುಮಾನ ಬಿರುದು ಸನ್ಮಾನ ಹಣ ಕೀರ್ತಿ ಮಣೆ ಮನ್ನಣೆ ಖ್ಯಾತಿ ಪ್ರಖ್ಯಾತಿ ಎಲ್ಲವೂ ತೆರೆಯ ಮೇಲಿನ ಕಲಾವಿದರಿಗೆ ಸಿಂಹಪಾಲು ದೊರಕಿ, ತೆರೆಮರೆಯ ಕಲಾವಿದರಿಗೆ ತುಸುಪಾಲು ಮಾತ್ರ ಲಭಿಸುತ್ತಿದೆ. ಇಲ್ಲಿಯೂ ಸಹ ಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಅದೃಷ್ಟಕ್ಕೆ ತಕ್ಕ ಮೀಸಲು ಸೃಷ್ಟಿಯಾಗುತ್ತದೆ ಎಂಬುದು ನಿತ್ಯಸತ್ಯ!

ತಲತಲಾಂತರದಿಂದ ದೇವರು ಸೂತ್ರಧಾರಿ-ಮನುಷ್ಯನು ಪಾತ್ರಧಾರಿ? ಎಂಬ ನಂಬಿಕೆಯಿಂದಲೇ ಮತ್ತು ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ವಿಶ್ವಾಸದಿಂದಲೇ ಈ ಕ್ಷೇತ್ರದ ಪ್ರತಿಯೊಬ್ಬರೂ ಸಹಜ ಕಲಾವಿದ-ತಂತ್ರಜ್ಞರಾಗಿ ಕೇವಲ? ಬದುಕು ಸಾಗಿಸುತ್ತಿದ್ದಾರೆ ಈಗಲೂ..!  ಸಹಕಲಾವಿದರ ಬದುಕು ಇವತ್ತಿಗೂ ಹಸನಾಗಿಯೇನೂ ಇಲ್ಲ. ಅವಕಾಶಕ್ಕಾಗಿ ಕಾಯುತ್ತಾ ನಿಲ್ಲುವ ಸಹಕಲಾವಿದರ ದೊಡ್ಡ ಸಮೂಹವೇ ಇದೆ… ಎಲ್ಲರ ಬದುಕು ಹಸನಾಗಬೇಕಾದರೆ ಚಂದನವನಕ್ಕೆ ಒಳ್ಳೊಳ್ಳೆಯ ಸಿನಿಮಾಗಳು ಬರಬೇಕು ಮತ್ತು ಅದನ್ನು ಪ್ರೇಕ್ಷಕರು ಮೆಚ್ಚಿಕೊಳ್ಳಬೇಕು ಆಗ ಮಾತ್ರ ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಎಲ್ಲರೂ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

admin
the authoradmin

15 ಪ್ರತಿಕ್ರಿಯೆಗಳು

  • ಸಿನಿಮಾ (ಬೆಳ್ಳಿತೆರೆ ಮತ್ತು ಕಿರುತೆರೆ) ನಾಟಕದ ತೆರೆಮರೆಯ ಕಲಾವಿದರ ನೋವು ನಲಿವು ಕಷ್ಟನಷ್ಟ ಮುಂತಾದ ಪರಿಶ್ರಮಗಳ ಬಗ್ಗೆ ವಿಚಾರ ಸಂಕಿರಣ ಪ್ರದರ್ಶಿತವಾದ ಈ ಲೇಖನದ ಮೂಲಕ ನಮ್ಮಂಥವರಿಗೆ ಸಹಾಯ ಮಾಡಿದ ನಿಮಗೆಲ್ಲ ನಮ್ಮೆಲ್ಲರ ನಮಸ್ಕಾರ, ಧನ್ಯವಾದ ಸರ್ ಅದರಲ್ಲೂ ವಿಶೇಷವಾಗಿ ಮಹಾನ್ ಲೇಖಕರಾದ ಕುಮಾರಕವಿ ನಟರಾಜಣ್ಣನವರಿಗೆ ಅನೇಕಾನೇಕ ಕೃತಜ್ಞತೆಗಳು

  • ಸಿನಿಮಾ (ಬೆಳ್ಳಿತೆರೆ ಮತ್ತು ಕಿರುತೆರೆ) ನಾಟಕದ ತೆರೆಮರೆಯ ಕಲಾವಿದರ ನೋವು ನಲಿವು ಕಷ್ಟನಷ್ಟ ಮುಂತಾದ ಪರಿಶ್ರಮಗಳ ಬಗ್ಗೆ ವಿಚಾರ ಸಂಕಿರಣ ಪ್ರದರ್ಶಿತವಾದ ಈ ಲೇಖನದ ಮೂಲಕ ನಮ್ಮಂಥವರಿಗೆ ಸಹಾಯ ಮಾಡಿದ ನಿಮಗೆಲ್ಲ ನಮ್ಮೆಲ್ಲರ ನಮಸ್ಕಾರ, ಧನ್ಯವಾದ ಸರ್ ಅದರಲ್ಲೂ ವಿಶೇಷವಾಗಿ ಮಹಾನ್ ಲೇಖಕರಾದ ಕುಮಾರಕವಿ ನಟರಾಜಣ್ಣನವರಿಗೆ ಅನೇಕಾನೇಕ ಕೃತಜ್ಞತೆಗಳು, ಮಹೇಶ್ವರ ಕುಮಾರ ಉಡುಪ, ಕಂಠದಾನ ಕಲಾವಿದ

  • ಸಿನಿಮ ನಾಟಕದ ಪಾರಿಭಾಷಿಕ ವರ್ಗದವರ ಅಥವಾ ತಾಂತ್ರಿಕ ವರ್ಗದವರ ತಂತ್ರಜ್ಞರ ಬಗ್ಗೆ ಬರೆದ ಬಹುಶಃ ಅಪರೂಪದ ಲೇಖನ. ಇದಕ್ಕೆ ಕಾರಣರಾದ
    ಹಿರಿಯ ಲೇಖಕ ನಟರಾಜ ರವರಿಗೆ ಹಾಗೂ ಜನಮನ ಕನ್ನಡ ಪತ್ರಿಕೆಯ ಸಂಪಾದಕೀಯ ವರ್ಗದವರಿಗೆ ಕೋಟಿ ಕೋಟಿ ಧನ್ಯವಾದ
    ಸೌಂಡ್ ಎಂಜಿನಿಯರ್ ರಾಮ್ ಪ್ರಸಾದ್, ಬೆಂಗಳೂರು

  • ಸಿನಿಮಾ (ಬೆಳ್ಳಿತೆರೆ ಮತ್ತು ಕಿರುತೆರೆ) ನಾಟಕದ ತೆರೆಮರೆಯ ಕಲಾವಿದರ ನೋವು ನಲಿವು ಕಷ್ಟನಷ್ಟ ಮುಂತಾದ ಪರಿಶ್ರಮಗಳ ಬಗ್ಗೆ ವಿಚಾರ ಸಂಕಿರಣ ಪ್ರದರ್ಶಿತವಾದ ಈ ಲೇಖನದ ಮೂಲಕ ನಮ್ಮಂಥವರಿಗೆ ಸಹಾಯ ಮಾಡಿದ ನಿಮಗೆಲ್ಲ ನಮ್ಮೆಲ್ಲರ ನಮಸ್ಕಾರ, ಧನ್ಯವಾದ ಸರ್ ಅದರಲ್ಲೂ ವಿಶೇಷವಾಗಿ ಮಹಾನ್ ಲೇಖಕರಾದ ಕುಮಾರಕವಿ ನಟರಾಜಣ್ಣನವರಿಗೆ ಅನೇಕಾನೇಕ ಕೃತಜ್ಞತೆಗಳು, ಮಹೇಶ್ವರ ಕುಮಾರ ಉಡುಪ, ಕಂಠದಾನ ಕಲಾವಿದ, ಮಂಗಳೂರು, ಮೊಕ್ಕಾಂ ಬೆಂಗಳೂರು

  • ಸಿನಿಮಾ (ಬೆಳ್ಳಿತೆರೆ ಮತ್ತು ಕಿರುತೆರೆ) ನಾಟಕದ ತೆರೆಮರೆಯ ಕಲಾವಿದರ ನೋವು ನಲಿವು ಕಷ್ಟನಷ್ಟ ಮುಂತಾದ ಪರಿಶ್ರಮಗಳ ಬಗ್ಗೆ ವಿಚಾರ ಸಂಕಿರಣ ಪ್ರದರ್ಶಿತವಾದ ಈ ಲೇಖನದ ಮೂಲಕ ನಮ್ಮಂಥವರಿಗೆ ಸಹಾಯ ಮಾಡಿದ ನಿಮಗೆಲ್ಲ ನಮ್ಮೆಲ್ಲರ ನಮಸ್ಕಾರ, ಧನ್ಯವಾದ ಸರ್ ಅದರಲ್ಲೂ ವಿಶೇಷವಾಗಿ ಮಹಾನ್ ಲೇಖಕರಾದ ಕುಮಾರಕವಿ ನಟರಾಜಣ್ಣನವರಿಗೆ ಕೃತಜ್ಞತೆಗಳು ಸಲ್ಲಿಸಲಾಗಿದೆ

  • ನಮ್ಮ ತೆರೆಯ ಹಿಂದಿನ ಕಲಾವಿದರ ತಂತ್ರಜ್ಞರ ಬಗ್ಗೆ ಸತ್ಯವಾಗಿಯೇ ಒಂದು ಉತ್ತಮ ಲೇಖನ, ಸಹಕಲಾವಿದರ ಮತ್ತು ಕಿರಿಯಕಲಾವಿದರ ಹಾಗೂ ಪೋಷಕ ನಟನಟಿಯರ ಪರವಾಗಿ, ಉದಯ್ ರಾಜ್

  • ನಮಂಥ ಪಾರಿಭಾಷಿಕ ವರ್ಗದವರ ತಂತ್ರಜ್ಞರ ಬಗ್ಗೆ ಅವರ ಕಷ್ಟ ನಷ್ಟ ನೋವು ಸಂಕಟ ಸಮಸ್ಯೆ ಕುರಿತು ಚೆನ್ನಾಗಿ ಬರೆದ ಕವಿ ಕುಮಾರ ನಟರಾಜಣ್ಣ ಅವರಿಗೆ ನೂರು ಧನ್ಯವಾದಗಳು

  • ಸಿನಿಮ ನಾಟಕ ಟಿ.ವಿ. ವಿಭಾಗದ ಎಲ್ಲಾ ತಾಂತ್ರಿಕ ವರ್ಗದವರ ತಂತ್ರಜ್ಞರ ಶ್ರಮ ಮತ್ತು ಕರ್ತವ್ಯದ ಬಗ್ಗೆ ಜನಸಾಮಾನ್ಯರ ಮೇಲೆ ಬೆಳಕು ಚೆಲ್ಲುವ ಲೇಖನ ಬರೆದ ನಟರಾಜ ಸರ್ ಶ್ಲಾಘನೀಯರು.

  • ಬಹಳ ವರ್ಷಕಾಲ ನಮ್ಮಂಥವರ ಬಗ್ಗೆ ಯಾರೂ ಸಹ ಇಂಥ ಉತ್ತಮ ಲೇಖನ ಬರಿದಿರಲಿಲ್ಲ. ಧನ್ಯವಾದ ಲೇಖಕರಿಗೆ ಮತ್ತು ಪತ್ರಿಕೆಯವರಿಗೆ
    ಅಮೃತಾಮಣಿ, ಡಬ್ಬಿಂಗ್ ಆರ್ಟಿಸ್ಟ್

ನಿಮ್ಮದೊಂದು ಉತ್ತರ

Translate to any language you want