LatestMysore

ಕಟ್ಟೆಮಳಲವಾಡಿಯಲ್ಲಿ ಧರಣಿ ನಿರತ ತಂಬಾಕು ಬೆಳೆಗಾರರ ಸಮಸ್ಯೆ ಆಲಿಸಿದ ಸಂಸದ ಯದುವೀರ್

ಕೇಂದ್ರ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕಳೆದ ಕೆಲವು ದಿನಗಳಿಂದ ತಂಬಾಕು ಬೆಳೆಗಾರರು ನಡೆಸುತ್ತಿರುವ ಧರಣಿಯ ಬಗ್ಗೆ ಸಂಪೂರ್ಣವಾಗಿ ಗಮನಿಸಿದ್ದು, ನಾನು ಜರ್ಮನಿಯಲ್ಲಿ ಭದ್ರತೆಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಭಾಗವಹಿಸಿದ ಕಾರಣ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಲು ಸಾಧ್ಯವಾಗಿಲ್ಲ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಕೃಷ್ಣರಾಜದತ್ತ ಒಡೆಯರ್ ಹೇಳಿದರು.

ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಡಿ.ದೇವರಾಜು ಅರಸು ತಂಬಾಕು ಹರಾಜು ಮಾರುಕಟ್ಟೆಯ ರೈತ ಭವನದಲ್ಲಿ ತಂಬಾಕು ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಕಳೆದ ದಿನಗಳಿಂದ ನಡೆಸುತ್ತಿರುವ ತಂಬಾಕು ರೈತರು ನಡೆಸುತ್ತಿರುವ ಧರಣಿಗೆ ಸ್ಪಂದಿಸಲು ಸಾಧ್ಯವಾಗಿಲ್ಲ. ಈಗಾಗಲೇ ತಂಬಾಕು ಬೆಲೆ ಕುಸಿದಿರುವ  ಬಗ್ಗೆ ಸಚಿವರನ್ನು ಭೇಟಿ ಮಾಡಿ ಆಂಧ್ರ ಸಂಸದರು ಹಾಗೂ ಅಲ್ಲಿಯ ಸ್ಥಳೀಯ ಎಂಎಲ್ಎ ಗಳ ಜೊತೆ ಸೇರಿ ಮನವಿ ಸಲ್ಲಿಸಿದ್ದೇವೆ ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ವಾಣಿಜ್ಯ ಇಲಾಖೆಯ ಜೊತೆ ತಂಬಾಕು ರೈತರ ಸಮಸ್ಯೆಯನ್ನು ಚರ್ಚಿಸಬೇಕಾಗಿದೆ.  ಹಲವು ಕಂಪನಿಗಳಲ್ಲಿ ಲಾಬಿ ಶುರುವಾಗಿದೆ ಆ ಕಂಪನಿ ವಿರುದ್ಧ ಪ್ರತಿರೋಧವಿದೆ ಹಲವು ಹಿತಾಸಕ್ತಿಗಳು ತಮ್ಮಲ್ಲಿರುವ ವ್ಯತ್ಯಾಸಗಳನ್ನು ಲಾಭವಾಗಿ ಮಾಡಿಕೊಳ್ಳುತ್ತಿದ್ದಾರೆ. ರೈತರು ಇದಕ್ಕೆ ಬಲಿಯಾಗಬೇಡಿ ಒಗ್ಗಟ್ಟಿನಿಂದ ನಿಂತರೆ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿವೆ. ತಂಬಾಕು ಬೆಳೆಯಬೇಕೋ ಬೇಡವೋ ಎಂಬ ನಿರ್ಧಾರವನ್ನು ರೈತರೇ ತೆಗೆದುಕೊಳ್ಳಬೇಕು ನಾನು ನಿಮ್ಮ ಧ್ವನಿಯಾಗಿ  ಮಾಧ್ಯಮವಾಗಿ ಕೆಲಸ ಮಾಡುತ್ತೇನೆ.

ಇದರ ವಿಚಾರವಾಗಿ ವಾಣಿಜ್ಯ ಸಚಿವರೊಂದಿಗೆ ರೈತ ಮುಖಂಡರನ್ನು ಕರೆದುಕೊಂಡು ಹೋಗಿ ಚರ್ಚಿಸುವ ಕೆಲಸವಾಗ ಬೇಕಾಗಿದೆ ಆ ಕೆಲಸವಾಗುತ್ತದೆ. ಈ ವರ್ಷಕ್ಕೆ ತಂಬಾಕು ಬೆಳೆಗಾರರಿಗೆ ತಾತ್ಕಾಲಿಕ ಪರಿಹಾರ ಬೇಕಾಗಿದೆ ಅದನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರು ಹಲವು ಬೇಡಿಕೆಗಳ ಪಟ್ಟಿ ಮಾಡಿಕೊಂಡು ಕೇಂದ್ರ ಸಚಿವರನ್ನು ಭೇಟಿ ಮಾಡೋಣ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಾನು ಇದ್ದೇನೆ. ಇದಕ್ಕೆ ಪೂರಕವಾಗಿ ಹೋರಾಟ ಮಾಡುತ್ತೇನೆ ರೈತರು ಒಂದೇ ಧ್ವನಿಯಾಗಿ ಹೋರಾಟ ಮಾಡಬೇಕು. ಫೆ. 23ರ ಸೋಮವಾರ ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಸಭೆಯಲ್ಲಿ ರೈತರಿಗೆ ಏನೇನು ಪರಿಹಾರ ಕಂಡುಕೊಳ್ಳಬಹುದು? ಯಾವ ರೀತಿಯ ಒತ್ತಡಗಳನ್ನು ಹಾಕಬಹುದು ಎಂಬ ನಿರ್ಣಯ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ನಾಗರಾಜ್ ಮಲ್ಲಾಡಿ, ನಗರಸಭೆ ಮಾಜಿ ಸದಸ್ಯ ಗಣೇಶ್ ಕುಮಾರಸ್ವಾಮಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಹಿರೀಕ್ಯಾತನಹಳ್ಳಿ ಸತೀಶ್, ಎಸ್ ಸಿ ಮೋರ್ಚಾ ಅಧ್ಯಕ್ಷ ರವಿ ನಗರ ಅಧ್ಯಕ್ಷ ನಾರಾಯಣ್ ಉಪಾಧ್ಯಕ್ಷ ಶಿವಕುಮಾರ್ ಕಾಪ್ ಕಮಿಟಿ ಅಧ್ಯಕ್ಷ ಪ್ರಭಾಕರ್ ರೈತ ಮುಖಂಡರಾದ ಅಗ್ರಹಾರ ರಾಮೇಗೌಡ ಮೋದೂರು ಮಹೇಶ, ಕಟ್ಟೆಮಳಲವಾಡಿ ಅಶೋಕ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ ಸೇರಿದಂತೆ 500ಕ್ಕೂ ಹೆಚ್ಚು ರೈತರು ಇದ್ದರು.

 

 

 

admin
the authoradmin

Leave a Reply

Translate to any language you want