LatestMysore

ಧರಣಿ ನಡೆಸುತ್ತಿರುವ ತಂಬಾಕು ಬೆಳೆಗಾರರಿಗೆ ಬೆಂಬಲ ನೀಡಿದ ಹೆಚ್.ಪಿ. ಮಂಜುನಾಥ್, ಎಂ. ಲಕ್ಷ್ಮಣ್

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯ ಮುಂಭಾಗದಲ್ಲಿ ರೈತ ಸಂಘ ಹಾಗೂ ತಂಬಾಕು ಬೆಳೆಗಾರರು ನಡೆಸುತ್ತಿರುವ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿದಿನವೂ ರಾಜಕೀಯ ಪ್ರತಿನಿಧಿಗಳು ಆಗಮಿಸಿ ರೈತರ ಜತೆ ಮಾತುಕತೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಅದರಂತೆ ಶುಕ್ರವಾರ  ಧರಣಿ ಸ್ಥಳಕ್ಕೆ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಹಾಗೂ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಧರಣಿ ನಿರತರನ್ನು ಕುರಿತು ಮಾತನಾಡಿದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರು,  2ನೇ ತಂಬಾಕು ಬೆಳೆಗೆ ಐಟಿಸಿ ಕಂಪನಿಯು ಬೀಜ ಕೊಟ್ಟು ರೈತರನ್ನು ತಪ್ಪು ದಾರಿಗೆ ತರುತ್ತಿದ್ದಾರೆ ಇದಕ್ಕೆ ಕಡಿವಾಣವನ್ನು ಮಂಡಳಿ ಹಾಕಬೇಕಾಗಿದೆ  ರೈತರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಮಸ್ಯೆಯನ್ನು ಬಗೆಹರಿಸುವುದು ಸೂಕ್ತ. ರೈತ ಯಾವ ಪಕ್ಷದ ಕಾರ್ಯಕರ್ತರಲ್ಲ ರೈತರ ಸಮಸ್ಯೆಯನ್ನು ಬಗೆಹರಿಸಲು ಮಂಡಳಿ ಮುಂದೆ ಬರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಮಂಡಳಿಗಳು ಟ್ರೇಡರ್ಸ್ ಗಳ ಜೊತೆ ಚರ್ಚೆ ಮಾಡಿದಾಗ ರೈತರ ಸಮಸ್ಯೆ ಬಗೆಹರಿಯುತ್ತದೆ ಇಲ್ಲದಿದ್ದರೆ ಸಮಸ್ಯೆ ಬಗೆ ಹರಿಯುವುದಿಲ್ಲ ಎಂದರು.

ಸ್ಥಳೀಯ ಶಾಸಕರು ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ವಾಗುವುದಿಲ್ಲ ಮೂಲಭೂತ ಸೌಕರ್ಯಗಳನ್ನು ಮಾಡಬಹುದೇ ವಿನಃ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ  ಆಂಧ್ರಪ್ರದೇಶದ 9 ಸಂಸದರು ಆಂಧ್ರದ ತಂಬಾಕು ರೈತರ ಪರವಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ರವನ್ನು ಭೇಟಿ ಮಾಡಿ ಅಲ್ಲಿನ ತಂಬಾಕು ರೈತರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಅದೇ ರೀತಿ ಕರ್ನಾಟಕ ರಾಜ್ಯದ ಎಂಪಿಗಳು ಕೂಡ ಒಗ್ಗಟ್ಟಾಗಿ ರೈತರಿಗಾಗುತ್ತಿರುವ ಅನ್ಯಾಯವನ್ನು ಕೇಂದ್ರಕ್ಕೆ ಹೋಗಿ ಸರಿಪಡಿಸಬೇಕು.

ಯಾವುದೇ ರೈತ ಯಾವ ಸರ್ಕಾರ ಯಾವ ಶಾಸಕ ಲೀಡರ್ ಗಳನ್ನು ನಂಬುವುದಿಲ್ಲ ರೈತ ನಂಬುವುದೊಂದೇ ಭೂಮಿಯನ್ನು ಮಾತ್ರ.  ಆದ್ದರಿಂದ ರೈತರು ದುಡುಕಬೇಡಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ  ಮಂಡಳಿಗಳು ಕಂಪನಿಗಳ ಪರ ನಿಂತಿರುವುದು ರೈತರಿಗೆ ಬರೆ ಹಾಕಿದಂತೆ ನನ್ನ ಕಷ್ಟದ ರೈತರ ಸಮಸ್ಯೆಗೆ ಉತ್ತರ ಹುಡುಕಲು ಬಂದಿದೆ ವಿನಹ ರಾಜಕಾರಣ ಮಾಡುವುದಕಲ್ಲ ರೈತರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದರು.

ರಾಜ್ಯ ಸರ್ಕಾರಕ್ಕೆ ತಂಬಾಕು ತೆರಿಗೆ 500 ಕೋಟಿ ಬರುತ್ತಿದ್ದರೂ ಮುಖ್ಯಮಂತ್ರಿಗಳು ತಂಬಾಕು ರೈತರ ಪರ ಕೇಂದ್ರಕ್ಕೆ ಪತ್ರ ಬರೆದಿಲ್ಲ ಎಂದು ಆರೋಪ ಮಾಡಿದ್ದಾರೆ ಎಂದು ಮಾಜಿ ಶಾಸಕರನ್ನು ಕೇಳಿದಾಗ ವಿಶ್ವನಾಥ್ ರವರು ಚಟಕ್ಕೆ ಮಾತನಾಡುತ್ತಾರೆ ಎಂದರು.

ಇದೇ ವೇಳೆ ಕೆಪಿಸಿಸಿ ವಕ್ತಾರ ಎಂ .ಲಕ್ಷ್ಮಣ್ ಮಾತನಾಡಿ ಆಂಧ್ರದಲ್ಲಿ 472 ರೂ.ಗಳನ್ನು ನೀಡಿ ಕರ್ನಾಟಕ ರಾಜ್ಯದ ಹೊಗೆಸೊಪ್ಪಿಗೆ 260ರೂ ನೀಡಿ ತಾರತಮ್ಯವನ್ನು ಮಂಡಳಿಗಳು ಮಾಡುತ್ತಿವೆ. ನ್ಯೂನತೆಗಳನ್ನು ಪಾಲನೆ ಮಾಡದ ಕಂಪನಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈ ಹಿಂದೆ ತಂಬಾಕು ಬೆಲೆ ಕುಸಿತವಾದಾಗ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರ ಬರೆದಾಗ ಮೂರು ನಾಲ್ಕು ದಿನ ಉತ್ತಮ ಬೆಲೆ ಬಂದಿತ್ತು. ಮತ್ತೆ ನಿರಂತರವಾಗಿ ರೈತರ ಶೋಷಣೆ ಮಾಡುತ್ತಿರುವುದು ಸರಿಯಲ್ಲ   ಪ್ರಾಮಾಣಿಕವಾಗಿ ಮತ್ತೆ ಮಾನ್ಯ ಮುಖ್ಯಮಂತ್ರಿಸಿದ್ದರಾಮಯ್ಯ ರವರ ಜೊತೆ ಕೇಂದ್ರ ವಾಣಿಜ್ಯ ಸಚಿವರಿಗೆ ಪತ್ರ ಬರೆಸುವುದರ ಜೊತೆಗೆ ದೂರವಾಣಿ ಮೂಲಕ ಮಾತನಾಡಿಸುವುದಾಗಿ ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಗದ್ದಿಗೆ ದೇವರಾಜ್ ರವಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಘು, ನಗರಸಭಾ ಮಾಜಿ ಸದಸ್ಯೆ ಸುನೀತ ಜಯರಾಮೇಗೌಡ, ಕಾಪ್ ಕಮಿಟಿ ಮಾಜಿ ಅಧ್ಯಕ್ಷೆ ಕಲ್ಪನಾ ಬೊಮ್ಮೇಗೌಡ, ಪಕ್ಷದ ಮುಖಂಡರಾದ ಹಿರೀಕ್ಯಾತನಹಳ್ಳಿ ಮಹೇಶ್, ಹರೀಶ್, ರೈತ ಸಂಘದ ಮುಖಂಡರಾದ ಅಗ್ರಹಾರ ರಾಮೇಗೌಡ, ಸತೀಶ್, ಹರೀಶ್ ಕಾವಲ್, ಮೋದೂರು ಮಹೇಶ, ಸೇರಿದಂತೆ 500ಕ್ಕೂ ಹೆಚ್ಚು ರೈತರು ಇದ್ದರು.

admin
the authoradmin

Leave a Reply

Translate to any language you want