LatestState

ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಕವಿಗೋಷ್ಠಿ.. ನೀವು ಕವನ ಕಳುಹಿಸಿ, ಭಾಗವಹಿಸಬಹುದು!

ಬೆಂಗಳೂರು: ಮೇ 7 ರಿಂದ 10ರವರೆಗೆ  ನಾಲ್ಕು ದಿನಗಳ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 9.30 ರವರೆಗೆ, ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ  ಕೊಪ್ಪಳ ಜಿಲ್ಲಾ ಸಾಂಸ್ಕೃತಿಕ ಪ್ರವಾಸೋದ್ಯಮ ಸಪ್ತಾಹ, ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 12ನೇ ಸಮ್ಮೇಳನ,  75ನೇ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವವು, ಕೊಪ್ಪಳ ತಾಲ್ಲೂಕಿನ ಬಿಸರಹಳ್ಳಿಯ ಹಿರಿಯ ಸಾಹಿತಿಗಳಾದ ಶ್ರೀ ಮಲ್ಲಿಕಾರ್ಜುನ ಹಿರೇಮಠರ ಸರ್ವಾಧ್ಯಕ್ಷತೆಯಲ್ಲಿ ವಿವಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದೇ ವೇಳೆ ವಿಚಾರ ಸಂಕಿರಣ, ಉಪನ್ಯಾಸ, ನೃತ್ಯ, ಸಂಗೀತ, ಹಾಡುಗಾರಿಕೆ, ಕವಿಗೋಷ್ಠಿ, ಜಾನಪದ ಕಲೆಗಳ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಇದರ ಜತೆಗೆ ಎರಡು ಕವಿಗೋಷ್ಠಿಗಳಿದ್ದು, ಮೇ.8ರಂದು ಚುಟುಕು ಸಾಹಿತ್ಯ ಪರಿಷತ್, ಕೊಪ್ಪಳ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಹಾಗೂ ಮೇ.9ರಂದು ಸಿರಿಗನ್ನಡ ರಾಷ್ಟ್ರೀಯ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಸ್. ಗೋನಾಳ್‌ರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಕವಿತೆ 20 ಸಾಲಿನೊಳಗಿರಬೇಕು, ಚುಟುಕು 4 ಸಾಲಿನ 3 ಚುಟುಕುಗಳಿಗೆ ಅವಕಾಶವಿದ್ದು, ಭಾಗವಹಿಸಲು ಇಚ್ಚಿಸುವವರಲ್ಲಿ ಹಿರಿಯರೊಂದಿಗೆ 15 ವರ್ಷದೊಳಗಿನ ಮಕ್ಕಳಿಗೂ ಅವಕಾಶ ನೀಡಲಾಗಿದೆ. ಕವನ ಅಥವಾ ಚುಟುಕಿನ ಡಿಟಿಪಿ ಪ್ರತಿಯೊಂದಿಗೆ, ತಮ್ಮ 2 ಭಾವಚಿತ್ರ, ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ, ಏ.25 ರೊಳಗೆ ಕಡ್ಡಾಯವಾಗಿ ತಲುಪುವಂತೆ ಕೆಳಕಂಡ ವಿಳಾಸಕ್ಕೆ ಕಳುಹಿಸಿ. ಸ್ಥಳೀಯರು ಅಧ್ಯಕ್ಷರ ಬಳಿ ತಲುಪಿಸಬಹುದು. (ಸೂಚನೆ : ವಾಟ್ಸಾಪ್ ಮೂಲಕ ಕಳುಹಿಸುವ ಕವನ ಮತ್ತು ಮನವಿಯನ್ನು ಪರಿಗಣಿಸುವುದಿಲ್ಲ)

ಕವನಗಳನ್ನು ರಮೇಶ ಸುರ್ವೆ ಅಧ್ಯಕ್ಷರು, ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ.) , ನಂ. 468, 13ನೇ ಮುಖ್ಯರಸ್ತೆ, 3ನೇ ಹಂತ, ಮಂಜುನಾಥನಗರ, ಬೆಂಗಳೂರು – 560010 ಮೊಬೈಲ್ : 9845307327ನ್ನು ಸಂಪರ್ಕಿಸಬಹುದಾಗಿದೆ.

 

admin
the authoradmin

Leave a Reply

Translate to any language you want