LatestNews

ಗಣತಿ ಕಾರ್ಯದಿಂದ ಶಿಕ್ಷಕರಿಗೆ ವಿನಾಯಿತಿ ಕೋರಿ  ಪ್ರೌಢಶಾಲಾ ಸಹಶಿಕ್ಷಕರ ಸಂಘದಿಂದ ಡಿಸಿಗೆ ಮನವಿ

ಮಡಿಕೇರಿ (ರಘುಹೆಬ್ಬಾಲೆ) : ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.

2026-27ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ನಡೆಸಲಿರುವ ಜನಗಣತಿಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ವಿನಾಯಿತಿ ಕೋರಿ ಮಾನ್ಯ ಕೊಡಗು ಜಿಲ್ಲಾಧಿಕಾರಿಯವರಾದ, ಸೋಮಶೇಖರ್ ರವರಿಗೆ ಕೊಡಗು ಪ್ರೌಢಶಾಲಾ ಸಹಶಿಕ್ಷಕರ ವತಿಯಿಂದ ಮನವಿ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಹತ್ತನೇ ತರಗತಿಯ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಬಹಳ ಒತ್ತಡವಿದ್ದು ಪರೀಕ್ಷಾ ಕಾರ್ಯ ಮತ್ತು ಮೌಲ್ಯ ಮಾಪನ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ, ಪ್ರೌಢಶಾಲಾ ಶಿಕ್ಷಕರಿಗೆ ವಿನಾಯಿತಿ ನೀಡಬೇಕು, ಅನಿವಾರ್ಯವಿದ್ದರೆ, ಮೇಲ್ವಿಚಾರಕರು ಮತ್ತು ನೋಡಲ್ ಅಧಿಕಾರಿಗಳಾಗಿ, ನೇಮಿಸಬೇಕು, ಆನಾರೋಗ್ಯವಿದ್ದವರಿಗೆ, ನಿವೃತ್ತಿ ಅಂಚಿನಲ್ಲಿ ಇರುವವರಿಗೆ ಜನಗಣತಿಯಿಂದ ಕೈಬಿಡಬೇಕು ಎಂದು ಮನವಿ ಮಾಡಲಾಯಿತು.

ಬೇರೆ ಇಲಾಖೆಯವರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು, ಕೋರಲಾಯಿತು. ಇದೇ ಸಂದರ್ಭದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಮತ್ತು ಪರಿಶಿಷ್ಟ ಜಾತಿ ಗಣತಿ ದಾರರಿಗೆ ಮತ್ತು ಮೇಲ್ವಿಚಾರಕರಿಗೆ ಗಳಿಕೆ ರಜೆ ಮಂಜೂರು ಮಾಡಬೇಕೆಂದು ಮನವಿ ಮಾಡಲಾಯಿತು. ನಮ್ಮ ಮನವಿಗೆ ಉತ್ತಮವಾಗಿ ಸ್ಪಂದಿಸಿದ ಮಾನ್ಯ ಜಿಲ್ಲಾಧಿಕಾರಿಗಳು ಪ್ರೌಢಶಾಲಾ ಶಿಕ್ಷಕರಿಗೆ ಕೇಡರ್ ಗೆ, ತಕ್ಕಂತೆ ಮೇಲ್ವಿಚಾರಕರು ಮತ್ತು ನೋಡಲ್ ಆಗಿ ನೇಮಿಸುವ ಭರವಸೆ  ನೀಡಿದರು, ಕೊಡಗು ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಕಾರ್ಯಕ್ಷಮತೆ ಬಗ್ಗೆ ಪ್ರಶಂಸಿದರು, ಎರಡು ಗಣತಿ ದಾರರಿಗೂ, ಗಳಿಕೆ ನೀಡಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಇಲಾಖೆಯ  ಉಪ ನಿರ್ದೇಶಕರಾದ ಬಸವರಾಜ್ ರವರನ್ನು ಭೇಟಿ ಮಾಡಿ, ಪ್ರೌಢಶಾಲಾ ಶಿಕ್ಷಕರಿಗೆ ಆಗುತ್ತಿರುವ ಒತ್ತಡಗಳ ಬಗ್ಗೆ ಚರ್ಚೆ ಮಾಡಿ, ಮನವಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಪ್ರಭಾರಿ ಜಿಲ್ಲೆಯ ಅಧಿಕಾರಿಗಳಾದ ಕವಿತಾ ಅವರನ್ನು ಭೇಟಿ ಮಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಮಾಡಿದವರಿಗೆ ಗಳಿಕೆ ರಜೆಯನ್ನು ಆದಷ್ಟು ಬೇಗ ಮಂಜೂರಿಗೆ ಮನವಿ ನೀಡಲಾಯಿತು. ಪರಿಶಿಷ್ಟ ಜಾತಿ ಗಣತಿ ಮಾಡಿದವರಿಗೆ ಗಳಿಕೆ ರಜೆ ನೀಡಬೇಕೆಂದು, ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್  ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಹೆಚ್.ಜಿ.ಕುಮಾರ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಹತ್ತನೇ ತರಗತಿಯ ಉತ್ತಮ ಫಲಿತಾಂಶಕ್ಕಾಗಿ ಪ್ರೌಢಶಾಲಾ ಶಿಕ್ಷಕರು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳ ಉತ್ತೀರ್ಣಕ್ಕಾಗಿ ಬಹಳ ಶ್ರಮಿಸುತ್ತಿದ್ದಾರೆ, ಮೂರು ಪೂರ್ವಭಾವಿ ಪರೀಕ್ಷೆಗಳು ಜರುಗಿದ್ದು, ಮಾರ್ಚ್ 18 ರಿಂದ ಏಪ್ರಿಲ್ 2ರ ತನಕ ಪರೀಕ್ಷೆಗಳು ಜರುಗಲಿವೆ, ಪ್ರೌಢಶಾಲಾ ಶಿಕ್ಷಕರು ಪರೀಕ್ಷಾ ಕಾರ್ಯಗಳು ಮತ್ತು ಮೌಲ್ಯ ಮಾಪನ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವುದರಿಂದ, ಹಾಗೂ ಸ್ಥಳೀಯ ಚುನಾವಣೆಗಳು ಕೂಡ ನಡೆಯುವ ಸಾಧ್ಯತೆ ಇದೆ, ಹಾಗಾಗಿ ಪ್ರೌಢಶಾಲಾ ಶಿಕ್ಷಕರಿಗೆ 2026-27ರ ಜನಗಣತಿಯ ಕಾರ್ಯದಿಂದ ವಿನಾಯಿತಿ ನೀಡುವ ಕುರಿತು ಮಾನ್ಯ ಜಿಲ್ಲಾಧಿಕಾರಿಯವರನ್ನು ಕೋರಿದ್ದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದಹೆಚ್. ಜಿ. ಕುಮಾರ್, ಜಿಲ್ಲಾ ಕಾರ್ಯದರ್ಶಿಎಂ. ಎಸ್. ಮಹೇಂದ್ರ, ಮಡಿಕೇರಿ ತಾಲೂಕಿನ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ. ಎಸ್, ರವಿಕ್ರಷ್ಣ, ಸೋಮವಾರ ಪೇಟೆ ತಾಲೂಕಿನ ಸಹಶಿಕ್ಷಕರ ಸಂಘದ ತಾಲೋಕು ಸಂಘದ ಅಧ್ಯಕ್ಷರಾದ ಕೆ.ಆರ್.ರತ್ನಕುಮಾರ್, ಜಿಲ್ಲಾ ಸಂಘದ ಪದಾಧಿಕಾರಿ  ಸಿ. ಹೆಚ್. ಲೋಕೇಶ್, ಸೋಮವಾರಪೇಟೆ ತಾಲೋಕು ಸಂಘದ ಉಪಾಧ್ಯಕ್ಷ ಯಶವಂತ್ ಕುಮಾರ್, ಸೋಮವಾರಪೇಟೆ ತಾಲೋಕು ಸಂಘದ ಪದಾಧಿಕಾರಿ ವಿಜಯ್ ಕುಮಾರ್ ರವರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want