ಕೆ.ಆರ್.ನಗರ(ಜಿಟೆಕ್ ಶಂಕರ್): ವೀರ ಮಡಿವಾಳ ಮಾಚೀದೇವರು ಮನುಕುಲಕ್ಕೆ ಆದರ್ಶ ಪುರುಷರಾಗಿದ್ದು ಅವರ ತತ್ವ, ಸಿದ್ದಾಂತ ಮತ್ತು ಜೀವನದ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯ ಮಡಿವಾಳ ಮಾಚೀದೇವರ ಆವರಣದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದ ಕೊಳೆಯನ್ನು ತೊಳೆಯಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಮಡಿವಾಳ ಸಮಾಜದ ಭಾಂದವರು ದೇವರಿಗೆ ಸಮಾನರು ಎಂದರು.
ತಮ್ಮ ಜೀವನದ ವೃತ್ತಿಯ ಮೂಲಕ ಬದುಕನ್ನು ಕಟ್ಟಿಕೊಂಡಿರುವ ಮಡಿವಾಳರು ಇತರರಿಗೆ ಮಾದರಿಯಾಗಿದ್ದು ಪ್ರತಿಯೊಬ್ಬ ಮನುಷ್ಯನು ಇಂತಹದೇ ಜಾತಿಯಲ್ಲಿ ಜನಿಸಬೇಕು ಎಂದು ಬಯಸುವುದಿಲ್ಲ ಆದರೆ ಜನ್ಮ ತಾಳಿದ ಮೇಲೆ ತಮ್ಮ ಬದುಕಿನ ಕಾಯಕ ಮಾಡಿ ಇತರರಿಗೆ ಮಾದರಿಯಾಗುವ ಜೀವನ ನಡೆಸುವುದನ್ನು ತೋರಿಸಿಕೊಟ್ಟ ಈ ಸಮಾಜ ನಮಗೆ ದಾರಿ ದೀಪ ಎಂದು ಕೊಂಡಾಡಿದರು.

ಇತ್ತೀಚಿನ ದಿನಗಳಲ್ಲಿ ಮಡಿವಾಳ ಸಮಾಜದ ಭಾಂದವರು ಸಂಘಟಿತರಾಗಿ ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ನೀಡುತ್ತಿದ್ದು ಇದನ್ನು ನಾವೆಲ್ಲರೂ ಅನುಕರಿಸಬೇಕೆಂದು ಹೇಳಿದ ಶಾಸಕರು ಮುಂದಿನ ದಿನಗಳಲ್ಲಿ ಕ್ಷೇತ್ರದ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ತೆರೆಯಲು ನಾನು ಗಮನಹರಿಸಲಿದ್ದು ನೀವೆಲ್ಲರೂ ಅಲ್ಲಿಗೆ ಮಕ್ಕಳನ್ನು ಸೇರ್ಪಡೆ ಮಾಡಿ ಎಂದು ಕೋರಿದರು.
ಮುಂದಿನ ವರ್ಷ ವೀರ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಭವನ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ ನಂತರ ನಡೆಸಲಿದ್ದು ಇದಕ್ಕೆ ಎಲ್ಲರೂ ಅಗತ್ಯ ಸಲಹೆ ಮತ್ತು ಸಹಕಾರ ನೀಡಬೇಕೆಂದರೆಲ್ಲದೆ ನಿಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದ್ದು ಈ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ಅಭಯ ನೀಡಿದರು.
ಚಿತ್ರದುರ್ಗ ಮಾಚಿದೇವ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ.ಬಸವಮಾಚಿದೇವ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.

ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ.ಹೆಚ್.ರವಿಕುಮಾರ್, ಸಮಾಜ ಸೇವಕ ಹೆಚ್.ಎಂ.ಗೋಪಿಕೃಷ್ಣ, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷರಾದ ಸಿದ್ದನಕೊಪ್ಪಲುಕುಮಾರ್, ಹ?ವರ್ಧನ್, ನಗರಾಧ್ಯಕ್ಷ ಕಟ್ಟೆಕುಮಾರ್, ಗೌರವಾಧ್ಯಕ್ಷ ಬೋರಶೆಟ್ಟಿ, ಗೌರವ ಸಲಹೆಗಾರ ಕೃಷ್ಣಯ್ಯ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ, ರಾಜ್ಯ ಮಡಿವಾಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ.ಕೆ.ಹನುಮಂತಪ್ಪ ಮಾತನಾಡಿದರು.
ಮಡಿವಾಳ ಸಮಾಜದ ಮುಖಂಡರಾದ ಕೆಂಚಿಮಂಜು, ಹರಂಬಳ್ಳಿನವೀನ್, ಪುರುಷೋತ್ತಮ್, ಮೂಲೆಪೆಟ್ಲುಪ್ರದೀಪ್, ದರ್ಶನ್, ಸ್ವೀಟ್‌ಸ್ವಾಮಿ, ವರದರಾಜು, ವಿಶ್ವನಾಥ್, ಪುಟ್ಟರಾಜು. ರಾಮಶೆಟ್ಟಿ, ಗೇರದಡಚಂದ್ರಶೆಟ್ಟಿ, ಹೊನ್ನಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.








