LatestPolitical

ಚೊಚ್ಚಲ ಜನ್ಮದಿನೋತ್ಸವ ಆಚರಿಸುತ್ತಿರುವ ಕೆ ಆರ್ ಎಸ್ ಪಕ್ಷದ ಎಸ್ ಸಿ-ಎಸ್ ಟಿ ಘಟಕ  ಮಾಡಿಕೊಂಡ ಮನವಿ ಏನು?

ನಾವೀಗ 77ನೇ ಗಣ ರಾಜ್ಯೋತ್ಸವ ದ ಹೊಸ್ತಿಲಲ್ಲಿದ್ದೇವೆ. ಸರಿಯಾಗಿ ಲೆಕ್ಕ ಹಾಕಿದರೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ – KRS Party ದ ಕೆ ಆರ್ ಎಸ್ ಪಕ್ಷ ಎಸ್ ಸಿ-ಎಸ್ ಟಿ ಘಟಕ  KRS Party SC/ST Wing ತನ್ನ ಚೊಚ್ಚಲ ಜನ್ಮದಿನೋತ್ಸವವನ್ನು ಇದೇ ದಿನ ಆಚರಿಸಿಕೊಳ್ಳುತ್ತಿದೆ. ಇಲ್ಲಿಯವರೆಗೆ, ಕನ್ನಡಿಗರು ಒಟ್ಟಾರೆಯಾಗಿ ಕೆ.ಆರ್.ಎಸ್. ಪಕ್ಷ ದ ಮಾತೃ ಘಟಕಕ್ಕೆ ನೇರವಾಗಿ ದೇಣಿಗೆ ನೀಡುತ್ತಿದ್ದಿರಿ. ಈಗ, SC ST ಬಂಧುಗಳ ಹಿತ ಕಾಯಲೆಂದೇ ಪ್ರತ್ಯೇಕವಾಗಿ ಈ QR code ಗೆ ದೇಣಿಗೆ ನೀಡಿ ಉಪಕರಿಸಬಹುದು. ಮತ್ತು ಉಪಕರಿಸಬೇಕು ಅಂತ ನಮ್ಮ ಭಿನ್ನಹ ಕೂಡ ಎಂದು KRS ಪಕ್ಷ ರಾಜ್ಯ SC ST ಘಟಕದ ರಾಜ್ಯಾಧ್ಯಕ್ಷ ಪ.ಯ. ಗಣೇಶ ಹೇಳಿದ್ದಾರೆ.

ರಾಜಕೀಯದ ಕುರಿತಂತೆ ಮಾತನಾಡಿರುವ ಅವರು, ರಾಜಕಾರಣ ಗೊತ್ತಿರುವವರಿಗೆ, ರಾಜಕಾರಣಿಗಳಾದವರು ಮತದಾರ ಪ್ರಭುಗಳಿಗೆ ಕೊಟ್ಟುಕೊಂಡೇ ಬಂದರು  ಎಂಬುದು ಗೊತ್ತಿರುತ್ತದೆ. ಮತ್ತೆ ಹಾಗೇ ಲಕ್ಷಾಂತರ ಜನಗಳಿಗೆ, ಮತದಾರ ಪ್ರಭುಗಳಿಗೆ ಕೊಟ್ಟುಕೊಂಡು ಬಂದರೂ, ಕೊಟ್ಟವನು ಕೋಡಂಗಿ ಆಗಲೇ ಇಲ್ಲ. ಈಕಡೆ, ಇಸ್ಕೊಂಡವ ಈರಭದ್ರ ಕೂಡ ಆಗಲಿಲ್ಲ. ಇದು ಒಟ್ಟಾರೆ ಉಲ್ಟಾನೇ ಆಯಿತು.‌ ನೀವು ಸುಮ್ಮನೇ ಗಮನಿಸಿ; ಶಾಸಕನಾಗಲು ಬರುವವ ನಿಮ್ಮ ಒಂದೊಂದು ಓಟಿಗೂ ಐನೂರು ಕೊಡುತ್ತಾನೆ.‌ ಇಲ್ಲವೇ ಸಾವಿರ ರೂಪಾಯಿ ಕೊಡುತ್ತಾನೆ. ಒಂದು ವಿಧಾನಸಭಾ ಕ್ಷೇತ್ರ ದಲ್ಲಿ ಸರಿಸುಮಾರು 2 ಲಕ್ಷಕ್ಕೂ ಹೆಚ್ಚು ಮತದಾರರಿರುತ್ತಾರೆ.

ಎರಡೇ ಲಕ್ಷ ಮತದಾರರು ಇದ್ದಾರೆಂದರೂ, ಒಂದೊಂದು ಮತಕ್ಕೆ ₹ 1,000/- ಅಂತ 2,00,000 ( ಎರಡು ಲಕ್ಷ ) ಜನಗಳಿಗೆ ಕೊಟ್ಟರೆ, ಅದರ ಒಟ್ಟು ಮೊತ್ತ ₹ 200,000,000/- ( 20 ಕೋಟಿ ) ರೂಪಾಯಿಗಳಾಗುತ್ತವೆ. ಒಬ್ಬ ಶಾಸಕನಿಗೆ ಇವತ್ತು ಕರ್ನಾಟಕ ಸರ್ಕಾರ ಹೆಚ್ಚು-ಕಡಿಮೆ ಕೊಡುತ್ತಿರುವುದೇ ಒಂದು ತಿಂಗಳಿಗೆ ₹ 2,00,000. ಅಂದರೆ 2 ಲಕ್ಷ ರೂಪಾಯಿ. ಸರಿ. ಒಂದು ತಿಂಗಳಿಗೆ 2,00,000/- X 60 ತಿಂಗಳುಗಳ ಕಾಲ ಶಾಸಕ ( 5 ವರ್ಷಗಳಷ್ಟು ) ನಾಗಿದ್ದರೆ, ಆತನಿಗೆ ಬರುವ ಒಟ್ಟು ಸಂಬಳವೇ ₹ 12,000,000/-. ಅಂದರೆ ಒಂದು ಕೋಟಿ ರೂಪಾಯಿಗಳು ಮಾತ್ರ‌. ನಿಮಗೆ ಗೊತ್ತಿರಬೇಕಾದ ಸತ್ಯವೊಂದಿದೆ; ಎರಡು ಲಕ್ಷ ಸಂಬಳ ಪೂರ್ತಿಯಾಗಿ ಶಾಸಕನಿಗೇ ಕೊಡುವುದಿಲ್ಲ. ಅದರಲ್ಲಿ ಒಬ್ಬ P.A. ಯನ್ನು ತೆಗೆದುಕೊಳ್ಳಬೇಕು.‌ ಆತನಿಗೆ ತಿಂಗಳಿಗೆ ₹ 20,000/- ಸಂಬಳ ಕೊಡಬೇಕು. ಒಂದು ತಿಂಗಳಿಗೆ ₹ 20,000 ಎಂದು ಫೋನ್ ಬಿಲ್ ಕೊಡುತ್ತದೆ. ಕ್ಷೇತ್ರದಾದ್ಯಂತ ಶಾಸಕನಾದವನು ತಿರುಗಾಡಿದರೂ ಒಂದೊಂದು ಕಿಲೋಮೀಟರ್’ಗೆ ಸರ್ಕಾರ ಹಣ ಕೊಡುತ್ತದೆ.‌ ಹೀಗೆ ಎಲ್ಲಾ ಒಟ್ಟು ಮಾಡಿದರೆ, ಒಂದು ತಿಂಗಳಿಗೆ ಬರುವ ಸಂಬಳವೇ ಎರಡು ಲಕ್ಷ ರೂಪಾಯಿ.

ಮಿನಿಮಮ್ ಅಂದರೂ, 20 ಕೋಟಿ ರೂಪಾಯಿಗಳಷ್ಟು ಮತದಾರರಿಗೆ ಹಂಚಿ, ಪಡೆಯುವುದು ಮಾತ್ರ ಬರೀ ಒಂದು ಕೋಟಿ 20 ಲಕ್ಷ ರೂಪಾಯಿಗಳು…!!! ಮತದಾರ ಪ್ರಭುಗಳು ಈ ಮಾತ್ರದ ಕನಿಷ್ಟ calculations ಅರ್ಥ ಮಾಡಿಕೊಳ್ಳದಿದ್ದರೆ, ಈಗಿರುವ ರಾಜಕಾರಣವೇ ನಾಳೆಗೂ ಮುಂದುವರೆಯುತ್ತದೆ. ಅದಾಗಬಾರದು, ಇಲ್ಲೊಂದು ಬದಲಾವಣೆ ಕಾಣಬೇಕು. ಈಗಿರುವ ರಾಜಕಾರಣವೇ ಹಸೀಸುಳ್ಳು. ಇದು ಲೂಟಿಕೋರರ ಸಾಮ್ರಾಜ್ಯ. ಒಂದು ಕಡೆಯಿಂದ ಕೊಟ್ಟು ನಾನಾ ಕಡೆಯಿಂದ ಎಬ್ಬುವ ಕೆಲಸವೇ ರಾಜಕಾರಣ ಎಂಬಂತಾಗಿದೆ. ಶಾಸಕನಾದವನು ಬರೀ ಎಬ್ಬಿದನೆಂದರೆ, ಅದೂ ಬೇರೆ. ಆದರೆ, ಮತದಾರರ ಜೀವ ಹೋಗುವಂಥ ವಾತಾವರಣ ಸೃಷ್ಟಿ ಮಾಡುತ್ತಾನೆ. ಮತದಾರರ ಜೀವನ ನರಕಸದೃಶಗೊಳಿಸುತ್ತಾನೆ. ತಿನ್ನೋ ಅನ್ನ ಕ್ಕೂ ತತ್ವಾರ ಎಂಬಂಥ ಸ್ಥಿತಿ ತಂದಿಡುತ್ತಾನೆ. ಅದೇ ಈ ಹೊತ್ತಿನ ವಾತಾವರಣ.

ಇಂಥ ಅಭಿಪ್ರಾಯಗಳನ್ನು ನಾವು ನಿಮಗೆ ವರ್ಷಾನುಗಟ್ಟಲೆ ತಿಳಿಸಿಕೊಂಡೇ ಬಂದಿದ್ದೇವೆ. ಈಗ ಮತ್ತೆ ಹೇಳುತ್ತಿದ್ದೇವೆ; ನಾಳೆಯೂ ಹೇಳುತ್ತೇವೆ.‌ ಮನುಕುಲ ಇರುವವರೆಗೂ ಹೇಳುತ್ತೇವೆ.  ಅಂದ ಹಾಗೆ, ಇಷ್ಟೆಲ್ಲಾ ವಿಷಯಗಳನ್ನು ಈಗ ಹೇಳಿದ್ದು ರಾಜಕಾರಣದ ಅಸಲಿಯತ್ತುಗಳನ್ನು ತಿಳಿಸಲು. ಈಗಲಾದರೂ, ಇವತ್ತಿನ ರಾಜಕಾರಣದಲ್ಲಿ ಮಹಾಮೋಸ ನಡೆಯುತ್ತಿದೆ. ಅನ್ಯಾಯ, ಅಕ್ರಮ, ದೌರ್ಜನ್ಯ, ಭ್ರಷ್ಟಾಚಾರ ತುಂಬಿ ತುಳುಕುತ್ತಿರುವುದು ನಿಜವೇ ಎಂಬುದು ನಿಮಗೆ ಅರ್ಥವಾಗಿದ್ದರೆ, ನಮ್ಮ ಪಕ್ಷಕ್ಕೆ ದೇಣಿಗೆ ನೀಡುತ್ತಾ ಹೋಗಿ. ಅದರಲ್ಲೂ ಈಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯ ಗಳ ಹಿತ ಕಾಪಾಡಲೆಂದೇ ಮತ್ತು ಅದಕ್ಕಾಗಿಯೇ ಕೆಲಸ ಮಾಡಲು ನಾವು ನಿಮ್ಮಿಂದ ಈ ಮೂಲಕ ದೇಣಿಗೆ ಕೇಳುತ್ತಿದ್ದೇವೆ.

ದಯವಿಟ್ಟು ದೇಣಿಗೆ ಕೊಡಿ. ಸರ್ಕಾರಗಳು ನಡೆಯುತ್ತಿರುವುದೂ ನಿಮ್ಮಿಂದಾನೇ. ಶಾಸಕ, ಸಂಸದ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಬದುಕುತ್ತಿರುವುದು ಕೂಡ ನಿಮ್ಮಿಂದಾನೇ. ಅಂದರೆ,ಅವರೆಲ್ಲರಿಗೂ ನೀವೇ ಸಂಬಳ ಕೊಟ್ಟು ಪೊರೆಯುತ್ತಿದ್ದೀರಿ.; ನಾನಾ ರೀತಿಯ ತೆರಿಗೆ ಗಳನ್ನು ಕಟ್ಟುವುದರ ಮೂಲಕ. ಹಾಗೇ, ನಮ್ಮ ಪಕ್ಷಕ್ಕೂ, ನಮ್ಮ ಪಕ್ಷದ SC ST ಘಟಕಕ್ಕೂ ದೇಣಿಗೆ ನೀಡಿ ಉಪಕರಿಸಿ. ನಾನು ಸತ್ಯ ಹೇಳುತ್ತೇನೆ; ನೀವು ನೀಡಿದ ದೇಣಿಗೆಯನ್ನು ನಿಮ್ಮದೇ ಅಭ್ಯುದಯಕ್ಕಾಗಿ ಕೆಲಸ ಮಾಡಲು ಮಾತ್ರ ಬಳಕೆಯಾಗುತ್ತದೆ. ಒಂದ್ರೂಪಾಯಿ ಕೂಡ ಭ್ರಷ್ಟಾಚಾರ ವಾಗಲು ಬಿಡುವುದಿಲ್ಲ. ಯಾಕೆಂದರೆ, ನೀವು ಏನೇ ಹಣ ಕೊಟ್ಟರೂ, ನಮ್ಮ ಪಕ್ಷ ಅದನ್ನು ಕಣ್ಗಾವಲು ಕಾಯುತ್ತದೆ ಎಂದು ಹೇಳಿದ್ದಾರೆ. ಮಾಹಿತಿಗೆ  9481 711 600 ಸಂಪರ್ಕಿಸಬಹುದು.

admin
the authoradmin

ನಿಮ್ಮದೊಂದು ಉತ್ತರ

Translate to any language you want