ArticlesLatest

ಗಾನಕೋಗಿಲೆ ಲತಾ ಮಂಗೇಶ್ಕರ್ ನ್ನು ನೆನೆಯುತ್ತಾ… ಕವನದ ಸಮರ್ಪಣೆ…

“ಲತಾ”ಎರಡಕ್ಷರದ ವಿದೂಷಿ ತಾರಾ

ಸಾರ್ವಕಾಲಿಕ ಸಕಲ ಶ್ರೇಷ್ಠ ಶಾರೀರ

ಸಿನಿ ಜಗತ್ತಿನ ಹಿನ್ನೆಲೆ ಗಾಯಕಿಯರ

ಅಸಾಮಾನ್ಯ ಪರ್ವದ ಜೇಷ್ಠ ಶರೀರ

ಗೀತ-ಸಂಗೀತ ಸಾಮ್ರಾಜ್ಯದ ಚಕ್ರವರ್ತಿನಿ

ನೈಟಿಂಗೇಲ್ ಆಫ್ ಇಂಡಿಯ ಮಹಾರಾಣಿ

ಹಳ್ಳಿಯಿಂದ ದಿಲ್ಲಿಯವರೆಗೂ

ಬಡವನಿಂದ ಬಲ್ಲಿದನವರೆಗೂ

ಪಂಡಿತನಿಂದ ಪಾಮರನವರೆಗೂ

ಅರಮನೆಯಿಂದ ಆಲಯದವರೆಗೂ

ಕಿರುಮನೆಯಿಂದ ದಟ್ಟಕಾಡಿನವರೆಗೂ

ಸುಣ್ಣದಗೂಡಿಂದ ಸುಡುಗಾಡಿನವರೆಗೂ

ಗುಡಿಸಲಾಗಲೀ ಮಹಲುಗಳಾಗಲೀ

ಮದುವೆಮುಂಜಿ ಆರತಕ್ಷತೆಯೆ ಇರಲಿ

ನಾಮಕರಣ ಇತ್ಯಾದಿ ಶುಭಕಾರ್ಯವಿರಲಿ

ಪೂಜೆ ಪುನಸ್ಕಾರ ಯಜ್ಞಯಾಗವೆ ಇರಲಿ

ಹುಟ್ಟುಸಾವು ಮಂಗಳಾ ಮಂಗಳ ಯಾವ್ದೆ ಇರಲಿ

ಆಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ

ಆನಂದದಿ ಆಹ್ವಾನಿಸಿ ಆಸ್ವಾದಿಸುವ ದೃಷ್ಟಿ

ಕುಣಿದು ಕುಪ್ಪಳಿಸಿ ನಲಿದುಲಿಯುವ ಸೃಷ್ಟಿ!

ಲತಾ ಗೀತೆಗಳಿಗೆ ಮಾನ್ಯತೆ ಮಾರ್ದನಿ ಧನ್ಯತೆ

ಲತಾಮಂಗೇಶ್ಕರ್ ಧ್ವನಿಪ್ರತಿಧ್ವನಿ ಪ್ರಾಧಾನ್ಯತೆ

ಕೋಗಿಲೆ ನಾಚಿತು ಲತಾ ಕಂಠಮಾಧುರ್ಯಕೆ

ಗಂಧರ್ವರು ಬೆರಗಾದರು ಲತಾಗಾಯನಸಿರಿಗೆ

ವಿಶ್ವಸಂಸ್ಥೆ ಸಭೆಯಲ್ಲಿ ಗಾನಸುಧೆ ಹರಿಸಿದ

ಲಕ್ಷಗಟ್ಟಲೆ ಹಾಡಿ ಗಿನ್ನಿಸ್ ದಾಖಲೆ ಮಾಡಿದ

ಲತಾರ ಅಮೋಘ ಅಪ್ರತಿಮ ಅದ್ಭುತ ಗಾಯನ

ಅನನ್ಯ ಅನಂತ ಅಮೂಲ್ಯ ಆಪ್ಯಾಯಮಾನ

ಅನೇಕ ಪ್ರಶಸ್ತಿ ಸನ್ಮಾನ ಬಿರುದು ಬಹುಮಾನ

ಅಸಂಖ್ಯಾತ ಭಕ್ತರಿಂದ ಅಪೂರ್ವ ಅಭಿಮಾನ

ಕುಮಾರಕವಿಯ ಕಣ್ಣೀರಿನ ಈ ಕವನ ನಮನ

ರವಿ ಚಂದ್ರ ಭೂಮಿ ಇರೋವರೆಗೆ ಅಮರನಿಷ್ಠೆ

ನಿತ್ಯಸತ್ಯ ನಭೋಮಂಡಲ ಮುಟ್ಟುವ ಪರಾಕಾಷ್ಠೆ

ಇವರಿಗಿವರೇ ಸರಿಸಾಟಿ ಮಾಡೋರಿಲ್ಲ ಪೈಪೋಟಿ

ಇಪ್ಪತ್ತನೆ ಶತಮಾನದ ಸ್ತ್ರೀನವರತ್ನ ಪುಣ್ಯಕೋಟಿ

ಕಲಿಯುಗ ಸಂಗೀತಶಾರದೆ ನೀವೇ ಧನುಷ್ಕೋಟಿ

ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಕೋಟಿ ಕೋಟಿ…

admin
the authoradmin

1 Comment

Leave a Reply

Translate to any language you want