Mysore

ಮಡಿವಾಳ ಮಾಚಿದೇವರ ಜಯಂತಿ ಅದ್ಧೂರಿ ಆಚರಣೆಗೆ  ಮೈಸೂರಿನಲ್ಲಿ ಪೂರ್ವಭಾವಿ ಸಭೆ

ಮೈಸೂರು: ಫೆಬ್ರವರಿ 1ರಂದು ನಡೆಯಲಿರುವ ವಚನ ಸಂರಕ್ಷಕ ಮಡಿವಾಳ ಮಾಚಿದೇವರ ಜಯಂತಿಯನ್ನು ಜಿಲ್ಲಾಡಳಿತ ಹಾಗೂ ಮಡಿವಾಳ ಸಂಘಟನೆಗಳ ಮುಖಂಡರುಗಳ ಸಯೋಗದೊಂದಿಗೆ ವ್ಯವಸ್ಥಿತವಾಗಿ ಆಚರಿಸಲಾಗುವುದು ಎಂದು ಮೈಸೂರು ಜಿಲ್ಲಾ ಅಪರ ಜಿಲ್ಲಾಧಿಕಾರಿ ಶಿವರಾಜ್ ಅವರು ಹೇಳಿದರು.

ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ  ಮಾಚಿದೇವರ ಜಯಂತಿ 2026ರ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್ ಅವರು ಮಾತನಾಡಿ ಇಲಾಖೆ ವತಿಯಿಂದ ಮಚಿದೇವರ ಜಯಂತಿ ಸೇರಿದಂತೆ 38 ಮಹನೀಯರ ಹಾಗೂ ಸಮುದಾಯದ ಜಯಂತಿಗಳನ್ನು ಆಚರಿಸಲಾಗುತ್ತಿದೆ.ಮಾಚಿದೇವರ  ಜಯಂತಿ ಕಲಾಮಂದಿರದಲ್ಲಿ ನಡೆಯಲಿದ್ದು ಜನಪ್ರತಿನಿಧಿಗಳು ಭಾಗವಹಿಸಲು ಶಿಷ್ಟಾಚಾರದಂತೆ ಆಮಂತ್ರಣ ನೀಡಲಾಗುವುದು, ಅಧಿಕಾರಿಗಳು ಭಾಗವಹಿಸಲು. ಭಾಗವಹಿಸಲು ಜಿಲ್ಲಾ  ಆಡಳಿತದಿಂದ ಸುತ್ತೋಲೆ ಹೊರಡಿಸಲಾಗುವುದು. ಮಡಿವಾಳ ಸಮಾಜದ ಮುಖಂಡರು ಮುತುವರ್ಜಿ ವಹಿಸಿ ಜನಪ್ರತಿನಿಧಿಗಳನ್ನು ಭೇಟಿ ಮಾಡಿ  ಜಯಂತಿ ಯಶಸ್ವಿಯಾಗಲು ಸಹಕರಿಸಬೇಕು ಎಂದರು.

ಇದೇ ಸಂದರ್ಭ ಸಮುದಾಯದ ಮುಖಂಡರುಗಳು ಈ ಬಾರಿ ಭಾನುವಾರ ದಿನ ಜಯಂತಿ ಇದ್ದು, ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವುದರಿಂದ ತಂಡಗಳು,  ಸ್ವಚ್ಛತೆ, ನೀರಿನ ವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ಒದಗಿಸಬೇಕೆಂದು ಕೋರಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್  ಮಾತನಾಡಿ ಮೆರವಣಿಗೆ ನಿಗದಿತ ಸಮಯಕ್ಕೆ ಕಲಾಮಂದಿರಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಳ್ಳಬೇಕೆಂದು ಕೋರಿದರು.

ಪೂರ್ವಭಾವಿ ಸಭೆಯಲ್ಲಿ ಮೈಸೂರಿನ ಮಡಿವಾಳ ಮಾಚಿದೇವ ಜಯಂತೋತ್ಸವ ಸಮಿತಿಯ ಪ್ರಮುಖರುಗಳಾದ ಚನ್ನಕೇಶವ, ಮಂಜುಶೆಟ್ಟಿ, ಸತ್ಯನಾರಾಯಣ, ರವಿನಂದನ, ಕೇಶವ ಬಿ.ಜಿ., ಪ್ರಶಾಂತ್ ಸಿದ್ದಪ್ಪಾಜಿ, ಜಗದೀಶ್,  ಮಾಧುರಾಜ್, ಶ್ರೀರಾಮ, ನಾಗೇಶ್,ರಾಜೇಶ್,  ಮಹೇಶ್, ತೇಜಸ್, ವಿನಯ್ , ನಾಗರಾಜು, ಮಹೇಶ್ ಕಿರಾಳು, ಬಸವರಾಜು, ಮಾಧುರಾಜ್, ಶಿವರಾಜ್, ಕಿರಾಳು ಮಹೇಶ್,  ಮಹನೀಯರ ಜಯಂತಿ ಸಮಿತಿಯ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯ ಮುಖಂಡರು, ಪೊಲೀಸ್, ನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want