ArticlesLatest

ಮಾಡ್ರಹಳ್ಳಿ ಮಠದ ಮಹಿಮೆ – ಗುರುಕೃಪೆಯ ಬೆಳಕು.. ಗುರುಪರಂಪರೆಯ ದಿವ್ಯ ಕೀರ್ತಿ ಹರಡುವ ಧಾಮ.

ಮಾಡ್ರಹಳ್ಳಿ ಶ್ರೀ ಚೆನ್ನಮಲ್ಲಿಕಾರ್ಜುನಸ್ವಾಮಿಗಳವರ ಸುವರ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾಡ್ರಹಳ್ಳಿ  ಪಟ್ಟದ ಮಠದ ಬಗ್ಗೆ ಭಕ್ತಿಯ ಕವಿತೆ ರಚಿಸಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಮಾಡ್ರಹಳ್ಳಿ ಮಠದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಮುಡಕನಪುರ ಮಠದ ಷಡಕ್ಷರಿ ದೇಶಿಕೇಂದ್ರಸ್ವಾಮಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ತಿ. ನರಸೀಪುರದ ತೀರದಲ್ಲಿ ತೇಜೋಮಯವಾಗಿ ನಿಂತ

ಮಾಡ್ರಹಳ್ಳಿಯ ಶ್ರೀ ಪಟ್ಟದ ಮಠ —

ಭಕ್ತಿಯ ಬೀಜ ಬಿತ್ತಿದ ಪಾವನ ಕ್ಷೇತ್ರ,

ಗುರುಪರಂಪರೆಯ ದಿವ್ಯ ಕೀರ್ತಿ ಹರಡುವ ಧಾಮ.

 

ಪೂಜ್ಯ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳವರ

ಸುವರ್ಣ ಪುಣ್ಯಸಂಸ್ಮರಣೆಯ ಸ್ಮೃತಿ ಇಂದು,

ಭಕ್ತರ ಹೃದಯಗಳಲ್ಲಿ ಬೆಳಗುವ ದೀಪವಾಗಿ

ಧರ್ಮದ ದಾರಿಯನ್ನು ಪುನಃ ಪ್ರಕಾಶಿಸುತ್ತದೆ.

 

ಶ್ರೀ ಗುರುಮಲ್ಲೇಶ್ವರರ ಕೃಪಾಕರಗಳಿಂದ

ಕರಕಮಲಸಂಜಾತರಾದ ಭಿಕ್ಷದ ರಾಚಪ್ಪಸ್ವಾಮಿಗಳಿಂದ

ಸ್ಥಾಪಿತವಾದ ಈ ಪಾವನ ಮಠ,

ಭಕ್ತಿಯ ಬೃಹತ್ ವೃಕ್ಷವಾಗಿ ಬೆಳೆಯಿತು.

 

ಲಿಂಗಪೂಜೆಯ ನಿಷ್ಠೆಯಲಿ ತಪಸ್ಸು ಮಾಡಿದ

ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು,

ಕಾಯಕವೇ ಕೈಲಾಸವೆಂದು ಬದುಕಿದ ಯೋಗಿಗಳು,

ದಾಸೋಹದ ದಾರಿಯಲ್ಲಿ ಧರ್ಮವನ್ನೇ ಬಿತ್ತಿದ ಮಹನೀಯರು.

 

ಇಂದು ಅವರ ಕೀರ್ತಿಯ ದೀಪ ಹಿಡಿದು

ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು ನಡೆದುಬರುತ್ತಿದ್ದಾರೆ;

ವಿದ್ಯಾಸಂಸ್ಥೆಗಳ ಬೆಳಕಿನಿಂದ

ಅಜ್ಞಾನಾಂಧಕಾರವನ್ನೆಲ್ಲ ದೂರಮಾಡುತ್ತಿದ್ದಾರೆ.

 

“ಛಲ ಬೇಕು ಶರಣೆಂಬ” ತತ್ವವನ್ನು ಹೃದಯದಲ್ಲಿ ಹಿಡಿದು

ವಿದ್ಯೆಗೂ ಸಂಸ್ಕಾರಕ್ಕೂ ಸೇತುವೆ ಕಟ್ಟುತ್ತ,

ಶ್ರೀಮಠದ ಕೀರ್ತಿಯನ್ನು ಗಗನದೆತ್ತರಕ್ಕೆ

ಎತ್ತಿ ಹಿಡಿದ ಧರ್ಮಧ್ವಜಧಾರಿಗಳು.

 

ಶ್ರೀಗಳ ಪಾವನ ಸಾನ್ನಿಧ್ಯ ಕಂಡರೆ

ಸಿ.ಪಿ. ಸಿದ್ಧಲಿಂಗಪ್ಪ  ಮತ್ತು ದೇವಮ್ಮ ಅವರ ಮನದಲ್ಲಿ

ಭಕ್ತಿಯ ಸಾಗರವೇ ಉಕ್ಕುತಿತ್ತು;

ಅವರ ಕುಟುಂಬಕ್ಕೆ ಇದು ಗುರುಕೃಪೆಯ ಆಶ್ರಯ.

 

ಚಿಕ್ಕ ಬಾಲಕನಾಗಿದ್ದಾಗಲೇ

ಗುರುದರ್ಶನ ಪಡೆದ ವಚನ ಕುಮಾರಸ್ವಾಮಿ,

ಈ ಶ್ರೀಗಳ ಆಶೀರ್ವಾದ ನೆರಳಲ್ಲಿ ಬೆಳೆದ

ಭಕ್ತಿಯ ಮರದಂತೆ ಅರಳಿದವರು.

 

ಅವರ ಗೃಹಪ್ರವೇಶದ ಮಂಗಳ ಕ್ಷಣವೂ

ಈ ಪವಿತ್ರ ಸಾನ್ನಿಧ್ಯದಲ್ಲೇ ನಡೆದಿತ್ತು;

ರೂಪ ಕುಮಾರಸ್ವಾಮಿ ಅವರೊಡನೆ

ವಿವಾಹದ ಮಂಗಳ ಘಂಟೆಯೂ ಇಲ್ಲಿ ಮೊಳಗಿತು.

 

ಸುತ್ತೂರು ಜಗದ್ಗುರುಗಳ ಸಾನ್ನಿಧ್ಯ,

ಸಿದ್ಧಗಂಗೆಯ ಪೂಜ್ಯರ ಆಶೀರ್ವಾದ,

ದೇವನೂರು ಪೂಜ್ಯರ ಧರ್ಮಮಂಗಳ ಮಾತುಗಳು

ಇಂದು ಧಾರ್ಮಿಕ ಸಭೆಯಾಗಿ ಪ್ರಕಾಶಿಸುತ್ತಿವೆ.

 

ಮಾಡ್ರಹಳ್ಳಿ ಮಠದ ದ್ವಾರದಲ್ಲಿ

ಗುರುಪರಂಪರೆಯ ಕೀರ್ತಿ ಗಾನ,

ಭಕ್ತರ ಮನಗಳಲ್ಲಿ ಭರವಸೆ ಮೂಡಿಸಿ

ಧರ್ಮದ ದೀಪವನ್ನು ಬೆಳಗಿಸುತ್ತಿದೆ.

 

ಗುರುಗಳ ಕೃಪೆ ಹರಿದು ಬಂದರೆ

ಜೀವನವೇ ಪಾವನ ಯಾತ್ರೆಯಾಗುತ್ತದೆ;

ಮಾಡ್ರಹಳ್ಳಿ ಮಠದ ಈ ಮಹಿಮೆ

ಭಕ್ತಿಯ ದಾರಿಯಲ್ಲಿ ಸದಾ ದೀಪವಾಗಿರಲಿ.

-ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ, ಸಂಸ್ಥಾಪಕರು, ಶರಣು ವಿಶ್ವವಚನ ಫೌಂಡೇಷನ್, ಮೈಸೂರು.

admin
the authoradmin

Leave a Reply

Translate to any language you want