LatestMysore

ಏ.15, ಹರವೆಕಲ್ಲಹಳ್ಳಿಯಲ್ಲಿ ನೂತನ ಶ್ರೀ ಲಕ್ಷ್ಮಿ ದೇವಿ (ಮಳಲಿ ಗಿಡ್ಡಮ್ಮ) ದೇವಾಲಯದ ಉದ್ಘಾಟನೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿಯ ಹರವೆಕಲ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಲಕ್ಷ್ಮಿ ದೇವಿ (ಮಳಲಿ ಗಿಡ್ಡಮ್ಮ) ದೇವಾಲಯದ ಉದ್ಘಾಟನಾ ಕಾರ್ಯಕ್ರಮವು ಏ.15 ರಂದು ನಡೆಯಲಿದೆ.

ಈ ಸಂಬಂಧ ಏ.15ರಂದು ಶ್ರೀ ಲಕ್ಷ್ಮೀದೇವಿ ದೇವರ ಪ್ರತಿಷ್ಠಾಪನೆ ಮತ್ತು ಗೋಪುರ ಶಿಖರ, ಕಳಸ, ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯ ಕ್ರಮಕ್ಕೆ ಸಂಬಂಧಿಸಿದ ದೇವತಾ ಕಾರ್ಯ ಗಳು ಆರಂಭವಾಗಲಿವೆ. ಅಂದು ಬೆಳಿಗ್ಗೆ -4.30ರಿಂದ 5.30 ಒಳಗೆ ಬ್ರಾಹ್ಮಿ ಮುಹೂರ್ತದಲ್ಲಿ ಪ್ರತಿಷ್ಠಾಪನೆ ಸುಪ್ರಭಾತ ಸೇವೆ ವೇದಪಾರಾಯಣ ಪ್ರಧಾನ ಕಳಸ ಆರಾಧನೆ ಗಣಪತಿ ಹೋಮ ನವಗ್ರಹ ಹೋಮ ತತ್ವನ್ಯಾಸ ಹೋಮ ಮಹಾಪೂರ್ಣಾಹುತಿ ಕುಂಬಾಭಿಷೇಕ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ  ಮಧ್ಯಾಹ್ಟ 1 ಗಂಟೆಗೆ ಮಹಾಪ್ರಸಾದ ಅನ್ನ ಸಂತರ್ಪಣೆ ನಡೆಯಲಿದೆ. ಏ.16ರ ಗುರುವಾರ ಬೆಳಗ್ಗೆ 11.45ಕ್ಕೆ ಸರಿಯಾಗಿ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಪೂಜಾ ಕಾರ್ಯ ಕ್ರಮಗಳು ಆರಂಭವಾಗಿ ಗೋಪುರದ ಶಿಖರ ಕಲಶಕ್ಕೆ ಬಿಂಬಶುದ್ದಿ ನಡೆಯಲಿವೆ.

ಏ.15 ರಂದು ದೇವಾಲಯದ ಉದ್ಘಾಟನಾ ಕಾರ್ಯ ಕ್ರಮಗಳು ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯ ಕ್ರಮಗಳು ನಡೆಯಲಿದ್ದು,  ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ  ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೇವಸ್ಥಾನದ ಉದ್ಘಾಟನೆಯನ್ನು  ಶಾಸಕ ಜಿ.ಡಿ.ಹರೀಶ್ ಗೌಡ ಉದ್ಘಾಟನೆ ಮಾಡಲಿದ್ದಾರೆ

ಮುಖ್ಯಅತಿಥಿಗಳಾಗಿ  ಸಂಸದ ಯದುವೀ‌ರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ,  ಮಾಜಿ ಶಾಸಕರುಗಳಾದ ಎಚ್‌.ಪಿ. ಮಂಜುನಾಥ್‌, ಸಾ.ರಾ.ಮಹೇಶ್, ಮಹದೇವ್, ಮೈಮುಲ್ ನಿರ್ದೇಶಕ ಕೆ.ಎಸ್. ಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಟಿ. ರಾಜಣ್ಣ, ಜೆಡಿಎಸ್ ಮುಖಂಡ ಹರವೆ ಶ್ರೀಧ‌ರ್, ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಗಣೇಶ್ ಗೌಡ,  ಗ್ರಾಪಂ ಸದಸ್ಯರುಗಳಾದ ನಾಗರಾಜು, ಆಶಾ ಮಹೇಶ್, ಉದ್ಯಮಿ ಸತೀಶ್ ಪಾಪಣ್ಣ ಹೂಸೂರು ಅಣ್ಣಯ್ಯ, ಹಿರೀಕ್ಯಾತನಹಳ್ಳಿ ಗ್ರಾಮದ ಯಜಮಾನ ಜಗದೀಶ್, ಸೇರಿದಂತೆ ಇನ್ನೂ ಹಲವಾರು ಮುಖಂಡರು ಭಾಗವಹಿಸಲಿದ್ದಾರೆ.

admin
the authoradmin

Leave a Reply

Translate to any language you want