DistrictLatest

ಕೋಟಿ ಒಡೆಯ ಮಹದೇಶ್ವರನ ಸನ್ನಿಧಿಯ ಹುಂಡಿಯಲ್ಲಿ ಈ ಬಾರಿ ಸಂಗ್ರಹವಾದ ಕಾಣಿಕೆ ಹಣ ಎಷ್ಟು?

ಚಾಮರಾಜನಗರ: ಕೋಟಿ ಒಡೆಯನೆಂದೇ ಕರೆಯಿಸಿಕೊಳ್ಳುತ್ತಿರುವ ಚಾಮರಾಜನಗರ ಜಿಲ್ಲೆಯ  ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ  ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣದ ಎಣಿಕೆಯನ್ನು ನಡೆಸಲಾಗಿದ್ದು, ಈ ಬಾರಿಯ 27 ದಿನಗಳಲ್ಲಿ ಸಂಗ್ರಹವಾದ ಕಾಣಿಕೆಯ ಹಣ 2.70 ಕೋಟಿ ರೂ. ಆಗಿದೆ.

ಪ್ರತಿ ಬಾರಿ ಎಣಿಕೆ ನಡೆದಾಗಲೂ ಕೋಟಿಗಿಂತ ಕಡಿಮೆ ಸಂಗ್ರಹವಾದ ನಿದರ್ಶನಗಳಿಲ್ಲ. ಅದರಲ್ಲೂ ದೀಪಾವಳಿ ಜಾತ್ರೆ ನಡೆದ ಕಾರಣದಿಂದಾಗಿ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ಮಾದಪ್ಪನಿಗೆ ಪೂಜೆ ಸಲ್ಲಿಸಿ ಕಾಣಿಕೆಯನ್ನು ಹಾಕಿದ್ದರು. ಸದ್ಯ 27 ದಿನಗಳ ನಂತರ ಕಾಣಿಕೆ ಸಂಗ್ರಹವನ್ನು  ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘುರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ನಡೆಸಲಾಗಿದೆ.

ಕಾರ್ತಿಕ ಮಾಸ ಸೇರಿದಂತೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋ ಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣದ ಹಿನ್ನೆಲೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ 2,70,10,492 ರೂ. ನಗದು 43ಗ್ರಾಂ ಚಿನ್ನ ಹಾಗೂ1,600 ಗ್ರಾಂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.  2ಸಾವಿರ ಮುಖಬೆಲೆಯ ಹತ್ತು ನೋಟುಗಳು, ವಿದೇಶಿ ನಲುವತ್ತು ನೋಟುಗಳು ಹುಂಡಿಯಲ್ಲಿ ದೊರೆತಿದೆ.

ಕಾಣಿಕೆ ಎಣಿಕೆ ವೇಳೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ, ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ನಾಮ ನಿರ್ದೇಶಿತ ಸದಸ್ಯರುಗಳಾದ ಮರಿಸ್ವಾಮಿ, ಲೆಕ್ಕಾಧೀ ಕ್ಷಕರಾದ ಗುರುಮಲ್ಲಯ್ಯ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಭಾರತಿ , ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು,ಪೊಲೀಸ್ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಸಿಬ್ಬಂದಿ ಇದ್ದರು

 

admin
the authoradmin

Leave a Reply