LatestNews

ನರೇಗಾ ಹೆಸರು ಬದಲಾವಣೆ ಬೇಡವೆಂದು ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಆಗ್ರಹ

ಮಂಡ್ಯ: ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನ ಬದಲಾಯಿಸಬಾರದೆಂದು ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಕರ್ನಾಟಕ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಒಟ್ಟಾಗಿ ಒಮ್ಮತದ ನಿರ್ಣಯ ಮಾಡಿ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.

ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಕೂಲಿಕಾರ್ಮಿಕರ ಸಂಘಟನೆಗಳು ಸಭೆ ಸೇರಿ ಒಮ್ಮತದ ನಿರ್ಣಯ ಕೈಗೊಂಡಿದ್ದು ಈ ಸಭೆಯಲ್ಲಿ ಅನೇಕ ತಜ್ಙರು ಮಾತನಾಡಿ ಈ ಎರಡು ಯೋಜನೆಗಳ ಸಾಧ್ಯಾಸಾಧ್ಯತೆಗಳನ್ನು ಸಭೆಯ ಮುಂದಿಟ್ಟರು ಈ ವಿಚಾರದಲ್ಲಿ ಸಂವಾದ ನಡೆದು ಅನೇಕ ಉಪಯುಕ್ತ ವಿಚಾರಗಳನ್ನು ಪ್ರಸ್ತಾಪಿಸಲಾಯಿತು.

ಗ್ರಾಮೀಣ ಕೂಲಿಕಾರರ ಹಕ್ಕನ್ನು ಹಾಳು ಮಾಡುತ್ತಿರುವ, ಸಾಮಾಜಿಕ ಸಂಪತ್ತನ್ನು ಸೃಜಿಸಿ ಅಭಿವೃದ್ದಿಪಡಿಸಿರುವದನ್ನು ಕಡೆಗಣಿಸಿರುವ ಹಾಗೂ ಗ್ರಾಮೀಣ ಕೂಲಿಕಾರರ ಬದುಕನ್ನು ಹಾಳು ಮಾಡುತ್ತಿರುವ ವಿಬಿಜಿರಾಮ್‌ ಜಿ ಎಂಬ ಹೊಸ ಹೆಸರಿನ ಅನೇಕ ಅಂಶಗಳನ್ನು ಕೈ ಬಿಡಬೇಕು. ಈ ಯೋಜನೆಯ ಹೊಸ ಹೆಸರನ್ನು ಕೈಬಿಟ್ಟು ಗಾಂಧೀಜಿಯವರ ಹೆಸರಿನಲ್ಲೇ ಯೋಜನೆಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.

ಮನರೇಗಾ(ಹಿಂದಿನ) ಯೋಜನೆಯಲ್ಲಿ ಲೋಪದೋಷಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವ ಹಕ್ಕು ಕೇಂದ್ರಕ್ಕಿದೆ. ಆ ಹಕ್ಕನ್ನು ಬಳಸಿಕೊಂಡು ಜನರಿಗೆ ಒಳ್ಳೆಯದನ್ನು ಮಾಡಲಿ ಆದರೆ ಗಾಂಧೀಜಿಯವರ ಹೆಸರನ್ನು ಮಾತ್ರ ಉಳಿಸಿ ದೇಶದ ಅದರಲ್ಲೂ ಗ್ರಾಮೀಣ ಜನರ ಆಶಾಕಿರಣವಾಗಿರುವ ಗಾಂಧಿಜಿಯವರ ಹೆಸರನ್ನು ಉಳಿಸಿ ಜನರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.

ಸಭೆಯಲ್ಲಿ ಮಂಡ್ಯ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಕರ್ನಾಟಕರಾಜ್ಯದ ಕೂಲಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಎಂ.ಪುಟ್ಟಮಾದು, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್‌ಚಂದ್ರಗುರು, ನಗುವನಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಎನ್.ನಾಗೇಂದ್ರ, ಹೂತಗೆರೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀ ಮಧು ಸೂಧನ್, ಮುಂತಾದವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮಅಭಿಪ್ರಾಯಗಳನ್ನು ತಿಳಿ ಹೇಳಿದರು.

ಕ್ಲಬ್‌ನ ಅಧ್ಯಕ್ಷ ಕೌಡ್ಲೆ ಚನ್ನಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಕ್ಲಬ್‌ನ ಸಂಸ್ಥಾಪಕರಾದ ಎ.ಎಲ್.ಬಸವೇಗೌಡ, ನಾಗಯ್ಯ ಹಾಗೂ ಇತರೆ ಪದಾಧಿಕಾರಿಗಳು ಹಾಜರಿದ್ದರು. ಈ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕೊಡಲು ಮತ್ತು ಪತ್ರಬರೆಯಲು ಕ್ಲಬ್‌ನ ಅಧ್ಯಕ್ಷ ಕೌಡ್ಲೆ ಚನ್ನಪ್ಪ ಅವರಿಗೆ ಅಧಿಕಾರ ಕೊಡಲಾಯಿತು.

admin
the authoradmin

Leave a Reply

Translate to any language you want