ಕೆ.ಆರ್.ನಗರ(ಜಿಟೆಕ್ ಶಂಕರ್) ಪಟ್ಟಣದ ಆಂಜನೇಯ ಬಡಾವಣೆಯಲ್ಲಿ 35ನೇ ವರ್ಷದ ಮಾರಮ್ಮನವರ ಪೂಜಾ ಕಾರ್ಯಕ್ರಮವು ಮಂಗಳವಾರ ಅತ್ಯಂತ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಳ್ಳಿಗೆಯಿಂದಲೇ ದೇವಿಗೆ ಅಭಿಷೇಕ ಮತ್ತು ವಿಶೇಷ ಪೂಜಾ ಕೈಂಕರ್ಯ ನಡೆಸಿದರಲ್ಲದೆ ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಲಾಗಿತ್ತು.
ಪಟ್ಟಣದ ವಿವಿಧ ಬಡಾವಣೆಗಳಿಂದ ಬಂದ ಭಕ್ತರು ಬೆಳ್ಳಿಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರಲ್ಲದೆ ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಕೋರಿದರು. ದೇವಾಲಯಕ್ಕೆ ಬಂದಂತ ಭಕ್ತರಿಗೆ ಕೌಮರೇಶ್ಚರಿ ಯುವಕರ ಸಂಘದ ವತಿಯಿಂದ ಪ್ರಸಾದ ವಿತರಿಸಿದರು.
ದೇವಾಲಯಕ್ಕೆ ಆಗಮಿಸುವ ಬಡಾವಣೆಯ ಎಲ್ಲಾ ರಸ್ತೆಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು. ಅರ್ಚಕರಾದ ಶಿವಪ್ರಸಾದ್ ಮತ್ತು ದತ್ತಪ್ರಸಾದ್ ನೇತೃತ್ವದಲ್ಲಿ ವಿಶೇಷ ಹೂಮ ಹವನ ನಡೆಸಿ ನಾಡಿನ ಸರ್ವರಿಗೂ ಯಾವುದೇ ರೋಗ ರುಜಿನಗಳು ಬಾರದಂತೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಕೌಮಾರೇಶ್ವರಿ ಯುವಕ ಸಂಘದ ಅಧ್ಯಕ್ಷ ಪುಟ್ಟಾಚಾರಿಕುಮಾರ್ ಮಾತನಾಡಿ ಕೆ.ಆರ್.ನಗರ ಪಟ್ಟಣ ಸೇರಿದಂತೆ ನಾಡಿನ ಎಲ್ಲರಿಗೂ ಒಳತಾಗಲಿ ಎಂಬ ಉದ್ದೇಶದಿಂದ 35 ವರ್ಷಗಳಿಂದ ಶ್ರೀ ಮಾರಮ್ಮ ದೇವಿಯ ವಾರ್ಷಿಕೋತ್ಸವ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ ಎಂದು ಮಾಹಿತಿ ನೀಡಿದ ಅವರು 11ರ ಬುಧವಾರ ಸಾಲುಪಂಕ್ತಿ ಅನ್ನದಾಸ್ತೋಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಬಡಾವಣೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು.
ಪುರಸಭೆ ಮಾಜಿ ಅಧ್ಯಕ್ಷ ಶಿವುನಾಯಕ್, ಮಾಜಿ ಸದಸ್ಯ ಕೆ.ವಿನಯ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಕೌಮಾರೇಶ್ವರಿ ಯುವಕ ಸಂಘದ ಪದಾಧಿಕಾರಿಗಳಾದ ರಾಜೇಶ್, ನಾಗರಾಜ್ ಗುಂಡ, ಅಭಿ, ಪ್ರಕಾಶ್, ಜೀವನ್, ಪವನ್, ಮಹೇಂದ್ರ, ಕಿಶೋರ್, ಬೆನಕಪ್ರಸಾದ್, ಚೇತನ್ ಸೇರಿದಂತೆ ಇನ್ನಿತರರು ಹಾಜರಿದ್ದರು.








