ದೇಶದಲ್ಲೇ ಮೊದಲ ಬಾರಿಗೆ ತಲೆ ನೋವಿಗೆ ಕ್ರಾಂತಿಕಾರಕ ಚಿಕಿತ್ಸಾ ಪದ್ಧತಿ ಜಾರಿ… ಏನಿದು ಚಿಕಿತ್ಸೆ?

ಈಗಾಗಲೇ ಬಹುತೇಕ ಮಂದಿ ತಲೆನೋವಿನಿಂದ ಬಳಲುತ್ತಿದ್ದಾರೆ. ಈ ತಲೆನೋವು ಯಾವಾಗ ಬರುತ್ತದೆ ಎಂಬುದೇ ಗೊತ್ತಾಗದಂತಾಗಿದೆ. ಈ ತಲೆನೋವನ್ನು ನೋವು ನಿವಾರಕ ಮಾತ್ರೆಗಳಿಂದ ಶಮನ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೀಗ ಮೈಗ್ರೇನ್ ನಂತಹ(ತಲೆನೋವು) ಸಮಸ್ಯೆಗೆ ಪರಿಹಾರವನ್ನು ಪರಿಚಯಿಸುತ್ತಿರುವುದಾಗಿ ವೆಂಕಟ್ ಸೆಂಟರ್ ಫಾರ್ ಅಸೈಟಿಕ್ ಹೆಲ್ತ್ ಹೇಳಿಕೊಂಡಿದೆ.
ವೆಂಕಟ್ ಸೆಂಟರ್ ನ ನಿರ್ದೇಶಕರು ಮತ್ತು ಕನ್ಸಂಟಲ್ಟ್ ಪ್ಲಾಸ್ಟಿಕ್ ಸರ್ಜನ್ ಡಾ. ಅನಿಕೇತ್ ವೆಂಕಟರಾಮ್ ಅವರು ಹೇಳುವ ಪ್ರಕಾರ ಮೈಗ್ರೇನ್ ತೀವ್ರವಾದ ತಲೆನೋವಾಗಿದ್ದು ರೋಗಿಗಳನ್ನು ಅತಿಯಾಗಿ ಬಳಲುಸುತ್ತದೆ. ಈ ಸಮಸ್ಯೆಗೆ ಕ್ರಾಂತಿಕಾರಕ ಚಿಕಿತ್ಸಾ ಪದ್ಧತಿ ಜಾರಿಗೊಳ್ಳುತ್ತಿದ್ದು, ವೆಂಕಟ್ ಸೆಂಟರ್ ಫಾರ್ ಅಸೈಟಿಕ್ ಹೆಲ್ತ್ ನಿಂದ ದೇಶದಲ್ಲೇ ಮೊದಲ ಬಾರಿಗೆ ಶಸ್ತ್ರ ಚಿಕಿತ್ಸೆಯನ್ನು ಪರಿಚಯಿಸಿರುವುದಾಗಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮೈಗ್ರೇನ್ ಆಕ್ಷನ್ ದಿನಾಚರಣೆ (ಸೆಪ್ಟೆಂಬರ್ 12, 2025) ಪ್ರಯುಕ್ತ ತಲೆ ನೋವು ಸಮಸ್ಯೆಗೆ ಪರಿಣಾಮಕಾರಿ ಉಪಶಮನ ನೀಡಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬನಶಂಕರಿಯ ಡಾ. ಪುನೀತ್ ರಾಜ್ ಕುಮಾರ್ ರಸ್ತೆಯ ಎನ್ ಸಿಇಆರ್‌ಟಿ ಪಕ್ಕದಲ್ಲಿ ನಮ್ಮ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ತಲೆ ನೋವಿಗೆ ಪರಿಣಾಮಕಾರಿ ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ದೇಶದಲ್ಲಿ ಲಕ್ಷಾಂತರ ಜನರನ್ನು ಮೈಗ್ರೇನ್ ತೊಂದರೆ ಪೀಡಿಸುತ್ತಿದ್ದರೂ, ಉನ್ನತ ಮಟ್ಟದ ಚಿಕಿತ್ಸೆ ಕುರಿತು ಜಾಗೃತಿ ಇನ್ನೂ ಕಡಿಮೆ ಇದೆ. ದೇಶದಲ್ಲಿ ಮೊದಲ ಬಾರಿಗೆ ಮೈಗ್ರೇನ್ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸುತ್ತಿದ್ದೇವೆ. ಔಷಧಿ ಅಥವಾ ಇಂಜೆಕ್ಷನ್‌ಗಳಿಂದ ಪರಿಹಾರ ದೊರೆಯದ ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆ ಹೊಸ ಆಶಾಕಿರಣವಾಗಲಿದೆ ಎಂದರು.
ಮೈಗ್ರೇನ್ ಶಸ್ತ್ರಚಿಕಿತ್ಸೆ ಡೇ-ಕೇರ್ ವಿಧಾನವಾಗಿದ್ದು, ತ್ವಚೆಯ ಮಟ್ಟದಲ್ಲಿ ಸಣ್ಣ ಚಿರಾಯಗಳನ್ನು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಇದು ಮಿದುಳಿನ ಸರ್ಜರಿ ಅಲ್ಲ, ಬದಲಾಗಿ ಮುಖದ ಕೆಲವು ವಿಶೇಷ ಟ್ರಿಗರ್ ಪಾಯಿಂಟ್ ಗಳ ಮೇಲೆ ಇರುವ ಒತ್ತಡವನ್ನು ನಿವಾರಿಸಲು ಬಳಸುವ ನಿಖರ ಹಾಗೂ ಸುರಕ್ಷಿತವಾದ ತಂತ್ರಜ್ಞಾನವಾಗಿದೆ. ಈ ವಿಧಾನ ಸುರಕ್ಷಿತ, ಕನಿಷ್ಠ ಹಸ್ತಕ್ಷೇಪದ ಚಿಕಿತ್ಸೆಯಾಗಿದ್ದು ಶೇ. 90ಕ್ಕೂ ಹೆಚ್ಚು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಭಾರತದ ಮೊದಲ ಮೈಗ್ರೇನ್ ಶಸ್ತ್ರಚಿಕಿತ್ಸೆ ಜಾಗೃತಿ ಅಭಿಯಾನದ ಪ್ರಾರಂಭಿಸುತ್ತಿದ್ದು, ಈ ಮೂಲಕ ನೈಜ ರೋಗಿಗಳ ಯಶಸ್ಸಿನ ಅನುಭವ ಹಂಚಿಕೆ ಮಾಡಲಾಗುತ್ತದೆ. ಜೊತೆಗೆ ಮೈಗ್ರೇನ್ ರೋಗಿಗಳಿಗೆ ಉಚಿತ ಸಲಹೆ ನೀಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.