ಕುಶಾಲನಗರ(ರಘುಹೆಬ್ಬಾಲೆ): ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಕೊಡಗಿನ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ರೂ.123 ಕೋಟಿ ಅನುದಾನದಲ್ಲಿ ಕೈಗೊಂಡಿರುವ ಎಡದಂಡೆ ನಾಲೆಯ ಮುಖ್ಯ ನಾಲಾ ಮತ್ತು ನಾಲೆಯ ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಹಾರಂಗಿ ನೀರಾವರಿ ಇಲಾಖೆ ವತಿಯಿಂದ ತೊರೆನೂರು ಗ್ರಾಮದ ನೀರುಬಳಕೆದಾರರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಹಾರಂಗಿ ಎಡದಂಡೆ ನಾಲೆ ಮುಖ್ಯ ನಾಲಾ ಸರಪಳಿ 6.875 ದಿಂದ 14.750 ಕಿ.ಮೀ.ವರೆಗಿನ ಆಧುನೀಕರಣ ಕಾಮಗಾರಿ ಹಾಗೂ ಹಾರಂಗಿ ಎಡದಂಡೆ ನಾಲೆಯ ವಿರತಣಾ ನಾಲೆ 1 ರಿಂದ 18 ರವರೆಗೆ ಆಧುನೀಕರಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಕಾಮಗಾರಿಗೆ ಚಾಲನೆ ನೀಡಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಉಪ ಮುಖ್ಯಮಂತ್ರಿಗಳು ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಹಾರಂಗಿ ಜಲಾಶಯ ವ್ಯಾಪ್ತಿಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ರೈತ ಕಾಯುತ್ತಿದ್ದಾರೆ.ಅವರಿಗೆ ಕೊಡಗಿನ ರೈತರ ಪರವಾಗಿ ಡಿಕೆಶಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಲಾಶಯದ 42 ಕಿ.ಮೀ. ನಾಲೆ ಹಾಗೂ 18 ವಿತರಣಾ ನಾಲೆ ಅಭಿವೃದ್ಧಿಗೆ ಜೊತೆಗೆ ಹೇಮಾವತಿ ಜಲಾಶಯ ವ್ಯಾಪ್ತಿಯ\ ಕೊಡ್ಲಿಪೇಟೆ ಭಾಗದಲ್ಲಿ ನೂತನ 8 ಸೇತುವೆ ಕಾಮಗಾರಿ ಅನುದಾನ ಒದಗಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆಯ ಅನುದಾನದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು. ಸಾಲುಕೊಪ್ಪಲು,ಚಿಕ್ಲಿಹೊಳೆ,ಕುಶಾಲನಗರ ಭಾಗಕ್ಕೆ ತಲಾ ರೂ.5 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ ಎಂದರು

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ನೀರಾವರಿ ಇಲಾಖೆಯಲ್ಲಿ ರೂ.123 ಕೋಟಿ ಕಾಮಗಾರಿಗೆ ಅಲ್ಪಸಮಯದಲ್ಲಿ ಭೂಮಿಪೂಜೆ ನೆರವೇರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದರು.ನೀರಾವರಿ ಇಲಾಖೆಯಲ್ಲಿರಸ್ತೆಗೆ ಅನುದಾನ ಸಿಗುತ್ತಿಲ್ಲ.ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆ ಅನುದಾನದಲ್ಲಿ ರಸ್ತೆ, ಚರಂಡಿ ಕಾಮಗಾರಿ ನಡೆಸಲು ಅವಕಾಶ ನೀಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವರು ಭರವಸೆ ನೀಡಿದ್ದಾರೆ ಎಂದರು.
ಕೊಡಗಿನ ಗಡಿಗ್ರಾಮಗಳ ಹೆಬ್ಬಾಲೆ, ತೊರೆನೂರು, ಶಿರಂಗಾಲ ಭಾಗದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.ಶಿರಂಗಾಲ ಕೋಟೆ ರಸ್ತೆಗೆ ರೂ.25 ಲಕ್ಷ ಅನುದಾನ ನೀಡಲಾಗಿದೆ.ಹೆಬ್ಬಾಲೆ ಹೋಬಳಿ ಕೇಂದ್ರ ಮಾಡಿ ಚೆಸ್ಕಂ ಶಾಖಾಕಚೇರಿ ತೆರಯಬೇಕು.ಸಿದ್ದಲಿಂಗಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಹೆಬ್ಬಾಲೆ ಗ್ರಾಮದಲ್ಲಿ ರೂ.20 ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಜಾಗ ಕಾಯ್ದಿರಿಸಲಾಗಿದೆ.ಅದೇ ರೀತಿ ಕೊಡಗು ವಿವಿಗೆ ಗೋಪುರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಶಾಸಕರ ಅವದಿಯಲ್ಲಿ ಖಂಡಿತ ಆಗುತ್ತದೆ. ಎಂದರು.

ಕೆಪಿಸಿಸಿ ವಕ್ತಾರ ಮೈಸೂರು ಲಕ್ಷ್ಮಣ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ.ಈಗಾಗಲೇ 56 ಸಾವಿರ ಹುದ್ದೆ ಭರ್ತಿ ಮಾಡಲಾಗಿದೆ,96 ಸಾವಿರ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ.57 ಸಾವಿರ ಹುದ್ದೆ ಭರ್ತಿಗೆ ನೋಟಿಫಿಕೇಷನ್ ಮಾಡಲಾಗಿದೆ. ನಮ್ಮ ಸರ್ಕಾರದ ನುಡಿದಂತೆ ನಡೆಯುತ್ತಿದೆ.
ಉಪ ಮುಖ್ಯಮಂತ್ರಿ ಡಿಕೆಶಿ ಅವರು ಶಾಸಕ ಮಂತರ್ ಗೌಡ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಹೆಚ್ಚಿನ ಅನುದಾನವನ್ನು ಒದಗಿಸುತ್ತಿದ್ದಾರೆ ಎಂದರು. ಪ್ರಾಮಾಣಿಕವಾಗಿ ಜನ ಸೇವಕರಾಗಿ ಕೆಲಸ ಮಾಡುವ ಮಂತರ್ ಗೌಡ ರಂತ ಯುವ ನಾಯಕರನ್ನು ಮುಂದಿನ 25 ವರ್ಷಗಳ ಕಾಪಾಡಿಕೊಳ್ಳುವ ಹೊಣೆಗಾರಿಕೆ ಈ ಕ್ಷೇತ್ರದ ಮತದಾರರ ಮೇಲಿದೆ ಎಂದರು.

ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಸತೀಶ್, ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ,ಸಹಾಯಕ ಎಂಜಿಯರ್ ಕಿರಣ್,ಸೌಮ್ಯ,ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ, ಶಿರಂಗಾಲ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶ್ರೀಧರ್,ತೊರೆನೂರು ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರಂಗ,ಹೆಬ್ಬಾಲೆ ಸಂಘದ ಅಧ್ಯಕ್ಷ ರವಿ,ಮುಖಂಡರಾದ ಎಚ್.ಕೆ.ನಟೇಶ್ ಗೌಡ,ಟಿ.ಬಿ.ಜಗದೀಶ್, ಎಚ್.ಎಸ್.ರಾಜಶೇಖರ್,ಮಂಜುನಾಥ್, ಶ್ರೀಕಾಂತ್, ಶಿರಂಗಾಲ ಬಸವರಾಜು, ಕೃಷ್ಣೇಗೌಡ,ರಮೇಶ್, ಎಸ್.ಎಸ್.ಚಂದ್ರಶೇಖರ್, ಅಳುವಾರ ಮೂರ್ತಿ, ಟಿ.ಕೆ.ವಸಂತ,ನಿಂಗಜಮ್ಮ,ಸಾವಿತ್ರಿ, ಶಿರಂಗಾಲ ಲತಾಬಾಯಿ,ಸಂಜೀವಯ್ಯ,ದೇವರಾಜ್, ಟಿ.ಎಸ್.ಚಂದ್ರಶೇಖರ್,ಪುಟ್ಟರಾಜ, ರಾಧ ,ಪಿ.ಡಿ.ರವಿಕುಮಾರ್, ರವಿಚಂದ್ರ ಪಾಲ್ಗೊಂಡಿದ್ದರು.
ಹುದುಗೂರಿನಲ್ಲಿ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮುಖಂಡರಾದ ಕೆ.ಪಿ.ಚಂದ್ರಕಲಾ,ಉಮಾ ಪ್ರಭಾಕರ್, ಮುಸ್ತಫಾ, ಸುಬ್ಬಯ್ಯ,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪ್ರೇಮಾಲೀಲಾ,ಶೋಭಾಕುಟ್ಟಪ್ಪ,ಟಿ.ಪಿ.ಹಮೀದ್, ಅನಂತ್ ಕುಮಾರ್, ರವಿ,ಚಾಮಿ,ಐಮುಂಡಿಯಂಡ ಗಣೇಶ್ ,ಗೋವಿಂದಪ್ಪ, ಜಿ.ಆರ್.ಪುಷ್ಪಲತಾ ಮತ್ತಿತರರು ಪಾಲ್ಗೊಂಡಿದ್ದರು.








