LatestMysore

ಮೈಸೂರಿನ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಮಹಾವಿದ್ಯಾಲಯದ ಘಟಿಕೋತ್ಸವ

ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದ 38 ವಿದ್ಯಾರ್ಥಿನಿಯರು

ಮೈಸೂರು: ವಿದ್ಯಾರ್ಥಿಗಳು ತಾವು ಪಡೆದ ಪದವಿ ಅಂಕ ಇವುಗಳ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಾಗಿ ಬೇಕಾಗಿರುವ ಸಾಂದರ್ಭಿಕ ನಾಯಕತ್ವ , ಅವಕಾಶಗಳ ಸದ್ಬಳಕೆ, ತಾಳ್ಮೆ ಹಾಗೂ ಮೌಲ್ಯಯುತ ಜೀವನವನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ  ಇದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ಎನ್. ನಾಗರಾಜ್ ಅವರು ಹೇಳಿದರು.

ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಎಂಎಂಕೆ ಹಾಗೂ ಎಸ್ ಡಿಎಂ ಮಹಿಳಾ ಮಹಾವಿದ್ಯಾಲಯದ ವಾಣಿಜ್ಯ ಸ್ನಾತಕೋತ್ತರ  ವಿಭಾಗದ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪದವಿಯ ಜೊತೆ ಜೊತೆಗೆ ಪರಿಶುದ್ಧವಾದ ಜೀವನ ಕ್ರಮ ಹಾಗೂ ನಿರ್ವಹಿಸುವ ಕೆಲಸದಲ್ಲಿ ಕ್ರಿಯಾಶೀಲತೆ ಹಾಗೂ ಶ್ರದ್ಧೆಯನ್ನು ಪಾಲಿಸಬೇಕು. ಉದ್ಯೋಗದಾತರು ಕೇವಲ ಉದ್ಯೋಗಿಯ ಬಾಹ್ಯ ಸೌಂದರ್ಯವನ್ನು ಮಾತ್ರ ಗಣನೆಗೆ ಪರಿಗಣಿಸುವುದಿಲ್ಲ. ಬದಲಾಗಿ ಸಂಸ್ಥೆಗೆ ನಿಗದಿತ ವ್ಯಕ್ತಿ ಅಥವಾ ಮಾನವ ಸಂಪನ್ಮೂಲದಿಂದ ಬರುವ ಲಾಭವನ್ನು ಅಳೆದು ತೂಗಿ ಸಂಸ್ಥೆಯಲ್ಲಿ ಉಳಿಸಿಕೊಳ್ಳುತ್ತಾರೆ.

ಆದುದರಿಂದ ವಾಣಿಜ್ಯ  ಪದವಿ ಪಡೆದಿರುವ ವಿದ್ಯಾರ್ಥಿನಿಯರಾದ ನಿಮಗೆ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕವಾಗಿ  ಕಾರ್ಯ ನಿರ್ವಹಿಸಲು  ಮುಂದಿನ ಉದ್ಯೋಗಿಕ ದಿನಗಳಲ್ಲಿ ಉತ್ತಮ ಅವಕಾಶಗಳಿದ್ದು ಸಮರ್ಪಕವಾಗಿ ಬಳಸಿಕೊಂಡು ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭ ವಾಣಿಜ್ಯ ಸ್ನಾತಕೋತ್ತರ ವಿಭಾಗದಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ 38 ವಿದ್ಯಾರ್ಥಿನಿಯರಿಗೆ  ಸ್ನಾತಕ ಪದವಿ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ ಚಂದ್ರ  ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಆಡಳಿತ ಸಂಸ್ಥೆಯ ಸದಸ್ಯ ವಿದುಷಿ ಸೌಮ್ಯ ಶ್ರೀಧರ್ ಜೈನ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೊ. ಎನ್. ಭಾರತಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಯನ ಕುಮಾರಿ, ವಾಣಿಜ್ಯ ಸ್ನಾತಕೋತರ ಸಂಚಾಲಕಿ ಹಾಗೂ ವಿಭಾಗ ಮುಖ್ಯಸ್ಥೆ ಡಾ. ದೇವಕಿ ಕೆ.ಕೆ, ಕಂಪ್ಯೂಟರ್ ಶಿಕ್ಷಣ ವಿಭಾಗದ ಮುಖ್ಯಸ್ಥ ಶ್ರೀಮತಿ ಸುಕ್ರತಾ ಕೆ.ಎಸ್. ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು,  ಪ್ರಾಧ್ಯಾಪಕರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು

admin
the authoradmin

Leave a Reply

Translate to any language you want