ಮೈಸೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಅಂಗನವಾಡಿ ಹಬ್ಬವು ಹತ್ತು ಹಲವು ವಿಶೇಷತೆಗೆ ಸಾಕ್ಷಿಯಾಗುವುದರೊಂದಿಗೆ ಗಮನಸೆಳೆಯಿತು. ಅಷ್ಟೇ ಅಲ್ಲದೆ, ಮೈ ಸೂರು ಜಿಲ್ಲೆಯಲ್ಲಿನ 3 ರಿಂದ 6 ವರ್ಷ ವಯಸ್ಸಿನ ಮಕ್ಕಳ ಶಾಲಾ ಸಿದ್ಧತೆಯನ್ನು ಬಲಪಡಿಸಿ, ICDS ನ ಎಲ್ಲ ಕಾರ್ಯ ಕರ್ತ ರನ್ನು ಒಗ್ಗೂಡಿಸುವಲ್ಲಿಯೂ ಯಶಸ್ವಿಯಾಯಿತು.

ವೈಶಿಷ್ಟ್ಯತೆ ಹೊಂದಿದ್ದ ಅಂಗನವಾಡಿ ಹಬ್ಬದಲ್ಲಿ, ಜಿಲ್ಲೆಯ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ಐಸಿಡಿಎಸ್ ಮೇ ಲ್ವಿಚಾರಕರು, 9 ಸಿಡಿಪಿಒಗಳು ಹಾಗೂ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು, 108 ಮಾದರಿ ಅಂಗನವಾಡಿ ಶಿಕ್ಷಕಿಯರು ಭಾಗವಹಿಸಿದ್ದರು. ಅಂಗನವಾಡಿಗಳಲ್ಲಿನ ಪೂರ್ವ ಪ್ರಾಥಮಿಕ ಶಿಕ್ಷಣ ಪದ್ಧತಿಗಳ ಕುರಿತು ಚಿಂತನೆ ನಡೆಸಿ, ಅವುಗಳನ್ನು ಮತ್ತಷ್ಟು ಬಲಪಡಿಸುವ ಸಹಕಾರಿಯಾಯಿತು.

ಕಾಡಂಚಿನ ಸಮುದಾಯಗಳ ಮಕ್ಕಳ ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳ ಸಮಗ್ರ ಕಲಿಕೆ ಒತ್ತು ನೀಡುತ್ತಾ ಅವರ ಅಭಿವೃದ್ಧಿಗಾಗಿ ಕಾರ್ಯ ನಿರ್ವ ಹಿಸುತ್ತಿರುವ ಬೆಂಗಳೂರಿನ ‘ಮಕ್ಕಳ ಜಾಗೃತಿ’ ಎಂಬ ಸರ್ಕಾ ರೇ ತರ ಸಂಸ್ಥೆ ಬೆಂಬಲ ನೀಡಿದ್ದು ವಿಶೇಷವಾಗಿತ್ತು. ಹಬ್ಬದ ಮುಖ್ಯ ಉದ್ದೇಶ ಅಂಗನವಾಡಿಗಳಿಗೆ ಹಾಜರಾಗುವ ಮಕ್ಕಳು ಶಾಲೆಗೆ ಸಿದ್ಧರಾಗುವಂತೆ ಮಾಡುವುದಾಗಿತ್ತು. ಅದು ಸಕಾರಗೊಂಡಿದ್ದು ಖುಷಿಯ ವಿಚಾರ.

ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜಿ ಲಕ್ಷ್ಮಿ ಕಾಂತ್ ರೆಡ್ಡಿ ರವರು ಶಾಲಾ ಪೂರ್ವ ಶಿಕ್ಷಣದ ಸ್ಟಾಲ್ ಗಳನ್ನು ಉದ್ಘಾ ಟಿಸಿ,, ವೀಕ್ಷಣೆ ಮಾಡಿದರು. ಈ ವೇಳೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಐಸಿಡಿಎಸ್ ಜಿಲ್ಲಾ ನಿರ್ದೇ ಶಕರಾದ ಬಸವರಾಜು ಸೇ ರಿದಂತೆ ಇಲಾಖೆಯ ಇತರ ಪ್ರಮುಖರು ಭಾಗವಹಿಸಿದ್ದರು.
ಅಂಗನವಾಡಿ ಹಬ್ಬದ ಪ್ರಮುಖ ಆಕರ್ಷಣೆಯಾಗಿ ‘ಶಾಲಾ ಸಿದ್ಧತೆ’ ಕುರಿತ ಸಂವಾದ ನಡೆಸಲಾಯಿತು. ಇದರಲ್ಲಿ ಅಂಗನವಾಡಿ ಮೇ ಲ್ವಿಚಾರಕರು, ಸಿಡಿಪಿಒಗಳು ಹಾಗೂ ಜಿಲ್ಲಾ ಮಟ್ಟದ ಕಾರ್ಯ ಕರ್ತ ರು ಪೂರ್ವ ಪ್ರಾಥಮಿಕ ಶಿಕ್ಷಣ ಪದ್ಧತಿಗಳನ್ನು ಬಲಪಡಿಸುವಲ್ಲಿ ವಹಿಸಬೇಕಾದ ಪಾತ್ರದ ಕುರಿತು ಚರ್ಚಿ ಸಿದರು. ಸಂವಾದದಲ್ಲಿ ಐಸಿಡಿಎಸ್ ಜಿಲ್ಲಾ ನಿರ್ದೇಶಕರಾದ ಬಸವರಾಜು, ಮಕ್ಕಳ ಅಭಿವೃದ್ಧಿ ತಜ್ಞರಾದ ಡಾ. ಶ್ರೀವಿದ್ಯಾ ಹಾಗೂ ಮಕ್ಕಳ ಜಾಗೃತಿ ಸಂಸ್ಥೆ ಯ ಸಿಇಒ ಸುನೇ ನಾ ಛತ್ರಪತಿ ಅವರು ಭಾಗವಹಿಸಿದ್ದರು. ಚರ್ಚೆ ಯನ್ನು ಮಕ್ಕಳ ಜಾಗೃತಿಯ ಉಪ ನಿರ್ದೇ ಶಕಿ ಅಮೃತಾ ಮುರಳಿ ಅವರು ಪಾಲ್ಗೊಂಡಿದ್ದರು.

ಅಂಗನವಾಡಿ ಮಟ್ಟದಲ್ಲಿ ಮಕ್ಕಳಿಗೆ ಉಪಯುಕ್ತವಾಗುವಂತೆ ಮಕ್ಕಳ ಕೇಂದ್ರಿತ ಶಿಕ್ಷಣವನ್ನು ಅಳವಡಿಸುವ ಬಗ್ಗೆ ಗಮನ ಹರಿಸುವುದು, ಮಕ್ಕಳ ಆರಂಭಿಕ ವರ್ಷಗಳಲ್ಲಿ ಶಾಲಾ ಸಿದ್ಧತೆ ಅತ್ಯಂತ ಮಹತ್ವದ್ದಾಗಿದ್ದು, ಭಾಷಾ ಅಭಿವೃದ್ಧಿ, ಸಾಮಾಜಿಕ-ಭಾವನಾತ್ಮಕ ಬೆಳವಣಿಗೆ ಹಾಗೂ ಪ್ರಾರಂಭಿಕ ಚಿಂತನಾ ಕೌಶಲ್ಯಗಳು ಮಕ್ಕಳ ಶಾಲಾ ಪ್ರವೇ ಶ ಮತ್ತು ಭವಿಷ್ಯದ ಕಲಿಕಾ ಫಲಿತಾಂಶಗಳ ಮೇಲಿನ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಅಂಗನವಾಡಿ ಹಬ್ಬದಲ್ಲಿ ಸಂವಹನಾತ್ಮಕ ಸ್ಟಾಲ್ ಗಳು ಮತ್ತು ಪ್ರದರ್ಶನಗಳನ್ನು ಆಯೋ ಜಿಸಲಾಗಿತ್ತು. ಇವು ಅಂಗನವಾಡಿಗಳಲ್ಲಿ ಸಂತೋ ಷಕರ, ಸುರಕ್ಷಿತ ಹಾಗೂ ಮಕ್ಕಳ ಕೇಂದ್ರಿತ ಕಲಿಕಾ ವಾತಾವರಣವನ್ನು ನಿರ್ಮಿ ಸುವ ಪ್ರಾಯೋಗಿಕ ವಿಧಾನಗಳನ್ನು ಪ್ರದರ್ಶಿಸಿತು. ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಅನುಸರಿಸಬಹುದಾದ ತರಗತಿ ಚಟುವಟಿಕೆಗಳು ಹಾಗೂ ಕಡಿಮೆ ವೆಚ್ಚದ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ಪರಿಣಾಮಕಾರಿ ಬೋಧನಾ–ಕಲಿಕಾ ಸಾಮಗ್ರಿಗಳನ್ನು (TLM) ತಯಾರಿಸುವ ವಿಧಾನಗಳನ್ನು ಪ್ರದರ್ಶನದ ಮಳಿಗೆಗಳಲ್ಲಿ ಪರಿಚಯಿಸಲಾಯಿತು,

ಗುಣಮಟ್ಟದ ಪ್ರಾರಂಭಿಕ ಬಾಲ್ಯ ಶಿಕ್ಷಣದ ಅರ್ಥ ವನ್ನು ಕಾರ್ಯ ಪ್ರಯೋಗದಲ್ಲಿ ಅರ್ಥ ಮಾಡಿಕೊ ಳ್ಳಲು, ಐಸಿಡಿಎಸ್ ಕಾರ್ಯ ಕರ್ತರ ನಡುವೆ ಪರಸ್ಪರ ಕಲಿಕೆ, ಅನುಭವ ಹಂಚಿಕೆ ಮತ್ತು ಆತ್ಮವಲೋ ಕನ ಮಾಡಿಕೊ ಳ್ಳಲು ಈ ವೇ ದಿಕೆ ಅವಕಾಶ ಕಲ್ಪಿಸಿತು.
ಕಾರ್ಯ ಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ಅಂಗನವಾಡಿ ವ್ಯವಸ್ಥೆಯಲ್ಲಿ ಬದಲಾವಣೆಗೆ ಪ್ರಮುಖ ಪ್ರೇರಕರಾಗಿ ಮೇ ಲ್ವಿಚಾರಕಿಯರು ಮತ್ತು ಸಿಡಿಪಿಒಗಳನ್ನು ಸಬಲಗೊ ಳಿಸುವ ಅಗತ್ಯವನ್ನು ಒತ್ತಿಹೇ ಳಿದರು. ಅವರ ನಾಯಕತ್ವವನ್ನು ಗುರುತಿಸುವ ಜೊ ತೆಗೆ ಸಂವಾದ, ಕಲಿಕೆ ಮತ್ತು ಸಹಕಾರಕ್ಕೆ ವೇ ದಿಕೆ ಒದಗಿಸುವುದು ಮೈ ಸೂರು ಜಿಲ್ಲೆಯಾದ್ಯಂತ 3-6 ವರ್ಷ ವಯಸ್ಸಿನ ಮಕ್ಕಳಿಗಾಗಿ ಪೋ ಷಣೆ, ಸಂತೋ ಷಕರ ಹಾಗೂ ಪರಿಣಾಮಕಾರಿ ಪ್ರಾರಂಭಿಕ ಕಲಿಕಾ ವಾತಾವರಣಗಳನ್ನು ನಿರ್ಮಿ ಸುವಲ್ಲಿ ಐಸಿಡಿಎಸ್ ಇಲಾಖೆ ಮತ್ತು ಅದರ ಪಾಲುದಾರರ ಸಾಮೂಹಿಕ ಬದ್ಧತೆಯನ್ನು ಈ ಅಂಗನವಾಡಿ ಹಬ್ಬ ಪ್ರತಿಬಿಂಬಿಸಿತು.

ಇನ್ನು ಕಾರ್ಯಕ್ರಮಕ್ಕೆ ಸಾಥ್ ನೀಡಿದ ಮಕ್ಕಳ ಜಾಗೃತಿ ಸಂಸ್ಥೆಯ ಬಗ್ಗೆ ಹೇಳಲೇ ಬೇಕಾಗುತ್ತದೆ. ಮಕ್ಕಳ ಜಾಗೃತಿ ಸಂಸ್ಥೆ ಪ್ರಶಸ್ತಿ ಸ್ವೀಕೃತ ಸರ್ಕಾರೇತರ ಸಂಘ ಸಂಸ್ಥೆಯಾಗಿದ್ದು, ಹಿಂದುಳಿದ ಸಮುದಾಯಗಳ ಮಕ್ಕಳ ಹಾಗೂ ಯುವಕರನ್ನು ಉತ್ತಮ ಭವಿಷ್ಯದತ್ತ ಸಬಲೀ ಕರಣಗೊಳಿಸುವ ಕಾರ್ಯ ದಲ್ಲಿ ತೊ ಡಗಿಸಿಕೊಂಡಿದೆ.
2003ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಗುಣಮಟ್ಟದ ಶಿಕ್ಷಣಕ್ಕೆ ಇರುವ ಅಡೆತಡೆಗಳನ್ನು ಮೀರಿ ಮಕ್ಕಳನ್ನು ಮುನ್ನಡೆಸುವ ದೃಷ್ಟಿಕೋನದೊಂದಿಗೆ ತನ್ನ ಕಾರ್ಯ ಕ್ಷೇತ್ರವನ್ನು ಕರ್ನಾ ಟಕದಾದ್ಯಂತ ವಿಸ್ತರಿಸಿದೆ , ಬೆಂಗಳೂರು ನಗರದ ಸೌಲಭ್ಯ ವಂಚಿತ ಪ್ರದೇ ಶದಲ್ಲಿ ” ಒಂದು ಕಲಿಕಾ ಕೇಂದ್ರದಿಂದ” ಆರಂಭವಾದ ಮಕ್ಕಳ ಜಾಗೃತಿ, ಇಂದು ತನ್ನ ವಿಶಿಷ್ಟ ಸಮಗ್ರ ಅಭಿವೃದ್ಧಿ ಮಾದರಿಯ ಮೂಲಕ ಸಾವಿರಾರು ಹಿಂದುಳಿದ ಮಕ್ಕಳು ಮತ್ತು ಯುವಕರನ್ನು ಸಬಲಗೊ ಳಿಸುತ್ತಿರುವ ದೊ ಡ್ಡಸಂಸ್ಥೆಯಾಗಿ ಬೆಳೆದಿದೆ.

ಪ್ರಸ್ತುತ ಸಂಸ್ಥೆಯು ಕರ್ನಾಟಕದ 13 ಜಿಲ್ಲೆಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತಿದ್ದು ಇದು 2022ರಲ್ಲಿ CSR Impact Award ಪ್ರಶಸ್ತಿಯನ್ನು ಪಡೆದಿದೆ ಹಾಗೂ ‘Great Place to Work’ ಪ್ರಮಾಣ ಪತ್ರವನ್ನು ಪಡೆದು ಕೊಂಡ ಹೆಗ್ಗಳಿಕೆಯನ್ನು ಹೊಂದಿದೆ. ಮಕ್ಕಳ ಜಾಗೃತಿ ಸಂಸ್ಥೆ ಅಂಗನವಾಡಿಗಳು, ಸರ್ಕಾ ರಿ ಶಾಲೆಗಳು, ಮಕ್ಕಳ ಆರೈ ಕೆ ಸಂಸ್ಥೆಗಳು ಮತ್ತು ನಗರ ಬಡಸಮುದಾಯಗಳೊಂದಿಗೆ ಕೆಲಸ ಮಾಡುತ್ತಿದೆ. 3 ರಿಂದ 25 ವರ್ಷ ವಯೋ ಮಾನದ ಮಕ್ಕಳ ಮತ್ತು ಯುವಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈ ಸಂಸ್ಥೆ, 2023ರಲ್ಲಿ ತನ್ನ 20 ವರ್ಷಗಳ ಸೇ ವೆಯನ್ನು ಯಶಸ್ವಿ ಯಾಗಿ ಪೂರ್ಣ ಗೊ ಳಿಸಿದೆ.

ಕಳೆದ 20 ವರ್ಷಗಳಲ್ಲಿ 80,000ಕ್ಕೂ ಹೆಚ್ಚು ಮಕ್ಕಳು ಮತ್ತು ಯುವಕರು, 500ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ 25ಕ್ಕೂ ಹೆಚ್ಚು ನಗರ ಬಡ ಸಮುದಾಯಗಳ ಮೇ ಲೆ ಈ ಸಂಸ್ಥೆ ಸಕಾರಾತ್ಮಕ ಪರಿಣಾಮ ಬೀ ರಿದೆ. ಒಟ್ಟಾರೆ ಮಕ್ಕಳು ಮತ್ತು ಯುವ ಜನತೆಯ ಏಳಿಗೆಗಾಗಿ ದುಡಿಯುವುದು ಸಂಸ್ಥೆಯ ಉದ್ದೇಶವಾಗಿದ್ದು, ಇನ್ನಷ್ಟು ಸೇವೆಗಳನ್ನು ಮಾಡುವಂತಾಗಲಿ ಎನ್ನುವುದೇ ಜನಮನ ಕನ್ನಡದ ಆಶಯವಾಗಿದೆ.








