DasaraLatest

ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ

ಐತಿಹಾಸಿಕ ಮೈಸೂರು ದಸರ ಅಂದ್ರೆ ಬರೀ ಉತ್ಸವವಲ್ಲ ಅದರ ಹಿಂದೆ ಪೌರಾಣಿಕ, ಐತಿಹಾಸಿಕ ಮಹತ್ವ ಅಡಗಿದೆ. ಕಲೆ ಸಾಹಿತ್ಯ ಸಂಸ್ಕೃತಿ, ಸಂಪ್ರದಾಯದ ಸೊಗಡಿದೆ. ಸಡಗರ ಸಂಭ್ರಮದ ಲೇಪನವಿದೆ. ನಮ್ಮ ಕಣ್ಣಿಗೆ ಕಾಣುವ ಜಂಬೂಸವಾರಿ ಮಾತ್ರವಲ್ಲ ಅದರ ಹಿಂದೆ ಹತ್ತು ಹಲವು ವಿಶೇಷತೆಗಳಿವೆ ಎಂಬುದನ್ನು ಇಲ್ಲಿ ತೆರೆದಿಡುತ್ತ ಹೋಗುತ್ತಾರೆ ಮೈಸೂರಿನ ಹಿರಿಯ ಅನುಭವಿ ಲೇಖಕ ಕುಮಾರಕವಿ ನಟರಾಜ್…

ದಸರಾ ಅರ್ಥಾತ್ ವಿಜಯದಶಮಿ ಆರಂಭವಾಗುವುದೇ ಹೀಗೆ…. ಶ್ರೀಚಾಮುಂಡೇಶ್ವರಿಯು ಮಹಿಷಾಸುರನನ್ನು ಒಂಭತ್ತು ಹಗಲು-ರಾತ್ರಿ ಯುದ್ಧ ಮಾಡಿ ಮರ್ಧಿಸಿ ಜೈತ್ರಯಾತ್ರ ಕೈಗೊಂಡ ದಿನವನ್ನು “ಮಹಾನವಮಿ-ವಿಜಯದಶಮಿ” ಆಗಿದೆ. ಮಹಿಷನಊರು ಮೈಸೂರು “ವಿಶ್ವಪರಂಪರಾ ನಗರಗಳಲ್ಲೊಂದು” ಎಂದು ವಿಶ್ವಸಂಸ್ಥೆ ಘೋಷಿಸಿದ ನಂತರ ಭಾರತದ ಸಾಂಸ್ಕೃತಿಕ ನಗರಗಳಲ್ಲೊಂದು ಎಂಬುದಾಗಿ ಕೇಂದ್ರ ಸರ್ಕಾರವು ಸಹ ಘೋಷಿಸಿತು!ಅತಿಹಚ್ಚು ಪ್ರವಾಸಿಗರು ಭೇಟಿ ನೀಡುವ ಜಗತ್ತಿನ 5ನೆ ಹಾಗೂ ಭಾರತದ 2ನೆ ಪ್ರೇಕ್ಷಣೀಯ ಸ್ಥಳ ಮೈಸೂರು ಆಗಿರುವುದು ಹೆಮ್ಮೆಯ ವಿಷಯ.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ತಯಾರಾದ ‘ಸಿಹಿ’ಪಾಕ ‘ಮೈಸೂರು’ ಪಾಕ ಆಗಿದ್ದೇಗೆ? ಇಲ್ಲಿದೆ ಕಥೆ

ಯದುವಂಶವು ಇಲ್ಲ ಉಗಮಿಸಿದ್ದೇ ಒಂದು ಆಕಸ್ಮಿಕ. ಕ್ರಿಸ್ತ ಶಕ 1399ನೇ ಇಸವಿಯ ದಿನಗಳು ಉತ್ತರ ಭಾರತದ ದ್ವಾರಕ ನಗರದಿಂದ ಯದುರಾಯ ಮತ್ತು ಕೃಷ್ಣರಾಯ ಎಂಬ ಸೋದರರು ದೇಶ ಪರ್ಯಟನೆ ಮಾಡುತ್ತ ಮೈಸೂರಿಗೆ ಆಗಮಿಸಿದರು. ಧೀರ್ಘ ಪ್ರಯಾಣದ ದಣಿವು ಆರಿಸಿಕೊಳ್ಳಲು ಮರದ ಕೆಳಗೆ ವಿಶ್ರಾಂತ ನಿದ್ದೆಯಲ್ಲಿ ಇರುವಾಗ ಇವರ ಕನಸಲ್ಲಿ ಕಾಣಿಸಿಕೊಂಡ ಚಾಮುಂಡೇಶ್ವರಿಯು ಇವರನ್ನು ಕುರಿತು ನಗರದ ಪೂರ್ವ ದಿಕ್ಕಿನಲ್ಲಿರುವ ಕೋಡಿ ಭೈರವನ ದೇವಾಲಯಕ್ಕೆ ಹೋಗಲು ಆಜ್ಞಾಪಿಸುವಳು. ಎಚ್ಚರಗೊಂಡ ಇವರೀರ್ವರು ಸ್ಥಳೀಯ ಸನ್ಯಾಸಿಯೊಬ್ಬರಿಂದ ಮೈಸೂರಿನ ರಾಜಕೀಯ ಸ್ಥಿತಿಗತಿ ತಿಳಿದುಕೊಳ್ಳುವರು.

ಮಹಾರಾಜ ಶೂರದೇವನ ವಂಶಜನಾದ ಚಾಮರಾಜನು ತನಗೆ ಗಂಡುಮಕ್ಕಳಿಲ್ಲದ ಕೊರಗಿನಿಂದ ನಿಧನಹೊಂದಿದ. ಈತನ ಮಗಳು ರಾಜಕುಮಾರಿಯನ್ನು ವಿವಾಹವಾಗಲು ದಳಪತಿ ಮಾರನಾಯಕ ಹಿಂಸಿಸುತ್ತಿದ್ದಾನೆ ಎಂಬ ವಿಷಯ ತಿಳಿದಾಕ್ಷಣ ಯದುರಾಯ ಮತ್ತು ಕೃಷ್ಣರಾಯ ಸೋದರರು ಉಪಾಯದಿಂದ ಅರಮನೆಯ ರಾಜಸಿಬ್ಬಂದಿಯ ಮತ್ತು ಸೈನಿಕರ ಬೆಂಬಲ ಪಡೆದು, ದುಷ್ಟ ಮಾರನಾಯಕನನ್ನು ಕೊಂದು ರಾಜಕುಮಾರಿ ದೇವರಾಜಮ್ಮಣ್ಣಿಯವರನ್ನು ಹಿರಿಯನಾದ ಯದುರಾಯನು ವಿವಾಹವಾಗಿ ಮೈಸೂರಿನ ರಾಜ್ಯಭಾರ ವಹಿಸಿಕೊಳ್ಳುತ್ತಾನೆ!

ಇದನ್ನೂ ಓದಿ: ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?

ಚಂಡ-ಮುಂಡ ಮತ್ತು ಮಹಿಷಿ-ಮಹಿಷ ರಾಕ್ಷಸರನ್ನು ಸಂಹಾರ ಮಾಡಿದ ಚಾಮುಂಡೇಶ್ವರಿ ದೇವಿಯನ್ನು ಯದುವಂಶದ ಅಧಿದೇವತೆ ಅಥವ ಕುಲದೇವತೆಯನ್ನಾಗಿಸಿಕೊಂಡರು. ಪುರಾಣ ಮತ್ತು ಪುರಾತನ ಕಾಲದಲ್ಲೆಲ್ಲ ಮಹಾಬಲೇಶ್ವರ ಬೆಟ್ಟ ಅಥವ ಮಾಬಲನಬೆಟ್ಟ ಎಂದು ಕರೆಯಲ್ಪಡುತ್ತಿದ್ದ ಗಿರಿಗೇ ಯದುಕುಲ ಆಳ್ವಿಕೆಯಲ್ಲಿ ಚಾಮುಂಡಿಬೆಟ್ಟ ಎಂಬ ಪುನರ್ ನಾಮಕರಣವಾಗಿ ಪ್ರಖ್ಯಾತ ಗೊಂಡಿತು. ಕ್ರಿ.ಶ.1665ರಲ್ಲಿ ಚಾಮುಂಡಿಬೆಟ್ಟಕ್ಕೆ 1001 ಮೆಟ್ಟಿಲುಗಳ ನಿರ್ಮಾಣದ ಮತ್ತು 700ನೆ ಮೆಟ್ಟಿಲ ಬಳಿ ಬೃಹತ್ ನಂದಿಯ ಪ್ರತಿಷ್ಠಾಪನೆ ಕಾರ್ಯವನ್ನು ಮಹಾರಾಜ ದೊಡ್ಡದೇವರಾಜ ಒಡೆಯರ್ ಕೈಗೊಂಡರು.

ಕ್ರಿ.ಶ.1565ರ ತಾಳಿಕೋಟೆ ಯುದ್ಧದ ನಂತರ ವಿಜಯನಗರದ ಶ್ರೀರಂಗರಾಯರು ಮೈಸೂರಿನ ರಾಜ ಒಡೆಯರ್‌ಗೆ ಸಿಂಹಾಸನ ಅರ್ಪಿಸಿ, ಪ್ರತಿವರ್ಷ ’ದಸರ’ ನಡೆಸುವಂತೆ ಸೂಚಿಸಿದರು. ಪ್ರಪ್ರಥಮ ಮೈಸೂರು ದಸರ ಉತ್ಸವ ಪದ್ಧತಿಯು ಮಹಾರಾಜ ಶ್ರೀರಂಗರಾಯರ ಆಳ್ವಿಕೆಯ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭ ಆಯ್ತು

ಇದನ್ನೂ ಓದಿ: ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?

ಮೈಸೂರು ಸಾಮ್ರಾಜ್ಯದ 28ಮಹಾರಾಜರು: 1)1399-1423 ಯದುರಾಯರು (ಪ್ರಪ್ರಥಮ ಮಹಾರಾಜ) 2) 1423-1459 ಒಂದನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್, 3)1459-1478 ಒಂದನೇ ತಿಮ್ಮರಾಜ ಒಡೆಯರ್, 4)1478-1513 ಇಮ್ಮಡಿ ಹಿರಿಯ ಬೆಟ್ಟದ ಚಾಮರಾಜ ಒಡೆಯರ್, 5)1513-1553 ಮುಮ್ಮಡಿ ಹಿರಿಯ ಬೆಟ್ಟದ ಚಾಮರಾಜ ಒಡೆಯರ್, 6)1553-1572 ತಿಮ್ಮರಾಜ ಒಡೆಯರ್, 7)1572-1576 ಬೋಳುತಲೆ ನಾಲ್ವಡಿ ಚಾಮರಾಜ ಒಡೆಯರ್, 8)1576-1578 ಐದನೇ ಬೆಟ್ಟದ ಚಾಮರಾಜ ಒಡೆಯರ್, 9)1578-1617 ಒಂದನೇ ರಾಜ ಒಡೆಯರ್, 10)1617-1637ಆರನೇ ಚಾಮರಾಜ ಒಡೆಯರ್, 11)1637-1638 ಇಮ್ಮಡಿ ರಾಜ ಒಡೆಯರ್ (ಅತ್ಯತ  ಅಲ್ಪಾವಧಿ ಆಡಳಿತ), 12)1638-1659 ರಣಧೀರ ಕಂಠೀರವ ನರಸರಾಜ ಒಡೆಯರ್, 13)1659-1673 ದೊಡ್ಡ ದೇವರಾಜ ಒಡೆಯರ್, 14)1673-1704 ಚಿಕ್ಕದೇವರಾಜ ಒಡೆಯರ್, 15)1704-1714 ಕಂಠೀರವ ಮಹಾರಾಜ ಒಡೆಯರ್.

ಇದನ್ನೂ ಓದಿ: ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ… ಇಷ್ಟಕ್ಕೂ ಮೈಸೂರು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?

16) 1714-1732 ದೊಡ್ಡ ಕೃಷ್ಣರಾಜ ಒಡೆಯರ್, 17)1732-1734 ಏಳನೇ ಚಾಮರಾಜಒಡೆಯರ್, 18)1734-1761 ಕೃಷ್ಣರಾಜ ಒಡೆಯರ್, 19) 1761-1766 ಇಮ್ಮಡಿ ಕೃಷ್ಣರಾಜ ಒಡೆಯರ್, 20)1766-1770 ನಂಜರಾಜ ಬಹದ್ದೂರ್ ಒಡೆಯರ್, 21) 1770-1776 ಎಂಟನೇ ಬೆಟ್ಟದ ಚಾಮರಾಜ ಒಡೆಯರ್, 22)1776-1796 ಒಂಬತ್ತನೇ ಚಾಮರಾಜ ಒಡೆಯರ್, 23)1797-1868 ಮುಮ್ಮಡಿ ಕೃಷ್ಣರಾಜ ಒಡೆಯರ್(72 ವರ್ಷ ಧೀರ್ಘಾವಧಿ ಆಳ್ವಿಕೆ)* 24)1868-1894 ಹತ್ತನೇ ಚಾಮರಾಜೇಂದ್ರ ಒಡೆಯರ್, 25)1894-1940 ನಾಲ್ವಡಿ ಕೃಷ್ಣರಾಜ ಒಡೆಯರ್,  (46 ವರ್ಷ ಸುಧೀರ್ಘ ಆಳ್ವಿಕೆ) 26) 1940-1947/1970**ಜಯಚಾಮರಾಜ ಒಡೆಯರ್ (23.9.1974 ರಂದು ನಿಧನ), 27)1974-2013 ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (10.12.2013 ನಿಧನ)*** 28)2015 – ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (28.05.2015 ರಿಂದ)

*1761-1797ವರೆಗೆ ಹೈದರಾಲಿ-ಟಿಪ್ಪುಸುಲ್ತಾನ್ ಆಡಳಿತ ಜಾರಿಯಲ್ಲಿದ್ದು, ಒಡೆಯರ್‌ಗಳು ಸಾಮಂತರಾಗಿದ್ದರು!, **ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಮಹಾರಾಜರನ್ನು ‘ಸಾಮಾನ್ಯಪ್ರಜೆ ಯನ್ನಾಗಿಸಿ ‘ರಾಜಧನ’ ಜಾರಿಗೊಳಿಸಲಾಯ್ತು! ***ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 10.12.2013ರಂದು ವಿಧಿವಶರಾದರು. ಕೆಲವೇ ದಿನ ಮುನ್ನ ಕೆ.ಎಸ್.ಸಿ.ಎ.ಅಧ್ಯಕ್ಷರಾಗಿ ಚುನಾವಣೆಯಲ್ಲಿ. 1994 ಮತ್ತು 1999ರಲ್ಲಿ 2 ಬಾರಿ ಮೈಸೂರು ಲೋಕಸಭಾ ಸದಸ್ಯರಾಗಿದ್ದರು.

admin
the authoradmin

11 Comments

  • ಹಿರಿಯ ಖ್ಯಾತ ಲೇಖಕ ಕುಮಾರಕವಿ ನಟರಾಜರು ಬಹಳ ಚೆನ್ನಾಗಿ ಬರೆದ ಲೇಖನವನ್ನು ಅಷ್ಟೇ ಅಂದ ಮತ್ತು ಅಚ್ಚುಕಟ್ಟಾಗಿ ಪ್ರಕಟಿಸಿರುವ ಕನ್ನಡಿಗರ ಅಚ್ಚುಮೆಚ್ಚಿನ ಜನಮನ ಪತ್ರಿಕೆಯವರಿಗೆ ಧನ್ಯವಾದ ನಮಸ್ಕಾರ

  • ಮೈಸೂರು ದಸರ ಬಗ್ಗೆ ಲವಕುಮಾರ್ ಮತ್ತು ಕುಮಾರಕವಿಯವರ ಅರ್ಥಪೂರ್ಣ ಮತ್ತು ಅಂಕಿಅಂಶ ಸಮೇತ ಆಕರ್ಷಕ ಲೇಖನಗಳು ಬೊಂಬಾಟ್, ಮತ್ತೆ ಮತ್ತೆ ಓದುವ ಹಾಗಿದೆ

  • ಲವಕುಮಾರ್ ಮತ್ತು ನಟರಾಜ ರವರು ಬರೆದಿರುವ ಮೈಸೂರಿನ ದಸರ ಉತ್ಸವ ಲೇಖನ ಓದಿದ ನಂತರ ನನ್ನ ಬಂಧುಬಳಗದ ಗ್ರೂಪ್ ಗೂ ಶೇರ್ ಮಾಡಿದ್ದೇನೆ ಸರ್

  • All the articles written by LAVAKUMAR AND NATARAJA are very useful and First class information about mysuru dasara history , thank you sir

  • FOUR Wonderful articles about WORLD FAMOUS HISTORICAL MYSORE DASARA by LAVKUMAR as well as NATARAJ are superb 👌 😀 👏 👍 😊 😄 👌 😀 👏

  • ಮೈಸೂರು-ಸಂಪ್ರದಾಯ ದಸರ ನವರಾತ್ರಿಯ ನಿಮ್ಮ ಎಲ್ಲಾ ಲೇಖನವೂ ಮನಮೆಚ್ಚಿದ ಲೇಖನಗಳಾಗಿವೆ. ನಮ್ಮದು 12 ಜನರು ಇರುವ ದೊಡ್ಡ ಒಟ್ಟು ಕುಟುಂಬ ನಮ್ಮ ಮನೆಯವರೆಲ್ಲರೂ ಓದಿದರು, ಹೊಗಳಿದರೂ ಕೂಡ ಸರ್ ನಮಸ್ಕಾರ

  • ನಿಮ್ಮ ಜನಮನ ಕನ್ನಡ ಪತ್ರಿಕೆಯ ಅಭಿಮಾನಿ ನಾನು ಮತ್ತು ನನ್ನ ಅಕ್ಕ ಪ್ರೇಮ
    ನಿಮ್ಮ ನಿನ್ನೆ ಮೊನ್ನೆಯ ದಸರ ಹಬ್ಬದ ಲೇಖನ ಮತ್ತು ಪಿತೃಪಕ್ಷದ ಲೇಖನ ಓದಿದ ನಮಗೆ ಬಹಳ ಖುಷಿ ಆಯ್ತು, ನಮಸ್ಕಾರ ಧನ್ಯವಾದ

  • ನಮಸ್ಕಾರ ಸರ್
    ಇಂದ್ರ ಮತ್ತು ನಾನು ಒಡಹುಟ್ಟಿದವರು. ನಮ್ಮ ಕುಟುಂಬದ ಎಲ್ಲರೂ ನಿಮ್ಮ ಪತ್ರಿಕೆಯ ಮೆಂಬರ್ ಆಗಿ ಅಭಿಮಾನಿಗಳು ಆಗಿದ್ದೇವೆ. ಒಂದು ವಾರದಿಂದ ಎಲ್ಲ ಲೇಖನವೂ ಚೆಚೆನ್ನಾಗಿದೆ, ಲವಕುಮಾರ್ ಸರ್ ಮತ್ತು ಖ್ಯಾತ ಹಿರಿಯ ಲೇಖಕ ನಟರಾಜ ಕುಮಾರಕವಿಯವರ ಮೈಸೂರಿನ ದಸರ ಲೇಖನ ಸೂಪರ್…. ಸೂಪರೋ ಸೂಪರ್…

  • My name is smt.Prema Prabhakar from HASSAN
    ದಸರ ಉತ್ಸವ ಲೇಖನ ತುಂಬ ತುಂಬ ಚೆನ್ನಾಗಿ ಬರೆದಿದ್ದಾರೆ. ಈ ಬಗ್ಗೆ ಇರುವ ಮೂರೂ ಲೇಖನ ಓದಿದೆ.

Leave a Reply