Latest

ಮೈಸೂರಿನ ಅಗ್ರಹಾರದ ಕೆ ಆರ್ ಬ್ಯಾಂಕಿನ ನೂತನ 2026ರ ದಿನದರ್ಶಿಕೆ ಬಿಡುಗಡೆ

ಮೈಸೂರು: ನಗರದ ಅಗ್ರಹಾರದ ಕೃಷ್ಣರಾಜೇಂದ್ರ ಬ್ಯಾಂಕಿನ 2026ರ ದಿನದರ್ಶಿಕೆಯನ್ನು ಬಿಡುಗಡೆ ಬ್ಯಾಂಕಿನ ಅಧ್ಯಕ್ಷ ಬಸವರಾಜು (ಬಸಪ್ಪ) ಹಾಗೂ ಸಹಕಾರ ಇಲಾಖೆಯ ಉಪ ನಿಬಂಧಕ ವೀರೇಂದ್ರ ಬಿಡುಗಡೆಗೊಳಿಸಿದರು.

ಆ ಬಳಿಕ ಉಪ ನಿಬಂಧಕ ವೀರೇಂದ್ರ ಮಾತನಾಡಿ, ಗ್ರಾಹಕರಿಗೆ ಸೇವಾ ಸೌಲಭ್ಯ ಬ್ಯಾಂಕಿನ ಕಡೆಯಿಂದ ನಿರಂತರವಾಗಿ ತಲುಪಲಿ. 2026ನೇ ವರ್ಷ ಬ್ಯಾಂಕ್ ಯಶಸ್ವಿಯಾಗಿ ಮುಂದುವರಿಯಲಿ. ಇದಕ್ಕೆ ಬೇಕಾದಂತಹ ಸಹಕಾರವನ್ನು ಇಲಾಖೆ ಕೊಡಲಿದೆ ಎಂದರು.

ಬ್ಯಾಂಕಿನ ಅಧ್ಯಕ್ಷ ಬಸಪ್ಪ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವೀಕೃತ ಕಟ್ಟಡವನ್ನು ಉದ್ಘಾಟಿಸಿದರು. ಮುಂದೆ ಬ್ಯಾಂಕಿನ ಅಭಿವೃದ್ಧಿಗೆ ನಮ್ಮ ಆಡಳಿತ ಮಂಡಳಿಯ ಎಲ್ಲರೂ ಸಹಕಾರವಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಶಾಖೆಗಳನ್ನು ತೆರೆಯುವ ಆಲೋಚನೆ ಇದೆ. ಬ್ಯಾಂಕಿನ ಸದಸ್ಯರು ಮುಂದಿನ ದಿನಗಳಲ್ಲಿ ಕ್ಯಾಲೆಂಡರ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಉಪಾಧ್ಯಕ್ಷರಾದ ಎಚ್ಎಸ್ ಸರ್ವ ಮಂಗಳ ನಿರ್ದೇಶಕರುಗಳಾದ ಹೆಚ್ಚು ವಾಸು ನಂ. ಸಿದ್ದಪ್ಪ,ಜಿ.ಎಮ್ ಪಂಚಾಕ್ಷರಿ, ಹೆಚ್ ವಿ ಭಾಸ್ಕರ್, ಎಂ ಡಿ ಪಾರ್ಥಸಾರಥಿ (ಪಾತಿ), ಪ್ರತಿಧ್ವನಿ ಪ್ರಸಾದ್,ಎಂ ಎನ್ ನವೀನ್ ಕುಮಾರ್, ಅರುಣ್ ಸಿದ್ದಪ್ಪ, ನಾಗಜ್ಯೋತಿ, ತಾಯೂರು ಗಣೇಶ್ ಮೂರ್ತಿ, ಶಿವಪ್ರಕಾಶ್,  ಪ್ರಧಾನ ವ್ಯವಸ್ಥಾಪಕರಾದ ಡಿ ಅನಂತ ವೀರಪ್ಪ,  ಸಹಕಾರ ಇಲಾಖೆಯ ಸಹಾಯಕ ನಿರೀಕ್ಷಕರಾದ ಕೆ ರಾಜು  ಬ್ಯಾಂಕ್ ನ ಸಿಬ್ಬಂದಿ ವರ್ಗ ಮತ್ತು ಸದಸ್ಯರು ಇದ್ದರು.

ಆಲಂಬಾಡಿ ಮಠದ ಶ್ರೀ ಮಹಂತೇಶಸ್ವಾಮೀಜಿಗೆ ಗೌರವ ಸಮರ್ಪಣೆ

ವಿಶ್ವವಚನ ಫೌಂಡೇಷನ್ ವತಿಯಿಂದ  ಮಹದೇಶ್ವರ ಬೆಟ್ಟದ ಪಕ್ಕದ ಪೊನ್ನಾಚಿ ಆಲಂಬಾಡಿ ಮಠದ ಶ್ರೀ ಮಹಂತೇಶಸ್ವಾಮೀಜಿಗೆ ಜನುಮದಿನದ ಶುಭಾಶಯ ಕೋರಿ ಪ್ರಯುಕ್ತ ಗೌರವಿಸಲಾಯಿತು. ಈ ವೇಳೆ ಸಂಸ್ಥಾಪಕ ವಚನ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ ಉಪಸ್ಥಿತರಿದ್ದರು.

 

admin
the authoradmin

Leave a Reply