ತನ್ನದೇ ಆದ ಮಹತ್ವ ಹೊಂದಿರುವ ಪತ್ರಿಕಾರಂಗ ಇವತ್ತು ಹತ್ತು ಹಲವು ಬದಲಾವಣೆ, ಏರುಪೇರುಗಳನ್ನು ಕಂಡು ಮುನ್ನಡೆಯುತ್ತಿದೆ. ಕಾಲದಿಂದ ಕಾಲಕ್ಕೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಗದಗಲದ ಮಾಹಿತಿಯನ್ನು ಹೊತ್ತು ತರುತ್ತಿದೆ.. ಹಿಂದೆ ಮಾಧ್ಯಮವಾಗಿ ಪತ್ರಿಕೆಯಷ್ಟೇ ಇತ್ತು. ಇವತ್ತು ಹಾಗಿಲ್ಲ ರೇಡಿಯೋ, ಟಿವಿ, ಡಿಜಿಟಲ್ ಮಾಧ್ಯಮಗಳಿವೆ. ಆದರೂ ಪತ್ರಿಕೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳದೆ ಮುನ್ನಡೆಯುತ್ತಿರುವುದು ಕಂಡು ಬರುತ್ತಿವೆ. ಮೈಸೂರಿನಲ್ಲಿ ಪತ್ರಿಕೆಗಳ ಉಗಮ ಮತ್ತು ನಡೆದು ಬಂದಿರುವ ಹಾದಿಯ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಮೆಲುಕು ಹಾಕಿದ್ದಾರೆ…
ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಆಡಳಿತಕಾಲ 20ನೇ ಶತಮಾನದ ಆರಂಭದಲ್ಲಿ ಮೊದಲನೆ ವಿಶ್ವಯುದ್ಧ, ಎರಡನೇ ಮಹಾಯುದ್ಧ ಪ್ರಪಂಚವನ್ನೆ ನಡುಗಿಸಿತ್ತು! ಗಾಂಧೀಜಿಯ ದಂಡಿಯಾತ್ರೆ [1930] ಮತ್ತು ಕ್ವಿಟ್ಇಂಡಿಯ ಚಳುವಳಿ [1942] ಹಾಗೂ ಅಸಹಕಾರ ಚಳುವಳಿ ಮುಂತಾದ ಬೃಹತ್ ಸರಣಿ ಮುಷ್ಕರಗಳಿಂದಾಗಿ ದೇಶದ ಉದ್ದಗಲಕ್ಕೂ ಭಾರತೀಯರ ಅ-ಸ್ವಾತಂತ್ರ್ಯ ಕಾಲವು ಇನ್ನೇನು ಮುಗಿಯಿತು, ಶತಾಯ ಗತಾಯ ನಮ್ಮ ಮಾತೃಭೂಮಿಯನ್ನು ಮರಳಿ ಪಡೆಯಲೇಬೇಕೆಂಬ ಛಲ ಬಲ, ಘೋಷಣೆ, ನಿರ್ಧಾರ, ಪ್ರತಿಯೊಂದು ಹಳ್ಳಿಯಲ್ಲು ಮುಗಿಲುಮುಟ್ಟಿತ್ತು.

ಸ್ವಾತಂತ್ರ್ಯಕ್ಕಾಗಿ ಫಿ(ಪ)ರಂಗಿ ಸರ್ಕಾರದ ವಿರುದ್ಧ ಗಾಂಧೀಜಿ ಶಾಂತಿಮಂತ್ರ, ನೇತಾಜಿಯ ಕ್ರಾಂತಿಕಹಳೆ ತಾರಕಕ್ಕೇರಿತ್ತು. ಆಂಗ್ಲರನ್ನು ಇಂಗ್ಲೆಂಡಿಗೆ ಓಡಿಸುವ ಭಾರತದ 33ಕೋಟಿ ಪ್ರಜೆಗಳ ಕ್ರೋಧಕಾವು ಹಿಮಾಲಯದಷ್ಟು ಎತ್ತರಕ್ಕೇರಿ ದೇಶದಲ್ಲಿ ದಿನವು ಒಂದಿಲ್ಲೊಂದು ವಿಧ್ವಂಸಕ ಕೃತ್ಯದ ಅಥವಾ ಸ್ವರಾಜ್ಯ ಕ್ರಾಂತಿಯ ರೋಮಾಂಚಕ ಮಾಹಿತಿಯನ್ನು ಪ್ರಜೆಗಳಿಗೆ ತಲುಪಿಸಲು ಮಾಧ್ಯಮದ ಸಹಾಯ ಅವಶ್ಯಕ ಆಗಿತ್ತು. ಇಂಥ ಅನಿವಾರ್ಯ ಸಂದರ್ಭದ ಆಗಿನ ಕಾಲದಲ್ಲಿ ಪ್ರಪಂಚದಾದ್ಯಂತ ಶೇ.82 ರಷ್ಟು ಮುದ್ರಣ ಮಾಧ್ಯಮ ಅಸ್ತಿತ್ವದಲ್ಲಿತ್ತು. ಯಾವೊಂದು ಘಟನೆ ನಡೆದು ಅದೆಷ್ಟೊ ದಿನ/ವಾರ/ತಿಂಗಳ ನಂತರ ಆ ಸುದ್ದಿಯು ಪ್ರಜೆಗೆ ತಲುಪುವಂಥ ಶೋಚನೀಯ ಪರಿಸ್ಥಿತಿ ಇತ್ತು!
ಶ್ರೀಸಾಮಾನ್ಯನಿಗೆ ಜಗತ್ತಿನ ವರ್ತಮಾನವನ್ನು ಬಿಸಿ ಸುದ್ದಿಯಾಗಿ ತಲುಪಿಸುವಂಥ ಮಿನಿಪತ್ರಿಕೆ ದೇಶದಾದ್ಯಂತ ಬೇಕಾಗಿದ್ದವು. ದೈವಲೀಲೆ ಎಂಬಂತೆ ದೇಶದಲ್ಲೇ ಮೊಟ್ಟಮೊದಲ ಸಣ್ಣ ಪತ್ರಿಕೆ ಜನ್ಮತಾಳುವ ಪರ್ವಕಾಲ ನಮ್ಮ ರಾಜ್ಯದ ಮೈಸೂರು ನಗರದಲ್ಲಿ ಪ್ರಾರಂಭ ಆಯಿತು. ಕ್ರಮೇಣ ದಿನಾಲೂ ಸಂಜೆ ಹೊತ್ತು ಸಣ್ಣಪತ್ರಿಕೆಗಳು ಪ್ರಕಟವಾಗಲಾರಂಭಿಸಿದವು! ಸ್ವಾತಂತ್ರ್ಯ ಪೂರ್ವದಲ್ಲಿ ಬೆರಳೆಣಿಕೆಯಷ್ಟಿದ್ದ ಬಿಡಿಕಾಸು (ಅರ್ಧಪೈಸೆ) ಬೆಲೆಯ ಸಾಯಂಕಾಲದ ಸಣ್ಣ ಪತ್ರಿಕೆಗಳು, ಸ್ವಾತಂತ್ರ್ಯ ನಂತರ ಡಜ಼ನ್ ಗಟ್ಟಲೆ ಶುರುವಾದವು.

20ನೇ ಶತಮಾನದ ಅಂತ್ಯಕ್ಕೆ ಮೈಸೂರು, ಪ್ರಪಂಚದಲ್ಲೆ ಅತಿಹೆಚ್ಚು ಸಂಖ್ಯೆಯ 2 ಪೈಸೆ ಬೆಲೆಯ ಸಣ್ಣಪತ್ರಿಕೆ ಪ್ರಕಟಿಸುವ ನಗರವೆನಿಸಿ ಹೊಸ ಇತಿಹಾಸ ಬರೆಯಿತು! ತತ್ಪರಿಣಾಮ, ಸಣ್ಣ ಪತ್ರಿಕೆಗಳ ತವರು ಮೈಸೂರು ಎಂಬ ಹೆಗ್ಗಳಿಕೆ ಪಡೆದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ ವಿಶ್ವದಾಖಲೆ ನಿರ್ಮಿಸಿ ಕ್ರಾಂತಿ ಎಬ್ಬಿಸಿತು!
ಸುದೀರ್ಘ ಸುದ್ದಿಯನ್ನು ಪುಟ್ಟ ಪುಟ್ಟ ಸುದ್ದಿ ಯನ್ನಾಗಿಸಿ ಕೈಗೆಟಕುವ ದರದಲ್ಲಿ ಎಲ್ಲರಿಗೂ ತಿಳಿಸುವ ಸಣ್ಣ ಪತ್ರಿಕೆಗಳು ಮರಳುಗಾಡಿನ ಓಯಸಿಸ್ನಂತಾದವು! ಬಹುಶಃ cheap & best ಪದವು ಮೊಟ್ಟ ಮೊದಲು ಅನ್ವಯಿಸಿದ್ದೆ ಇಂಥ ಸಣ್ಣಪತ್ರಿಕೆಗೆ ಎನ್ನಬಹುದು? ಪ್ರತಿ ಮನೆ ವರ್ಕ್ಶಾಪ್ ಸೆಲೂನ್ ಗ್ಯಾರೇಜ್ ಟಾಕೀಸ್ ಅಂಗಡಿ ಹೊಟೇಲ್ ಶಾಲೆ ಕಾಲೇಜ್, ಸಂಘ ಸಂಸ್ಥೆಗಳಿಗೆ ತಪ್ಪದೇ ತಲುಪುತ್ತಿತ್ತು. ಅಲ್ಲದೆ ವಾರ್ಷಿಕ ಚಂದಾದಾರರಿಗೆ ರಿಯಾಯಿತಿ ದರದಲ್ಲಿ ಕಾಲ್ನಡಿಗೆ, ಸೈಕಲ್ ಮೂಲಕ ಪತ್ರಿಕೆ ಹಂಚುವವರಿಂದ ಓದುಗರ ಮನೆಬಾಗಿಲಿಗೆ ತಲುಪಿಸೋ ವ್ಯವಸ್ಥೆಯೂ ಸಹ ಇತ್ತು!

ಅಂದು ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿ ವಿಷಾದನೀಯ ಸ್ಥಿತಿಯತ್ತು ಶೇ.15ರಷ್ಟು ಮಾತ್ರ ವಿದ್ಯಾವಂತರಿದ್ದು ನಿತ್ಯ ಜೀವನದ ತುಟ್ಟಿ ನಿರ್ವಹಣೆ ಕೆಟ್ಟಕಾಲ ಎಲ್ಲೆಡೆ ಮನೆಮಾಡಿತ್ತು! ಇನ್ನು ಪತ್ರಿಕೆ ಓದುಗರ ಸಂಖ್ಯೆ ಕೇವಲ ಶೇ.9ರಷ್ಟು ಇದ್ದು ಶೇ.88ರಷ್ಟು ಕಡು ಬಡತನದ ಪ್ರಜೆಗಳಿದ್ದು ಅವರ ಸರಾಸರಿ ವಾರ್ಷಿಕ ಆದಾಯ ಕೇವಲ 63/-ರೂ.ಅಷ್ಟಿತ್ತು! ಹಾಗಾಗಿ [10ಬಿಡಿಗಾಸು] 5 ಪೈಸೆಯ ದೊಡ್ಡ ಪತ್ರಿಕೆಗಳ ವಾಚಕರಿಗಿಂತ [2ಕಾಸು]1ಪೈಸೆಯ ಸಣ್ಣಪತ್ರಿಕೆಗಳ ಓದುಗರೆ ಹೆಚ್ಚಾಗಿದ್ದುದರಿಂದ ಸಹಜವಾಗಿ ಸಣ್ಣಪತ್ರಿಕೆಗಳು ರಾಷ್ಟ್ರೀಯ ಪತ್ರಿಕೆಗಳನ್ನೇ ಪಕ್ಕಕ್ಕೆ ತಳ್ಳುವಲ್ಲಿ ಯಶಸ್ವಿಯೂ ಆದವು!
ಆಹಾರ, ಹಣಕಾಸು, ಆರೋಗ್ಯ, ಓದುಗರು, ಮುಂತಾದ ದುರ್ಭಿಕ್ಷೆ ಕಾಲವಾಗಿದ್ದ 1899 ರಲ್ಲಿ ಒಂದು ಕಾಸಿಗೆ ’ಸಾಧ್ವಿ’ ಪತ್ರಿಕೆಯನ್ನು ವೃದ್ಧ ಪಿತಾಮಹ ಎಂ.ವೆಂಕಟಕೃಷ್ಣಯ್ಯ ನವರು ರಾಜ್ಯ/ರಾಷ್ಟ್ರದ ಪ್ರಪ್ರಥಮ ಸಣ್ಣಪತ್ರಿಕೆಯನ್ನಾಗಿ ಮೈಸೂರಲ್ಲಿ ಪ್ರಾರಂಭಿಸಿದರು! ಆಗಿನ ಕಾಲಕ್ಕೆ ಪತ್ರಿಕಾ ಕೆಲಸಗಾರರು, ವರದಿಗಾರರು, ದೊರಕದ ಕಾರಣ ಸುದ್ದಿ-ಸಂಪಾದಕೀಯ ಬರವಣಿಗೆ [ಎಡಿಟರ್] ಮೊದಲ್ಗೊಂಡು ಮುದ್ರಕ [ಪ್ರಿಂಟರ್] ಪ್ರಕಾಶಕ [ಪಬ್ಲಿಶರ್] ಮೊಳೆಜೋಡಕ [ಕಂಪಾಜ಼ಿಟರ್] ಕಾಯಕದ ಜತೆಗೆ ವಿತರಕನ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಇವರ ಈ ಕಾಯಕದಿಂದ ಆಗಿನ ಮಹಾರಾಜರು, ದಿವಾನರು, ಪ್ರಧಾನಮಂತ್ರಿ, ರಾಷ್ಟ್ರಪತಿ, ಮೊದಲ್ಗೊಂಡು ಎಲ್ಲರಿಂದ ಬಿರುದು ಬಹುಮಾನ ಗಳಿಸಿದರು. ಪತ್ರಿಕೋದ್ಯಮ ಪ್ರಪಂಚಕ್ಕೆ ಮಾದರಿ ಪತ್ರಕರ್ತನಾಗಿ ದೇಶದಾದ್ಯಂತ ಖ್ಯಾತರಾದ ಈ ಪುಣ್ಯಾತ್ಮನ ಬಗ್ಗೆ ಮಹಾನ್ ಗ್ರಂಥವನ್ನೆ ಬರೆಯಬಹುದು! ಸಮಾಜ ಸೇವೆಯಲ್ಲು ಅಪ್ರತಿಮರಾದ ಇವರು ಮೈಸೂರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅನಾಥಾಲಯದ ಸಂಸ್ಥಾಪಕರು! ಸಣ್ಣ ಪತ್ರಿಕೆಗಳ ಪಿತಾಮಹ ತಾತಯ್ಯನವರ ಪ್ರತಿಮೆ ಈಗಲೂ ನಗರದ ಕೆ.ಆರ್.ಸರ್ಕಲ್ ಬಳಿಯ ಉದ್ಯಾನವನದಲ್ಲಿದೆ!
ಸಂಸ್ಥಾಪಕ- ಸಂಪಾದಕರಾಗಿದ್ದ ತಾತಯ್ಯನ ನಂತರ ಇವರ ಪರಮಶಿಷ್ಯರಾಗಿದ್ದ ಅಗರಂ ರಂಗಯ್ಯನವರು 1940 ರಿಂದ 2ನಯ ಪೈಸೆಗೆ 12ಮೀನುಗಳ ಲಾಂಛನದ ಸಾಧ್ವಿ ಪತ್ರಿಕೆಯನ್ನು 60ಕ್ಕೂ ಹೆಚ್ಚು ವರ್ಷಕಾಲ ಸಂಪಾದಕ- ಪ್ರಕಾಶಕ- ಮುದ್ರಕನಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದರು! ನಂತರ ಸಿ.ಮಹೇಶ್ವರನ್ ಮುಂದುವರೆಸಿಕೊಂಡು ಬಂದಿದ್ದರು. ಅವರ ನಿಧನದ ಬಳಿಕ ಇದೀಗ ಅವರ ಪುತ್ರರು ನಡೆಸಿಕೊಂಡು ಹೋಗುತ್ತಿದ್ದಾರೆ.

ಅವತ್ತಿನ ಕಾಲದಲ್ಲಿ ಕೇವಲ 2 ಪುಟದಲ್ಲಿ 100ಸುದ್ದಿ ನೀಡುವ ಸಣ್ಣ ಪತ್ರಿಕೆಯ ಜೀವನಾಡಿ ಎಂದರೆ ಜಾಹಿರಾತು ದಾರರು, ಚಂದಾದಾರರು ಹಾಗು ವಿತರಕರಾಗಿದ್ದರು. ಪ್ರತಿದಿನವೂ ಜಾಹಿರಾತು ನೀಡುವ ವರ್ಥನೆಯವರು, ತುಂಡು ಜಾಹೀರಾತು ದಾರರು, ಹಬ್ಬ ಹರಿದಿನದಂದು ಮಾತ್ರ ಪ್ರಚಾರ ಮಾಡಿಸಿಕೊಳ್ಳುವಂಥ ದೊಡ್ಡ ಗಿರಾಕಿಗಳು ಸಹ ಇಂಥ ಸಣ್ಣಪತ್ರಿಕಾ ಬಳಗಕ್ಕೆ ಅನ್ನದಾತರು! ಜತೆಗೆ ವಾರ್ಷಿಕ/ ವಿಶೇಷ ಸಂಚಿಕೆಗೆ ಜಾಹೀರಾತು ನೀಡುವವರು ಹಾಗೂ ಮಾಸಿಕ/ ವಾರ್ಷಿಕ ಚಂದಾದಾರರು ಸಣ್ಣ ಪತ್ರಿಕೆಗಳ ಸಿಬ್ಬಂದಿಯನ್ನು ಸಲಹುವವರು ಆಗಿದ್ದಾರೆ.
ಪ್ರತಿದಿನವೂ ಸಿಗುವ ’ನೋ ಲಾಸ್ ನೋ ಪ್ರಾಫಿಟ್’ ಫ಼ಲಿತಾಂಶದಿಂದ ರೋಸಿ ಹೋಗುವ ಈ ಪತ್ರಿಕಾ ವರ್ಗಕ್ಕೆ ಪ್ರತಿ ವರ್ಷಕ್ಕೊಮ್ಮೆ ದೊರಕುವ ಸಂಕ್ರಾಂತಿ, ಯುಗಾದಿ, ದಸರ- ದೀಪಾವಳಿ, ರಿಪಬ್ಲಿಕ್ ಡೇ ಇಂಡಿಪೆಂಡೆನ್ಸ್ ಡೆ, ಇನ್ನಿತರ ವಿಶೇಷ ಸಂಚಿಕೆಗೆ ದೊರಕುವ ಜಾಹೀರಾತು ಮತ್ತು ಹೆಚ್ಚುವರಿ ಸರ್ಕ್ಯುಲೇಶನಿಂದ ಬರುವ ಬಂಪರ್ ಆದಾಯವು ವಾರ್ಷಿಕ ಸಂತಸ ನೀಡುತ್ತಿತ್ತು!

ಇದಲ್ಲದೆ ಆಗಾಗ್ಗೆ ಅಪರೂಪಕ್ಕೆ ಸಿಗುತ್ತಿದ್ದ ಗಣ್ಯಾತಿಗಣ್ಯರ, ಮಂತ್ರಿವರ್ಯರ ಸುದ್ದಿಗೋಷ್ಟಿ, ಟೀ-ಪಾರ್ಟಿ ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ, ಮುಂತಾದ ವಿ.ಐ.ಪಿ. ಕಾರ್ಯಕ್ರಮದಲ್ಲಿ ಆಸ್ವಾದಿಸುವ ಬೊಂಬಾಟ್ ಭೋಜನದಿಂದ ತೃಪ್ತರಾಗುತ್ತಿದ್ದ ಪತ್ರಿಕೋದ್ಯಮಿ, ಪತ್ರಕರ್ತ, ಪತ್ರಿಕಾ ಪ್ರತಿನಿಧಿ, ವರದಿಗಾರರ ಮುಖದಲ್ಲಿ ಒಂದಿನದ ಮಟ್ಟಿಗೆ ಮಂದಹಾಸದ ಹೊಸಕಳೆ ಇರುತ್ತಿತ್ತು! ’ಇದುವೆ ಜೀವ : ಇದು ಜೀವನ’ ಎಂಬುದನ್ನು ಸರಿಯಾಗಿ ಮನಗಂಡು ಒಳ್ಳೆಯವರು ಕೆಟ್ಟವರು ಎಲ್ಲರೊಡನೆ ನಾಜೂಕಾಗಿ ನಡೆದುಕೊಂಡು ಸ್ನೇಹ ಮತ್ತು ಸಹನೆಯಿಂದ ಇರಬೇಕಾದ್ದು ಸಣ್ಣಪತ್ರಿಕೆಯ ಪ್ರತಿಯೊಬ್ಬ ಸಂಪಾದಕರ- ಮಾಲೀಕರ ಫ಼ಸ್ಟ್ & ಫ಼ೋರ್ ಮೋಸ್ಟ್ ಕ್ವಾಲಿಫಿಕೇಶನ್?!
ಇಷ್ಟಾದರೂ ಸಣ್ಣ ಪತ್ರಿಕಾ ಕ್ಷೇತ್ರದಲ್ಲಿ ದು(ಮ)ಡಿದವರೆಲ್ಲ ಯಾರಿಗು ನೋವಾಗದಂತೆ ಸಮಾಜದ ಓರೆಕೋರೆಗಳನ್ನ ತಿದ್ದಿ ತೀಡುತ್ತ; ಕಾಲಕ್ಕೆ ತಕ್ಕಂತೆ ಬದಲಾವಣೆ ಗೊಳ್ಳುತ್ತ ಕಷ್ಟ ಮತ್ತು ಸುಖಗಳನ್ನು ಸಮನಾಗಿ ಸ್ವೀಕರಿಸಿ ಬಾಳಿ ಬದುಕಿದವರು ಬೆರಳೆಣಿಕೆಯಷ್ಟು ಮಾತ್ರ! ಇದಲ್ಲದೆ ಈ ಬೃಹತ್ ಕ್ಷೇತ್ರದಲ್ಲಿ ಸೋತು-ಗೆದ್ದ ಅಥವ ಗೆದ್ದು- ಸೋತ ಪತ್ರಕರ್ತರ, ಸಂಪಾದಕರ, ಮಾಲೀಕರ, ಲುಕ್ ಅಥವ ಕಾಸ್ಟ್ಯೂಂಸ್ ಮಾತ್ರ ಇವರನ್ನು ಕಂಡಕೂಡಲೆ ಗುರುತಿಸುವಂತೆ ಯೂನಿಫ಼ಾರ್ಮ್ ಆಗಿರುತಿತ್ತು: ಜುಬ್ಬ ಪೈಜಾಮ, ಕಚ್ಚೆ, ಗಡ್ಡಮೀಸೆ, ಹೆಗಲಚೀಲ, ಪೆನ್, ನೋಟ್ ಬುಕ್, ಹವಾಯಿ ಚಪ್ಪಲಿ. ಅಪರೂಪಕ್ಕೆ: ವೇಸ್ಟ್ಕೋಟ್, ಹ್ಯಾಟ್, ಛತ್ರಿ! ಅರಮನೆ- ಗುರುಮನೆ, ಕಿರುಮನೆ- ಸೆರೆಮನೆ ಎಲ್ಲಿಗಾದರೂ ಸರಿ ನುಗ್ಗುವ ರಹದಾರಿ ಮತ್ತು ಪದ್ಧತಿ ಇದ್ದೇ ಇತ್ತು?!

ಈ ಸಾಗರದಲ್ಲಿ ಎದುರಾಗುವ ಯೂತ್ಸ್, ಬಿಗ್ಶಾಟ್ಸ್, ಬಿಸಿನೆಸ್ಮನ್, ಕ್ಯಾಪಿಟಲಿಸಂ, ಕಮ್ಯುನಿಸಂ, ಸೆಕ್ಯುಲರಿಸಂ, ಢೋಂಗಿ, ಡೌಲು, ಡಂಭಾಚಾರದ ಪಾಲಿಟ್ರಿಕ್ಸ್, ಅಲ್ಲದೆ ಮುತ್ಸದ್ದಿಗಳ ಅಂಕು ಡೊಂಕುಗಳನ್ನ ಎತ್ತಿ ತೋರಿಸುತ್ತ, ಸಿನಿಮ, ನಾಟಕ, ಕಲೆ, ನೃತ್ಯ, ಕ್ರೀಡೆ, ಇತರೆ ಕ್ಷೇತ್ರದ ಟೀಕೆ-ಟಿಪ್ಪಣಿಗಳನ್ನು ಚಾಣಾಕ್ಷತೆಯಿಂದ ನಿಭಾಯಿಸುತ್ತ pen is mightier than sword ನಾಣ್ಣುಡಿಯನ್ನು ರುಜುವಾತು ಪಡಿಸಲು ಅನಿವಾರ್ಯವಾಗಿ diplomatic ಆದವರೆ ಹೆಚ್ಚು?! ಇತ್ತೀಚಿಗೆ ಕಾಲಕ್ಕೆ ತಕ್ಕಂತೆ ಸಕಲ ಕಲಾ ವಲ್ಲಭ ನಾಗಿದ್ದರೆ ಮಾತ್ರ ತಾನೂ ಬದುಕಿ ತನ್ನ ಸಿಬ್ಬಂದಿಯನ್ನು ಬದುಕಿಸ ಬಹುದು! ಏಕೆಂದರೆ ಸಮುದ್ರವನ್ನು ಈಜುವುದಕ್ಕಿಂತ ಕಷ್ಟಸಾಧ್ಯವಾದ ಜವಾಬ್ಧಾರಿ ಕಾಯಕವೆ ಈ ಸಣ್ಣಪತ್ರಿಕೆ ಉದ್ಯಮ, ಇಲ್ಲಿ ಗೆದ್ದವರು ಲೋಕವನ್ನೆ ಗೆದ್ದಂತೆ?!
ಮೈಸೂರು ಮೂಲದ ಸಣ್ಣ ಪತ್ರಿಕೆಗಳ ಸಂಕ್ಷಿಪ್ತ ಮಾಹಿತಿ ಹೀಗಿದೆ.. 1. ಸಾಧ್ವಿ: 1940ರಿಂದ 2010ವರೆಗೆ ವೆಂಕಟಕೃಷ್ಣಯ್ಯ ಮತ್ತು ಅಗರಂ ರಂಗಯ್ಯ ನಂತರ ಮಹೇಶ್ವರನ್

- ಮೈಸೂರುಪತ್ರಿಕೆ:1942ರಿಂದ2009ವರೆಗೆ ತಿರುಮಕೂಡ್ಲು ನಾರಾಯಣ, ಟಿ.ಎನ್.ವೆಂಕಟರಾಮು ನಂತರ ಅವರ ಪುತ್ರಿ ಕುಮಾರಿ ವಿಜಯಾ
- ವರ್ತಮಾನ್:1947ರಿಂದಈವರೆಗೆ ವಿ.ಟಿ.ರಾಮನ್/ಎಂ.ಎನ್.ತಿಮ್ಮಯ್ಯ, ನಂತರ ಎಂ.ಟಿ.ಜಯರಾಂ…
- ಅರುಣ: 1949ರಿಂದ1989ವರೆಗೆ ಕೆ.ರಾಮಯ್ಯ
- ವಿಜಯ: 1950ರಿಂದ2001ವರೆಗೆ ಎ.[ಕುಂಟು]ರಾಮಣ್ಣ
- ವಿಶ್ವದೂತ: 1956ರಿಂದ ಆರಂಭಗೊಂಡು ಇಂದಿಗೂ ನಡೆಯುತ್ತಿದೆ.
- ಮೈಸೂರು ವೃತ್ತಾಂತ: 1959ರಿಂದ1964ವರೆಗೆ ನಾಡಿಗ್ ಕೃಷ್ಣಮೂರ್ತಿ, ನಂತರ ಖಾದ್ರಿಶಾಮಣ್ಣ
8.ರಾಜ್ಯಧರ್ಮ: 1961ರಿಂದ ಈವರೆಗೆ ಎಂ.ವಿಠಲ್ ನಂತರ ಕಿರಣ್ ಕುಮಾರ್, ಪ್ರಸ್ತುತ ಮಹಿ ಮಹೇಶ್
9.ಅಶೋಕ: 1962ರಿಂದ 1986ವರೆಗೆ ರವೀಂದ್ರನಾಥ್
10.ಪೌರಧ್ವನಿ: 1975-1995ವರೆಗೆ: ರೇಣುಕಾಲಿಂಗಯ್ಯ

- ಮಹಾನಂದಿ(1976-1987): ಎಂ.ಬಸವಣ್ಣ
- ಆಂದೋಲನ: 1977ರಿಂದಈವರೆಗೆ ಎಂ.ರಾಜಶೇಖರ ಕೋಟಿ, ನಂತರ ರವಿ ಕೋಟಿ
- ಮೈಸೂರುಮಿತ್ರ: 1978ರಿಂದ ಕೆ.ಬಿ.ಗಣಪತಿ
- ಸಂಕ್ರಾಂತಿ: 1979ರಿಂದಡಿ.ಜಯದೇವರಾಜೆ ಅರಸ್; ನಂತರ ಚಂದ್ರಶೇಖರ ಕುಕ್ಕಿಕಟ್ಟೆ
- ಕನ್ನಡಪುತ್ರ: 1979-1995, ನ.ನಾಗಲಿಂಗಸ್ವಾಮಿ
- ಆರತಿ: 1980ರಿಂದಎಂ.ಎನ್.ನಾಗರಾಜರಾವ್
- ಸತ್ಯವಾದಿ: 1981ರಿಂದ
- ನವಧ್ವನಿ:1982-1989 ಎಸ್.ಪಟ್ಟಾಭಿರಾಮನ್
- ಪ್ರಜಾನುಡಿ: 1999…2023 ಪಿ.ವಾಸು
- ಕನ್ನಡಜನಮನ: 2014 ಕಿರಣ್ಕುಮಾರ್
- ಪ್ರಜಾಸತ್ಯ
- ಸುಧರ್ಮ: 1977ರಿಂದದ.ಭಾರತದ ಮೊಟ್ಟಮೊದಲ
ಸಂಸ್ಕೃತ ಭಾಷೆಯ ಪುಟ್ಟದಾದ ದಿನಪತ್ರಿಕೆ
- ಪ್ರಾಕೃತ್: 1979ರಿಂದದ.ಭಾರತದ ಮೊಟ್ಟಮೊದಲ ಹಿಂದಿ ಭಾಷೆಯ ದಿನಪತ್ರಿಕೆ
24.ಸಾಲಾರ್: ದ.ಭಾರತದ ಮೊಟ್ಟಮೊದಲ ಉರ್ದು ಭಾಷೆಯ ದಿನಪತ್ರಿಕೆ
- ಕೌಸರ್: ಉರ್ದು
- Afthab: ಉರ್ದು
- ಮಿನೊ ನ್ಯುಸ್ಉರ್ದು
ENGLISH DAILY:-
28.ARATHY : M.N.Nagaraja Rao
29.INDEPENDENT
30.MYSORE TODAY
31.SAMACHAR : SATHYANARAYAN
32.STAR OF MYSORE : (K.B. GANAPATHI) Vikram muttanna
33.ಇವ್ನಿಂಗ್mail (ಕನ್ನಡEng.) Bilingual:ಕೀರ್ತಿಕೇಶ್ವರ್

ಮಾಸಿಕ/ ಪಾಕ್ಷಿಕ/ ವಾರಪತ್ರಿಕೆ:-
- MYSORE MONITOR
- THE WEEKLY
- ಮೈಸೂರುಮಲ್ಲಿಗೆ
- ಚೆನ್ನುಡಿ
- ಆಶಾಕಿರಣ
- ಕಂಠೀರವ
- ಕ್ರಾಂತಿವೀರ
- ಕಹಳೆ
- ವೈದ್ಯವಾರ್ತಾ
- ಯುವಂಯುಗಂ
- ಕೌಸ್ತುಭ
- ವಿಕ್ರಮಾದಿತ್ಯ
- ಸತ್ಯಜ್ಯೋತಿ
- ಗ್ರಂಥಲೋಕ
- ಪುಸ್ತಕಪುರವಣಿ
- 49.ತಿಂಗಳಬೆಳಕು
50.ಮಾಸಪತ್ರಿಕೆ
51.ಬ್ಯಾಂಕ್ ದರ್ಶಿನಿ









