LatestMysore

ಮೈಸೂರಿನಲ್ಲಿ ಗುಜರಾತಿನ ಜಗತ್ಪ್ರಸಿದ್ಧ  ಸೋಮನಾಥ ಪುಣ್ಯ ದಿವ್ಯ ದರ್ಶನದ ಅನುಭವ ಹೇಗಿತ್ತು?

ಮೈಸೂರು: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ಐಶ್ವರ್ಯ ಪೆಟ್ರೋಲ್ ಬಂಕ್ ಮುಂಭಾಗ ಆಯೋಜಿಸಲಾಗಿದ್ದ ಸಂಸ್ಥೆಯ 90ನೇವಾರ್ಷಿಕೋತ್ಸವ, ಮೈಸೂರು ಉಪವಲಯದ  60ನೇ ವರ್ಷದ ವಾರ್ಷಿಕೋತ್ಸವ, ಹಾಗೂ ಗುಜರಾತಿನ ಸುಪ್ರಸಿದ್ಧ  ಸೋಮನಾಥ ದೇವಾಲಯದ ಪುಣ್ಯ ದಿವ್ಯ ದರ್ಶನ, ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದಿವ್ಯ ದರ್ಶನ ವನ್ನು 15 ದಿನಗಳ ಕಾಲ ವಿಜೃಂಭಣೆಯಿಂದ ಮೈಸೂರಿನ ಜನತೆಗೆ ದರ್ಶನ ಮಾಡಲು  ಅನುವು ಮಾಡಿಕೊಡಲಾಗಿತ್ತು.

ಸೋಮನಾಥನ ಪುಣ್ಯ ದಿವ್ಯದರ್ಶನದ ಜೊತೆಗೆ ಜನತೆಗೆ ಅನೇಕ ರೀತಿಯ ಮಾಹಿತಿಗಳು ಅನೇಕ ರೀತಿಯ ಅನುಭವಗಳು ಅನೇಕ ರೀತಿಯ ದೃಶ್ಯಗಳನ್ನು ದರ್ಶನ ಮಾಡಲಿಕ್ಕಾಗಿ ಒಂದು ವಿಶಾಲವಾದ ಅಭೂತಪೂರ್ವ ಮೇಳವನ್ನು ಆಯೋಜಿಸಲಾಗಿತ್ತು ಆ ಮೇಳಕ್ಕೆ ಜ್ಞಾನ ವಿಜ್ಞಾನ ದಿವ್ಯದರ್ಶನ   ಮೇಳ ಎಂದು ಹೆಸರಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ಮೊದಲನೆಯ ಮಳಿಗೆಯಲ್ಲಿ ಸಂಸ್ಥೆ ಪರಿಚಯ ಅದರಲ್ಲಿ ಹೊರಗಡೆ ಎರಡು ದೊಡ್ಡ ಹೋಲ್ಡಿಂಗ್ಸ್ ಅನ್ನು ಹಾಕಲಾಗಿತ್ತು. ಒಂದು ಈಶ್ವರೀಯ ವಿಶ್ವವಿದ್ಯಾಲಯ 90 ವರ್ಷಗಳಲ್ಲಿ ನಡೆದು ಬಂದ ದಾರಿ.

ಇನ್ನೊಂದು ಈಶ್ವರೀಯ ವಿಶ್ವವಿದ್ಯಾಲಯ ಹೊರದೇಶಗಳಲ್ಲಿ ಯಾವ ರೀತಿಯಾಗಿ ಸೇವೆ ಮಾಡುತ್ತಾ ಇದೆ ಎಲ್ಲೆಲ್ಲಿದೆ ಎನ್ನುವುದರ ಬಗ್ಗೆ ಅದರ ಜೊತೆಗೆ ಒಳಗಡೆ ಹೋದರೆ ಈಶ್ವರೀಯ ವಿಶ್ವವಿದ್ಯಾಲಯ ಸಾಕ್ಷಾತ್ಕಾರದ ಮೂಲಕ ಹೇಗೆ ಅಸ್ತಿತ್ವಕ್ಕೆ ಬಂತು.  ಸಾಮಾಜಿಕ ಸೇವೆಗಳ ಪರಿಚಯವನ್ನು ಮಾಡಿಕೊಳ್ಳಲಾಗಿತ್ತು ಎರಡು ದೃಶ್ಯ ತೋರಿಸಲಾಗಿತ್ತು ಕಲಿಯುಗದ ನಂತರ ಸ್ವರ್ಣಿಮೆ ಯುಗ ಬರುತ್ತದೆ ಎಂಬ ಉಲ್ಲೇಖ ಎಲ್ಲಾ ಧರ್ಮಗಳಲ್ಲಿಯೂ ಇದೆ. ಹಾಗಾದರೆ ಆ ಯುಗ ಹೇಗೆ ಇರುತ್ತದೆ  ಎಂಬ ದೃಶ್ಯವನ್ನು ಆ ಮಳಿಗೆಯಲ್ಲಿ ತೋರಿಸಲಾಗಿತ್ತು.

ಮೂರನೇಯದಾಗಿ ಆತ್ಮ ಮತ್ತು ಪರಮಾತ್ಮರ ಪರಿಚಯ ಶಿವರಾತ್ರಿ ಎಂದರೇನು ಕರ್ಮದ ಗುಹ್ಯ ರಹಸ್ಯ.ಮನಸ್ಸಿನ ನಿಯಂತ್ರಣ. ಸುಖೀ ಸಂಸಾರಕ್ಕೆ ಜೀವನ ಮೌಲ್ಯಗಳು ಇತ್ಯಾದಿ ವಿಷಯಗಳನ್ನು ತಿಳಿಸುವಂತಹ ಮಳಿಗೆಯನ್ನು ಹಾಕಲಾಗಿತ್ತು.ಆತ್ಮದ ಪರಿಚಯ ಪರಮಾತ್ಮನ ಪರಿಚಯ ಎಂದರೆ ಗೊಂದಲವಾಗಬಹುದು ಆದರೆ ಈ ಗೊಂದಲದಿಂದಲೇ ಮನುಷ್ಯನಿಗೆ ಮನಸ್ಸಿನಲ್ಲಿ ಶಾಂತಿ ಕಡಿಮೆಯಾಗಿದೆ. ಮತ್ತು ದುಃಖ ಜಾಸ್ತಿಯಾಗಿದೆ. ಯಾವಾಗ ಈ ಶರೀರ ನಾನಲ್ಲ. ನಾನು ಆತ್ಮನಾಗಿದ್ದೇನೆ. ಸ್ವಯಂ ಆತ್ಮನ ಪರಿಚಯ ಆಗುತ್ತೆ ಮತ್ತು ಪರಮಾತ್ಮ ಯಾರು ಎಲ್ಲಿದ್ದಾರೆ ಅವನ ಸಂಬಂಧ ಬೆಳೆಸುವುದು ಹೇಗೆ ಎಂಬ ಅರಿವು ಮೂಡುತ್ತದೆ ಆಗ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ. ಗೊಂದಲ ಮಾಯವಾಗುತ್ತದೆ.

ಶಿವರಾತ್ರಿ ಬಗ್ಗೆ ಶಿವರಾತ್ರಿ ಯಾಕೆ ಆಚರಿಸುತ್ತಾರೆ. ಕರ್ಮಗಳನ್ನ ಹೇಗೆ ಶ್ರೇಷ್ಠ ಮಾಡಿಕೊಳ್ಳೋದು ಮನಸ್ಸಿನ ನಿಯಂತ್ರಣ ಮಾಡೋದೆಗೆ ಸಂಸಾರ ಸುಖವಾಗಬೇಕಾದರೆ ಯಾವ ಯಾವ ಮೌಲ್ಯಗಳನ್ನು ಧಾರಣೆ ಮಾಡಬೇಕು ಇದರ ಬಗ್ಗೆ ಮುಂದಿನ ಮಳಿಗೆಯಲ್ಲಿ ಮಾಹಿತಿ ದೊರೆಯುತಿತ್ತು ಮುಂದಿನ ಮಳಿಗೆಯಲ್ಲಿ ಮಾನಸಿಕ ಆರೋಗ್ಯದ ಮೂಲಕ ಶಾರೀರಿಕ ಆರೋಗ್ಯವನ್ನು ಹೇಗೆ ಎಂಬುದನ್ನು ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯವಾಗಿ ಹೇಗೆ ಎಂಬುದನ್ನು ವಿವರಿಸುತ್ತಿತ್ತು. ಮಾನಸಿಕ ಆರೋಗ್ಯ ಶರೀರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮನಸ್ಸಿನ ಆರೋಗ್ಯದಿಂದ ಶರೀರದ ಆರೋಗ್ಯ ಸ್ಥಿರವಾಗುತ್ತದೆ ಶರೀರದಲ್ಲಿ ಬರುವಂತಹ ರೋಗ 90ರಷ್ಟು ಮನಸ್ಸಿನಿಂದಲೇ ಬರುವಂತದ್ದು ಎಂದು ಮನೋವಿಜ್ಞಾನ ಹೇಳುತ್ತದೆ.

ಮನಸ್ಸಿನ ಆರೋಗ್ಯ ಹೇಗೆ ಕಾಪಾಡಬೇಕು ಶರೀರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ವಿವರಣೆ ಮುಂದಿನ ಮಳಿಗೆಯಲ್ಲಿ ತಿಳಿಸಿಕೊಟ್ಟಿತು. ಮುಂದಿನ ಮಳಿಗೆಯಲ್ಲಿ ಮಾದಕ ಸೇವನೆಯ ವಿರುದ್ಧ ಜಾಗೃತಿಯನ್ನು ಮೂಡಿಸುವಂಥದ್ದು. ಇದರ ಸೇವನೆ ಜಗತ್ತಿನಾದ್ಯಂತ ಶಾಲಾ-ಕಾಲೇಜುಗ ಳ ಮಟ್ಟದಲ್ಲೇ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡು ಇಡೀ ದೇಶದಲ್ಲಿ ಹಳ್ಳಿ ಹಳ್ಳಿಗೂ ಹೋಗಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಮಾಡುತ್ತಿದೆ. ಅದನ್ನೂ ಸಹ ಈ ಮಳಿಗೆಯಲ್ಲಿ ತೋರಿಸಲಾಗುತ್ತಿತ್ತು ಇದಾದ ನಂತರ ಅಲೋಗ್ರಾಮ್ ಮೂಲಕ ಪರಮಾತ್ಮನ ಅನುಭೂತಿಯನ್ನು ಮಾಡಿ ಸುವಂತಹದಾಗಿತ್ತು.

ಮೌಲ್ಯಗಳನ್ನ ವಿವರಿಸುವಂತ ಕೆಲವು ಆಟಗಳನ್ನು ಸಹ ಇಲ್ಲಿ ಆಡಿಸಲಾಗುತ್ತಿತ್ತು ಇಲ್ಲಿ ಹಾವು ಏಣಿ ಆಟ ಆಡುವುದು ಇನ್ನೂ ಅನೇಕ ಹಳೆಯ ಆಟಗಳನ್ನು ಇಲ್ಲಿ ತೋರಿಸಲಾಗುತ್ತಿತ್ತು ಇವುಗಳ ಮೂಲಕ ಮೌಲ್ಯಗಳು ಹೇಗೆ ಜಾಗೃತಿ ಆಗುತ್ತದೆ ಎಂಬುದನ್ನ ಮನವರಿಕೆ ಮಾಡಿಕೊಡಲಾಗುತ್ತಿತ್ತು. ಇದಾದ ನಂತರ ಧ್ಯಾನದ ಮೂಲಕ ಅಂತರಂಗದ ಅನಾವರಣ. ವಿಶೇಷವಾಗಿ ಧ್ಯಾನ ಮಾಡುವುದನ್ನು ಕಲಿಸಲಾಗುತ್ತಿತ್ತು ನಂತರ ಮೈಂಡ್ ಸ್ಪಾ. ಅಂದರೆ ಮನಸ್ಸನ್ನು ತಿಳಿಗೊಳಿಸುವುದು. ಸದಾ ಒತ್ತಡದಲ್ಲಿರುವ ಅಂತಹ ಕೆಲಸ ಕಾರ್ಯಗಳಲ್ಲಿ ವ್ಯಸ್ತರಾಗಿರುವಂಥವರಿಗೆ ಕಂಪ್ಯೂಟರ್ ಮೂಲಕ ಐದು ನಿಮಿಷಗಳಲ್ಲಿ ತಮ್ಮ ಒತ್ತಡಗಳನ್ನ ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗುತ್ತಿತ್ತು.

ಇದಾದ ನಂತರ ಪರಿಸರಕ್ಕೆ ಮತ್ತು ವಿಶ್ವಕ್ಕೆ ಶಾಂತಿಯ ದಾನ ಮಾಡುವುದು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು. ವೈಬ್ರೇಶನ್ ಪ್ರಕಂಪನಗಳು ಕಣ್ಣಿಗೆ ಕಾಣದೆ ಹೋದರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಹಳ ವೇಗದಲ್ಲಿ ಅದು ಕೆಲಸ ಮಾಡುತ್ತದೆ ಭೌತಿಕವಾಗಿ ದುಃಖ ಶಾಂತಿಯನ್ನು ದೂರ ಮಾಡುವುದಕ್ಕೆ ಆಗದೇ ಹೋದರು ಮನಸ್ಸಿನ ಮುಖಾಂತರ ಅವರಿಗೆ ಶುದ್ಧ ಭಾವನೆಗಳಿಂದ ಮಾಡುವುದಕ್ಕೆ ಸಾಧ್ಯ ಎಂಬುದನ್ನು ಈ ಒಂದು ಮಳಿಗೆಯಲ್ಲಿ ಅನುಭವ ಮಾಡಬಹುದಾಗಿತ್ತು.

ಮುಂದೆ ಬರುವಂಥದ್ದು ಈಶ್ವರೀಯ  ಸಾಹಿತ್ಯ ಪ್ರದರ್ಶನ ಮಳಿಗೆ ಇಲ್ಲಿ ಅನೇಕರ ಅನುಭಯುಕ್ತವಾಗಿರುವ ವಿಚಾರಗಳು ಇರತಕ್ಕಂತ ಸಾಹಿತ್ಯಗಳು ಹಾಗೂ ವರ್ಣ ರಂಜಿತವಾದಂತ ಆಧ್ಯಾತ್ಮಿಕ ಮೌಲ್ಯವುಳ್ಳ ಪುಸ್ತಕಗಳನ್ನು ಪ್ರದರ್ಶನ ಮಾಡಲಾಗಿತ್ತು. ನಂತರ ನವ ಚೈತನ್ಯ ದೇವಿಯರ ದರ್ಶನ. ಯಾವ ದೇವಿಯರ ಬಗ್ಗೆ ಪುರಾಣ ಗ್ರಂಥಗಳಲ್ಲಿದೆ. ದೇವಿಯರಿಗೆ ಯಾವ ಯಾವ ಮಹಿಮೆ ಇದೆ. ಅವುಗಳನ್ನು ಬೊಂಬೆಗಳ ರೂಪದಲ್ಲಿ ಚಿತ್ರಗಳ ರೂಪದಲ್ಲಿ ನೋಡಿದ್ದೆವು. ಅದನ್ನ ಇಲ್ಲಿ ನಾವು ಚೈತನ್ಯ ರೂಪದಲ್ಲಿ ನೋಡೋದಕ್ಕೆ ಬಹಳ ಸುಂದರವಾಗಿತ್ತು. ಇದಾದ ನಂತರ ಕುಂಭಕರ್ಣನ ದೃಶ್ಯ ಕಾಣುತ್ತದೆ.

ಇದರಲ್ಲಿ ಸಾಮಾಜಿಕವಾಗಿ ಕಂಡುಬರುವಂತಹ ಮಾದಕ ಪಿಡುಗುಗಳು, ವರದಕ್ಷಿಣೆ ಬಾಲ್ಯ ವಿವಾಹ ಹೊಟ್ಟೆಕಿಚ್ಚು ಲೋಭ ಸ್ವಾರ್ಥ ಕಾಮ ಕ್ರೋಧದ ಬಗ್ಗೆ ಇಲ್ಲಿ ಜಾಗೃತಿ ಮೂಡಿಸುವಂತಹ ಕುಂಭಕರ್ಣ ಮಲಗುವುದು ಏಳುವುದನ್ನು ತೋರಿಸಲಾಯಿತು.  ಇದಾದ ನಂತರ ದ್ವಾದಶ ಜೋತಿರ್ಲಿಂಗಗಳ ದರ್ಶನ. ಭಾರತದಲ್ಲಿ 12 ಜ್ಯೋತಿರ್ಲಿಂಗಗಳನ್ನು ದರ್ಶಿ ಸುವಂತಹ ಪುಣ್ಯ ದರ್ಶನ ಮಾಡುವಂತಹ ಒಂದು ಅವಕಾಶವನ್ನು ಮಾಡಿಕೊಡಲಾಗಿತ್ತು ಇದಾದ ನಂತರ ಉದ್ಭವ ಶಿವಲಿಂಗ ಬಹಳ ಸುಂದರವಾಗಿ ಮೂಡಿಬಂದಿತ್ತು.

15 ದಿನಗಳು ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬ್ರಹ್ಮಾಕುಮಾರಿ ಸಹೋದರಿಯರಿಂದ ಪ್ರವಚನ ಮಾಲೆಗಳು, ರಾಜಯೋಗದ ಅನುಬೂತಿಗಳು, ನಾಟ್ಯ ಸಂಗೀತ ಇನ್ನು ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಆಧ್ಯಾತ್ಮಿಕ ಆಸಕ್ತರಿಗೆ ಆಧ್ಯಾತ್ಮಿಕತೆಯ  ರುಚಿಯನ್ನು ಹೆಚ್ಚಿಸಿತ್ತು. ಇಷ್ಟೇಅಲ್ಲದೆ 8ನೇ ತಾರೀಕು ಉದ್ಘಾಟನಾ ಕಾರ್ಯಕ್ರಮ ಇತ್ತು. ಈಶ್ವರೀಯ ವಿಶ್ವವಿದ್ಯಾಲಯದ 60ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು 13 ರಂದು ಸರ್ವ ಧರ್ಮದವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಲ್ಲಾ ಕಾರ್ಯಕ್ರಮಗಳಲ್ಲೂ ಮೈಸೂರು ಅಷ್ಟೇ ಅಲ್ಲದೆ ಬೇರೆ ಜಿಲ್ಲೆ ರಾಜ್ಯಗಳಿಂದಲೂ ಸಹ ಬಂದುಇದನ್ನು ವೀಕ್ಷಿಸಿದ್ದಾರೆ. ಸುಮಾರು  ಒಂದೂವರೆ ಲಕ್ಷ ಜನದಷ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 200ಕ್ಕೂ ಹೆಚ್ಚು ರಾಜಯೋಗ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರತಿನಿತ್ಯ ಬಂದವರಿಗೆಲ್ಲ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಇಷ್ಟ ಅಲ್ಲದೆ ಮೂರು ಜನರಿಗೆ ವಿಶೇಷವಾಗಿ ಇದೇ ಮೊದಲ ಬಾರಿಗೆ  ಮೂರು ಜನರಿಗೆ ಈಶ್ವರೀಯ ಪ್ರಶಸ್ತಿಯನ್ನು ಜೀವಮಾನ ಸಾಧನೆ ಮಾಡಿದ ಕೆ ಸಿ ಶಿವಪ್ಪನವರಿಗೆ ಅಂತರಾಷ್ಟ್ರೀಯ ಭರತನಾಟ್ಯ  ನೃತ್ಯಪಟು ವಸುಂದರ ದೊರೆಸ್ವಾಮಿ ಅವರಿಗೆ ಕರ್ನಾಟಕದ ಅತ್ಯಂತ ಪ್ರಸಿದ್ಧ ಹೃದ್ರೋಗ ವೈದ್ಯರಾದ ಹಾಗೂ ಸಂಸದರಾದ ಡಾ. ಸಿಎನ್  ಮಂಜುನಾಥ್ ರವರಿಗೆ ಈಶ್ವರೀಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದಂತ ಎಲ್ಲರಿಗೂ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದಂತಹ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ.ಲಕ್ಷ್ಮೀಜಿ ಅವರು ಹೃದಯಪೂರ್ವಕವಾಗಿ ವಂದಿಸಿದ್ದಾರೆ.

admin
the authoradmin

Leave a Reply

Translate to any language you want