District

ಬನ್ನಿ ಮೈಸೂರಿನ ಋಣ ತೀರಿಸೋಣ, ಎಲ್ಲರೂ ಸೇರಿ ಮೈಸೂರನ್ನು ಕಟ್ಟೋಣ … ವಿನೂತನ ಅಭಿಯಾನ

ಮೈಸೂರು: ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆಯೊಂದಿಗೆ ಪ್ರವಾಸೋದ್ಯಮದಲ್ಲೂ ಛಾಪು ಮೂಡಿಸುವುದರ ಜತೆಗೆ, ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಮೈಸೂರವನ್ನು ಮತ್ತಷ್ಟು ಸುಸಜ್ಜಿತ ನಗರವನ್ನಾಗಿ ರೂಪಿಸಿ, ಮೈಸೂರನ್ನು ಸರ್ವ ರೀತಿಯಲ್ಲೂ ಅಭಿವೃದ್ಧಿಗೊಳಿಸುವ ಚಿಂತನೆಯೊಂದಿಗೆ ಜಿಎಸ್‌ಎಸ್ ಸಿಎಸ್ ಆರ್ ತಂಡ ವಿನೂತನ ಅಭಿಯಾನ ಹಮ್ಮಿಕೊಂಡಿದೆ.

ಮೈಸೂರು ಕಟ್ಟೋಣ – ಬನ್ನಿ ಮೈಸೂರಿನ ಋಣ ತೀರಿಸೋಣ, ಎಲ್ಲರೂ ಸೇರಿ ಮೈಸೂರನ್ನು ಕಟ್ಟೋಣ ಬನ್ನಿ” ಶೀರ್ಷಿಕೆಯೊಂದಿಗೆ ಈ ವಿನೂತನ ಅಭಿಯಾನವನ್ನು ನಡೆಸಲಾಗುತ್ತಿದೆ. ಜಿಎಸ್ಎಸ್ ಸಂಸ್ಥೆ ಮತ್ತು ಪ್ರತಿನಿಧಿ ಫೌಂಡೇಷನ್‌ ಸಂಯುಕ್ತಾಶ್ರಯದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಎಸ್ಎಸ್ ಯೋಗಿಕ್ ರಿಸರ್ಚ್ ಫೌಂಡೇಷನ್‌ ಸಂಸ್ಥಾಪಕರಾದ ಡಿ. ಶ್ರೀಹರಿ ಅವರು ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೈಸೂರನ್ನು ಬೆಳೆಸುವಲ್ಲಿ ಹಿರಿಯರು ನೀಡಿರುವ ಅನನ್ಯ ಕೊಡುಗೆಗಳನ್ನು ಉಳಿಸಿ, ಬೆಳೆಸುವ ಮತ್ತು ನಗರದ ಅಭಿವೃದ್ಧಿಗೆ ಮೈಸೂರಿನ ನಾಗರಿಕರನ್ನು ಜಾಗೃತಗೊಳಿಸುವ ಉದ್ದೇಶದಿಂದ ʻMysuru Vision 2050 – Let’s Build Mysuruʼ ಎಂಬ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಚಾಲನೆ ‌ನೀಡಲಾಗಿದೆ. ಈ ಮಹತ್ವಾಕಾಂಕ್ಷಿ ಕಾರ್ಯಮ್ರಮಕ್ಕೆ ಮೈಸೂರಿನ ಎಲ್ಲ ನಾಗರಿಕರು, ಸ್ವಯಂ ಸೇವಾ ಹಾಗೂ ಸಮಾಜಮುಖಿ ಸಂಸ್ಥೆಗಳು ಕೈಜೋಡಿಸಬೇಕೆಂದು ಶ್ರೀಹರಿ ಅವರು ಮನವಿ ಮಾಡಿದರು.

ಮೈಸೂರಿನ ಸರ್ವತೋಮುಖ ಹಾಗೂ ಯೋಜನಾಬದ್ಧ ಅಭಿವೃದ್ಧಿಗಾಗಿ  ಹಮ್ಮಿಕೊಂಡಿರುವ ಅಭಿಯಾನದಲ್ಲಿ ಆರು ಪ್ರಮುಖ ವಿಷಯಗಳ ಕುರಿತು ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಂತೆ ಗ್ರೀನ್ ಮೈಸೂರು, ಸೇಫ್ ಮೈಸೂರು, ಸ್ಕಿಲ್ ಮೈಸೂರು, ಎಜುಕೇಷನಲ್ ಮೈಸೂರು, ಕಲ್ಚರಲ್ ಮೈಸೂರು, ಹೆಲ್ತಿ ಮೈಸೂರು ಪರಿಕಲ್ಪನೆಗಳ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಅಭಿಯಾನದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಲಿಚ್ಛಿಸುವವರು ದೂ. 96068 34673 ಸಂಪರ್ಕಿಸಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರತಿನಿಧಿ ಪ್ರಾದೇಶಿಕ ದಿ‌‌ನಪತ್ರಿಕೆ ಪ್ರಧಾನ ಸಂಪಾದಕ ಸಿ.ಕೆ. ಮಹೇಂದ್ರ, ನಿವೃತ್ತ ಅಧಿಕಾರಿ ಶಶಿಕುಮಾರ್, ಜಿಎಸ್ಎಸ್ ಸಂಸ್ಥೆಯ ಸರಳ ಇದ್ದರು.

admin
the authoradmin

Leave a Reply