ಮೈಸೂರು: ತಾಲೂಕಿನ ಉತ್ತರ ಕ್ಷೇತ್ರದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿ ಸತ್ಯನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರ್ಮಧಿಖಾನಂ ನಾಮಪತ್ರ ಸಲ್ಲಿಸಿದರು.
ಮೈಸೂರಿನ ಆಲನಹಳ್ಳಿಯ ಗುರುಭವನದಲ್ಲಿರುವ ಚುನಾವಣಾ ಕಚೇರಿಯಲ್ಲಿ ತಮ್ಮ ಬೆಂಬಲಿಗ ಶಿಕ್ಷಕರೊಂದಿಗೆ ಚುನಾವಣಾಧಿಕಾರಿ ಕ್ಷೇತ್ರಪಾಲ್ ಅವರಿಗೆ ನಾಮಪತ್ರ ಸಲ್ಲಿಸಿ ಆ ನಂತರ ತಮ್ಮನ್ನು ಬೆಂಬಲಿಸುವಂತೆ ಶಿಕ್ಷಕ ಬಾಂಧವರನ್ನು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ 30 ವರ್ಷಗಳಿಂದ ಶಿಕ್ಷಕಿಯಾಗಿ ಅದರೊಂದಿಗೆ ಸಿ ಆರ್ ಪಿ ಮತ್ತು ಶಿಕ್ಷಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಮುಂದೆ ನಿರಂತರವಾಗಿ ಶಿಕ್ಷಕರ ನೋವು ಹಾಗೂ ನಲಿವುಗಳಿಗೆ ಸ್ಪಂದಿಸಲು ನಿರ್ಧರಿಸಿದ್ದೇನೆ ಎಂದರು.
ನನ್ನನ್ನು ಸಂಘದ ನಿರ್ದೇಶಕಿಯನ್ನಾಗಿ ಆಯ್ಕೆ ಮಾಡಿದರೆ ಶಿಕ್ಷಕರ ಸೇವೆ ಮಾಡಲು ಬದ್ದಳಾಗಿ ದುಡಿಯುತ್ತಿದ್ದೇನೆಂದರು. ಶಿಕ್ಷಕಿಯರಾದ ಗೌಸಿಯಾ ಸುಲ್ತಾನ್, ಅಸ್ಮಾ ಆರಾ, ಶಾಹೀನ್ ತಾಜ್ ಮತ್ತಿತರರು ಇದ್ದರು.
ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ ಸರ್ಮಧಿಖಾನಂ ಮತ್ತು ಪರಸ್ಪರ ಬಳಗದ ವತಿಯಿಂದ ಚುನಾವಣಾ ಕಣದಲ್ಲಿರುವ ಎಲ್ಲರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯುವ ಭರವಸೆಯನ್ನು ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಭರವಸೆ ನೀಡಿದರು.








