ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಗಾವಡಗೆರೆ ಗುರುಲಿಂಗ ಜಂಗಮ ದೇವರ ಮಠದ ಪೀಠಾಧ್ಯಕ್ಷರಾದ ಶ್ರೀ ನಟರಾಜ ಸ್ವಾಮೀಜಿಯವರ ವರ್ಧಂತ್ಯೋತ್ಸವ ಕಾರ್ಯಕ್ರಮ ಮಠದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬೆಟ್ಟದಪುರದ ಮಠದ ಚನ್ನವೀರ ದೇಶ ಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಸುಖ ದುಃಖಗಳನ್ನು ಒಂದೇ ರೀತಿ ಕಾಣುವ ಮನೋಭಾವ ಇರಬೇಕು ಸುಖದ ಜೀವನ ಸಮಾನವಾಗಿರಬೇಕೆ ವಿನಹ ಭೋಗದ ಜೀವನ ನೆಮ್ಮದಿ ನೀಡುವುದಿಲ್ಲ. ಮೇಲು-ಕೀಳು ಎಂಬ ಭಾವನೆಗಳನ್ನು ತೊರೆದಾಗ ಮಾತ್ರ ಮನುಷ್ಯನಿಗೆ ನೆಮ್ಮದಿ ಸಿಗುತ್ತದೆ. ಶಾಂತಿ ಸಮಾಧಾನ ಹೊಂದುವ ವ್ಯಕ್ತಿಗಳಿಂದ ನೆಮ್ಮದಿ ಕಾಣಲು ಸಾಧ್ಯ ಸಮಾಜಕ್ಕಾಗಿ ಯಾರು ದಾನ ಧರ್ಮ ದಾಸೋಹ ಶಿಕ್ಷಣ ನೀಡಿ ಬದುಕುತ್ತಾರೋ ಅವರು ಶತಾಯಿಷಿಗಳಾಗಿ ಬದುಕಬಲ್ಲರು ಎಂದರು.

ವರ್ಧಂತ್ಯೋತ್ಸವ ದ ಗೌರವವನ್ನು ಗಣ್ಯರುಗಳಿಂದ ಸ್ವೀಕರಿಸಿ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿ ಈ ಮಠವು ಎಲ್ಲ ಭಕ್ತರ ಸ್ವತ್ತು. ಎಲ್ಲರ ಪ್ರೀತಿ ಭಕ್ತಿ ಅಭಿಮಾನದಿಂದ ಎಲ್ಲಾ ರೀತಿಯ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಭಕ್ತರು ಪ್ರತಿಯೊಂದು ಕಾರ್ಯದ ಫಲವು ಮಠದ ಭಕ್ತರಿಗೆ ಸೇರುವಂತದ್ದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್, ಶಾಸಕ ಜಿ.ಡಿ ಹರೀಶ್ ಗೌಡರ ಪತ್ನಿ ವರ್ಷ, ತಾಲೂಕು ಜೆಡಿಎಸ್ ಮುಖಂಡ ಸಮಾಜ ಸೇವಕ ಹರವೆ ಶ್ರೀಧರ್, ಟಿ ಎ ಟಿ ಸಿ ಎಂ ಎಸ್ ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ನಗರ ಸಭೆ ಮಾಜಿ ಸದಸ್ಯ ಗಣೇಶ ಕುಮಾರಸ್ವಾಮಿ ಉದ್ಯಮಿ ತರಿಕಲ್ ರಾಜು, ಕಾವೇರಿ ಆಸ್ಪತ್ರೆಯ ಮುಖ್ಯಸ್ಥ ಡಾ. ಲೋಹಿತ್, ಮೂಕನಹಳ್ಳಿ ವಾಸು, ಹರವೆಮೂರ್ತಿ

ಕೆ ಆರ್ ನಗರ ಕಾಗಿನೆಲೆ ಕನಕ ಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಹಳಸ ಹಳ್ಳಿ ಮಠದ ಷಡಕ್ಷರಿ ದೇಸಿ ಕೇಂದ್ರ ಸ್ವಾಮೀಜಿ ಅಂಗದಪುರ ಶ್ರೀ ಕ್ಷೇತ್ರದ ಬಸವಲಿಂಗ ದೇಶ ಕೇಂದ್ರ ಸ್ವಾಮೀಜಿ, ಲಾನ ಲಾಲನಹಳ್ಳಿ ಮಠದ ಜಯದೇವತಾಯಿ ಕಲ್ಯಾಣಪುರದ ಚಿನ್ಮಯಿ ತಾಯಿ, ಕರ್ಪೂರಹಳ್ಳಿ ಜಂಗಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ನರಸೀಪುರ ಮಾದಾರ ಲಿಂಗಯ್ಯನ ಹುಂಡಿ ಮಠದ ಗೌರಿಶಂಕರ ಸ್ವಾಮೀಜಿ, ಕೇಶಶತ್ರೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ಮೈಸೂರು ಬಸವೇಶ್ವರ ಮಠದ ಶಿವಪ್ರಭು ಸ್ವಾಮೀಜಿ, ಫಾದರ್ ಅಮೇಡಾ, ಫಾದರ್ ನಿರ್ಮಲ್ ಉಪಸ್ಥಿತರಿದ್ದರು.

ವಿವಿಧ ತಾಲೂಕಿನಿಂದ ಹಲವಾರು ಮಠದ ಭಕ್ತರು ಸ್ವಾಮೀಜಿಯವರಿಗೆ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಮಠದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.








