DasaraLatest

ನವರಾತ್ರಿ ಸಂಭ್ರಮ… ಆಯುಧಪೂಜೆ… ದಸರಾ ಸಡಗರ…ಕುಮಾರಕವಿ ನಟರಾಜರಿಗೆ ಕಂಡಿದ್ದು ಹೀಗೆ..

ಮಹಾನವಮಿ ಆಯುಧಪೂಜೆ ಅಂದ್ರೆ ಸುಮ್ನೆನಾ? ಇದು ಹತ್ತು ಹಲವು ವಿಶೇಷತೆಗಳ ಮಹಾಸಂಗಮ.. ನಿತ್ಯ ಬದುಕಿಗೆ ಆಸರೆಯಾಗಿರುವ ನಿರ್ಜೀವಿಯಾದರೂ ನಮಗೆ ಜೀವವಾಗಿರುವ ವಾಹನ, ಉಪಕರಣ, ಹತ್ಯಾರು ಹೀಗೆ ಎಲ್ಲದಕ್ಕೂ ಪೂಜೆ ಸಲ್ಲಿಸಿ ಕಾಪಾಡೆಂದು ಪ್ರಾರ್ಥಿಸುವ  ಕ್ಷಣವಾಗಿದೆ. ರಾಜರ ಕಾಲದಲ್ಲಿ ಆಯುಧವೇ ಎಲ್ಲವೂ ಆಗಿತ್ತು. ರಾಜ್ಯದ ಮೇಲೆ ದಂಡೆತ್ತಿ ಬರುವ ಶತ್ರುಗಳನ್ನು ನಿಗ್ರಹಿಸಲು ಆಯುಧದ ಅನಿವಾರ್ಯತೆಯಿತ್ತು. ಆ ಆಯುಧಗಳು ದೇಶವನ್ನು ರಕ್ಷಿಸುವ ಸಾಧನವಾಗಿದ್ದವು. ಹೀಗಾಗಿ ಅವುಗಳಿಗೆ ಪೂಜೆ ಸಲ್ಲಿಸಿ ದುಷ್ಠರ ಸಂಹಾರಕ್ಕೆ ಅಭಯ ನೀಡೆಂದು ಬೇಡಿಕೊಳ್ಳಲಾಗುತ್ತಿತ್ತು.

ಇವತ್ತಿನ ಪ್ರಜಾಪ್ರಭುತ್ವ ಕಾಲದಲ್ಲಿಯೂ ಯುದ್ಧ ನಿಂತಿಲ್ಲ  ಅದು ಮುಂದುವೆರೆದಿದೆ. ನಮ್ಮ ಭಾರತ ಯಾವತ್ತೂ ಯಾರ ಮೇಲೆಯೂ ದಂಡೆತ್ತಿ ಹೋಗಿಲ್ಲ. ಆದರೆ ನಮ್ಮ ಮೇಲೆ ದಂಡೆತ್ತಿ ಬಂದವನ್ನು ಬೆಂಡೆತ್ತಿ ಕಳುಹಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಇದೆಲ್ಲದರ ನಡುವೆ ನಾವು ನೀವು ಎಲ್ಲರೂ ನಿತ್ಯವೂ ಬದುಕಿಗಾಗಿ ಹೋರಾಡ ಬೇಕಾಗಿದೆ. ಈ ಹೋರಾಟಕ್ಕೆ ನಾವು ನಮ್ಮದೇ ಆದ ಆಯುಧಗಳನ್ನು ಬಳಸುತ್ತಿದ್ದೇವೆ. ಎಲ್ಲವನ್ನೂ ಪೂಜಿಸುವ  ಈ ಕ್ಷಣಗಳು ಎಲ್ಲರಿಗೂ ಒಳಿತಾಗಲಿ…

ಇಷ್ಟಕ್ಕೂ ನವರಾತ್ರಿ, ಆಯುಧಪೂಜೆ, ವಿಜಯದಶಮಿ ಎಲ್ಲದಕ್ಕೂ ತನ್ನದೇ ಆದ ವಿಶೇಷತೆಯಿದೆ.. ಅದರ ಹಿಂದೆ ಪೌರಾಣಿಕ ಐತಿಹಾಸಿಕ ಚರಿತ್ರೆಯಿದೆ. ಆಯುಧಪೂಜೆ ಮತ್ತು ದಸರಾ ಪ್ರತಿಯೊಬ್ಬರ ಕಣ್ಣುಗಳಿಗೂ ವಿಭಿನ್ನವಾಗಿ ಗೋಚರಿಸುತ್ತದೆ. ನೋಡುವ ಮನಸ್ಸು ನಮ್ಮದಾಗಬೇಕಷ್ಟೆ…  ಕವಿಯೂ ಆಗಿರುವ ಕುಮಾರಕವಿ ನಟರಾಜ ಅವರಿಗೆ ನವರಾತ್ರಿ ಗೋಚರಿಸಿದ್ದೇಗೆ? ಇಲ್ಲಿದೆ ಓದಿಬಿಡಿ…

ದಸರ ಹಬ್ಬದ ಹತ್ತನೇ ದಿನ ವಿಜಯದಶಮಿ

ಇದಕ್ಕು ಮುನ್ನ 9ನೇ ದಿನವು ಮಹಾನವಮಿ

ಆಯುಧ ಪೂಜೆಯ ಭವ್ಯದ ಮಹಾಸುದಿನ

ಸಿದ್ಧಿಧಾತ್ರಿ ನವದುರ್ಗೆಯ ನವರಾತ್ರಿ ಕಾರಣ

ಲೋಹಕಲ್ಲುಮಣ್ಣುಮರ ಮುಂತಾದ ಸಾಧನ

ಕತ್ತಿಗುರಾಣಿ ರಥತೇರು ಚಾಕುಚೂರಿ ಚಕ್ರವಾಹನ

ಪ್ರತಿಯೊಂದು ಆಯುಧ ಸಲಕರಣೆ ಸಾಮಾನ

ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಇತ್ಯಾದಿ ಉಪಕರಣ

ಮೊಳೆಆಣಿ ಕತ್ತಿಸುತ್ತಿಗೆ ಮೊದಲಾದ ಸಲಕರಣ

ಅರಮನೆ ಕಿರುಮನೆ ಗುರುಮನೆ ಅಡುಗೆಮನೆ

ಪಂಚಲೋಹ ಪಿಂಗಾಣಿ ಬೆಳಗಿತೊಳ್ದು ತಂದಾನೆ

ಗಂಧಚಂದನ ಅರ್ಶಿನಕುಂಕುಮ ವಿಭುತಿಬಳ್ದಾನೆ

ತುಳಸೀಬಿಲ್ವಪತ್ರೆ ಧವನಮರುಗದಿಂದ ಸಿಂಗರಿಸಿ

ಗುಲಾಬಿಸೇವಂತಿಗೆ ಮಲ್ಲಿಗೆಸಂಪಿಗೆಹೂ ಮುಡಿಸಿ

ಗಂಧದಕಡ್ಡಿ ಸಾಮ್ರಾಣಿ ಕರ್ಪೂರದಾರತಿ ಬೆಳಗಿಸಿ

ಬೂದಗುಂಬ್ಳ ಇಳಿತೆಗೆದು ಈಡ್ಗಾಯಿ ನೆಲಕ್ಕೊಡೆಸಿ

ಬೆಲ್ಲತೆಂಗು ಬೂಂದಿಮಿಶ್ರಿತ ಕಡ್ಲೇಪುರಿ ಮುಕ್ಕಿಸಿ

ಇನಾಂ ಭಕ್ಷೀಸ್ ಕಾಣಿಕೆನೀಡಿ ಬಗೆಬಗೆಸಿಹಿ ತಿನಿಸಿ

ಬಡವ ಬಲ್ಲಿದ ಪಂಡಿತ ಪಾಮರ ಪ್ರಬುದ್ಧ

ಆಳರಸ ಆಳುಮಗ ಆಬಾಲವೃದ್ಧ ಸಬದ್ಧ

ಮಹಿಳೆ ಮಕ್ಕಳಾದಿಯಾಗಿ ಸರ್ವಜನಾಂಗದ

ಸಕಲ ಸಮುದಾಯದ ಸತ್ಸಂಪ್ರದಾಯದ

ಭೇದಭಾವವಿಲ್ಲದ ಭಾರತೀಯರೆಲ್ಲ ಆಚರಿಸೊ

ಉಲ್ಲಾಸ ಉತ್ಸಾಹ ಸಡಗರ ಸಂಭ್ರಮದ

ಮಹೋನ್ನತ ಮಹೋತ್ಸವ ನವರಾತ್ರಿ ಹಬ್ಬದ

ಹರ್ಷೋದ್ಗಾರದ ಬೊಂಬಾಟ್ ವಾರ್ಷಿಕೋತ್ಸವ

ಮಹಾನವಮಿ ಆಯುಧಪೂಜೆ ಭರ್ಜರಿ ಉತ್ಸವ!

admin
the authoradmin

19 Comments

  • ಪರಮಾಶ್ಚರ್ಯ ರೀತಿಯಲ್ಲಿ ಸಿಂಗರಿಸಿ ಲೋಕಾರ್ಪಣೆಗೈದ ನಿಮಗೆ
    ಅನೇಕಾನೇಕ ವಂದನೆಗಳು, ಧನ್ಯವಾದ ಸರ್

  • ಪರಮಾಶ್ಚರ್ಯ ರೀತಿಯಲ್ಲಿ ಸಿಂಗರಿಸಿ ಲೋಕಾರ್ಪಣೆಗೈದ ನಿಮಗೆ
    ಅನೇಕಾನೇಕ ವಂದನೆಗಳು, ಧನ್ಯವಾದ ಸರ್ ..

  • ತುಂಬ ಇಷ್ಟ ಆಗಿದೆ ಮತ್ತು ಸಂಗ್ರಹ ಯೋಗ್ಯ ಮಾಹಿತಿಯೂ ಇದೆ, ನಮಸ್ಕಾರ

  • ನಾನಂತೂ ಫುಲ್ ಫಿದಾ ಆಗಿದ್ದೇನೆ, ಲೇಖಕರು ಮತ್ತು ಪ್ರಕಾಶಕರು ಹಾಗೂ ಜನಮನ ಪತ್ರಿಕೆಯ ಬಳಗಕ್ಕೂ ಸಹಸ್ರ ಧನ್ಯವಾದಗಳು ಸರ್

  • ನಾವು ಪೃಥ್ವಿಿ ದಂಪತಿಯ ತನು-ಮನ ಗೆದ್ದ ಲೇಖನ, ನಮಸ್ಕಾರ ಮತ್ತು ನಿಮಗೆಲ್ಲರಿಗೂ ಸಹ ನನ್ನ ಮತ್ತು ನಮ್ಮ ಕುಟುಂಬದವರ ಕಡೆಯಿಂದ ದಸರ ಹಬ್ಬದ ಶುಭಾಶಯಗಳು

  • ಇಷ್ಟು ಸರಳ ಶೈಲಿಯ ಗದ್ಯ-ಪದ್ಯ ಮತ್ತು ಸಂಪೂರ್ಣ ವಿವರವನ್ನು ಸಂಕ್ಷಿಪ್ತವಾದ ಕನ್ನಡದಲ್ಲಿ ಬರೆಯುವ ಪ್ರತಿಭೆ ಎಲ್ಲರಿಗೂ ದೇವಿ ಸರಸ್ವತಿಯು ಕೊಡುವುದಿಲ್ಲ. ಅದೇನೇಇರಲಿ ನಿಮಗಿಲ್ಲರಿಗೂ ಧನ್ಯವಾದ ಹಾಗೂ ದಸರ ಹಬ್ಬದ ಹಾರ್ದಿಕ ಶುಭಾಶಯಗಳು ಸರ್. ನಿಮ್ಮ ಪತ್ರಿಕೆಯ ಹೀಗೆ ಉತ್ತಮ ಲೇಖನ ಪ್ರಕಟಿಸುತ್ತ ನೂರ್ಕಾಲ ಬೆಳೆಯಲಿ ಬಾಳಲಿ, ಧನ್ಯವಾದ ನಮಸ್ಕಾರ

  • 128 ಸದಸ್ಯರು ಇರುವ ನಮ್ಮ ಬೆಂಗಳೂರಿನ ಕೆನರ ಬ್ಯಾಂಕ್ ಕಾಲೊನಿ ಉದ್ಯಾನ ವನದ ಚಪ್ಪಾಳೆ ಗುಂಪಿನಲ್ಲಿರುವ ಪ್ರತಿಯೊಬ್ಬರಿಗೂ ಕುಮಾರಕವಿ ನಟರಾಜ್ವ ಬೇಕಾದ ಪ್ರತಿಭಾವಂತರು. ಇವರಿಂದ ನಮಗೆಲ್ಲ ಜನಮನ ಕನ್ನಡ ಎಲೆಕ್ಟ್ರಾನಿಕ್ ಪತ್ರಿಕೆಯ ಪರಿಚಯವಾಯಿತು. ಈಗಂತೂ ಪ್ರತಿಯೊಬ್ಬರೂ ಇಷ್ಟ ಪಟ್ಟು ಎಲ್ಲವನ್ನೂ ಓದಿ ಎಂಜಾಯ್ ಮಾಡುತ್ತೇವೆ. ವೈಯಕ್ತಿಕವಾಗಿ ನಟರಾಜ್
    ನನ್ನ ಆತ್ಮೀಯ ಗೆಳೆಯರು. ನಿಮ್ಮ ಪತ್ರಿಕೆಯ ಮೂಲಕ ಅವರು ಬರೆದಿರುವ ಎಲ್ಲ ಲೇಖನ ಓದಿ ಪ್ರತಿಕ್ರಿಯಿಸಿದ್ದೇನೆ. ಧನ್ಯವಾದಗಳು ಸರ್

  • ಕುಮಾರಕವಿಯವರ ಪ್ರತಿಯೊಂದು ಲೇಖನವು ಸೂಪರ್……
    First class article by Kumarakavi Natraj sir 👏
    Wish you Happy DASARA sir

  • ಆಯುಧಪೂಜ ಮತ್ತು ದಸರ ಲೇಖನ ತುಂಬ ಚೆನ್ನಾಗಿದೆ

  • ಇಷ್ಟು ಸರಳ ಶೈಲಿಯ ಗದ್ಯ-ಪದ್ಯ ಮತ್ತು ಸಂಪೂರ್ಣ ವಿವರವನ್ನು ಸಂಕ್ಷಿಪ್ತವಾದ ಕನ್ನಡದಲ್ಲಿ ಬರೆಯುವ ಪ್ರತಿಭೆ ಎಲ್ಲರಿಗೂ ದೇವಿ ಸರಸ್ವತಿಯು ಕೊಡುವುದಿಲ್ಲ. ಅದೇನೇಇರಲಿ ನಿಮಗಿಲ್ಲರಿಗೂ ಧನ್ಯವಾದ ಹಾಗೂ ದಸರ ಹಬ್ಬದ ಹಾರ್ದಿಕ ಶುಭಾಶಯಗಳು ಸರ್. ನಿಮ್ಮ ಪತ್ರಿಕೆಯ ಹೀಗೆ ಉತ್ತಮ ಲೇಖನ ಪ್ರಕಟಿಸುತ್ತ ನೂರ್ಕಾಲ ಬೆಳೆಯಲಿ ಬಾಳಲಿ ಧನ್ಯವಾದ ನಮಸ್ಕಾರ

  • ನಮ್ಮ ಚಪ್ಪಾಳೆ ಗುಂಪಿನ ಹಿರಿಯ ನಾಗರಿಕರಾದ ನಟರಾಜ್ ರವರು ಬರೆದ ಆಯುಧಪೂಜ ಮತ್ತು ಮೈಸೂರು ದಸರ ಬರವಣಿಗೆಯು ಬಹಳ ಬಹಳ ಚೆನ್ನಾಗಿದೆ ನನಗಂತೂ ಓದಿ ಖುಷಿಯಾಯ್ತು, ನಿಮಗೂ ನಿಮ್ಮ ಪತ್ರಿಕಾ ಬಳಗಕ್ಕೂ ಧನ್ಯವಾದಗಳು ಸರ್

  • ನಿಮ್ಮ ಪತ್ರಿಕೆಯ ಎಲ್ಲ ಲೇಖನಗಳು ಸೂಪರೋ ಸೂಪರ್ ಸರ್ ಥ್ಯಾಂಕ್ಯು ಸರ್

  • ಆಯುಧಪೂಜ ಮತ್ತು ಮೈಸೂರು ಧಸರಾ ಲೇಖನ ಬಹಳ ಚೆನ್ನಾಗಿ ಬರೆದಿದ್ದಾರೆ ಥ್ಯಾಂಕ್ಸ್ ಸರ್ ನಮಸ್ಕಾರ

  • ಆಯುಧಪೂಜ ಮತ್ತು ದಸರ ಬಗೆಗಿನ ಎಲ್ಲ ಲೇಖನಗಳೂ ತುಂಬ ತುಂಬ ಸೊಗಸಾಗಿ ಬರೆಯಲಾಗಿದೆ, ನಿಮ್ಮ ಪತ್ರಿಕೆಯ ಎಲ್ಲರಿಗೂ ಶುಭಾಶಯಗಳು

  • ಅಚ್ಚರಿಯ ಮತ್ತು ಅಚ್ಚುಕಟ್ಟಾದ ಲೇಖನ ಬರೆದವರಿಗೂ ಮತ್ತು ಇಂಥ ಉತ್ತಮ ಲೇಖನದ ಪಬ್ಲಿಶರ್ ಗೂ ಅನೇಕ ನಮಸ್ಕಾರ ಮತ್ತು ಧನ್ಯವಾದ

Leave a Reply