ಮೈಸೂರು: ನೂರಾರು ಮಹಿಳೆಯರು, ಹೆಣ್ಣು ಮಕ್ಕಳು, ಮಹಿಳೆಯರ ಕಳ್ಳ ಸಾಗಾಣೆ, ಲೈಂಗಿಕ ಶೋಷಣೆ, ಯುದ್ಧದ ವಿರುದ್ಧವಾಗಿ ಒಡನಾಡಿ ಯೋಗ ಸ್ಟಾಪ್ ಟ್ರಾಫಿಕಿಂಗ್ ಎಂಬ ಧ್ಯೇಯೊದ್ದೇಶದಿಂದ ಯೋಗಾಸನ ಕಾರ್ಯಕ್ರಮ ನಡೆಸಲಾಯಿತು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾದಲ್ಲಿ ಒಡನಾಡಿ ಸೇವಾ ಸಂಸ್ಥೆ ಆಯೋಜಿಸಿದ್ದ 18ನೇ ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮ ಯೋಗ ಸ್ಟಾಪ್ ಟ್ರಾಫಿಕಿಂಗ್ ಮಾನವೀಯ ಸಮತೆಗಾಗಿ ಒಂದು ದಿನ- ಒಂದು ಧ್ವನಿ, ಜಾಗೃತಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಯೋಗಾಸನ ಮಾಡುವ ಮೂಲಕ ಜನಾಂದೋಲನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮಹಿಳೆಯ ಮೇಲೆ ಸಮಾಜದಲ್ಲಿ ಸಾಕಷ್ಟು ಶೋಷಣೆಗಳು ನಡೆಯುತ್ತಿದ್ದು, ಮಾನವ ಕಳ್ಳ ಸಾಗಾಣೆ ನಡೆಯುತ್ತಿದೆ. ಇದರ ವಿರುದ್ಧ ಹೋರಾಡುವುದು ಸಮಾಜದ ಹಾಗೂ ಪ್ರತಿಯೊಬ್ಬರ ಜವಬ್ದಾರಿ ಮತ್ತು ಬದ್ಧತೆ ಈ ನಿಟ್ಟಿನಲ್ಲಿ ಒಡನಾಡಿ ಸಂಸ್ಥೆ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ ಎಂದರು.
ಸಮಾಜದಲ್ಲಿ ಮಹಿಳೆಯರನ್ನು ಸಮಾನರಾಗಿ ಕಾಣದ ಕಾಲಘಟ್ಟದಲ್ಲಿ ಮೈಸೂರು ಸಂಸ್ಥಾನ ಮಹಿಳೆಗೆ ವಿಶೇಷ ಸ್ಥಾನಮಾನ ನೀಡಿ, ಸಮಾನತೆ, ಶಿಕ್ಷಣ, ಗೌರವ, ನಾಯಕತ್ವವನ್ನು ನೀಡಿದ್ದರು. ಅದಕ್ಕಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದಾರೆ. ಇದೆಲ್ಲವನ್ನು ನಮ್ಮ ಸೌಭಾಗ್ಯ. ಅದರಂತಯೇ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಒತ್ತು ನೀಡಿದ್ದಾರೆ ಇಂತಹ ಮಹಿಳಾ ಪರ ನಾಯಕರು ಹುಟ್ಟಿದ ಮೈಸೂರಿನಲ್ಲಿ ಮಹಿಳಾ ಕಳ್ಳ ಸಾಗಾಣೆಯ ವಿರುದ್ಧ ಹೋರಾಡುವ ಯೋಗ ಶಿಬಿರ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮಹಿಳೆಯರೊಂದಿಗೆ ಎಂದೆಂದಿಗೂ ಆಯೋಗ ಬೆನ್ನೆಲುಬಾಗಿ ನಿಲ್ಲುತ್ತದೆ. ಸಮಾಜದಲ್ಲಿ ಮಹಿಳೆಯ ಸ್ಥಾನಮಾನ, ಸಮಾನತೆ ಇನ್ನಷ್ಟು ಸುಧಾರಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಆಯೋಗ ಸದಾ ಸಿದ್ಧ ಎಂದು ತಿಳಿಸಿದರು.

ಒಡನಾಟಿಯ ಸ್ಟ್ಯಾನ್ಲಿ ಮಾತನಾಡಿ, ಒಡನಾಡಿ ಕಳೆದ ಮೂರು ದಶಕಗಳಿಂದ ವಾನವ ಸಾಗಾಣಿಕೆ, ಲೈಂಗಿಕ ದೌರ್ಜನ್ಯ ಹಾಗೂ ಸಾವಾಜಿಕ ಸಮಸ್ಯೆಗಳು ಶೋಷಣೆ ವಿರುದ್ಧ ಹೋರಾಡುತ್ತಾ, ಸಮಷ್ಟಿ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಳೆದ 18ವರ್ಷಗಳಿಂದ ಯೋಗ ಸ್ಟಾಪ್ ಟ್ರಾಫಿಕಿಂಗ್ ಎಂಬ ಆಶಯದಲ್ಲಿ ಯೋಗವನ್ನು ಅಸ್ತ್ರವನ್ನಾಗಿಟ್ಟುಕೊಂಡು, ಸಾಥ್ವಿಕವಾದ ಪ್ರತಿರೋಧ, ಪ್ರತಿಭಟನೆ ನಡೆಸುತ್ತಿದ್ದೇವೆ. ಮಾನವೀಯ ಮೌಲ್ಯವನ್ನು ಕ್ರೋಢಿಕರಿಸಿ, ಸಮಾಜದಕ್ಕೆ ಸಂದೇಶವನ್ನು ರವಾನಿಸಿ, ಸಮಾನರತೆಗಾಗಿ ಹೋರಾಡುವ ಅವಶ್ಯಕತೆಯಿದೆ ಎಂದರು.
ಮಾನವೀ ಸವಾನತೆಗಾಗಿ ಒಂದು ದಿನ-ಒಂದು ಧ್ವನಿ ಎಂಬ ಆಶುಂದೊಡನೆ ವಿಶ್ವದಾದ್ಯಂತ ಒಂದು ಧ್ವನಿ?ಂನ್ನು ಒಗ್ಗೂಡಿಸಬೇಕಿದೆ. ಇಂದಿಗೂ ಲೈಂಗಿಕ ಶೋಷಣೆಗೊಳಪಡಿಸುವ ಹೀನ ಕಾರ್ಯಗಳು ನಡೆಯುತ್ತಲೇ ಇದ್ದು, ಯೋಗ ಮತ್ತು ಯೋಗ್ಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದೇ, ಆದಲ್ಲಿ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯ ಎಂದು ನಮ್ಮ ಚಿಂತನೆ ಎಂದರು.

ಯೋಗ ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ಯೋಗಾಸಕ್ತರು, ಯೋಗ ಶಾಲೆ ವಿದ್ಯಾರ್ಥಿಗಳು, ಎನ್ಎಸ್ಎಸ್ ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿದಂತೆ ೫೦೦ಕ್ಕೂ ಹೆಚ್ಚು ಜನ ಭಾವಹಿಸಿದ್ದರು.
ಮೈಸೂರು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾಯದರ್ಶಿ ಹೊಸಕೋಟೆ ಬಸವರಾಜು, ಯೋಗಾ ಒಕ್ಕೂಟದ ಪ್ರತಿನಿಧಿ ಡಾ.ಮೂರ್ತಿ, ಸಮತ ವೇದಿಕೆ ಪ್ರೊ.ಲತಾಬಿದ್ದಪ್ಪ, ಒಡನಾಡಿಯ ಹೆಣ್ಣು ಮಕ್ಕಳ ಪ್ರತಿನಿಧಿ ಲಲಿತಾ ಮತ್ತಿತರರಿದ್ದರು.








