ಕನ್ನಡ ಕಲಾ ರಸಿಕರ ಮನದಲ್ಲಿ ಅಚ್ಚಳಿಯದ ಹಿರಿಯ ನಟ ಕಲ್ಯಾಣಕುಮಾರ್… ಇವರು ನಟಿಸಿದ ಸಿನಿಮಾಗಳೆಷ್ಟು?

ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಹೀರೋ ಆಗಿ ತನ್ನದೇ ಆದ ನಟನೆ ಮತ್ತು ವರ್ಚಸ್ಸಿನಿಂದ ಗಮನಸೆಳೆದ ಕಲ್ಯಾಣ್ ಕುಮಾರ್ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇವತ್ತಿಗೂ ಅವರು ನಟಿಸಿದ ಸಿನಿಮಾಗಳು ಕನ್ನಡ ಕಲಾ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಕುರಿತಂತೆ ಒಂದಷ್ಟು ಮಾಹಿತಿಯನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಹಂಚಿಕೊಂಡಿದ್ದಾರೆ.
ನಟ-ನಿರ್ಮಾಪಕ-ನಿರ್ದೇಶಕ-ಸಾಹಿತಿಯಾಗಿ 1967ರಲ್ಲಿ ಪ್ರೇಮಕ್ಕೂ ಪರ್ಮಿಟ್ಟೆ ಚಿತ್ರದ ಮೂಲಕ ಚಂದನವನದಲ್ಲಿ ಇಂಗ್ಲಿಷ್ ಮಿಶ್ರಣ ಕನ್ನಡ ಸಂಭಾಷಣೆ-ಹಾಡು ಪರಿಚಯಿಸಿದ ಪ್ರಪ್ರಥಮ ನಟ ಕಲಾರಸಿಕ ಕಲ್ಯಾಣಕುಮಾರ್. ಮಗನನ್ನು ಚೆನ್ನಾಗಿ ಓದಿಸಿ ಡಾಕ್ಟರ್ ಮಾಡಬೇಕೆಂಬ ತಂದೆತಾಯಿ ಆಸೆ ಈಡೇರಲೇಇಲ್ಲ?! ಮಾವನಮಗಳು, ಮನೆಅಳಿಯ, ಮುಂತಾದ 6 ಚಿತ್ರಗಳಲ್ಲಿ ಜಯಲಲಿತ ಜತೆ ನಟಿಸಿದ ಕನ್ನಡ ಚಿತ್ರರಂಗದ ಏಕೈಕ ಹೀರೋ. ಕಲ್ಯಾಣಕುಮಾರ್ ಚಿತ್ರಗಳಿಗೆ ಮೊದಲೆರಡು ವಾರಪೂರ್ತಿ ಕಾಲೇಜ್ ಸ್ಟೂಡೆಂಟ್ಸ್ ಮುಗಿಬೀಳುತ್ತಿದ್ದರು.
ಎಲ್ಲವರ್ಗದ ಎಲ್ಲಭಾಷೆಯ ಜನರು ಇ[ಕ]ಷ್ಟಪಟ್ಟು ನೋಡುತ್ತಿದ್ದರು. ಒಮ್ಮೊಮ್ಮೆ ರಾಜ್ ಚಿತ್ರಕ್ಕಿಂತ ಹೆಚ್ಚು ಡಿಮ್ಯಾಂಡ್ ಇರುತ್ತಿತ್ತು! ಇವರ ಬಹುತೇಕ ಫಿಲಂಸ್ ಪ್ರಾರಂಭದ 2ವಾರ ಹೌಸ್ ಫುಲ್! 1955ರಿಂದ ನಂ.1ಸ್ಥಾನದಲ್ಲಿದ್ದು 1963ರ ಬಂಗಾರಿ ಚಿತ್ರದವರೆಗೆ ಹೇಗೋ ಸರಿದೂಗಿಸಿ ಕೊಂಡು ಬಂದರೂ ಕ್ರಮೇಣ ರಾಜ್ ಕುಮಾರ್ಗೆ ಮೊದಲಸ್ಥಾನ ದಕ್ಕಿತು. 1963ರಿಂದ 1973ವರೆಗೆ 2-3ನೇ ಸ್ಥಾನಕ್ಕೆ ದೂಡಲ್ಪಟ್ಟ ಇವರಿಗೆ ಕ್ರಮೇಣ ಪೋಷಕ ನಟನಾಗಿ ನಟಿಸುವ ಅನಿವಾರ್ಯತೆ ಒದಗಿತು.
ಇದನ್ನೂ ಓದಿ: ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… ಇದು ಕನ್ನಡಚಿತ್ರರಂಗದಲ್ಲಿ ಶೋಕಿಗಾಗಿ ನಟನಾದವನ ಕಥೆ!
ಸಾಡೇಸಾತ್ ವಕ್ಕರಿಸಿದ ನಂತ್ರ 1975 ರಿಂದ ಪೋಷಕ ಪಾತ್ರದಲ್ಲಿ ನಟಿಸುವಾಗಲೂ ತಮ್ಮ ಪ್ರತಿಷ್ಠೆ ಉಳಿಸಿ ಕೊಂಡಿದ್ದು ದುರ್ಭಿಕ್ಷೆ ಕಾಲದಲ್ಲಿ ಟಿ.ವಿ.ಸೀರಿಯಲ್ ನಲ್ಲೂ ನಟಿಸಿದರು. ಅಮರಶಿಲ್ಪಿ ಜಕಣಾಚಾರಿ, ಕನ್ನಡದ ಪ್ರಪ್ರಥಮ ಕಲರ್ ಚಿತ್ರದ ನಾಯಕನಟನೆಂಬ ಹೆಗ್ಗಳಿಕೆ! ತಾನೇ ನಿರ್ಮಾಪಕ-ನಿರ್ದೇಶಕ ನಾಗಿದ್ದ ಚಿತ್ರಗಳಿಗೂ ನಾಯಕನಾಗಿ ಯಶಸ್ವಿ ಆದರಲ್ಲದೆ ಹೊಸ ನಟನಟಿಯರನ್ನೂ ಚಿತ್ರರಂಗಕ್ಕೆ ಪರಿಚಯಿಸಿದ ಗೌರವಕ್ಕೆ ಪಾತ್ರರಾದರು.
ಬರ್ಕಲೀ ಸಿಗರೇಟ್ ಜಾಹೀರಾತು ಫಿಲಂ ಆ್ಯಂಕರ್ ಆಗಿ 10 ವರ್ಷ ಮಿಂಚಿದರು. ರಾಜ್ಕುಮಾರ್ ಜತೆ ಓಹಿಲೇಶ್ವರ, ಭೂಕೈಲಾಸ, ಭೂದಾನ ಚಿತ್ರಗಳಲ್ಲಿ ನಟಿಸಿದ್ದರು. ಬನಶಂಕರಿ ಕನ್ನಡ ಚಿತ್ರದಲ್ಲಿ ತಮಿಳ್ ನಟಿ ಕೆ.ಆರ್.ವಿಜಯ ಜತೆ ನಟಿಸಿದ ಏಕೈಕ ಹೀರೋ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ- ಪಂಚಭಾಷಾ ನಟನಾಗಿ ಸುಮಾರು150 ಫಿಲಂಸ್ ನಲ್ಲಿ ನಟಿಸಿ ನೆಂಜಿಲ್ ಒರು ಆಲಯಂ ಚಿತ್ರದ ನಾಯಕನಾಗಿ ತಮಿಳು ಚಿತ್ರರಂಗದಲ್ಲೂ ಬಿರುಗಾಳಿ ಎಬ್ಬಿಸಿದ ಪ್ರಥಮ ಕನ್ನಡ ನಟ ಇವರಾಗಿದ್ದಾರೆ.
ಯಾರೊಡನೆಯೂ ಯಾವುದಕ್ಕೂ ಕಾಂಪ್ರಮೈಸ್ ಆಗದೇಇದ್ದ ಕಲಾರಸಿಕ 1.8.1999ರಂದು ಬೆಂಗಳೂರಲ್ಲಿ ವಿಧಿವಶರಾದರು. ಅದಕ್ಕೂ ಮುನ್ನ ಅವರ 70ನೇ ವಯಸ್ಸಿನಲ್ಲೂ 1999ರವರೆಗೆ ನಟಿಸಿದರು. ಕಲಾರತ್ನ ಕಲ್ಯಾಣ್ ಕುಮಾರ್ ಅಭಿನಯಿಸಿದ ಅಂತಿಮ ಚಿತ್ರ ಮರಣಾನಂತರ ರಿಲೀಸ್ ಆಯಿತು! ಇವರ ಪತ್ನಿ ರೇವತಿ ಕಲ್ಯಾಣ್ ಕೂಡ ಓರ್ವ ನಟಿ-ಕಾದಂಬರಿಗಾರ್ತಿ, ಇವರ ಪುತ್ರ ಭರತ್ ಓರ್ವ ಬಿಸಿನೆಸ್ಮನ್?!
ಕಲ್ಯಾಣ್ಕುಮಾರ್ ನಟಿಸಿದ ಕನ್ನಡಫಿಲಂಸ್ ಗಳನ್ನು ನೋಡುತ್ತಾ ಹೋದರೆ, 1. ನಟಶೇಖರ(1954) 2 ಓಹಿಲೇಶ್ವರ 3 ಭಾಗ್ಯಚಕ್ರ, 4 ಮುತ್ತೈದೆಭಾಗ್ಯ 5 ಸದಾರಮೆ 6 ರಾಯರಸೊಸೆ 7 ಬೆಟ್ಟದಕಳ್ಳ 8 ಪ್ರೇಮದಪುತ್ರಿ 9 ಭೂಕೈಲಾಸ 10 ಮನೆಗೆಬಂದಮಹಾಲಕ್ಷ್ಮಿ 11.ಗಾಳಿಗೋಪುರ 12 ದೈವಲೀಲೆ 13 ತಾಯಿಕರುಳು 14 ಅಮರಶಿಲ್ಪಿಜಕಣಾಚಾರಿ 15 ಲಾಯರ ಮಗಳು 16 ಬಂಗಾರಿ 17 ಭೂದಾನ 18 ಚಿನ್ನದಗೊಂಬೆ 19 ಮನೆಅಳಿಯ 20 ಮಾವನಮಗಳು.
ಇದನ್ನೂ ಓದಿ:ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಮಹಾಕಲಾವಿದ ಜಿ.ವಿ.ಅಯ್ಯರ್… ಇವರ ಬಣ್ಣದ ಬದುಕು ಹೇಗಿತ್ತು? ಸಾಧನೆಗಳೇನು?
21.ಬಾಲರಾಜನಕಥೆ 22 ಬೆರೆತಜೀವ 23 ನನ್ನಕರ್ತವ್ಯ, 24 ಸುಬ್ಬಾಶಾಸ್ತ್ರಿ 25 ಎಂದೂನಿನ್ನವನೆ 26 ಬದುಕುವದಾರಿ27 ಲವ್ ಇನ್ ಬೆಂಗಳೂರ್ 28 ಬೆಳ್ಳಿಮೋಡ29 ಮುದ್ದುಮೀನ 30 ಪ್ರೇಮಕ್ಕೂಪರ್ಮಿಟ್ಟೆ 31.ಕಲ್ಲುಸಕ್ಕರೆ 32 ಬೇಡಿಬಂದವಳು 33 ಅರುಣೋದಯ 34 ಅಣ್ಣತಮ್ಮ 35 ಮಂಕುದಿಣ್ಣೆ 36 ಮೈಸೂರುಟಾಂಗ 37 ಪ್ರವಾಸಿಮಂದಿರ 38 ಆನಂದಕಂದ 39 ಅತ್ತೆಗೊಂದುಕಾಲ ಸೊಸೆಗೊಂದುಕಾಲ 40 ಮಮತೆ.
41.ನಾನೇಭಾಗ್ಯವತಿ 42 ಕಣ್ಣುಮುಚ್ಚಾಲೆ 43 ನಿರಪರಾಧಿ 44 ಮುಕುಂದಚಂದ್ರ 45 ಒಡಹುಟ್ಟಿದವರು 46 ಅಪರಾಜಿತೆ 47 ಅರಿಶಿನಕುಂಕುಮ 48 ಪಾಪಪುಣ್ಯ 49 ಸೇಡಿನಕಿಡಿ 50ಅಮರಭಾರತಿ 51.ಕಥಾಸಂಗಮ 52 ತುಳಸಿ 53 ಕಾಲೇಜುರಂಗ 54 ಬನಶಂಕರಿ 55 ಮುಗ್ಧಮಾನವ 56 ಉಡುಗೊರೆ 57 ಶುಭಾಶಯ 58 ಅನುರಾಗಬಂಧನ59 ಮರಳುಸರಪಣಿ 60 ಮದರ್ 61.ನಗಬೇಕಮ್ಮನಗಬೇಕು 62 ಸಿಂಹಘರ್ಜನೆ 63.ಚಿನ್ನದಂಥಮಗ 64.ತಾಯಿಯನುಡಿ 65.ಅವಳಅಂತರಂಗ 66.ಪೊಲೀಸ್ಪಾಪಣ್ಣ 67.ಗುರುಭಕ್ತಿ 68.ತಾಳಿಯಭಾಗ್ಯ. 69.ಶುಭಮುಹೂರ್ತ 70.ಮರಳಿಗೂಡಿಗೆ 71.ಕಿಲಾಡಿಅಳಿಯ 72.ತಾಯಿತಂದೆ 73.ದೇವರೆಲ್ಲಿದ್ದಾನೆ 74.ತವರುಮನೆ 75.ಉಷಾ
76.ಆಫ್ರಿಕಾದಲ್ಲಿಶೀಲಾ 77.ತಾಳಿಯಆಣೆ 78.ಊರಿಗಿಟ್ಟಕೊಳ್ಳಿ 79.ತಾಳಿಗಾಗಿ 80.ಬಣ್ಣದಗೆಜ್ಜೆ 81 ಶ್ರೀಸತ್ಯನಾರಾಯಣ ಪೂಜಾಫಲ 82. ಬಂಗಾರದಂಥಮಗ 83. ಮನಗೆದ್ದಮಗ 84.ಮಹಾಶಕ್ತಿಮಾಯೆ 85.ಸಂಗೀತಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ 86.ಪುಟ್ಮಲ್ಲಿ 87.ಕಾವ್ಯ 88.ಶಿವ 89.ಗಂಡೆದೆಭೈರ 90.ಭಂಡಅಲ್ಲಬಹದ್ದೂರ್ ಗಂಡ, 91.ಮಾನವ2022 92.ಅಳಿಯಅಲ್ಲ ಮಗಳಗಂಡ 93.ನೀಮುಡಿದಾಮಲ್ಲಿಗೆ 94.ಎಮರ್ಜೆನ್ಸಿ 95.ಹೆತ್ತವರು 96.ಸಿಂಹಾದ್ರಿ 97.ಶಿವಲೀಲೆ 98.ಮುದ್ದಿನಅಳಿಯ 99.ದಾಯಾದಿ 100.ಸಂಭ್ರಮ 101.ಸಂಕಟಬಂದಾಗವೆಂಕಟರಮಣ (ಮರಣೋತ್ತರ ರಿಲೀಸ್)
ಧನ್ಯವಾದ ಲವ ಸರ್, ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ.
Thank you so much sir 🙏
ಧನ್ಯವಾದ ಲವ ಸರ್, ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ.
Thank you so much sir . 🙏
ಉತ್ತಮ ಮಾಹಿತಿಯ ಅತ್ಯುತ್ತಮ ಸಿನಿಮಾರಂಗದ ಲೇಖನ, ಪ್ರಕಾಶಕರಿಗೂ ಬರೆದವರಿಗೂ ನನ್ನ ನಮಸ್ಕಾರ, ಧನ್ಯವಾದ
Very much informative and interesting article about kalyankumar. Really nice to read sir 👍
ಕಲ್ಯಾಣ ಕುಮಾರ್ ಕೂಡ 1954 ರಲ್ಲೇ ಸಿನಿಮ ನಟರಾದ ವಿಷಯ ನನಗೆ ಅಥವ ನಮಗೆಲ್ಲ ಗೊತ್ತಿರಲಿಲ್ಲ. ಜಯಲಲಿತ ಜೋಡಿ ಆರೇಳು ಚಿತ್ರದಲ್ಲಿ ನಟಿಸಿದ್ದೂ ಸಹ ಗೊತ್ತಿರಲಿಲ್ಲ. ಏನೇ ಆಗಲಿ ಬಹಳ ವಿಷಯದ ಸಂಗತಿ ಮಾಹಿತಿ ಪ್ರಕಟಿಸಿದ ನಿಮಗೆ ನಿಮ್ಮ ಪತ್ರಿಕೆಗೆ ಅನೇಕ ಧನ್ಯವಾದ, ನಮಸ್ಕಾರ ಸರ್
Group photo ಯಾರದ್ದು ಇದರಳೊಗೆ ನಟ ಕಲ್ಯಾಣಕುಮಾರ್ ಯಾರು ಎಲ್ಲಿದ್ದಾರೆ ಎಂದು ಗುರುತಿಸುವುದು ಸ್ವಲ್ಪ ಕಷ್ಟ. ಏನೇ ಆಗಲಿ ಹಿಂದಿನ ಕಾಲದ ಸಿನಿಮಾರಂಗದ ಮತ್ತು ನಟರ ಬಗ್ಗೆಲ್ಲ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಎಲ್ಲ ಲೇಖನಗಳೂ ಸೂಪರ್ ಆಗಿವೆ ಎಂದು ಈ ಮೂಲಕ ಬರೆದು ತಿಳಿಸಲು ನನಗೆ ತುಂಬ ಖುಶಿಯಾಗಿದೆ. ನಮಸ್ಕಾರ ಸರ್
Extraordinary articles are being published including this KALYANKUMAR the class-hero. And also special writings about SANDALWOOD actresses and actors by your (janamana kannada) electronic media, I really appreciate. Keep on publishing informative articles for ever. All the best for your future publication sir. Thanks a ton….
Good information about old period 1950,1960,1970,1980 period heroes and heroines. Kalyankumar lekhana is also very beneficial and beautiful
ಕಲ್ಯಾಣ ಕುಮಾರ್ ಬಹಳ ರಸಿಕ ನಟ, ಆದರೆ ಸ್ವಲ್ಪ ಅಹಂ ಇತ್ತು ಎಂದು ನಮ್ಮಣ್ಣ ಹೇಳುತ್ತಾರೆ. ಅದೇನೇ ಇರಲಿ ಮಹಾನ್ ನಟ ನಟಿಯರ ಬಗ್ಗೆಲ್ಲ ಚೆಂದದ ಲೇಖನಗಳು ಕೊಡುತ್ತಿರುವ ನಿಮ್ಮ ಪತ್ರಿಕೆಗೆ ನಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಇದ್ದೇ ಇದೆ. (ಪಿತೃಪಕ್ಷ ಲೇಖನವೂ ಓದಿದೆ ಚೆನ್ನಾಗಿತ್ತು)
ನಮಸ್ಕಾರ ಸರ್
Very much informative and interesting article about kalyankumar. Really nice to read sir 👍
I have watched almost all films of Kalyan Kumar. Real hero of college students during those years, of course no.1
Thanks for the true information 👍
Yes srikanth sir, good article about kalyankumar and jayalalitha selvi
Very much informative and interesting article about kalyankumar. Really nice to read sir 👍