Cinema

ಚಂದನವನದ ಪ್ರಥಮ ಹೀರೋ-ಕಂ-ವಿಲನ್ ಉದಯಕುಮಾರ್.. ಸಿನಿಮಾ ಬದುಕಲ್ಲಿ ನಡೆದ ಆ ದುರಂತ ಯಾವುದು?

ನಟಸಾಮ್ರಾಟ್ ಉದಯಕುಮಾರ್ ನಾಯಕನಟನಾಗಿ ಪಾದಾರ್ಪಣೆಗೊಂಡು ಅನೇಕ ಚಿತ್ರಗಳಲ್ಲಿ ಅಭಿನಯಿಸಿದ ನಂತರ ದುರದೃಷ್ಟವಶಾತ್? ಖಳನಾಯಕನಾಗಿ ನೂರಾರು ಚಿತ್ರಗಳಲ್ಲಿ ನಟಿಸಬೇಕಾಯ್ತು! ಚಂದನವನದ ಚೊಚ್ಚಲ ಸಾಮಾಜಿಕ ಕಲರ್‌ಫಿಲಂ “ಭಲೇಬಸವ” ಚಿತ್ರದ ಹೀರೋ, ಕನ್ನಡ ಸಿನಿಲೋಕದ ಮೊಟ್ಟಮೊದಲ ನಾಯಕನಟ-ಕಂ-ಖಳನಾಯಕ ಬಿರುದು ಪಡೆದರು. ಈ ನಟನ ಬಗ್ಗೆ ತಿಳಿಯುತ್ತಾ ಹೋದರೆ ಹತ್ತು ಹಲವು ವಿಚಾರಗಳು ಹೊರ ಬರುತ್ತವೆ.. ಇವರ ಬದುಕು ಮತ್ತು ಸಿನಿಮಾದ ಕುರಿತಂತೆ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಂದನವನಕ್ಕೆ ಮರೆಯಲಾರದ ಕೊಡುಗೆ ನೀಡಿದ ನಟ ಬಾಲಣ್ಣ.. ಇವರ ನಟನೆಗೆ ಮಾರು ಹೋಗದವರಿಲ್ಲ..!

ರಾಜಕುಮಾರ್ ಚಿತ್ರಗಳಲ್ಲೂ ಅವರಷ್ಟೇ ಸರಿಸಮವಾಗಿ ನಟಿಸಿದ್ದಾರೆಂದು ಪ್ರೇಕ್ಷಕರ ಸಾರ್ವಜನಿಕರ ಪತ್ರಕರ್ತರ ಮನ್ನಣೆ ಗಳಿಸಿದ್ದ ಕಲಾಕೇಸರಿ ಉದಯಕುಮಾರ್ ಕಡಿಮೆ ಬಜೆಟ್ ನ ಬಡ ನಿರ್ಮಾಪಕರ ಪಾಲಿಗೆ ಡಾರ್ಲಿಂಗ್ ಆಗಿದ್ದರು. ಕಲ್ಯಾಣಕುಮಾರ್ ಮತ್ತು ರಾಜ‌ಕುಮಾರ್ ಇಬ್ಬರ ಜತೆಗೆ ಒಟ್ಟಿಗೇ ನಟಿಸಿದ್ದ ಏಕಮಾತ್ರ ಚಿತ್ರ “ಭೂದಾನ” ಅದ್ಭುತದ ಯಶಸ್ಸು ಹಣ ಪ್ರಶಸ್ತಿ ತಂದುಕೊಟ್ಟಿತು. ಚಂದವಳ್ಳಿತೋಟ, ಬೆಟ್ಟದಹುಲಿ, ಕಾಸಿದ್ರೆ ಕೈಲಾಸ, ಬಾಲನಾಗಮ್ಮ, ಸಿಡಿಲಮರಿ ಮುಂತಾದ ಅನೇಕ ಚಿತ್ರದ ಪಾತ್ರಗಳು ಚಿರಸ್ಮರಣೀಯ..

ರಾಜ್-ಉದಯ್ ಇಬ್ಬರಲ್ಲಿ ಯಾರ ಅಭಿನಯ ಉತ್ತಮ? ಎಂಬುದನ್ನು ಹಲವಾರು ಬಾರಿ ಪ್ರೇಕ್ಷಕರಿಂದಲೂ ವಿಮರ್ಶಕರಿಂದಲೂ ಆಯ್ಕೆಸಮಿತಿ ತೀರ್ಪುಗಾರರಿಂದಲೂ ನಿರ್ಧರಿಸಲು ಕಷ್ಟವಾಗುತ್ತಿತ್ತು. ಇಂತಹ ಅಪರೂಪದ ಆಶ್ಚರ್ಯದ ಕ್ಲಿಷ್ಟಕರ ಗೊಂದಲ ನಿವಾರಿಸಲು ಅಥವಾ ಸರಿಯಾದ ಪರಿಹಾರ ಕಂಡುಕೊಳ್ಳಲು ಪ್ರಶಸ್ತಿ ಸಮಿತಿಯ ಸದಸ್ಯರಿಗೆ ಇ[ಬಿ]ಕ್ಕಟ್ಟಿನ ಪರಿಸ್ಥಿತಿ ಉಂಟಾದಾಗಲೆಲ್ಲ ಪರಭಾಷಾ ಚಿತ್ರರಂಗದ ತಜ್ಞರ ಸಮಿತಿಯನ್ನು ರಚಿಸಿ ಆ ಮೂಲಕ ಒಂದು ಅಂತಿಮ ನಿರ್ಧಾರ ಕೈಗೊಂಡು ರಾಜ್ಯ ಪ್ರಶಸ್ತಿಯನ್ನು ಪ್ರಕಟಿಸ ಲಾಗುತ್ತಿತ್ತು! ಹೀಗೇ ಮೂರು ಬಾರಿ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿಯನ್ನು ಹಂಚುವ ಸ್ಥಿತಿ ನಿರ್ಮಾಣವಾಗಿದ್ದು ವಿಚಿತ್ರವಾದರೂ ಸತ್ಯ?! ಹಾಗಿತ್ತು ಇವರಿಬ್ಬರ ಪ್ರಚಂಡ ಅಭಿನಯ, ಇದು ಇವತ್ತಿಗೂ ದಂತಕತೆ!

ಇದನ್ನೂ ಓದಿ: ಅಪಾರ ಕೀರ್ತಿಗಳಿಸಿ ಮೆರೆದ ಚಂದನವನದ ಪ್ರಪ್ರಥಮ ಲಂಬೂ ಹೀರೋ ಸುದರ್ಶನ್… ಇವರು ಯಾರು ಗೊತ್ತಾ?

ಹೀರೋಗಳಿಗೇ ಸಿಂಹಸ್ವಪ್ನ. ಯಾವ ವಿಲನ್ ಪಾತ್ರವನ್ನಾದರೂ ಸರಿ, ಹೀರೋಗಿಂತ ಹೆಚ್ಚಿನ ಮಟ್ಟಕ್ಕೆ ನಟಿಸುವ ಕಲಾಪ್ರತಿಭೆ ಇವರಲ್ಲಿತ್ತು! ಕಂಚು ಕಂಠದ ಬಾಡಿಲ್ಯಾಂಗ್ವೇಜ್, ಡೈಲಾಗ್‌ ಡೆಲಿವರಿ, ಸ್ವಾಭಿಮಾನದ ನಡೆನುಡಿಗಳಿಂದ ಕೆಲವು ಹೀರೋಗಳಿಗೆ ಸಿಂಹಸ್ವಪ್ನವಾಗಿದ್ದರು.  ಉದಯಕುಮಾರ್ ಕಂಡರಾಗದ ಕೆಲವು ಗುಂಪೊಂದು ಇವರಲ್ಲಿದ್ದ (ಅವ)ಗುಣಗಳನ್ನು ತಪ್ಪಾಗಿ ಬಿಂಬಿಸಿ ದುರಹಂಕಾರಿ ಪಟ್ಟಕಟ್ಟಿ ಅಪಪ್ರಚಾರ ಮಾಡಿತು? ತತ್ಪರಿಣಾಮ ಇವರಿಗೆ ಫಿಕ್ಸ್ ಆಗಿದ್ದ ಅನೇಕ ಹೀರೊ ಪಾತ್ರಗಳು ಕೈತಪ್ಪಿತು? ಕನ್ನಡ ತೆಲುಗು ತಮಿಳು ಹಿಂದಿಯ ಒಟ್ಟು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಚತುರ್ಭಾಷ ಚಾಂಪಿಯನ್!

ಅವರ ಬದುಕಿನಲ್ಲಿ ಅದೊಂದು ನಂಬಲಸಾಧ್ಯ ಘಟನೆ ನಡೆದು ಹೋಗಿತ್ತು.  ಕಠಾರಿವೀರ ಫಿಲಂ ಶೂಟಿಂಗ್ ಸಂದರ್ಭದ ಕತ್ತಿವರಸೆ ಸ್ಟಂಟ್‌ ವೇಳೆ ಅಕಸ್ಮಾತ್ ರಾಜ್ ಕಣ್ಣಿಗೆ ಗಾಯವಾಯ್ತು? ಕೂದಲೆಳೆ ಅಂತರದಲ್ಲಿ ರಾಜ್ ಎಡಗಣ್ಣು ಎಗರಿ ಹೋಗದೆ ಉಳಿದು ಕೊಂಡಿತು! ಇದನ್ನೇ ಕಾಯುತ್ತಿದ್ದ ಉದಯ್(ಹಿತ) ಶತ್ರುಗಳು ಉಪ್ಪುಖಾರ ಬೆರೆಸಿ ಆಕಸ್ಮಿಕವಲ್ಲ ಉದ್ದೇಶಿತ ಎಂಬ ಹಣೆಪಟ್ಟಿ ಕಟ್ಟುವ ಮೂಲಕ ಉಗ್ರ ಸ್ವರೂಪದ ಸುದ್ದಿ ಹಬ್ಬಿಸಲು ಕಾರಣರಾದರು? ಈ ಒಂದು ಕ್ಷುಲ್ಲಕ ಕಾರಣದಿಂದಾಗಿ ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ಮೊಟ್ಟಮೊದಲ ಬಾರಿಗೆ “ಪ್ರೇಕ್ಷಕ ವರ್ಗದಲ್ಲಿ ಗುಂಪುಗಾರಿಕೆ” ಹುಟ್ಟಿಕೊಂಡು ಚಂದನವನ ಚರಿತ್ರೆಯ ದುರಂತ ಪುಟಗಳಾದವು! ಇದು ರಾಜ್ಯಾದ್ಯಂತ ಗಂಭೀರ ಚರ್ಚೆಗೆ ಗ್ರಾಸವಾಯ್ತು! ಇದರ ತೀವ್ರತೆ ಎಷ್ಟಿತ್ತೆಂದರೆ ಹಲವು ವರ್ಷಕಾಲ ಅಭಿಮಾನಿಗಳ ನಿದ್ದೆಗೆಡಿಸಿತ್ತು! ಕಾಲಕಳೆದಂತೆ ಎಲ್ಲವೂ ಸರಿಹೋಯ್ತು.

ಇದನ್ನೂ ಓದಿ: ಎರಡನೇ ಹೀರೋ ಪಟ್ಟವನ್ನು ಅಲಂಕರಿಸಿ ಚಂದನವನದಲ್ಲಿ ಮಿಂಚಿ ಮರೆಯಾದ ನಟ ರಾಜಾಶಂಕರ್… !

5.3.1933 ರಂದು ಧರ್ಮಪುರಿಯ  ಪಾಲಕಾಡ್‌ನಲ್ಲಿ ಜನಿಸಿದ ಬೊಮ್ಮಸಂದ್ರ ಶ್ರೀನಿವಾಸಯ್ಯ ಮತ್ತು ಶಾರದಮ್ಮನ ಪುತ್ರ (ಸೂರ್ಯನಾರಾಯಣಮೂರ್ತಿ) ಉದಯ ಕುಮಾರ್‌ 26.12.1985ರಂದು ಬೆಂಗಳೂರಲ್ಲಿ ನಿಧನರಾದರು. ಆದರೆ ಇವತ್ತಿಗೂ ಕನ್ನಡಿಗರ ತನು ಮನ ಮನೆಗಳಲ್ಲಿ ಶಾಶ್ವತವಾಗಿ ನೆಲೆಗೊಂಡಿದ್ದಾರೆ. ದೈವಾಧೀನರಾದ ದಿನದಂದು ಡಾ.ರಾಜ್ ‌ಮೊದಲ್ಗೊಂಡು ಪ್ರತಿಯೊಬ್ಬ ಕಲಾವಿದರ ಜತೆಗೇ ಕೋಟಿಕೋಟಿ ಅಭಿಮಾನಿಗಳು ಸಹ ಕಂಬನಿ ಮಿಡಿದು ಮಮ್ಮಲ ಮರುಗಿದರು. ನಟಸಾಮ್ರಾಟನ ಮಕ್ಕಳಾದ ವಿಕ್ರಂ, ಶಾಮಲತಾ, ವಿಶ್ವವಿಜೇತ ಮೂವರೂ ಕೆಲಕಾಲ ಹಲವಾರು ಚಿತ್ರಗಳಲ್ಲಿ ಪೋಷಕ, ವಿಲನ್ ಪಾತ್ರದಲ್ಲಿ ನಟಿಸಿದರು. ವಿಶ್ವವಿಜೇತ್ ಮಾತ್ರ 1990ರಲ್ಲಿ ಕಿಲಾಡಿತಾತ ನಿರ್ಮಿಸಿ-ನಿರ್ದೇಶಿಸಿದರು. ತದನಂತರ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದರು. ಆದರೆ ಇದ್ದಕ್ಕಿದ್ದಂತೆ ವಿಶ್ವವಿಜೇತ ಮತ್ತು ವಿಕ್ರಂ ಇಬ್ಬರೂ ಚಂದನವನ ಚಿತ್ರರಂಗದಿಂದ ಹಿಂದೆ ಸರಿದು ದೂರ ಉಳಿದಿದ್ದಾರೆ….?!

ಉದಯಕುಮಾರ್ ನಟಿಸಿದ ಚಿತ್ರಗಳು ಹೀಗಿವೆ.. ಭಾಗ್ಯೋದಯ 1956, ದೈವಸಂಕಲ್ಪ, ಪಂಚರತ್ನ, ವರದಕ್ಷಿಣೆ, ಬೆಟ್ಟದಕಳ್ಳ, ರತ್ನಗಿರಿರಹಸ್ಯ, ಪ್ರೇಮದಪುತ್ರಿ, ಭಕ್ತಪ್ರಹ್ಲಾದ, ಮನೆತುಂಬಿದಹೆಣ್ಣು, ಸ್ಕೂಲ್‌ಮಾಸ್ಟರ್, ಮಹಿಷಾಸುರಮರ್ಧಿನಿ, ದಶಾವತಾರ ರಣಧೀರಕಂಠೀರವ, ಭಕ್ತಕನಕದಾಸ, ಶಿವಲಿಂಗಸಾಕ್ಷಿ, ವಿಜಯನಗರದವೀರಪುತ್ರ, ರಾಜಾಸತ್ಯವ್ರತ, ರತ್ನಮಂಜರಿ, ವಿಧಿವಿಲಾಸ, ತಾಯಿಕರುಳು, ಭೂದಾನ, ನಂದಾದೀಪ, ಸಂತತುಕಾರಾಂ, ಅಮರಶಿಲ್ಪಿಜಕಣಾಚಾರಿ, ಚಂದ್ರಕುಮಾರ, ರಾಮಾಂಜನೇಯಯುದ್ಧ,ವೀರಕೇಸರಿ, ಬೇವುಬೆಲ್ಲ, ಮಲ್ಲಿಮದುವೆ, ಮನಮೆಚ್ಚಿದ ಮಡದಿ, ಚಂದವಳ್ಳಿಯ ತೋಟ, ಕಲಾವತಿ, ಮಿಸ್‌ ಲೀಲಾವತಿ, ವೀರವಿಕ್ರಮ, ಚಂದ್ರಹಾಸ, ಕವಲೆರಡು ಕುಲವೊಂದು,  ಇದೇ ಮಹಾಸುದಿನ, ಮದುವೆಮಾಡಿನೋಡು,

ಇದನ್ನೂ ಓದಿ: ಬಂಗ್ಲೆ ಶಾಮಾರಾವ್ ದ್ವಾರಕಾನಾಥ ಚಂದನವನದ ‘ದ್ವಾರಕೀಶ್’ ಆಗಿ ಮೆರೆದಿದ್ದು ಹೇಗೆ? ಅವರು ನಟಿಸಿದ ಚಿತ್ರಗಳೆಷ್ಟು?

ಬೆಟ್ಟದಹುಲಿ, ಸತಿಸಾವಿತ್ರಿ, ಸತ್ಯಹರಿಶ್ಚಂದ್ರ, ಪತಿವ್ರತ, ವಾತ್ಸಲ್ಯ, ದೇವಮಾನವ, ಮಧುಮಾಲತಿ, ಸಂಧ್ಯಾರಾಗ, ಕಠಾರಿವೀರ, ಮೋಹಿನಿಭಸ್ಮಾಸುರ, ಬದುಕುವದಾರಿ,  ಮನೆಕಟ್ಟಿನೋಡು, ಮಂತ್ರಾಲಯಮಹಾತ್ಮೆ, ಬಾಲನಾಗಮ್ಮ, ರಾಜದುರ್ಗದರಹಸ್ಯ, ಪದವೀಧರ, ಇಮ್ಮಡಿಪುಲಿಕೇಶಿ, ಪಾರ್ವತಿಕಲ್ಯಾಣ, ಬಂಗಾರದಹೂವು, ಸತಿಸುಕನ್ಯ, ರಾಜಶೇಖರ, ಚಕ್ರತೀರ್ಥ, ಹೂವುಮುಳ್ಳು,ಅರುಣೋದಯ, ಸಿಂಹಸ್ವಪ್ನ,  ಅಣ್ಣತಮ್ಮ, ಧೂಮಕೇತು, ಮೈಸೂರುಟಾಂಗ, ನಮ್ಮಊರು, ಜೇಡರಬಲೆ, ನಾನೇಭಾಗ್ಯವತಿ, ಮಹಾಸತಿ ಅರುಂಧತಿ, ಚದುರಂಗ, ಭಲೇಬಸವ, ಮದುವೆ ಮದುವೆ ಮದುವೆ, ಅದೇ ಹೃದಯ ಅದೇ ಮಮತೆ, ಮಧುರ ಮಿಲನ, ಕಲ್ಪವೃಕ್ಷ, ಮಾತೃಭೂಮಿ, ಮುಕುಂದಚಂದ್ರ, ಶಿವಭಕ್ತ, ಒಡಹುಟ್ಟಿದವರು, ಮಕ್ಕಳೇ ಮನೆಗೆ ಮಾಣಿಕ್ಯ, ಭಾಗೀರಥಿ, ಠಕ್ಕಬಿಟ್ರೆಸಿಕ್ಕ, ಕಳ್ಳರಕಳ್ಳ, ಹಸಿರು ತೋರಣ, ಆರು ಮೂರು ಒಂಭತ್ತು, ಮೃತ್ಯು ಪಂಜರದಲ್ಲಿ ಗೂಢಚಾರಿ555, ಮುಕ್ತಿ, ಸೇಡಿಗೆಸೇಡು, ರಂಗಮಹಲ್‌ ರಹಸ್ಯ, ಪ್ರತೀಕಾರ, ಮೊದಲರಾತ್ರಿ, ಸಿಡಿಲಮರಿ, ಮಹಡಿಮನೆ, ಜಾತಕರತ್ನಗುಂಡಾಜೋಯಿಸ, ಭಲೇಭಾಸ್ಕರ

ಸಂಶಯಫಲ, ಕಾಸಿದ್ರೆಕೈಲಾಸ, ಭಲೇರಾಣಿ, ಪೂರ್ಣಿಮ, ಸಿಗ್ನಲ್‌ಮನ್‌ಸಿದ್ದಪ್ಪ, ಕುಳ್ಳ ಏಜೆಂಟ್000, ನಾರಿಮುನಿದರೆಮಾರಿ, ಬೆಟ್ಟದಭೈರವ, ಮಣ್ಣಿನಮಗಳು, ಕೌಬಾಯ್‌ ಕುಳ್ಳ, ಭಾರತದರತ್ನ, ತ್ರಿವೇಣಿ, ಪ್ರೇಮಪಾಶ, ಚಾಮುಂಡೇಶ್ವರಿಪೂಜಾಮಹಿಮೆ, ನಾನೂ ಬಾಳಬೇಕು, ಸರ್ಪಕಾವಲು, ಆಶೀರ್ವಾದ, ಬಿಳೀಹೆಂಡ್ತಿ, ಜಾಗೃತಿ, ಮಂತ್ರಶಕ್ತಿ, ಸೂತ್ರದ ಬೊಂಬೆ, ರಾಜನರ್ತಕಿಯ ರಹಸ್ಯ, ಬೆಂಗಳೂರುಭೂತ, ಬನಶಂಕರಿ, ಶನಿಪ್ರಭಾವ, ತವರುಮನೆ, ಶ್ರೀರೇಣುಕಾದೇವಿ ಮಹಾತ್ಮೆ, ಶ್ರೀಮಂತನಮಗಳು, ಮಾತು ತಪ್ಪದಮಗ, ಮಧುರಸಂಗಮ, ಎಂಥಾ ಲೋಕವಯ್ಯ, ಗಂಡುಭೇರುಂಡ, ಭಲೇಹುಡುಗ, ದೇವದಾಸಿ, ಸಿಂಹದಮರಿಸೈನ್ಯ, ಬೆಂಕಿಚೆಂಡು, ಪುಟಾಣಿ ಏಜೆಂಟ್1,2,3, ಸೀತಾರಾಮು, ಕಾಳಿಂಗ, ವಜ್ರದಜಲಪಾತ, ಮೂಗನಸೇಡು, ಕುಲಪುತ್ರ,   ಘರ್ಜನೆ, ಮರಿಯಾ ಮೈ ಡಾರ್ಲಿಂಗ್, ತಾಯಿಯ ಮಡಿಲಲ್ಲಿ , ಸಾಹಸಸಿಂಹ, ಮಾವ ಸೊಸೆ ಸವಾಲ್, ಕೆಂಪುಹೋರಿ, ರಾಜಮಹಾರಾಜ, ದೇವರತೀರ್ಪು, ಭಯಂಕರ ಭಸ್ಮಾಸುರ, ಕಲ್ಲುವೀಣೆ ನುಡಿಯಿತು, ನೋಡಿ ಸ್ವಾಮಿ ನಾವಿರೋದು ಹೀಗೆ, ಪಿತಾಮಹ, ಮರ್ಯಾದೆ ಮಹಲ್, ಯಮನ ದರ್ಬಾರ್, ವಿಷಕನ್ಯೆ, ಹಾವು ಏಣಿ ಆಟ, ಪೊಲೀಸ್‌ ಪಾಪಣ್ಣ, ಲಕ್ಷ್ಮೀ ಕಟಾಕ್ಷ, ಶ್ರೀನಂಜುಂಡೇಶ್ವರಮಹಿಮೆ.

admin
the authoradmin

6 Comments

  • ನಮ್ಮ ಕಾಲದ ಹೆಮ್ಮೆಯ ನಾಯಕನಟ ಖಳನಟ ಹಾಗೂ ಪೋಷಕನಟ. ಇವರು ಮತ್ತು ರಾಜಕುಮಾರ್ ಹಲವಾರು ಚಿತ್ರಗಳಲ್ಲಿ ಸರಿಸಮನಾದ ಅಭಿನಯ ನೀಡುವ ಮೂಲಕ ಕನ್ನಡ ನಾಡಿನ ಎಲ್ಲ ಸಿನಿಮ ಪ್ರೇಕ್ಷಕರ ತನುಮನ ಗೆದ್ದು ಅವರದೇ ಆದ ಅಭಿಮಾನಿ ಬಳಗವನ್ನೆ ಹೊಂದಿದ್ದರು ಎಂಬುದು ಈಗ ಇತಿಹಾಸ. ಹಳೇ ಕಾಲದ ಕನ್ನಡ ಚಿತ್ರರಂಗದ ಬಗ್ಗೆ ಬಹಳ ಅಚ್ಚುಕಟ್ಟಾಗಿ ಲೇಖನ ಬರೆಯುವ ಕುಮಾರಕವಿಯವರ ಜ್ಞಾನಕ್ಕೆ ನಮೋ ನಮಃ

  • ಉದಯಕುಮಾರ್ ಬಗ್ಗೆ ಬಹಳ ಮಾಹಿತಿಯ ಒಂದು ವಿಶೇಷ ಲೇಖನ ಪ್ರಕಟವಾದ ಬಗ್ಗೆ ನಮಗೆ ಬಹಳ ಖುಶಿಯಾಗಿದೆ. ಧನ್ಯವಾದ ಸರ್

  • ತುಂಬ ಚೆನ್ನಾಗಿ ಬರೆದಿರುವ ಲೇಖನ ಉದಯಕುಮಾರ್ ರವರ ಮಾಹಿತಿಯ ವಿವರ ನನಗೆ ಗೊತ್ತಿರಲಿಲ್ಲ ಅದಕ್ಕಾಗಿ ನಿಮಗೆಲ್ಲ ಅನೇಕಾನೇಕ ಧನ್ಯವಾದ

  • ತುಂಬ ಚೆನ್ನಾಗಿ ಬರೆದಿರುವ ಲೇಖನ ಉದಯಕುಮಾರ್ ರವರ ಮಾಹಿತಿಯ ವಿವರ ನನಗೆ ಗೊತ್ತಿರಲಿಲ್ಲ ಅದಕ್ಕಾಗಿ ನಿಮಗೆಲ್ಲ ಅನೇಕಾನೇಕ ಧನ್ಯವಾದ, ಲೇಖಕರಿಗೂ ಅಭಿನಂದನೆ

Leave a Reply