LatestMysore

ಕುಡುಮ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಟ್ರಸ್ಟ್ ನಿಂದ ಪಾದಯಾತ್ರೆ.. ನೀವೂ ಬನ್ನಿ!

ಮೈಸೂರು: ಶಿವರಾತ್ರಿ ಪ್ರಯುಕ್ತ ಕುಡುಮ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಟ್ರಸ್ಟ್ ಮೈಸೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ಸಂಬಂಧ ಪೋಸ್ಟರ್ ಗಳನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಬಿಡುಗಡೆ ಮಾಡಿದ್ದು, ಪಾದಯಾತ್ರೆಗೆ ಅನುಮತಿ ನೀಡಿದ್ದಾರೆ.

ಪಾದಯಾತ್ರೆಯು ಮೈಸೂರಿನಿಂದ ಫೆಬ್ರವರಿ 6ರಂದು ಸಂಜೆ 7ಗಂಟೆಗೆ ಪೂಜೆ ನೆರವೇರಿಸಿದ ನಂತರ 9ಗಂಟೆಗೆ ಹೊರಡಲಿದ್ದು, ಫೆಬ್ರವರಿ 15ರಂದು ಧರ್ಮಸ್ಥಳ ತಲುಪಲಿದೆ. ಈ ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ಹೆಸರುಗಳನ್ನು ಮೊದಲೇ ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ. ಪಾದಯಾತ್ರೆಯಲ್ಲಿ ಮಹಿಳೆಯರೂ ಭಾಗವಹಿಸಬಹುದಾಗಿದೆ. ಯಾತ್ರಾರ್ಥಿಗಳಿಗೆ ಧವಸ. ದಾನ್ಯ. ಧನ ಸಹಾಯ ಮಾಡಲು ಬಯಸುವವರಿದ್ದರೆ ಅದಕ್ಕೆ ಅವಕಾಶವಿದೆ.

ಈ ಸಂಬಂಧ ಹೆಚ್ಚಿನ ಮಾಹಿತಿಗೆ ಕುಡುಮ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಟ್ರಸ್ಟ್ನ ಪದಾಧಿಕಾರಿಗಳ 𝟵𝟭𝟰𝟭𝟱𝟮𝟯𝟯𝟵𝟳. 𝟵𝟵𝟬𝟮𝟮𝟯𝟵𝟳𝟲𝟲. 𝟴𝟬𝟱𝟬𝟴𝟰𝟭𝟯𝟰𝟱. 𝟵𝟵𝟴𝟲581021. 9945319850 ಮೊಬೈಲ್ ನಂಬರ್ ನ್ನು ಸಂಪರ್ಕಿಸಬಹುದು.

ಇನ್ನು ಪೋಸ್ಟರ್ ಬಿಡುಗಡೆ ವೇಳೆ ಟ್ರಸ್ಟ್ ಪದಾಧಿಕಾರಿಗಳಾದ. ಸಲಹೆಗಾರರಾದ ಜಿ.ಮಹದೇವ. ಅಧ್ಯಕ್ಷ ಎಂ.ಕೆ.ಮಹದೇವ ಖಜಾಂಚಿ ಮಾದೇಶ್. ಹಿರಿಯ ಉಪಾಧ್ಯಕ್ಷ ಹಾಸನ ಸೋಮು, ಉಪಾಧ್ಯಕ್ಷ ಚಿನ್ನಸ್ವಾಮಿ, ನಿರ್ದೇಶಕರಾದ ಗಣೇಶ್. ವಿಶಾಲ್, ಹೆಚ್. ಡಿ. ಕೋಟೆ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು

admin
the authoradmin

ನಿಮ್ಮದೊಂದು ಉತ್ತರ

Translate to any language you want