ಹನುಮಜ್ಜಯಂತಿ ಉತ್ಸವ ಭಜನೋತ್ಸವ
ಲೋಕದಲ್ಲಿ ನೆಲೆಸೆ ಶಾಂತಿ ನೆಮ್ಮದಿಭಾವ |ಪ|
ಅಂಜನಾಸುತ ವಾಯುಪುತ್ರ ಆಂಜನೇಯ
ನೀನಿಲ್ಲದಾ ಲೋಕವದು ಎಲ್ಲಿಹುದಯ್ಯ..
ವರ್ಷಕ್ಕೊಮ್ಮೆ ಬರುವ ಆರಾಧನೋತ್ಸವ
ಹರ್ಷಪೂರ್ತಿ ನೀಡುವ ವಾರ್ಷಿಕೋತ್ಸವ

ಅಪರೂಪ ಅನುರೂಪ ವಾನರಜನುಮ
ನಿನ್ನ ರೋಮರೋಮವೂ ರಾಮನಾಮ
ನಿನ್ನ ಬಾಲ್ಯಯೌವ್ವನವೃದ್ಧಾಪ್ಯ ಶೌರ್ಯ
ಅಮೋಘ ಅಪೂರ್ವಾದ್ಭುತ ಆಶ್ಚರ್ಯ
ನಿನ್ನನ್ನ ಸ್ಮರಿಸಿ ಪೂಜಿಸದಾ ದಿನಗಳಿಲ್ಲ
ನಿನಗೆ ಮಣಿದು ವಂದಿಸದ ಮನುಜರಿಲ್ಲ
ಧರ್ಮಾತೀತ ದೇಶಾತೀತ ನಿನ್ನ ಮಹಿಮೆ
ಪ್ರಶ್ನಾತೀತ ಜಾತ್ಯಾತೀತ ನಿನ್ನಾ ಹಿರಿಮೆ

ಶಕ್ತಿಭಕ್ತಿಸಹಿತ ಪ್ರಾರ್ಥನೆ ವಿಶ್ವದಾದ್ಯಂತ
ಭೇದಭಾವರಹಿತ ಭಜನೆ ಗಗನಾದ್ಯಂತ
ವಿಜಯದುಂದುಭಿ ಎಲ್ಲೆಡೆ ಮೊಳಗುತಿದೆ
ಸಾಗರದಾಳಕು ಶಿಖರದೆತ್ತರಕು ತಲುಪಿದೆ
ಸಕಲಲೋಕ ಸಾರ್ವಕಾಲಿಕ ನಿತ್ಯಪೂಜಿತ
ವರಪ್ರಧಾನ ಕೃಪಾಕರುಣಾಳು ಸತ್ಯಶ್ರೇಷ್ಠತ
ಆಪ್ಯಾಯಮಾನ ಆಧ್ಯಾತ್ಮ ಅನಂತಾನಂತ
ಆಚಂದ್ರಾರ್ಕ ಚಿರಂಜೀವನೀ ಅಂಜನಾಸುತ

ನೆನೆದಾಗ ನಿನ್ನನ್ನು ಹನುಮಾ..ಹನುಮ
ಪಾವನ ನಮ್ಮಯ ಜನುಮಾ..ಜನುಮ
ಭಜಿಸಲು ನಿನ್ನಯ ನಾಮ ಸಹಸ್ರನಾಮ
ಭಯಭೀತಿ ನಿರ್ನಾಮ, ಶತ್ರುವುನಿರ್ನಾಮ
ಪರಮಪಾವನ ಪವನತನಯ ಆಂಜನೇಯ
ನಾಡಿನೆಲ್ಲೆಡೆ ಸ್ಥಾಪಿಸಲಿ ಶಾಂತಿನೆಮ್ಮದಿಭಾವ
ಹನುಮಜ್ಜಯಂತಿ ಉತ್ಸವಾ ಭಜನೋತ್ಸವ
ಲೋಕಾದಲ್ಲಿ ನೆಲೆಸೆ ಶಾಂತಿ ನೆಮ್ಮದಿಭಾವ |ಪ|










ಅಮೋಘ ಭಕ್ತಿಗೀತೆ, ವಿದ್ಯಾ-ಬುದ್ಧಿವಂತ (ಅವಿದ್ಯವಂತರೂ ಸಹ) ಎಲ್ಲರೂ ಇಷಟಪಡುವಂತಿದೆ. ಬರೆದ ಕುಮಾರಕವಿಯವರಿಗೆ ಧನ್ಯವಾದ
ಭಕ್ತಿಪೂರ್ವಕ ಧನ್ಯವಾದ ಲವ ಸರ್
ಪ್ರಪಂಚದಾದ್ಯಂತ ನಾಸ್ತಿಕ ಆಸ್ತಿಕ ವಿಜ್ಞಾನಿ ವ್ಯಾಪಾರಿ ಗೃಹಿಣಿ ಮಕ್ಕಳು ಮುದುಕರು ಮೊದಲ್ಗೊಂಡು ಎಲ್ಲರೂ ಭಕ್ತಿಪೂರ್ವಕವಾಗಿ ಗಾಯನರೂಪದಲ್ಲಿ ಭಜನೆ ಮಾಡುವ ಮೂಲಕ ಸಾರ್ಥಕ ಭಾವ ಪಡೆಯುವ ರೀತಿಯಲ್ಲಿ ಬರೆದ ಲೇಖಕ ನಟರಾಜ ಕವಿಯವರಿಗೆ ಭಕ್ತಿಪೂರ್ವಕ ಧನ್ಯವಾದ. ಪ್ರಕಟಿಸಿದ ಜನಮನ ಕನ್ನಡ ಪತ್ರಿಕೆಯ ಸಂಪಾದಕರಿಗೆ ಭಕ್ತಿಪೂರ್ವಕ ನಮಸ್ಕಾರ
ಹನುಮಜ್ಜಯಂತಿ ಆರಾಧನೋತ್ಸವ ಪ್ರಯುಕ್ತ ನಟರಾಜ ರವರು ರಚಿಸಿದ
ಭಜನೆ, ಸತ್ಯವಾಗಲೂ ಆಧ್ಯಾತ್ಮಿಕ ಭಾವನೆ ಹೆಚ್ಚಿಸುವ ಶೈಲಿಯಿಂದ ಕೂಡಿದೆ, ಧನ್ಯವಾದ 82 ವರ್ಷದ ನನ್ನಂಥವರಿಗೆ ಸೂಕ್ತವಾದ ಭಕ್ತಿಗೀತೆ.
ನಮ್ಮಂಥ ನಿವೃತ್ತ ಅಧಿಕಾರಿಗಳಿಗೆ ಮಾತ್ರವಲ್ಲ ನಮ್ಮ ಮಕ್ಕಳಾದ ಯುವಕರಿಗೂ ಭಕ್ತಿಭಾವ ತುಂಬುವಂತಿದೆ ಹನುಮಜ್ಜಯಂತಿ ಭಜನೆ, ಧನ್ಯವಾದ ನಟರಾಜಣ್ಣ ಅವರಿಗೆ
ನಮ್ಮನೆ ದೇವರು ಹನುಮಂತನಗರ (ಭಾರತಿನಗರ ಮಂಡ್ಯ ಹತ್ತಿರದ) ಆಂಜನೇಯಸ್ವಾಮಿ, ಈ ಹಾಡು ಭಜನೆ ಮಾಡುವಂತಿದೆ. ನಮಸ್ಕಾರ ಸರ್
Really good spiritual song about HANUMAN THE GREAT GOD. Thanks sir 🙏
ಆಂಜನೇಯ ಪವನತನಯ ಸತ್ಯವಾಗಿಯೇ ಬಹಳ ಭಕ್ತಿ ಭಾವ ತರಿಸುತ್ತದೆ ಧನ್ಯವಾದ
ಅಕ್ಕಮಹಾದೇವಿ ಉದ್ಯಾನವನ ವಾಕಿಂಗ್ ಗೆಳೆಯರ ಗುಂಪಿನ ಪರವಾಗಿ ಈ ಹನುಮ ಜಯಂತಿ ಪ್ರಯುಕ್ತ ದೇವರನಾಮ ಆಂಜನೇಯ ಪವನತನಯ….. ಬಹಳ ಸೊಗಸಾದ ಭಕ್ತಿಪೂರ್ವಕ ಸಾಲುಗಳಲ್ಲಿ ಬರೆದು ಕೃತಾರ್ಥ ಆಗಿದ್ದಾರೆ ನಮ್ಮ ನಟರಾಜಕವಿ ಸರ್, ಇದನ್ನು ಬಹಳ ಸುಂದರವಾಗಿ ಮತ್ತು ಸಮರ್ಥ ವಾಗಿ ಪ್ರಕಟ ಪಡಿಸಿರುವ ನಮ್ಮ ನೆಚ್ಚಿನ ಜನಮನ ಕನ್ನಡ ಪತ್ರಿಕೆಯ ಎಲ್ಲರಿಗೂ ನಮ್ಮ ಒಮ್ಮತದ ಧನ್ಯವಾದಗಳು, ಕೆಂಪೇಗೌಡ, ಶ್ರೀನಿವಾಸಶಾಸ್ತ್ರಿ, ರಾಜಣ್ಣ, ಶಿವಕುಮಾರ ಹಾಗೂ 18 ಮಿತ್ರರು
Excellent exciting devotional song by KUMARA KAVI NATARAJA sir 👏
Excellent exciting devotional song by KUMARA KAVI NATARAJA sir
Excellent exciting devotional song by KUMARA KAVI NATARAJA sir …..
ಆಂಜನೇಯ ಹನುಮಾನ್ ದೇವರ ಭಕ್ತಿಗೀತೆ ಅಮೋಘ ಮತ್ತು ಮನಸ್ಸಿಗೆ ಭಕ್ತಿಭಾವನೆ ತರಿಸುವಂತೆ ಇರುತ್ತದೆ
ಆಂಜನೇಯ ಹನುಮಾನ್ ದೇವರ ಭಕ್ತಿಗೀತೆ ಅಮೋಘ ಮತ್ತು ಮನಸ್ಸಿಗೆ ಭಕ್ತಿಭಾವನೆ ತರಿಸುವಂತೆ ಇರುತ್ತದೆ, ಅನಂತಾನಂತ ಧನ್ಯವಾದ, ನಮಸ್ಕಾರ ಸರ್
ನಮ್ಮ ಹೆಮ್ಮೆಯ ಕುಟುಂಬದ ಎಲ್ಲರ ಆರಾಧ್ಯ ದೈವ, ಅದರಲ್ಲೂ ನನ್ನ ಮಗನ ಮನ ಮೆಚ್ಚಿನ ದೇವರ ಬಗ್ಗೆ ನಟರಾಜ ರವರ ಭಕ್ತಿಗೀತೆ ಭಾವಗೀತೆ ಭಜನೆ ದಿಟವಾಗಲೂ ಫಸ್ಟ್ ಕ್ಲಾಸ್, ಧನ್ಯವಾದ, ನಮಸ್ಕಾರ,
ನಮ್ಮ ಹೆಮ್ಮೆಯ ಕುಟುಂಬದ ಎಲ್ಲರ ಆರಾಧ್ಯ ದೈವ, ಅದರಲ್ಲೂ ನನ್ನ ಮಗನ ಮನ ಮೆಚ್ಚಿನ ದೇವರ ಬಗ್ಗೆ ನಟರಾಜ ರವರ ಭಕ್ತಿಗೀತೆ ಭಾವಗೀತೆ ಭಜನೆ ದಿಟವಾಗಲೂ ಫಸ್ಟ್ ಕ್ಲಾಸ್ ಧನ್ಯವಾದ ನಮಸ್ಕಾರ ಸ್ವಾಮಿ
ಅಂಜನಾಸುತ ಆಂಜನೇಯ ದೇವರ ಬಗ್ಗೆ ಭಕ್ತಿಪೂರ್ವಕ ಭಜನೆ ನಮ್ಮ ಇಡೀಕುಟುಂಬ ಎಲ್ಲರ ತನು-ಮನ ಸಂತೋಷ ನೆಮ್ಮದಿ ತರಿಸಿತು, ನೂರು ನೂರು ಧನಧನ್ಯವಾದಗಳು ಸ್ವಾಮಿ, ಶಾಂತಕುಮಾರ್ ಆಧುನಿಕ ರೈತ
ಅಂಜನಾಸುತ ಆಂಜನೇಯ ದೇವರ ಬಗ್ಗೆ ಭಕ್ತಿಪೂರ್ವಕ ಭಜನೆ ನಮ್ಮ ಇಡೀಕುಟುಂಬ ಎಲ್ಲರ ತನು-ಮನ ಸಂತೋಷ ನೆಮ್ಮದಿ ತರಿಸಿತು, ನೂರು ನೂರು ಧನಧನ್ಯವಾದಗಳು ಸ್ವಾಮಿ, ಶಾಂತಕುಮಾರ್ ಆಧುನಿಕ ರೈತ, ಮೈಸೂರು
ಆಂಜನೇಯ ಸ್ವಾಮಿ ದೇವರ ಭಜನೆ ನಮಗೆ ಭಕ್ತಿ ಮುಕ್ತಿ ಹಾದಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಿಯಾಗಿದೆ ಧನ್ಯವಾದಗಳು
ಆಂಜನೇಯ ದೇವರ ಕೃಪೆಯ ವರದಾನ ಈ ಭಜನೆ. ಇಂಥ ಭಕ್ತಿ ಗೀತೆ ರಚಿಸಿದ ಕುಮಾರಕವಿಯವರ ಆಆಧ್ಯಾತ್ಮಿಕ ಜ್ಞಾನಕ್ಕೆ ನನ್ನ ಮತ್ತು ನಮ್ಮ ಕುಟುಂಬದವರ ಭಕ್ತಿಪೂರ್ವಕ ನಮಸ್ಕಾರ, ಜನಮನ ಪತ್ರಿಕೆಯ ಎಲ್ಲ ಸೋದರ ಸೋದರಿಯರಿಗೂ ಧನ್ಯವಾದ
ಆಂಜನೇಯ ದೇವರ ಕೃಪೆಯ ವರದಾನ ಈ ಭಜನೆ. ಇಂಥ ಭಕ್ತಿ ಗೀತೆ ರಚಿಸಿದ ಕುಮಾರಕವಿಯವರ ಆಧ್ಯಾತ್ಮಿಕ ಜ್ಞಾನಕ್ಕೆ ನನ್ನ ಮತ್ತು ನಮ್ಮ ಕುಟುಂಬದವರ ಭಕ್ತಿಪೂರ್ವಕ ನಮಸ್ಕಾರ ಜನಮನ ಪತ್ರಿಕೆಯ ಸೋದರ ಸೋದರಿಯರಿಗೂ ನಮ್ಮೆಲ್ಲರ ಧನ್ಯವಾದಗಳು
ಆಂಜನೇಯ ದೇವರ ಕೃಪೆಯ ವರದಾನ ಈ ಭಜನೆ. ಇಂಥ ಭಕ್ತಿ ಗೀತೆ ರಚಿಸಿದ ಕುಮಾರಕವಿ ನಟರಾಜುರವರ ಆಧ್ಯಾತ್ಮಿಕ ಜ್ಞಾನಕ್ಕೆ ನಮ್ಮ ಕುಟುಂಬದವರ ಭಕ್ತಿಪೂರ್ವಕ ನಮಸ್ಕಾರ ಜನಮನ ಪತ್ರಿಕೆಯ ಸೋದರ ಸೋದರಿಯರಿಗೂ ನಮ್ಮೆಲ್ಲರ ಧನ್ಯವಾದಗಳು