ArticlesLatest

ಪಿತೃದೇವತೆಗಳನ್ನು ಸಂಪ್ರೀತಿಗೊಳಿಸಿ, ಪಿತೃದೋಷಗಳಿಂದ ಮುಕ್ತಿ ಪಡೆಯುವ ಪಿತೃಪಕ್ಷ… ಏನಿದರ ವಿಶೇಷತೆ?

ಈಗ ಎಲ್ಲೆಡೆ ಪಿತೃಪಕ್ಷದ ಆಚರಣೆ ಕಾಣಿಸುತ್ತಿದೆ.. ಈ ವರ್ಷ(2025) ಸೆಪ್ಟೆಂಬರ್ 7 ರಿಂದ ಆರಂಭವಾಗಿರುವ ಆಚರಣೆ ಸೆಪ್ಟೆಂಬರ್ 21 ರವರೆಗೆ ನಡೆಯುತ್ತಿದೆ. ಈ ಹದಿನೈದು ದಿನಗಳ ಕಾಲಾವಧಿಯಲ್ಲಿ ಪಿತೃದೇವತೆಗಳನ್ನು ಸಂಪ್ರೀತಿಗೊಳಿಸಿ, ಪಿತೃದೋಷಗಳಿಂದ ಮುಕ್ತಿಯನ್ನು ಪಡೆಯುವುದು ಅಲ್ಲಲ್ಲಿ ಕಂಡು ಬರುತ್ತದೆ.  ಹೀಗಾಗಿ ಪಿತೃಪಕ್ಷದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ನೀಡಿದ್ದಾರೆ…

ಪಿತೃಪಕ್ಷ ಎಂದರೇನು ಪ್ರಶ್ನೆಗೆ ಉತ್ತರವನ್ನು ನೋಡುವುದಾದರೆ… ಅಂಡ ಪಿಂಡ ಬ್ರಹ್ಮಾಂಡದ ಅಖಿಲಾಂಡ ಕೋಟಿ ಜೀವರಾಶಿ ಪಾಲಕನ ಆಣತಿಯಂತೆ ಸೂರ್ಯ-ಚಂದ್ರ ಇರುವ ತನಕ ಜನನ ಮರಣ ಕ್ರಿಯೆ-ಪ್ರಕ್ರಿಯೆ ಇದ್ದೇ ಇರುತ್ತದೆ. ತ್ರಿಮೂರ್ತಿ ಆಜ್ಞೆಯಂತೆ “ಸೃಷ್ಟಿ-ಸ್ಥಿತಿ-ಲಯ”ನಿಯಂತ್ರಣ ನಿಯತಕಾಲಿಕ ಅಷ್ಟದಿಕ್ಪಾಲಕರ ಕರ್ತವ್ಯ ಕಡ್ಡಾಯವಾಗಿ ಘಟಿಸುತ್ತಿರಬೇಕು.ಆದ್ದರಿಂದ “ಪುನರಪಿ ಜನನಂ, ಪುನರಪಿ ಮರಣಂ” ಎಂಬ ಜೀವನಚಕ್ರ ಸಾಗಲೇಬೇಕು.

ಹೊಸನೀರು ಬಂದಾಗ ಹಳೇನೀರು ಹೋದಂತೆ, ಹೊಸಎಲೆ ಚಿಗುರುವಾಗ ಹಣ್ಣೆಲೆ ಉದುರಲೇಬೇಕು, ನವಜಾತ ಶಿಶು ಹುಟ್ಟುತ್ತಿರುವಾಗ ಮುದಿಯಾದ ಹಿರೀತಲೆ ಸಾಯುತ್ತಿರಬೇಕು ಎಂಬುದೇ ನಿಸರ್ಗದ ನಿಯಮ ಅಥವ ಜವರಾಯನ ಕಟ್ಟಳೆ. ಇದಕ್ಕೆ ಹೊರತಾಗಿ ಬದುಕುವರನ್ನು ಚಿರಂಜೀವಿ ಅಥವ ಅಜರಾಮರ ಎನ್ನುತ್ತಾರೆ. ಸಾವನ್ನು ಗೆದ್ದವರು, ಸಾವತ್ರರು ಅಥವಾ ಮೃತ್ಯುಂಜಯರು ಎಂದೂ ಹೇಳಬಹುದು.

ಇದನ್ನೂ ಓದಿ: ಮರ್ಕಟದಂತಹ ಮನಸ್ಸನ್ನು ಏಕಾಗ್ರತೆಯ ಗೂಟಕ್ಕೆ ಕಟ್ಟಿ ಹಾಕುವುದು ಹೇಗೆ..?

ನಮ್ಮ ಮನುಷ್ಯನ ಜೀವನ ಏನಿದೆ? ಬದುಕಿದ್ದಾಗ ಅಧಿಕಾರ, ಆಸ್ತಿ, ಅಂತಸ್ತು, ಜಾತಿ, ಧರ್ಮ, ಮೇಲು ಕೀಳು ಎಂದೆಲ್ಲ ಹೊಡೆದಾಡುವ ನಾವು ಹುಟ್ಟಿದಾಗಲೂ ಸೂತಕ ಸತ್ತಾಗಲೂ ಸೂತಕವೇ..  ಸೂತಕ ಆಚರಿಸುವ ಕಡ್ಡಾಯ ಪ್ರಾಕಾರ ಪದ್ಧತಿಯು ಭಾರತೀಯ ಹಿಂದೂಗಳಿಗೆ ತಲೆತಲಾಂತರದಿಂದ ರಕ್ತಗತವಾಗಿ ಬೇರೂರಿದೆ. ಹುಟ್ಟಿದ ನಂತರ ಸಾಯಲೇಬೇಕು. ಸತ್ತನಂತರ ಶವಸಂಸ್ಕಾರ ಹಾಲು ತುಪ್ಪ ತಿಥಿ ವೈಕುಂಠ ಸಮಾರಾಧನೆ ಕೈಲಾಸ ಗಣಾರಾಧನೆ ತಿಂಗಳ ತಿಥಿ ವಾರ್ಷಿಕ ತಿಥಿ ಇವೆಲ್ಲವೂ ಮುಗಿಯುವುದು ಮೊದಲನೇ ಘಟ್ಟ ಮುಕ್ತಾಯ ಆದಂತೆ? ಮೋಕ್ಷ ಸಿಕ್ಕಂತೆ? ಮುಕ್ತಿ ದೊರಕಿದಂತೆ?

ಆಚಂದ್ರಾರ್ಕ ನಮ್ಮ ಮುಂದಿನ ಪೀಳಿಗೆಯವರು ತಪ್ಪದೇ ಮುಂದುವರೆಸುವ ಎರಡನೆ ಘಟ್ಟವೇ “ಪಿತೃಪಕ್ಷ” ಈ ಅಂತಿಮ ಘಟ್ಟಕ್ಕೆ ಆರಂಭ ಇರುತ್ತದೆ ಹೊರತು ಅಂತ್ಯವೇ ಇರುವುದಿಲ್ಲ. ಆಯಾಯ ಕಾಲಘಟ್ಟ ಭೌಗೋಳಿಕ ಲಕ್ಷಣ ಧರ್ಮ ಜಾತಿ ಮತ ಆಧಾರದ ಮೇಲೆ ಸಸ್ಯಾಹಾರ ಮಾಂಸಾಹಾರ ಆಹಾರವನ್ನು ತಯಾರಿಸಿ ಹೊಸವಸ್ತ್ರದೊಡನೆ ಬಾಳೆಎಲೆ ಮೇಲೆ ಎಡೆಇಟ್ಟು ಪೂಜಿಸಿ ಗಂಗೆಯಲ್ಲಿ ಪಿಂಡದಾನ ಕಾರ್ಯ ಮುಗಿಸಿ ಬಂದ ನಂತರ ಬಂಧುಬಳಗ ನೆಂಟರಿಷ್ಟರು ಮಿತ್ರಕೂಟಕ್ಕೆ ಅನ್ನದಾನ ಮಾಡುವ ಸಾಮೂಹಿಕ ಭೋಜನ ವ್ಯವಸ್ಥೆ ಏರ್ಪಡಿಸಲಾಗುವುದು.

ಇದನ್ನೂ ಓದಿ: ನಮ್ಮೊಳಗೆ  ಸದಾ ಒಳ್ಳೆಯ ಕಲ್ಪನೆಗಳಿರಲಿ.. ಅದು ನಮ್ಮನ್ನು ಸುಖವಾಗಿಡುತ್ತದೆ..

ಶ್ರಾದ್ಧಾಪೂರ್ವ ಮಾಡುವ ಪಿಂಡದಾನ ಮುಂತಾದ ವಿವಿಧ ಹೆಸರಿನ ಶಾಸ್ತ್ರ ಸಂಪ್ರದಾಯ ಸಂಸ್ಕೃತಿ ಪದ್ಧತಿ ವಿಧಿವಿಧಾನ ಗಳನ್ನು ಆದ್ಯಕರ್ತವ್ಯ ಕಾರ್ಯವೆಂದು ಪ್ರತಿಯೊಬ್ಬ ನಾಗರಿಕ ಪ್ರಜೆಯೂ ತಂದೆ-ಮಗ, ತಾಯಿ-ಮಗಳು, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಮಾವ, ಬಾವ-ಬಾಮೈದ ಇತ್ಯಾದಿ  ಸಂಬಂಧಗಳ ಬೆಸುಗೆಯೊಡನೆ ಅನಿವಾರ್ಯ ಅವಶ್ಯಕ ಎಂಬ ಜವಾಬ್ಧಾರಿ ನಿಭಾಯಿಸುವ ಹೊಣೆಗಾರಿಕೆ ಇರುತ್ತದೆ. ಪಾಪ ಪುಣ್ಯದ ಪ್ರಜ್ಞೆ ಕಾಡುತ್ತದೆ. ತ್ರಿಪೀಡೆ-ಪಿಶಾಚಿ-ಪ್ರೇತಾತ್ಮಗಳು ಕನಸಿನಲ್ಲಿ ಗೋಚರಿಸುತ್ತವೆ ಎಂಬ (ಮೂಢ)ನಂಬಿಕೆ ದರ್ಬಾರ್ ಮಾಡುತ್ತಲೇ ಬರುತ್ತಿದೆ…?!

ಇತ್ತೀಚಿಗೆ ತಾತ್ವಿಕ ನೈತಿಕ ವಾಸ್ತವಿಕ ಚಿಂತನೆ ಮಾಡುವವರ ಸೂಕ್ತ ಅಭಿಪ್ರಾಯ ಅಭಿಮತದ ಪ್ರಕಾರ ದೊರಕಿದ ಫಲಿತಾಂಶ ಹೀಗಿದೆ… ಬದುಕಿರುವಾಗ ಸರ್ವರೀತಿಯ ಸೌಲಭ್ಯ ಸವಲತ್ತು ಸೇವೆ ತೃಪ್ತಿ ನೀಡಬೇಕು, ಸಕಲ ಸುಖ ಶಾಂತಿ ನೆಮ್ಮದಿ ಜೀವನ ಕೊಡಬೇಕು, ಸತ್ತಮೇಲೆ ಛಟ್ಟವನ್ನು ಅಲಂಕರಿಸಿ ವೈಭವದ ಮೆರವಣಿಗೆ ಮೂಲಕ ಕೊಂಡೊಯ್ವ ಮತ್ತು ವರ್ಷಕ್ಕೊಮ್ಮೆ ಪಿಂಡದಾನ ಜತೆಗೆ ಅನ್ನ ವಸ್ತ್ರ ಚಿನ್ನ ಬೆಳ್ಳಿ ಇತ್ಯಾದಿ ದಾನ ಮಾಡುತ್ತ ಪಿತೃಪಕ್ಷವನ್ನು ವಿಜೃಂಭಣೆಯಿಂದ ಆಚರಿಸುವ ಡೌಲು ಢಂಬಾಚಾರ ಕೇವಲ ಅನರ್ಥ ಅಸಮರ್ಥ ಅಸಾರ್ಥಕ ನಿಷ್ಪ್ರಯೋಜಕ ನಿರರ್ಥಕ ಎನಿಸುತ್ತದೆ.

ಇದನ್ನೂ ಓದಿ: ಕಾಯಕವೇ ಕೈಲಾಸ…. ನಾವು ನಮಗಾಗಿ ಕೆಲಸ ಮಾಡುವುದನ್ನು ಕಲಿಯೋಣ

ಅದೇನೇ ಇರಲಿ ಪಿತೃಪಕ್ಷ ಪರಿಭಾವನೆ ಪರಿಪಾಲನೆ ಪದ್ದತಿ ಸಂಪ್ರದಾಯ ಆಚರಣೆ ರೀತಿ ನೀತಿ ಎಲ್ಲವೂ ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ಇಷ್ಟ(ಸ್ವತಂತ್ರ)ಕ್ಕೆ ಬಿಟ್ಟ ವಿಷಯ. ‘ಪಿತೃಪಕ್ಷ’ವನ್ನು ಹೀಗೇ ಮಾಡಬೇಕು” ಎಂದು ಸಲಹೆ ಸೂಚನೆ ಕೊಟ್ಟು ಮಾರ್ಗದರ್ಶನ ಮಾಡುವ ಅಥವ ಆಕ್ಷೇಪಣೆ ಮಾಡುವ ಅಧಿಕಾರವಾಗಲೀ ಸ್ವತಂತ್ರವಾಗಲೀ ಯಾರಿಗೂ ಇಲ್ಲ ಎನ್ನಬಹುದು….

 

admin
the authoradmin

18 ಪ್ರತಿಕ್ರಿಯೆಗಳು

  • ಪಿತೃಪಕ್ಷ ಲೇಖನದ ಕೊನೇ ಪ್ಯಾರಾ ನನಗೆ ತುಂಬ ಇಷ್ಟ ವಾಯಿತು ಮತ್ತು ಸರಿ ಇದೆ ಎನಿಸಿತು. ಯಾರೇ ಆಗಲಿ ಅವರ ಅಪ್ಪ ಅಮ್ಮ ನನ್ನು ಅಥವ ಹಿರಿಯನ್ನು ಬದುಕಿರುವಾಗ ಚೆನ್ನಾಗಿ ನೋಡಿಕೊಳ್ಳುವ ಮೂಲಕ ನಮ್ಮ ಕರ್ತವ್ಯ ಮಾಡಿ ಕರ್ಮ ಅಥವ ಋಣ ಕಳೆದುಕೊಳ್ಳಬೇಕು.

  • 10ನೇ ತಾರೀಖಿನ ನಿಮ್ಮ ಜನಮನ ಕನ್ನಡ ಪತ್ರಿಕೆಯಲ್ಲಿ ನಾನು ಓದಿದ
    ಪಿತೃಪಕ್ಷ ಲೇಖನ ಬಹಳ ಚೆನ್ನಾಗಿದೆ. ಇದನ್ನು ಬರೆದ ಲೇಖಕರಿಗೆ ಮತ್ತು ಇಂಥ ಅಪರೂಪದ ಲೇಖನ ಪ್ರಕಟ ಮಾಡಿದ ತಮಗೂ ಮನಸಾರ ವಂದಿಸುವೆ ಸರ್
    ಇಂದ್ರಾಣಿ, ಮಂಡ್ಯ

  • I am very much impressed with your service oriented article “pithrupaksha” essential for the present society’s people and current situation prevailing superstitions. This article reflects criticism of modern rather advanced technology in India and across world. Anyway better thought provoking article, good service attempted by you and the author 👍

  • ನಾನು ಶ್ರೀಮತಿ ಶೋಭಾ, ಬೆಂಗಳೂರು ನಾಗರಬಾವಿ ಕೆನರ ಬ್ಯಾಂಕಿನ ಬಡಾವಣೆ ಉದ್ಯಾನವನ ಚಪ್ಪಾಳೆಗುಂಪಿನ ಸಕ್ರಿಯ ಸದಸ್ಯೆ. ಶ್ರೀ ಸಿದ್ದಲಿಂಗಯ್ಯ ಗುರೂಜಿ ಯವರ ಮಾರ್ಗದರ್ಶನದ ನಮ್ಮ ಗುಂಪಿನಲ್ಲಿ 100ಕ್ಕೂ ಹೆಚ್ಚಿನ young and old ಸಕ್ರಿಯ ಸದಸ್ಯರಿದ್ದಾರೆ. ಈ ನಮ್ಮ ಗುಂಪಿಗೆ (group) ಕುಮಾರಕವಿಯವರು ಜನಮನ ಕನ್ನಡ ಪತ್ರಿಕೆಯಲ್ಲಿ ಅವರು ಬರೆದ”ಪಿತೃಪಕ್ಷ” ಲೇಖನವನ್ನು ಶೇರ್ ಮಾಡಿದ್ದರು. ಇದನ್ನು ಓದಿದ ನಾನು ನನ್ನ ಬಬಂಧುಬಳಗ ಮಿತ್ರರ group ಗೂ share ಮಾಡಿದ ನಂತರ ಹತ್ತಾರು ಓದುಗರು ಉತ್ತಮ ಮತ್ತು ಸತ್ಯ ಸಂಗತಿಯುಳ್ಳ ಸೊಗಸಾದ ಲೇಖನ ಎಂದು ತಿಳಿಸಿದ ಮೇಲೆ ಮತ್ತೊಮ್ಮೆ ನಾನೂ ಈ ಪಿತೃಪಕ್ಷ ಲೇಖನ ಓದಿದೆ. ನಿಜವಾಗಲೂ ಇದೊಂದು ಉಪಯುಕ್ತವಾದ ಅಮೋಘ ಬರಹ. ಆದ್ದರಿಂದ ನಿಮಗೂ ಲೇಖಕರಿಗೂ ಮನಪೂರ್ವಕ ನಮಸ್ಕಾರ ಧನ್ಯವಾದ

  • ನಮಸ್ಕಾರ, ನಾನೊಬ್ಬ mnc company ಟೆಕ್ಕಿ. ನಿಮ್ಮ ಪತ್ರಿಕೆಯ ಇತ್ತೀಚಿನ ಪಿತೃಪಕ್ಷ ಬಗೆಗಿನ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದ್ದು ಪತ್ರಿಕೆಯ ಬಳಗಕ್ಕೂ ಮತ್ತು ಲೇಖಕರಿಗೂ ಧನ್ಯವಾದ. ಇದರಲ್ಲಿನ ಸತ್ಯಾಂಶ, ಮಾಹಿತಿ ಹಾಗೂ ಬರವಣಿಗೆಶೈಲಿ ಎಲ್ಲವೂ ಬೊಂಬಾಟ್ ಆಗಿದೆ, ಧನ್ಯವಾದ

  • ನಾನು ಶ್ರೀಮತಿ ಶೋಭಾ, ಬೆಂಗಳೂರು ನಾಗರಬಾವಿ ಕೆನರ ಬ್ಯಾಂಕ್ ಕಾಲೋನಿ ಉದ್ಯಾನವನ ಚಪ್ಪಾಳೆ ಗುಂಪಿನ ಸಕ್ರಿಯ ಸದಸ್ಯೆ. ಶ್ರೀ ಸಿದ್ದಲಿಂಗಯ್ಯ ಗುರೂಜಿ ಮಾರ್ಗದರ್ಶನದಲ್ಲಿ ವ್ಯಾಯಾಮ ಮಾಡುವ 100ಕ್ಕೂ ಹೆಚ್ಚಿನ ಸಂಖ್ಯೆಯ ಸದಸ್ಯರಿದ್ದಾರೆ. ಈ group ಗೆ ಕುಮಾರಕವಿಯವರು ತಮ್ಮ “ಪಿತೃಪಕ್ಷ” ಲೇಖನ share ಮಾಡಿದ್ದರು. ಎಲ್ಲರೂ ಓದಿದ್ದು, ನಾನು ಸಹ ಓದಿದ ನಂತರ ನನ್ನ ಬಂಧು ಬಳಗ ಮಿತ್ರರು ಇರುವ ನನ್ನ ಗುಂಪಿಗೂ ಶೇರ್ ಮಾಡಿದೆ. ಈ ಲೇಖನ ಓದಿದವರ ಪೈಕಿ ಹತ್ತಾರು ಜನರು ಬಹಳ ಚೆನ್ನಾಗಿದೆ ಇದೊಂದು ಅಪರೂಪದ, ಸತ್ಯಾಂಶವಿರುವ ಹಾಗೂ ಬೋಧಕ ಲೇಖನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೇಲೆ ನಾನು ಮತ್ತೊಮ್ಮೆ ಪಿತೃಪಕ್ಷ ಲೇಖನ ಓದಿದೆ ಸರಿಯಾದ ಮಾರ್ಗದರ್ಶನ ಮಾಡುವ ಲೇಖನ ಎಂದು ಖುಷಿಪಟ್ಟು ಈ ನನ್ನ ಅಭಿಪ್ರಾಯ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಪ್ರಕಾಶಕರಿಗೂ ಲೇಖಕರಿಗೂ ನಮ್ಮ ಮನಃಪೂರ್ವಕ ನಮಸ್ಕಾರ ಮತ್ತು ಧನ್ಯವಾದಗಳು.

  • ನಾನು ಶ್ರೀಮತಿ ಶೋಭಾ, ಬೆಂಗಳೂರು ನಾಗರಬಾವಿ ಕೆನರ ಬ್ಯಾಂಕ್ ಕಾಲೋನಿ ಉದ್ಯಾನವನ ಚಪ್ಪಾಳೆ ಗುಂಪಿನ ಸಕ್ರಿಯ ಸದಸ್ಯೆ. ಶ್ರೀ ಸಿದ್ದಲಿಂಗಯ್ಯ ಗುರೂಜಿ ಮಾರ್ಗದರ್ಶನದಲ್ಲಿ ವ್ಯಾಯಾಮ ಮಾಡುವ 100ಕ್ಕೂ ಹೆಚ್ಚಿನ ಸಂಖ್ಯೆಯ ಸದಸ್ಯರಿದ್ದಾರೆ. ಈ group ಗೆ ಕುಮಾರಕವಿಯವರು ತಮ್ಮ “ಪಿತೃಪಕ್ಷ” ಲೇಖನ share ಮಾಡಿದ್ದರು. ಎಲ್ಲರೂ ಓದಿದ್ದು, ನಾನು ಸಹ ಓದಿದ ನಂತರ ನನ್ನ ಬಂಧು ಬಳಗ ಮಿತ್ರರು ಇರುವ ನನ್ನ ಗುಂಪಿಗೂ ಶೇರ್ ಮಾಡಿದೆ. ಈ ಲೇಖನ ಓದಿದವರ ಪೈಕಿ ಹತ್ತಾರು ಜನರು ಬಹಳ ಚೆನ್ನಾಗಿದೆ ಇದೊಂದು ಅಪರೂಪದ, ಸತ್ಯಾಂಶವಿರುವ ಹಾಗೂ ಬೋಧಕ ಲೇಖನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೇಲೆ ನಾನು ಮತ್ತೊಮ್ಮೆ ಪಿತೃಪಕ್ಷ ಲೇಖನ ಓದಿದೆ ಸರಿಯಾದ ಮಾರ್ಗದರ್ಶನ ಮಾಡುವ ಲೇಖನ ಎಂದು ಖುಷಿಪಟ್ಟು ಈ ನನ್ನ ಅಭಿಪ್ರಾಯ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಪ್ರಕಾಶಕರಿಗೂ ಲೇಖಕರಿಗೂ ನಮ್ಮ ಮನಃಪೂರ್ವಕ ನಮಸ್ಕಾರ ಮತ್ತು ಧನ್ಯವಾದಗಳು.

  • ನಾನು ಕ.ವಿ.ಕಾ. ನಿವೃತ್ತ ಉದ್ಯೋಗಿ. ನಿಮ್ಮ ಜನಮನ ಕನ್ನಡ ಪತ್ರಿಕೆಯ ಸಂಪಾದಕ ಪ್ರಕಟಿಸಿದ ನಟರಾಜ ರವರ ಪಿತೃಪಕ್ಷ ಲೇಖನ ಓದಿದೆ ತುಂಬ ಚೆನ್ನಾಗಿ ನಮ್ಮಂಥ ಎಲ್ಲರಿಗೂ ಅರ್ಥವಾಗುವ ಹಾಗೆ ಬರೆದಿದ್ದಾರೆ, ನಮಸ್ಕಾರ

  • ನಾನು ಕ.ವಿ.ಕಾ. ನಿವೃತ್ತ ಉದ್ಯೋಗಿ. ನಿಮ್ಮ ಜನಮನ ಕನ್ನಡ ಪತ್ರಿಕೆಯ ಸಂಪಾದಕ ಪ್ರಕಟಿಸಿದ ನಟರಾಜ ರವರ ಪಿತೃಪಕ್ಷ ಲೇಖನ ಓದಿದೆ ತುಂಬ ಚೆನ್ನಾಗಿ ನಮ್ಮಂಥ ಎಲ್ಲರಿಗೂ ಅರ್ಥವಾಗುವ ಹಾಗೆ ಬರೆದಿದ್ದಾರೆ, ಧನ್ಯವಾದ ಸ್ವಾಮಿ ನಮಸ್ಕಾರ

ನಿಮ್ಮದೊಂದು ಉತ್ತರ

Translate to any language you want