‘ಪ್ರೇಮ್ ಲವ್ಸ್ ನಂದಿನಿ’ ಈ ಕಿರುಚಿತ್ರ ಪ್ರೇಕ್ಷಕರಿಗೆ ಏಕೆ ಇಷ್ಟವಾಗುತ್ತೆ ಗೊತ್ತಾ? ನೀವೊಮ್ಮೆ ನೋಡಿ ಬಿಡಿ!

ಬೆಂಗಳೂರು: ಇವತ್ತು ಬಿಗ್ ಬಜೆಟ್ ನಲ್ಲಿ ತೆರೆಗೆ ಕೆಲವೇ ಕೆಲವು ಸಿನಿಮಾಗಳಷ್ಟೆ ಉತ್ತಮ ಕಥೆಗಳಿಂದ ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತಿವೆ.. ಇಂತಹ ಪರಿಸ್ಥಿತಿಯಲ್ಲಿ ಒಂದೊಳ್ಳೆಯ ಸಿನಿಮಾವನ್ನು ಎಲ್ಲರೂ ನೋಡುವಂತೆ ನಿರ್ಮಿಸುವ ಕೆಲಸಕ್ಕೆ ಹೊಸ ಪ್ರತಿಭೆಗಳು ಮುಂದಾಗಿದ್ದು ಅವರ ಶ್ರಮವೇ ಇವತ್ತು ‘ಪ್ರೇಮ್ ಲವ್ ನಂದಿನಿ’ ಮೂಲಕ ಹೊರ ಬಂದಿದ್ದು, ಯೂ ಟ್ಯೂಬ್ ನಲ್ಲಿ ನೋಡಲು ಸಾಧ್ಯವಾಗಿದೆ.
ಈ ‘ಪ್ರೇಮ್ ಲವ್ ನಂದಿನಿ’ ಎಂಬ ಕಿರು ಸಿನಿಮಾ ಪ್ರೇಮಿಗಳ ದಿನ ಹಾಗೂ ಶಿವರಾತ್ರಿ ಹಬ್ಬದ ವಿಶೇಷವಾಗಿ ಹೊಸ ಪ್ರತಿಭೆಗಳೇ ಸೇರಿ ಸಿದ್ಧಪಡಿಸಿದ್ದಾಗಿದ್ದು, ಬಿ ಆರ್ ಫಿಲಂ ಐಕಾನ್ ಯೂಟ್ಯೂಬ್ ವಾಹಿನಿಯಲ್ಲಿ ಪ್ರೇಕ್ಷಕರು ನೋಡಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಸುದೀರ್ಘ ಅನುಭವ ಹೊಂದಿರುವ ಬಸವರಾಜ ನಂದಿ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರತಿಭಾವಂತ ನಿರ್ದೇಶಕಿ ಸುಧಾ ಅಣ್ಣಾಶೇಠ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಮಾಧ್ಯಮ ಲೋಕದಲ್ಲಿ ಸಕ್ರಿಯರಾಗಿದ್ದ ಪತ್ರಕರ್ತ ವಿಶ್ವಪ್ರಕಾಶ ಟಿ. ಮಲಗೊಂಡ ತುಂಬಾ ದಿನಗಳ ನಂತರ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು ಇದು ಇವರ 20ನೇ ಚಿತ್ರ ಎನ್ನುವುದು ವಿಶೇಷ.

ಪ್ರೇಮದ ಆಕರ್ಷಣೆಯಿಂದ ಆರಂಭವಾಗಿ ಜೀವನದ ಸಂಕೀರ್ಣ ಹಂತವಾದ ‘ವಿಚ್ಛೇದನ’ದವರೆಗೆ ಸಾಗುವ ಕಥೆಯಲ್ಲಿ ವಿಶ್ವಪ್ರಕಾಶ ತಮ್ಮ ನೈಜ ನಟನೆಯ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ಅವರಿಗೆ ಜೋಡಿಯಾಗಿ ಸಿರಿ ವೆಂಕಟೇಶ್ ನಟಿಸಿದ್ದಾರೆ. “ಪ್ರೇಮದಿಂದ ಶುರುವಾಗಿ ಡಿವೋರ್ಸ್ ವರೆಗೂ ತಲುಪುತ್ತಿರುವ ಇಂದಿನ ಸಂಬಂಧಗಳ ವಾಸ್ತವವೇ ಈ ಚಿತ್ರದಲ್ಲಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹದ್ದಿದೆ” ಎನ್ನುತ್ತಾರೆ ನಿರ್ದೇಶಕಿ ಸುಧಾ
ಚಿತ್ರಕ್ಕೆ ಬಸವರಾಜ ನಂದಿ ಹಾಗೂ ಸಚಿನ್ ಅವರ ಛಾಯಾಗ್ರಾಹಣವಿದ್ದು, ಪ್ರಜ್ವಲ್ ನಂದಿ ಸಂಕಲನ, ಕ್ರಿಯೇಟಿವ್ ಹೆಡ್ ಆಗಿ ಅಣ್ಣಾಶೇಠ, ಪ್ರಸಾದ ತೋಟದ ಪೋಸ್ಟರ್ ಡಿಸೈನ್, ಮೇಕಪ್ ಮಧು, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ಹರೀಶ್ ಅರಸು ಪತ್ರಿಕಾ ಸಂಪರ್ಕ, ಉಮೇಶ್ ಕೆ ಎನ್ ಅವರು ಪಬ್ಲಿಸಿಟಿ, ನಿಂಗರಾಜ ಕಟ್ಟಿಗೇರಿ ಮೊದಲಾದವರು ತಾಂತ್ರಿಕವರ್ಗದಲ್ಲಿದ್ದಾರೆ. ನೀವೂ ಇನ್ನು ನೋಡಿಲ್ಲವಾದರೆ ಒಮ್ಮೆ ನೋಡಿ ಹೇಗಿದೆ ಎಂಬುದನ್ನು ತಿಳಿಸಿ..








