CinemaLatest

ಅಪಾರ ಕೀರ್ತಿಗಳಿಸಿ ಮೆರೆದ ಚಂದನವನದ ಪ್ರಪ್ರಥಮ ಲಂಬೂ ಹೀರೋ ಸುದರ್ಶನ್… ಇವರು ಯಾರು ಗೊತ್ತಾ?

ಚಂದನವನದಲ್ಲಿ ಆರ್.ನಾಗೇಂದ್ರರಾಯರ ಬಗ್ಗೆ ಗೊತ್ತೇ ಇದೆ ಅವರ ಪುತ್ರರೇ ಆರ್.ಎನ್. ಸುದರ್ಶನ್. ಇವರ ನಟನೆಯ ಚಿತ್ರವನ್ನು ಎಲ್ಲರೂ ನೋಡಿರುತ್ತಾರೆ. ಅವರು  ಮೊದಲಿಗೆ ಹೀರೋ ಆದರೂ ಕ್ರಮೇಣ ಖಳನಾಯಕನ ಪಾತ್ರದಲ್ಲಿ ಜನರ ಮೆಚ್ಚುಗೆ ಗಳಿಸಿದ್ದರು. ಇಂತಹ ಮಹಾನ್ ನಟನ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಈ ಬಾರಿ ಇಲ್ಲಿ ಒಂದಷ್ಟು ವಿಚಾರಗಳನ್ನು ನಮ್ಮ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಚಾಮಯ್ಯ ಮೇಷ್ಟ್ರು’  ನೆನಪಿನ ತಾರೆಯಾಗಿ ನಮ್ಮೊಂದಿಗಿರುವ ಹಿರಿಯನಟ ಕೆ.ಎಸ್.ಅಶ್ವಥ್… 

ಕನ್ನಡ ಚಿತ್ರರಂಗದ ಭೀಷ್ಮರಾದ ಆರ್.ನಾಗೇಂದ್ರರಾಯರ ನಾಲ್ವರು ಪುತ್ರರಲ್ಲೊಬ್ಬರು. ಒಬ್ಬ ಅಣ್ಣ ಮುಂಬಯಿಯಲ್ಲಿ ವೈದ್ಯರು. ಇನ್ನುಳಿದ ಇಬ್ಬರು ಅಣ್ಣಂದಿರಾದ  ಆರ್.ಎನ್. ಜಯಗೋಪಾಲ್ ಮತ್ತು ಆರ್.ಎನ್.ಕೆ. (ಕೃಷ್ಣ)ಪ್ರಸಾದ್ ನಂತರ ಜನಿಸಿದ ಆರ್.ಎನ್.ಸುದರ್ಶನ್ ಚಂದನವನಕ್ಕೆ ಎಂಟ್ರಿ ಕೊಟ್ಟ ಆರ್.ಎನ್.ಆರ್. ಪುತ್ರರಲ್ಲಿ 3ನೇ ಹಾಗೂ ಎಲ್ಲರಿಗಿಂತ ಕಿರಿಯ ಪುತ್ರ. ಸುದರ್ಶನ್ ತಮ್ಮ 22ನೇ ವಯಸ್ಸಲ್ಲಿ ನಟಿಸಿದ ಎರಡನೇ ಚಿತ್ರ ವಿಜಯನಗರದವೀರಪುತ್ರ. ಇದರಲ್ಲಿ ಏಕ್ಧಂ ಹೀರೊ ಪಾತ್ರದಲ್ಲಿ ಮಿಂಚಿದರು. ಈ ಫಿಲಂನ ಅಪಾರಕೀರ್ತಿ ಗಳಿಸಿಮೆರೆವ ಭವ್ಯ ನಾಡಿದು…. ಚಿತ್ರಗೀತೆ ಅತ್ಯಂತ ಆಪ್ಯಾಯಮಾನ. ಇದು ಕನ್ನಡ ನಾಡಿನ ಚರಿತ್ರೆ, ದೇಶಭಕ್ತಿ, ನಾಡಪ್ರೇಮ ಇವುಗಳನ್ನ ಸೂಚಿಸುವ ಹಾಡು ಎಂಬ ಹೆಗ್ಗಳಿಕೆಗೆ ಇವತ್ತಿಗೂ ಪಾತ್ರವಾಗಿದೆ!

“ನಗುವಹೂವು” ಫಿಲಂ ಒಳಗೊಂಡು ಐದಾರು ಸಿನಿಮಾಗಳಲ್ಲಿ ನಟಿಸಿದ ಶ್ರೇಷ್ಠ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಲಭಿಸಿತು. ಅಂದಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೆ ಎತ್ತರದ ನಾಯಕನಟ ಎನಿಸಿದ್ದರು. ಇವರ ತರುವಾಯ ಅಮಿತಾಬ್ಬಚ್ಚನ್ ಚಿತ್ರರಂಗಕ್ಕೆ ಕಾಲಿಟ್ಟರು ಎಂಬುದು ನಿರ್ವಿವಾದ ಸತ್ಯ! ಇವರ ಎತ್ತರಕ್ಕೆ ಸರಿಹೊಂದುವಂಥ ಎತ್ತರದ ಹೀರೋಯಿನ್ ಹೊಂದಿಸುವಲ್ಲಿ ಅಂದಿನ ಪ್ರತಿಯೊಬ್ಬ ನಿರ್ಮಾಪಕ-ನಿರ್ದೇಶಕ ಹರಸಾಹಸ ಪಡಬೇಕಾಗಿತ್ತು.

ಇದನ್ನೂ ಓದಿ:  ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್… ಇಲ್ಲಿದೆ ಅವರ ಸಿನಿಮಾಕಥೆ!

ಕಾಲಕ್ರಮೇಣ ದಕ್ಷಿಣ ಭಾರತದ ಚಿತ್ರೋದ್ಯಮಿ ಗಳಾದಿಯಾಗಿ ಚಿತ್ರರಂಗದ ಎಲ್ಲರನ್ನೂ ಕಾಡುತ್ತಿದ್ದ ಏಕೈಕ ಪ್ರಶ್ನೆ ಹಾಗೂ ಚಿಂತೆ ಇದಾಗಿತ್ತು? ಅಷ್ಟೇಅಲ್ಲ ಇವರನ್ನು ಇಷ್ಟಪಡುತ್ತಿದ್ದ  ಅಭಿಮಾನಿಗಳಿಗು ಆಶ್ಚರ್ಯ ಮೂಡಿಸುವಂತಿದ್ದ ಚಂದನವನದ ಮೊಟ್ಟಮೊದಲ ಲಂಬೂ ಹೀರೋ! ಕಾಲಕ್ರಮೇಣ ತಮ್ಮ ಪ್ರಶಾಂತ ನಟನೆಯಿಂದ ಹೀರೋಗಿರಿ ಕಳೆ[ಗುಂದಿತ್ತು]ದು ಕೊಂಡು ಪೋಷಕ ನಟನಾಗಿ ಅಥವಾ ಖಳನಾಯಕನಾಗಿ ನಟಿಸುವಂಥ ಪ್ರಮೇಯ ಉಂಟಾಗಿದ್ದು ವಿಧಿವಿಲಾಸ, ವಿಪರ್ಯಾಸ! ಎಸ್.ಆರ್. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಪ್ಪುಬಿಳುಪು’ ಮತ್ತು ‘ಕರುಳಿನಕರೆ’ ಚಿತ್ರಗಳ ಅಮೋಘ ಅಭಿನಯಕ್ಕಾಗಿ ಇವರು ಪತ್ರಿಕಾ ವಿಮರ್ಶಕರ ಮೆಚ್ಚುಗೆ ಗಳಿಸಿದ್ದು ಸಹ ಚಂದನವನ ಚರಿತ್ರೆಯ ನೂತನ ದಾಖಲೆ.

ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್… ಇಲ್ಲಿದೆ ಅವರ ಸಿನಿಮಾಕಥೆ!

ಡಾ.ರಾಜ್‍ಕುಮಾರ್ ಅಭಿನಯದ ಚಿತ್ರಗಳಾದ ಇಮ್ಮಡಿಪುಲಿಕೇಶಿ ಹಾವಿನಹೆಡೆ ಶ್ರೀಕೃಷ್ಣದೇವರಾಯ ನೀನನ್ನಗೆಲ್ಲಲಾರೆ ಸಮಯದಗೊಂಬೆ ಹಾಲುಜೇನು ಮುಂತಾದ ಚಿತ್ರಗಳ ಅಭಿನಯದಿಂದ ದಾಪುಗಾಲು ಹಾಕುತ್ತ ಮುಂದೆ ಸಾಗಿದ ಇವರು ತಮ್ಮ ಅಂತಿಮ ದಿನದವರೆಗೂ ಕನ್ನಡ ಕುಲಕೋಟಿಯ ತನುಮನ ಗೆದ್ದು ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದ ಓರ್ವ ಉತ್ತಮ ಕಲಾವಿದ.

ರಾಜಕುಮಾರ್ ಚಿತ್ರಗಳಲ್ಲದೆ ಖ್ಯಾತನಟ ಕಲ್ಯಾಣಕುಮಾರ್ ಹೀರೋ ಆಗಿದ್ದ ಅಪೂರ್ವ ಸಿನಿಮಾ ಅಮರಶಿಲ್ಪಿಜಕಣಾಚಾರಿ ಮತ್ತು ರಾಜೇಶ್ ಅಭಿನಯದ ಸುವರ್ಣಭೂಮಿ, ಕಪ್ಪುಬಿಳುವು ಚಿತ್ರಗಳಲ್ಲೂ  ನಟಿಸಿ ಜನಪ್ರಿಯ ನಟರಾದರು. ನಾಡಿನಭಾಗ್ಯ ಚಿತ್ರದಲ್ಲಿ ಇವರೇ ಮುಖ್ಯಪಾತ್ರದಲ್ಲಿದ್ದು, ಡಾ.ರಾಜ್ ಕುಮಾರ್ ಅತಿಥಿ ನಟರಾಗಿ ಅಭಿನಯಿಸಿದ್ದರು, ಎಂಬುದು ಆಶ್ಚರ್ಯವಾದರು ಸತ್ಯ. ಉದಯಕುಮಾರ್ ಹೀರೋ ಆಗಿದ್ದ ಮಾತೃಭೂಮಿ ಮತ್ತು ಶಿವಲೀಲೆ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದಲ್ಲದೇ ರೆಬೆಲ್ ಸ್ಟಾರ್ ಅಂಬರೀಷ್ ರವರ ಗುರು-ಜಗದ್ಗುರು ಚಿತ್ರದಿಂದ ಮತ್ತಷ್ಟು ಜನಪ್ರಿಯತೆ ಗಳಿಸಿದರು.

ಇದನ್ನೂ ಓದಿ:  ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… ಇದು ಕನ್ನಡಚಿತ್ರರಂಗದಲ್ಲಿ ಶೋಕಿಗಾಗಿ ನಟನಾದವನ ಕಥೆ!

ಅನೇಕ ಯಶಸ್ವಿ ಚಿತ್ರಗಳು ಕೀರ್ತಿ ಮತ್ತು ಪ್ರಶಸ್ತಿ ತಂದುಕೊಟ್ಟಿವೆ. ವಿಶೇಷವಾಗಿ ‘ಜೈರುಂಡಮಾಲಿನಿ’ ಘರ್ಜನೆಯುಳ್ಳ ‘ಪ್ರಚಂಡಕುಳ್ಳ’ ಚಿತ್ರದ ಪಾತ್ರ ಇವತ್ತಿಗೂ ಸ್ಮರಣೀಯ ಹಾಗೂ ಜನಪ್ರಿಯ. ನಗುವಹೂವು ಚಿತ್ರದ ಮನೋಜ್ಞ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ದೊರಕಿದ್ದಲ್ಲದೆ, ಇದರಲ್ಲಿ ಹಿನ್ನೆಲೆ ಗಾಯಕನಾಗಿ ಮೊಟ್ಟಮೊದಲ ಬಾರಿಗೆ ಹಾಡಿದ “ಇರಬೇಕು..ಇರಬೇಕು ಅರಿಯದ ಕಂದನ ಥರಹ” ಚಿತ್ರಗೀತೆಗೆ ಪ್ರಶಸ್ತಿ-ಸನ್ಮಾನ ಲಭಿಸಿತು. ಆಬಾಲವೃದ್ಧರಾದಿಯಾಗಿ ಎಲ್ಲರೂ ಸಹ ಇವರ ಅಭಿನಯವನ್ನು ಮೆಚ್ಚಿ ಕೊಂಡಾಡಿದರು. ಹಲವಾರು ಚಿತ್ರಗಳಲ್ಲಿ ಹೀರೋ, ವಿಲನ್, ಕಮಿಡಿಯನ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕನ್ನಡ ಚಿತ್ರಾಭಿಮಾನಿಗಳಿಂದ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಪ್ರತಿಯೊಬ್ಬರಿಂದಲೂ ಸೈ ಎನಿಸಿ ಕೊಂಡರು.

ವಿಧವಿಧವಾದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ, ಭಾರತದ ಅನೇಕ ಸಂಘ ಸಂಸ್ಥೆಗಳಿಂದ ಹಲವು ಪ್ರಶಸ್ತಿ ಬಹುಮಾನ ದೊರಕಿದೆ. ಕನ್ನಡ ಹಿಂದಿ ತಮಿಳು ತೆಲುಗು ಮಲೆಯಾಳಂ ಭಾಷೆಯ ಸಿನಿಮ ಸೇರಿ ಒಟ್ಟು 250ಕ್ಕು ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಸುದರ್ಶನ್ ಓರ್ವ ಸರಳ ಸಜ್ಜನ ವ್ಯಕ್ತಿ. ಕಲಾವಿದರ ಕುಟುಂಬದಲ್ಲಿ ಜನಿಸಿದ ಈತ ತಮ್ಮ ಸಮಕಾಲೀನ ಜನಪ್ರಿಯ ನಟಿಯಾಗಿದ್ದ ಶೈಲಶ್ರೀ ಜತೆ ವಿವಾಹವಾಗಿ ಕನ್ನಡ ಚಿತ್ರರಂಗದ ತಾರಾದಂಪತಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರು. 78ನೇ ವಯಸ್ಸಿನಲ್ಲಿದ್ದಾಗ ವಯೋಸಹಜ ಅನಾರೋಗ್ಯಕ್ಕೆ ಸಿಲುಕಿದ ಚಂದನವನ ಚಿತ್ರರಂಗದ ಪ್ರಪ್ರಥಮ ಲಂಬೂ ನಟ, ಹಿನ್ನೆಲೆಗಾಯಕ, ನಿರ್ಮಾಪಕ, ನಿರ್ದೇಶಕ, ಆರ್. ಎನ್.ಸುದರ್ಶನ್ ದಿನಾಂಕ 8.9.2017ರಂದು ಬೆಂಗಳೂರಲ್ಲಿ ನಿಧನರಾದರು!

ಇದನ್ನೂ ಓದಿ:  ಕನ್ನಡ ಕಲಾ ರಸಿಕರ ಮನದಲ್ಲಿ ಅಚ್ಚಳಿಯದ ಹಿರಿಯ ನಟ ಕಲ್ಯಾಣಕುಮಾರ್… ಇವರು ನಟಿಸಿದ ಸಿನಿಮಾಗಳೆಷ್ಟು?

ಆರ್.ಎನ್.ಸುದರ್ಶನ್ ನಟಿಸಿದ ಚಿತ್ರಗಳು ಹೀಗಿವೆ.. 1.ಮಂಗಳಸೂತ್ರ(1959) 2.ವಿಜಯನಗರದವೀರಪುತ್ರ, 3.ಆನಂದಬಾಷ್ಪ, 4.ಮಂಗಳಮುಹೂರ್ತ, 5.ನವಜೀವನ, 6.ಅಮರಶಿಲ್ಪಿ ಜಕಣಾಚಾರಿ, 7.ಪತಿಯೇದೈವ, 8.ಚಂದ್ರಹಾಸ, 9.ಎಂದೂನಿನ್ನವನೆ, 10.ಪ್ರವಾಸಿಮಂದಿರ, 11.ಇಮ್ಮಡಿಪುಲಿಕೇಶಿ, 12.ಸುವರ್ಣಭೂಮಿ,13.ಕಾಡಿನರಹಸ್ಯ, 14.ಕಪ್ಪುಬಿಳುಪು, 15.ಮಾತೃಭೂಮಿ, 16.ಎಲ್ಲೆಲ್ಲೂನಾನೆ, 17.ಶ್ರೀಕೃಷ್ಣದೇವರಾಯ, 18.ಪ್ರತೀಕಾರ, 19.ಕಳ್ಳರಕಳ್ಳ, 20.ಕರುಳಿನಕರೆ, 21.ನಾಡಿನಭಾಗ್ಯ, 22.ಲಕ್ಷ್ಮಿಸರಸ್ವತಿ, 23.ವಾಗ್ಧಾನ, 24.ಆರು ಮೂರು ಒಂಭತ್ತು, 25.ಸೇಡಿನಕಿಡಿ, 26.ನಗುವಹೂವು, 27.ತಂದೆಮಕ್ಕಳು, 28.ಮಾಲತಿ ಮಾಧವ,

29.ಒಂದು ಹೆಣ್ಣಿನ ಕಥೆ, 30 ಮರೆಯದ ದೀಪಾವಳಿ, 31.ಗೃಹಿಣಿ, 32.ಮರಿಯಾ ಮೈ ಡಾರ್ಲಿಂಗ್, 33.ಡ್ರೈವರ್ ಹನುಮಂತು, 34.ಹಾವಿನಹೆಡೆ, 35.ನೀನನ್ನ ಗೆಲ್ಲಲಾರೆ, 36.ದೇವರ ಆಟ, 37.ಹಾಲುಜೇನು, 38.ಹಾಸ್ಯರತ್ನರಾಮಕೃಷ್ಣ, 39.ಚಕ್ರವ್ಯೂಹ,  40.ರಾಜಮಹಾರಾಜ, 41.ಪ್ರಚಂಡಕುಳ್ಳ, 42.ರುದ್ರನಾಗ, 43.ಸಮಯದಗೊಂಬೆ, 44.ಪೊಲೀಸ್‍ ಪಾಪಣ್ಣ 45.ಖೈದಿ, 46.ಜಿದ್ದು, 47.ಕಾಳಿಂಗಸರ್ಪ, 48.ಮೂರುಜನ್ಮ, 49.ಚಾಣಕ್ಯ, 50.ಕರ್ತವ್ಯ, 51.ಗುರುಜಗದ್ಗುರು 52.ಕಾಡಿನಲ್ಲಿಜಾತ್ರೆ, 53.ಶಿವಭಕ್ತ ಮಾರ್ಕಂಡೇಯ, 54.ವಿಜಯೋತ್ಸವ,  55.ಬೆಳ್ಳಿನಾಗ.

ಇದನ್ನೂ ಓದಿ:  ನಟ ಅರುಣಕುಮಾರ್ ಹರಿಕಥಾ ವಿದ್ವಾಂಸ ಗುರುರಾಜಲುನಾಯ್ಡು ಆಗಿ ಖ್ಯಾತಿ ಪಡೆದಿದ್ದೇಗೆ?

56.ಹೃದಯಪಲ್ಲವಿ, 57.ಬ್ರಹ್ಮವಿಷ್ಣುಮಹೇಶ್ವರ 58.ಸೂರ್ಯ, 59.ಶಕ್ತಿ, 60.ಸಾಹಸವೀರ, 61.ದಾದಾ 62.ಬಿಡಿಸದಬಂಧ, 63.ಟೈಗರಗಂಗು, 64.ಮಹೇಶ್ವರ 65.ಚಾಲೆಂಜ್‍ ಗೋಪಾಲಕೃಷ್ಣ, 66.ಸಿಡಿದೆದ್ದಗಂಡು 67.ಚಕ್ರವರ್ತಿ, 68.ಕದನ, 69. ತವರುಮನೆಉಡುಗೊರೆ, 70.ಮಠ 71.ಕಲಿಯುಗಭೀಮ 72.ಶಿವನಾಗ 73.ಪ್ರತಿಫಲ 74.ಗೂಂಡಾರಾಜ್ಯ 75.ಸಂಘರ್ಷ 76.ಸಿಂಹಾದ್ರಿ 77.ಶಿವಲೀಲೆ 78.ಕಿಂಗ್ 79.ಮಾಯಾಬಜಾರ್ 80.ಬಿಲ್ಲಾ-ರಂಗ 81.ಮಂಜುನಾಥ 82.ಜೂಮ್ 83.ಮೇಲುಕೋಟೆಮಂಜ

admin
the authoradmin

12 Comments

  • ಕನ್ನಡ ನಾಡಿನ ಕೃತಿ kv ಪುಟ್ಟಪ್ಪ (kuvempu) ಆಕೃತಿ ಅಣ್ಣಾವ್ರು, ಸಂಸ್ಕೃತಿ ಅಪ್ಪು ಹಾಗೂ ಸಾಹಿತ್ಯರತ್ನ ಕುಮಾರಕವಿ ನಟರಾಜ್ ನನ್ನ ಗುರುಗಳು, ನಾನು ಅವರ ಏಕಲವ್ಯ. ನಿಮ್ಮ ಪತ್ರಿಕೆಯಲ್ಲಿ ಕವಿಗಳು ಬರೆಯುವ ಎಲ್ಲಾ ಲೇಖನ ಕವನ ಓದುವ ಅಭಿಮಾನಿ ನಾನು. ಕಾಂತಾರ ಸಿನಿಮಾದ ಬಗ್ಗೆ ಹಾಗೂ ನಟ RN ಸುದರ್ಶನ್ ರವರ ಬಗ್ಗೆ ಬರೆದ ಲೇಖನ ಕವನ ಸೂಪರ್……

  • Very nice article about India’s first tallest actor R.N. SUDARSHAN the Son of Legendary actor producer director R.NAGENDRA RAO. Thanks a lott sir

  • ನಮ್ಮ ತಲೆಮಾರಿನ ನಾಗೇಂದ್ರರಾಯರ ಪುತ್ರ ಸುದರ್ಶನ್ ಮತ್ತು ಶ್ರೇಷ್ಟ ನಟಿ ಶೈಲಶ್ರೀ (ತಾರಾಜೋಡಿ) ಬಗ್ಗೆ ಲೇಖನ ಬಹಳ ಚೆನ್ನಾಗಿದೆ

  • ಸುದರ್ಶನ್ ಶೈಲಶ್ರೀ ಜೋಡಿಯ ಲೇಖನ ಬೊಂಬಾಟ್,

  • ನಟಿ ಶೈಲಶ್ರೀಯನ್ನು ಸುದರ್ಶನ್ ಮದುವೆ ಆದ ವಿಷಯ ನನಗೆ ಅಂದರೆ ನಮ್ಮ ಬಂಧು ಬಳಗ ಮಿತ್ರ ಯಾರಿಗೂ ಗೊತ್ತೇ ಇರಲಿಲ್ಲ, ಬಹಳ ಉಪಯುಕ್ತ ಮಾಹಿತಿಯ ಈ ಲೇಖನ ಓದಿದ ನನಗೆ ಖುಷಿಯಾಯ್ತು

  • ಹಿರಿಯ ನಟ ಸುದರ್ಶನ್ ಬಗ್ಗೆ ಬರೆದ ಲೇಖನ ಮತ್ತು ಕಿರಿಯ ಕಲಾವಿದ ರಿಷಭ್ ಶೆಟ್ಟರ ಬಗ್ಗೆ ರಚಿಸಿರುವ ಕವನ ಎರಡೂ ಸಹ ಅಮೋಘವಾಗಿದೆ. ಲೇಖಕರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅನಂತಾನಂತ ಧನ್ಯವಾದ, ನಮಸ್ಕಾರ
    ಶಿವಕುಮಾರ್,
    ಬೆಳ್ಳಿತೆರೆಯ ನಟ ಹಾಗೂ ಕಿರುತೆರೆ ಕಲಾವಿದ, ನಾಗರಬಾವಿ
    ಬೆಂಗಳೂರು

  • ಹಿರಿಯ ನಟ ಸುದರ್ಶನ್ ಬಗ್ಗೆ ಬರೆದ ಲೇಖನ ಮತ್ತು ಕಿರಿಯ ಕಲಾವಿದ ರಿಷಭ್ ಶೆಟ್ಟರ ಬಗ್ಗೆ ರಚಿಸಿರುವ ಕವನ ಎರಡೂ ಸಹ ಅಮೋಘವಾಗಿದೆ. ಲೇಖಕರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅನಂತಾನಂತ ಧನ್ಯವಾದ, ನಮಸ್ಕಾರ
    ಶಿವಕುಮಾರ್,
    ಬೆಳ್ಳಿತೆರೆಯ ನಟ ಹಾಗೂ ಕಿರುತೆರೆ ಕಲಾವಿದ, ನಾಗರಬಾವಿ
    ಬೆಂಗಳೂರು

  • India’s First tallest hero RN SUDARSAN. First class writing ✍ by NATRAJ sir, thanks JANAMANA KANNADA e-newsletter
    Yadukumar, Asst. stunt director , Chennai 600042

Leave a Reply