District

ಇಡೀ ರಾಜ್ಯದಲ್ಲೇ ಯಳಂದೂರು ತಾಲೂಕು ವಿಭಿನ್ನ, ವಿಶಿಷ್ಟ… ಮಹೇಶ್ ಚಿಕ್ಕಲ್ಲೂರು  ಪ್ರಶಂಶೆ

ಯಳಂದೂರು(ಗೂಳಿಪುರ ನಂದೀಶ್): ಇಡೀ ರಾಜ್ಯದಲ್ಲೇ ಅತ್ಯಂತ ಚಿಕ್ಕ ತಾಲೂಕಾಗಿರುವ ಯಳಂದೂರು, ಸಾಹಿತ್ಯ, ಕಲೆ, ಸಾಂಸ್ಕೃತಿ, ಪರಿಸರ, ಬುಡಕಟ್ಟು ಸಂಸ್ಕೃತಿ ಕ್ಷೇತ್ರದಲ್ಲಿ ದೇಶದಲ್ಲೇ ಗುರುತಿಸಿಕೊಂಡಿದೆ ಎಂದು ಬೆಂಗಳೂರು ಜನಪದ ಸಾಹಿತ್ಯ ಪರಿಷತ್ತಿನ ಡಾ.ಎಂ. ಮಹೇಶ್ ಚಿಕ್ಕಲ್ಲೂರು ಮಾಹಿತಿ ನೀಡಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅನುಪಮಾ ಟ್ರಸ್ಟ್, ಜನಪರ ಸಾಹಿತ್ಯ ಪರಿಷತ್ತು, ಅಂಜತ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ಮತ್ತು ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಭೌಗೋಳಿಕವಾಗಿ ಚಿಕ್ಕದಿದ್ದರೂ ಕೂಡ 33 ಗ್ರಾಮಗಳಲ್ಲೂ 33 ಕೆರೆಗಳನ್ನು ಹೊಂದಿದ್ದು ಹಚ್ಚ ಹಸಿರಿನಿಂದ ಕೂಡಿದೆ.

ಇಲ್ಲಿನ ಬಳೇಮಂಟಪದ ಏಕಶಿಲಾ ಬಳೆಗಳು ವಿಶ್ವಪ್ರಸಿದ್ಧಿ ಪಡೆದಿದೆ. ಕವಿ ಷಡಕ್ಷರದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ ನಾಟಕಕಾರ ಸಂಸ ಸೇರಿದಂತೆ ಅನೇಕ ಸಾಹಿತ್ಯ ಅನರ್ಘ್ಯ ರತ್ನಗಳನ್ನು ನೀಡಿದ ನೆಲೆ ಇದಾಗಿದೆ. ಇಲ್ಲಿ ಕವಿಗೋಷ್ಠಿ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಕವಿಗಳು ವಾಚಿಸಿದ ಕವನಗಳೂ ಕೂಡ ವಿಭಿನ್ನವಾಗಿತ್ತು ಎಂದು ಬಣ್ಣಿಸಿದರು.

ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್‌ ರಿಚ್ ಮಹದೇವಸ್ವಾಮಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣರವರು ಸಮಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟ ಮಹಾನ್ ವ್ಯಕ್ತಿಗಳಾಗಿದ್ದರು. ಸಂವಿಧಾನ ಸಮರ್ಪಣಾ ಮತ್ತು ಕನ್ನಡ ರಾಜ್ಯೋತ್ಸವ ಕುರಿತು ನಡೆಸುತ್ತಿರುವ ಈ ಕವಿಗೋಷ್ಠಿ ಅರ್ಥಪೂರ್ಣವಾಗಿದೆ. ಅಂಬೇಡ್ಕರ್ ಪರಿನಿರ್ವಾಣ ದಿನದಂದು ಅವರಿಗೆ ನಾವು ಸಲ್ಲಿಸುತ್ತಿರುವ ನಿಜವಾದ ಶ್ರದ್ಧಾಂಜಲಿಯೂ ಇದಾಗಿದೆ ಎಂದರು.

ಕವಿ, ಕವಯತ್ರಿಯರಿಂದ ಕವನ ವಾಚನ

ಕವನ ವಾಚಿಸಿದ ಅನೇಕ ಕವಿಗಳ ಕಾವ್ಯಗಳಲ್ಲಿ ಅಂಬೇಡ್ಕರ್‌ರ ಬದುಕು, ಅವರ ತತ್ವಗಳ ಅಳವಡಿಕೆ, ಕನ್ನಡ ಭಾಷೆ, ಬಳಕೆ, ಇಂದಿನ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿತು. ಇದರೊಂದಿಗೆ ಹೊಣೆಗಾರ ಹೆಣ್ಣಿನ ನೋವು, ಹೆತ್ತಮ್ಮ, ಹೆತ್ತವರು, ಎಂಬ ಕವನಗಳಲ್ಲಿ ತಾಯಿ, ಅಜ್ಜಿಯ ಪ್ರೀತಿ ಇಣುಕಿತು. ಬಿಳಿಗಿರಿರಂಗನ ಕುಸುಮಾಲೆಯ ಪ್ರೇಮ ಪ್ರಸಂಗ, ಕಾಯುತ್ತಿರುವೆ ನಲ್ಲನಿಗೆ ಬದಲಾದ ಹೆಣ್ಣಾಗಿ ಎಂಬ ಶೀರ್ಷಿಕೆಯ ಕವನಗಳು ಗಮನ ಸೆಳೆದವು. 20 ಕ್ಕೂ ಹೆಚ್ಚು ಕವಿ, ಕವಯತ್ರಿಯರು ಕವನ ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೂಳೀಪುರ ನಂದೀಶ್, ಶಂಕರ್ ಅಂಕನಶೆಟ್ಟಿಪುರ ಹಾಗೂ ಉಪಪ್ರಾಂಶುಪಾಲ ಆರ್. ನಂಜುಂಡಯ್ಯರನ್ನು ಸನ್ಮಾನಿಸಲಾಯಿತು. ಕೆಪಿಎಸ್‌ನ ಮಾಜಿ ರಾಜ್ಯ ಉಪಾಧ್ಯಕ್ಷೆ ಕೆ.ಆರ್. ಪ್ರಭಾವತಿ, ಪತ್ರಕರ್ತ ಫೈರೋಜ್‌ಖಾನ್, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ನಿವೃತ್ತ ಉಪನೋಂದಣಾಧಿಕಾರಿ ರುದ್ರಯ್ಯ ಮಾತನಾಡಿದರು.

ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಆರ್.ನಂಜುಂಡಯ್ಯ, ಪಪಂ ಮಾಜಿ ಅಧ್ಯಕ್ಷೆ ಲಕ್ಷ್ಮಿಮಲ್ಲು, ಡಾ.ಸಿ. ಪ್ರೇಮ, ವಸಂತಗೀತಾ, ದೀಪಾಬುದ್ಧೆ, ಮಹದೇವಸ್ವಾಮಿ, ಶಿಕ್ಷಕ ಪುಟ್ಟಸ್ವಾಮಿ, ಭಾಗ್ಯ ಗೌರೀಶ್, ಮಮತಾ, ಅಂಬಳೆ ಜೈಗುರು, ಪ್ರಭಾವತಿ, ಮಮತಾ, ಶಾಂತಕುಮಾರಿ, ನಾಗರಾಜು, ಶಾಂತರಾಜು ಸೇರಿದಂತೆ ಅನೇಕರು ಇದ್ದರು.

admin
the authoradmin

Leave a Reply