District

ರಂಗರತ್ನ 2025 ಪ್ರಶಸ್ತಿ ಪ್ರಧಾನ ಹಾಗೂ “ಅಯಾನ್ ಶಾಂತಿ ಕುಟೀರ” ಇಂಗ್ಲೀಷ್ ಅನುವಾದದ ಪುಸ್ತಕ ಬಿಡುಗಡೆ

ಮೈಸೂರು: ಕನ್ನಡ ರಂಗಭೂಮಿಯಲ್ಲಿ ಡಾ. ನ. ರತ್ನರವರ ಸೇವೆಯನ್ನು ಸ್ಮರಿಸಿಕೊಳ್ಳುವುದಕ್ಕಾಗಿ, ಬೆಲ್ಲಿ ಧ್ಯಾನ ಮಾಸ್ಟರ್ ಶ್ರೀ ತರ್ನೀವ್ (ಕೆನಡಾ) ಹಾಗೂ ಎನ್.ಎಸ್. ಆನಂದ್ (ಅಭಿಯಂತರರು) ಸಂಯುಕ್ತವಾಗಿ ಸ್ಥಾಪಿಸಿದ ರಂಗರತ್ನ ಸಂಸ್ಥೆ, ಕಳೆದ 5 ವರ್ಷಗಳಿಂದ ರಂಗಭೂಮಿಗೆ ಮಹತ್ವದ ಸೇವೆ ಸಲ್ಲಿಸುತ್ತಿರುವ ರಂಗಕರ್ಮಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಮುಂದುವರಿಸಿಕೊಂಡಿದೆ. ಅದರಂತೆ ಈ ಬಾರಿ ಡಿಸೆಂಬರ್ 12, ಶುಕ್ರವಾರ 2025 ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಕಿರು ರಂಗಮಂದಿರ, ಕಲಾಮಂದಿರ ಆವರಣದಲ್ಲಿ ನಡೆಯಲಿದೆ.

2020ರಿಂದ ಪ್ರತಿ ವರ್ಷ ನೀಡಲಾಗುತ್ತಿರುವ “ರಂಗರತ್ನ ಪ್ರಶಸ್ತಿ”ಯನ್ನು ಇದುವರೆಗೂ ಹೆಚ್.ಎಸ್. ಉಮೇಶ್ (2020), ಶ್ರಿಮತಿ ಹರಿಪ್ರಸಾದ್ (2021), ಮಂಜುನಾಥ ಉಪಾಧ್ಯಾಯ (2022), ಎಂ.ಎಂ. ಸುಗುಣ (2023) ಮತ್ತು ಎನ್. ಧನಂಜಯ (2024) ಅವರಿಗೆ ಪ್ರದಾನ ಮಾಡಲಾಗಿದೆ. 2025ನೇ ಸಾಲಿನ ರಂಗರತ್ನ ಪ್ರಶಸ್ತಿಯನ್ನು ಯುವ ರಂಗಕರ್ಮಿ, ಸಂಶೋಧಕಿ ಹಾಗೂ ಶಿಕ್ಷಕಿ ಡಾ. ಸಹನ ಪಿಂಜಾರ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

ಬೀದಿ ರಂಗಭೂಮಿಯಿಂದ ಆರಂಭಗೊಂಡ ಇವರ ಕಲಾಪಯಣ, ನೀನಾಸಂ, ರಾಷ್ಟ್ರೀಯ ನಾಟಕ ಶಾಲೆ ತರಬೇತಿ, ಬೆಂಗಳೂರು ವಿಶ್ವವಿದ್ಯಾಲಯದ ಪಿ.ಹೆಚ್.ಡಿ ಪದವಿ, ಮಕ್ಕಳ ಹಾಗೂ ಮಾನಸಿಕ ಅಸ್ವಸ್ಥರಿಗಾಗಿ ನಡೆಸಿದ ನಾಟಕ ಕಾರ್ಯಾಗಾರಗಳು, ಅಂತರರಾಷ್ಟ್ರೀಯ ರಂಗತರಬೇತಿಗಳು, ಹಾಗೂ ಹಲವಾರು ದೇಶ-ವಿದೇಶದ ನಿರ್ದೇಶಕರೊಂದಿಗೆ ಮಾಡಿದ ಕಾರ್ಯಗಳು ಇವರಿಗೆ ವಿಶೇಷ ಸ್ಥಾನ ನೀಡಿವೆ. ಇತ್ತೀಚೆಗೆ ಡೆಕ್ಕನ್ ಹೆರಾಲ್ಡ್ ಅಚೀವರ್ಸ್ 2025 ಪ್ರಶಸ್ತಿ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ  ಡಾ. ಯು.ಎ. ಶರತ್ ಅನಂತಮೂರ್ತಿ, ಕುಲಪತಿ, ಕುವೆಂಪು ವಿಶ್ವವಿದ್ಯಾನಿಲಯ, ಪ್ರಶಸ್ತಿ ಪ್ರಧಾನ ಪ್ರೊ. ರಾಮೇಶ್ವರಿವರ್ಮ, ಹಿರಿಯ ರಂಗಕರ್ಮಿ ಡಾ. ನ. ರತ್ನರವರ “ಅಯಾನ್ ಶಾಂತಿ ಕುಟೀರ” ನಾಟಕದ ಇಂಗ್ಲೀಷ್ ಅನುವಾದದ ಪುಸ್ತಕ ಬಿಡುಗಡೆ, ಎನ್.ಎಸ್. ಆನಂದ್, ರಂಗರತ್ನ ಸಂಸ್ಥೆ

admin
the authoradmin

Leave a Reply