Mysore

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆಯ ಮಾನಸ ತಂಡಕ್ಕೆ  ಪ್ರಥಮ ಸ್ಥಾನ

ಕುಶಾಲನಗರ (ರಘುಹೆಬ್ಬಾಲೆ) : ಮರಗೋಡು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನಗಳಿಸಿದೆ.

ಕೂಡಿಗೆ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪಿ.ಜಿ. ಮಾನಸ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿ ಎಂ.ಆರ್.ಮಾನಸ ತಂಡ ಪ್ರಥಮ ಸ್ಥಾನ ಗಳಿಸಿ ರೂ.10 ಸಾವಿರ ನಗದು ಹಾಗೂ ಪಾರಿತೋಷಕವನ್ನು ಪಡೆದಿದ್ದಾರೆ.

ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ  ನಾಗರಾಜ್ ಅಭಿನಂದಿಸಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ಕನ್ನಡ ಉಪನ್ಯಾಸಕ ರವೀಶ್ ಕಾರ್ಯನಿರ್ವಹಿಸಿದರು.ಈ ಸಂದರ್ಭ ಉಪನ್ಯಾಸಕ ನಾಗಪ್ಪ ಎಲೆಕ್ಕಿಕಟ್ಟೆ ಇದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want