CinemaLatestNews

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬರ್ತ್ ಡೇಗೆ ತವರಿನ ಉಡುಗೊರೆ ಏನು? ತವರಿಗೆ ಮರಳಿದ ಬೆಡಗಿ!

ಈಗ ದೇಶ ವಿದೇಶಗಳಲ್ಲಿ ಬಹುಭಾಷಾ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದು, ಹೋದಲ್ಲಿ ಬಂದಲ್ಲಿ ಅವರ ಬಗ್ಗೆಯೇ ಸುದ್ದಿಗಳು ಹರಿದಾಡುತ್ತಿವೆ. ತೆಲುಗಿನ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಅವರನ್ನು ವಿವಾಹವಾದ ನಂತರ ಹತ್ತು ಹಲವು ಕೆಲಸ ಮತ್ತು ಪ್ರವಾಸ ಹೀಗೆ ಸದಾ ಬಿಜ್ಹಿಯಾಗಿದ್ದ ಅವರು ತವರು ಜಿಲ್ಲೆಯಾದ ಕೊಡಗಿಗೆ ಬಂದಿರಲಿಲ್ಲ ಹೀಗಾಗಿ ಯಾವಾಗ ಬರುತ್ತಾರೆ ಎಂಬ ಕಾತರ ಇಲ್ಲಿನವರದ್ದಾಗಿತ್ತು. ಇದೀಗ ತವರಿಗೆ ಮರಳಿರುವುದು ಖುಷಿ ತಂದಿದೆ… ಅಷ್ಟೇ ಅಲ್ಲದೆ ಅವರ ಹುಟ್ಟುಹಬ್ಬಕ್ಕೆ ತವರಿನಿಂದ ಉಡುಗೊರೆಯನ್ನು ನೀಡಲಾಗಿದೆ…

ಹಾಗೆನೋಡಿದರೆ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ರಶ್ಮಿಕಾ ಮಂದಣ್ಣ ಕಡಿಮೆ ಅವಧಿಯಲ್ಲಿ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಅಷ್ಟೇ ಅಲ್ಲದೆ ಸದ್ಯದ ರಾಷ್ಟ್ರ, ವಿಶ್ವಮಟ್ಟದ ಕ್ರಶ್ ಎಂದರೂ ತಪ್ಪಾಗಲಾರದು.. ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಅವರು ಮದುವೆಯಾದ ಬಳಿಕ ಕೊಡಗಿಗೆ ಏಕೆ ಬಂದಿಲ್ಲ ಎನ್ನುವುದು ಬಹು ಜನರ ಪ್ರಶ್ನೆಯಾಗಿತ್ತು. ಇದೀಗ ಅವರು ತಮ್ಮ ವಿರಾಜಪೇಟೆಯ ಮನೆಗೆ ಆಗಮಿಸಿದ್ದು ಮತ್ತು ಹೆತ್ತವರು ನೀಡಿದ ಗಿಪ್ಟ್ ಸುದ್ದಿಯಾಗಿದೆ.

ಇನ್ನು ಮದುವೆಯಾಗಿ ಗಂಡನ ಮನೆಗೆ ಹೋದ ಮಗಳಿಗೆ ಹೆತ್ತವರು ಏನು ಉಡುಗೊರೆ ನೀಡಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳಿದ್ದವು. ಆದರೆ ಇದೀಗ ರಶ್ಮಿಕಾ ಅವರ ತಂದೆ ಮಂದಣ್ಣ  ವಿರಾಜಪೇಟೆ ತಾಲೂಕಿನ ಕುಕ್ಲೂರು  ಗ್ರಾಮದಲ್ಲಿರುವ ತನ್ನ ಪ್ರೀತಿಯ ಐಷಾರಾಮಿ ನಿವಾಸ ಸೆರಿನಿಟಿ ಯನ್ನು  ರಶ್ಮಿಕಾ ಹೆಸರಿಗೆ ದಾನವಾಗಿ ನೀಡಿರುವುದು ಗಮನಸೆಳೆದಿದೆ. ಈ ಸಂಬಂಧ ರಶ್ಮಿಕಾ ಹೆಸರಿಗೆ ಮನೆಯನ್ನು ವಿರಾಜಪೇಟೆ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟಿದ್ದಾರೆ. ತನ್ನ  ತಂದೆ ಪ್ರೀತಿಯಿಂದ ಮಮತೆಯ ಉಡುಗೊರೆಯಾಗಿ ನೀಡಿದ ಮನೆಯನ್ನು ರಶ್ಮಿಕಾ ಖುಷಿಯಿಂದ ಸ್ವೀಕರಿಸಿದ್ದಾರೆ.

ಈ ಸಂದರ್ಭದ ಸುಂದರ ಕ್ಷಣಗಳಿಗೆ ವಕೀಲರಾದ ಪಟ್ಟಡ ರೀನಾ ಪ್ರಕಾಶ್, ರಶ್ಮಿಕ ತಾಯಿ ಸುಮನ್ ಮಂದಣ್ಣ ಸಾಕ್ಷಿಯಾಗಿದ್ದಾರೆ.

admin
the authoradmin

Leave a Reply

Translate to any language you want