District

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ.. ಧಾರ್ಮಿಕ ಸಭಾ ಕಾರ್ಯಕ್ರಮ

ಸರಗೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಡೀ ರಾಜ್ಯದ್ಯಂತ ಬಡತನ ರೇಖೆಯಿಂದ ಸಣ್ಣ ಕುಟುಂಬಗಳಿಗೆ ಅನೇಕ ರೀತಿಯ ಸಾಲ ಸೌಲಭ್ಯ, ಮನೆ ನಿರ್ಮಾಣ, ಶೌಚಾಲಯ, ದೇವಸ್ಥಾನಗಳ ಜೀರ್ಣೋದ್ಧಾರ, ಮಹಿಳೆಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿ ಸೌಲಭ್ಯಗಳನ್ನು ನೀಡಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನವನ್ನು ಈ ಸಂಸ್ಥೆ ನೀಡಿದ್ದು, ಇದರ ನಡೆ-ನುಡಿಗಳೆ ನಮ್ಮ ಧರ್ಮವನ್ನು ಹೇಳುತ್ತಿವೆ. ಅದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ನುಡಿದಂತೆ ನಡೆಯಬೇಕು. ಧರ್ಮಾಚರಣೆಯಿಂದ ಸುಖ-ಸಂಪತ್ತು ಲಭಿಸುತ್ತದೆ. ಸತ್ಯ ನಾರಾಯಣ ಪೂಜೆ ಮಾಡುವುದರಿಂದ ಇಷ್ಟಾರ್ಥಗಳು ದೊರೆಯುತ್ತವೆ ಎಂದು ಶಾಸಕರ ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ಹೇಳಿದರು.

ಸರಗೂರು ತಾಲ್ಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊತ್ತೆಗಾಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಹುಲ್ಲಹಳ್ಳಿ ಯೋಜನೆ  ಮುಳ್ಳೂರು ವಲಯದ ವತಿಯಿಂದ ಇಲ್ಲಿನ ಗುಜ್ಜಮ್ಮ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ವೇಗವಾಗಿ ಬೆಳೆದಂತೆ ಇಂದಿನ ಯುವ ಜನಾಂಗದಲ್ಲಿ ಧಾರ್ಮಿಕ ನಂಬಿಕೆಗಳು ಆಚರಣೆಗಳು ಕಡಿಮೆಯಾಗುತ್ತಿದೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಸಂಸ್ಕಾರಯುತ ಜೀವನ ಮೌಲ್ಯಗಳ ಬಗ್ಗೆ ತಿಳುವಳಿಕೆ ನೀಡುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾದದ್ದು ಎಂದು ತಿಳಿಸಿದರು.

ಮನುಷ್ಯ ಧರ್ಮದ ದಾರಿಯಲ್ಲಿ ನಡೆದಾಗ  ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು  ಪ್ರತಿಹಳ್ಳಿ ಹಳ್ಳಿಗಳಲ್ಲಿ ಇಂತಹ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ಜನರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಿದ್ದು  ಇವತ್ತಿನ ದಿನ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಈ ಕಾರ್ಯಕ್ರಮ ನಡೆದಿರುವುದು ಅತ್ಯಂತ ಅರ್ಥ ಪೂರ್ಣವಾದದ್ದು ಎಂದರು.

ಜಿಪಂ ಮಾಜಿ ಸದಸ್ಯ ಪಿ. ರವಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರತಿ ದಿನ ನೂರಾರು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದೆ. ಇದರಿಂದ ಎಷ್ಟೋ ಕುಟುಂಬಗಳು ನೆರವನ್ನು ಪಡೆದುಕೊಂಡಿದೆ.ಈ ಸಂಸ್ಥೆ ಮಾಡುತ್ತಿರುವ ಪ್ರತಿಯೊಂದು ಕೆಲಸವೂ ಸಮಾಜಮುಖಿಯಾಗಿದೆ ಎಂದು ತಿಳಿಸಿದರು.

ಬಿಡಗಲು ಪಡುವಲ ವಿರಕ್ತ ಮಠದ  ಮಹದೇವಸ್ವಾಮಿಜಿ ಮಾತನಾಡಿ ಧರ್ಮಸ್ಥಳ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸ್ವಾವಲಂಬನೆಯ ಜೊತೆಗೆ ಜನರಲ್ಲಿ ಧಾರ್ಮಿಕ ಚಿಂತನೆಗಳು ಈ ಸಂಸ್ಥೆ 16 ವರ್ಷಕ್ಕಿಂತ ಮುಂಚೆಯಿಂದ ವಿಶೇಷವಾಗಿ ಶಿಸ್ತು ಸಂಯಮ ಹಾಗೂ ಜಾಗೃತಿಯನ್ನು ಮೂಡಿಸುತ್ತಿದೆ. ಮಹಿಳೆಯರು ನಾಲ್ಕು ಗೋಡೆ ಮಧ್ಯೆ ಇದ್ದರು. ಈಗ ಈ ಸಂಸ್ಥೆಯು ಮಹಿಳೆಯರನ್ನು ಸ್ವಾವಲಂಬಿಗಳಾಗಿ ಸಬಲೀಕರಣಗೊಳಿಸಿದ್ದಾರೆ, ಹಾಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಈ ಸಂಸ್ಥೆ ಎಲ್ಲಾ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸಾಮೂಹಿಕ ಪೂಜೆ ಶ್ರೇಷ್ಠವಾದದ್ದು, ಮೊಬೈಲ್‌ ನ ಯುಗದಲ್ಲಿ ಇಂದಿನ ಮಕ್ಕಳಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹರಿವು ಮೂಡಿಸುವ ಅನಿವಾರ್ಯತೆ ಇವತ್ತಿನ ದಿನ ಖಂಡಿತವಾಗಲೂ ಇದೆ ಎಂದು ಆರ್ಶಿವಚನ ನೀಡಿದರು.

ಏಕಕಾಲದಲ್ಲಿ 250 ಜೋಡಿ ಭಕ್ತರು ಸತ್ಯನಾರಾಯಣ ಪೂಜಾ ನೆರವೇರಿಸಿ ಭಕ್ತಿ ಸಮರ್ಪಿಸಿದರು.  ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅನ್ನದಾನ ಪ್ರಸಾದ ಏರ್ಪಡಿಸಿದರು.

ಈ ಸಂದರ್ಭದಲ್ಲಿ  ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಎಂ. ಮಂಜುನಾಥ್, ಧರ್ಮಸ್ಥಳ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ. ಜಿಲ್ಲಾ ನಿರ್ದೇಶಕ ವಿ. ವಿಜಯಕುಮಾರ್ ನಾಗನಾಳ್, ಗಣೇಶ್ ನಾಯಕ್, ನರಸಿಂಹಮೂರ್ತಿ, ಜೈನ್ ಸಮುದಾಯದ ಮುಖಂಡ ಎಸ್.ಎಸ್. ಸೋಮಪ್ರಭ, ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರ್, ಪಿಡಿಓ ನಾಗೇಂದ್ರ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶೋಭಾ ಸುಂದರ್,  ಪುರದಕಟ್ಟೆ ಬಸವರಾಜು, ನಾಮದಾರಿಗೌಡ ಸಂಘದ ನಿಕಟಪೂರ್ವ ಅಧ್ಯಕ್ಷ ವಿನೋದ್ ಕುಮಾರ್, ಅಧಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ಗಾಣಿಗ ಸಮಾಜದ ಅಧ್ಯಕ್ಷ ಶಿವಲಿಂಗಶೆಟ್ಟರು.

ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷರಾದ ತಿಮ್ಮಯ್ಯ, ನಾಗಣ್ಣ, ಉಪ್ಪಾರ ಸಮಾಜ ಅಧ್ಯಕ್ಷ ಮಹದೇವ, ಕೊತ್ತೇಗಾಲ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾಗೇಂದ್ರಪ್ಪ, ರಾಜೇಂದ್ರಕುಮಾರ್,  ನಾಗೇಂದ್ರ ಕುಮಾರ್, ಗಣೇಶ್ ನಾಯಕ, ಹೋಟೆಲ್ ಮಹದೇವ್, ನಂಜಪ್ಪ, ರತ್ನಯ್ಯ, ಗಣೇಶ್, ರವಿ, ಡಿ.ದನ್ಯಕುಮಾರ್, ಭೀಮನಾಯಕ, ಚಿನ್ನಮ್ಮ, ಚಲುವಪ್ಪ, ಇನ್ನೂ ಮುಖಂಡರು ಹಾಗೂ ಮುಳ್ಳೂರು ವಲಯದ ಗ್ರಾಮದ ಕೊತ್ತೇಗಾಲ, ಗೊಂತಗಾಲಹುಂಡಿ, ಕಟ್ಟೆಹುಣಸೂರು, ಚಾಮಲಾಪುರ, ಕಂದೇಗಾಲ, ಹಾದನೂರು, ಕಂದಲಿಕೆ, ಎಂ.ಸಿ. ತಳಲು, ಚನ್ನಗುಂಡಿ, ಮುಳ್ಳೂರು ಒಕ್ಕೂಟ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಕ್ತಿಗೀತೆಗಳ ಕಲರವ ಮುಳುಗಿತ್ತು.

admin
the authoradmin

Leave a Reply