ಮೈಸೂರು: ಮೈಸೂರಿನ ಕುಂದೂರು ಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಡಾ ಶರತ್ ಚಂದ್ರ ಸ್ವಾಮಿಗಳು ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಸದಸ್ಯತ್ವ ಅಭಿಯಾನಕ್ಕೆ ತಾವು ಸದಸ್ಯತ್ವ ಪಡೆದು ಕೊಳ್ಳುವುದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯವಾಣಿ ದಿನಪತ್ರಿಕೆಯ ಉಪಸಂಪಾದಕ ದೊಡ್ಡನಹುಂಡಿ ರಾಜಣ್ಣ, ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಕಾನ್ಯಶಿವ ಮೂರ್ತಿ, ಜೆಎಸ್ಎಸ್ ಮಹಾ ವಿದ್ಯಾ ಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಕಲ್ಮಳ್ಳಿ ನಟರಾಜು, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಚಂದ್ರ ಶೇಖರ್.

ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ ವಿ ಮಲ್ಲೇಶ್ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ ಶ್ರೀ ಆಯರಹಳ್ಳಿ ವಿರೂಪಾಕ್ಷ ನಿವೃತ ಶಿಕ್ಷಕರಾದ ಶ್ರೀ ಗುರು ಪಾದಸ್ವಾಮಿ, ಸಂಘದ ಅಧ್ಯಕ್ಷರಾದ ಶ್ರೀ ಬಿ ಆರ್ ಶಿವಕುಮಾರ್ ನಿರ್ದೇಶಕರಾದ ಶ್ರೀಮತಿ ಶರ್ಮಿಳಾ ಮೋಹನ್, ಮಾದಲಾಂಬಿಕೆ ದೇವನೂರು ಶಿಲ್ಪಾ ನಂದೀಶ್, ಎಂ ಎನ್ ಗಜೇಂದ್ರ ಬಾನಳ್ಳಿ ಸಂತೋಷ ಉಪಸ್ಥಿತರಿದ್ದರು


ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಶಾಸಕ ಅನಿಲ್ ಚಿಕ್ಕಮಾದುರವರಿಗೆ ಕೃತಜ್ಞತೆ ಸಲ್ಲಿಕೆ
ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಸರಗೂರು ತಾಲೂಕು ಬಿ ಮಟಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ಬೃಹತ್ ಆರೋಗ್ಯ ಶಿಬಿರದ ಯಶಸ್ಸಿಗೆ ತುಂಬು ಸಹಕಾರ ನೀಡಿದ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರನ್ನು ಸರಗೂರಿನಲ್ಲಿ ಭೇಟಿಯಾಗಿ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಗೌರವ ಸಲಹೆಗಾರ ಕಲ್ಮಳ್ಳಿ ನಟರಾಜು ಅಧ್ಯಕ್ಷರಾದ ಬಿ ಆರ್ ಶಿವಕುಮಾರ್ ನಿರ್ದೇಶಕರಾದ ಗಜೇಂದ್ರ ಉಪಸ್ಥಿತರಿದ್ದರು








