Mysore

ಬಿಜೆಪಿ ಆಯೋಜಿಸಿದ್ದ ವಿಶ್ವಮಾನವ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

ಮೈಸೂರು: ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವಮಾನವ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ರಾಮೇಗೌಡ, ಡಾ. ಚಂದ್ರಿಕಾ ವೇಣುಗೋಪಾಲ್, ಪೈಲ್ವಾನ್ ಅಮೃತ್‌ ಭಾಯ್, ಪಾಲಿಕೆ ಮಾಜಿ ಸದಸ್ಯ ಚಂದ್ರಶೇಖ‌ರ್, ಪರಮೇಶ ಕೆ. ಉತ್ತನಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸಾಹಿತಿ ಪರಮೇಶ ಕೆ. ಉತ್ತನಹಳ್ಳಿ ಅವರು ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾದುದು, ಅವರು ನಾಡಿನ ಆಸ್ತಿ, ಅವರು ಈ ನಾಡಿಗೆ ಲಭಿಸಿದ್ದು ನಮ್ಮ ಪುಣ್ಯ, ನಾಡಗೀತೆ, ರೈತಗೀತೆ, ಆಧುನಿಕ ಮಹಾಕಾವ್ಯವಾದ ಶ್ರೀರಾಮಾಯಣ ದರ್ಶನಂ, ಸರಳ ವಿವಾಹಕ್ಕಾಗಿ ಮಂತ್ರಮಾಂಗಲ್ಯ, ಕನ್ನಡದ ಉಳಿವಿಗಾಗಿ ಬಾರಿಸು ಕನ್ನಡ ಡಿಂಡಿಮವ,  ಎಲ್ಲಕ್ಕೂ ಕಿರೀಟಪ್ರಾಯವಾಗಿ ವಿಶ್ವದ ಮಾನವರೆಲ್ಲರೂ ಒಂದಾಗಿರಬೇಕೆಂದು ಸಾರುವ ವಿಶ್ವಮಾನವ ಸಂದೇಶವು ಎಂದೂ ಅಮರವಾದುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ನಗರಾಧ್ಯಕ್ಷ ಎಲ್‌.ನಾಗೇಂದ್ರ, ಅಧ್ಯಕ್ಷ ರಾಜಕುಮಾರ್, ಕಿರಣ್ ಜೈ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಎನ್.ವಿ. ಪಣೇಶ್, ಮಂಗಳಾಸೋಮಶೇಖರ್, ಹೇಮಂತ್‌ಕುಮಾರ್‌ಗೌಡ, ಕೃಷ್ಣಪ್ಪಗೌಡ, ಶ್ರೀನಿವಾಸ ಗೌಡ, ಮಹೇಂದ್ರ, ಮಹದೇವಯ್ಯ, ಹಾಲನಹಳ್ಳಿ ಅಶೋಕ್, ಜಯಪ್ರಕಾಶ್ (ಜೆ.ಪಿ), ಬಿ.ಎಂ. ರಘು, ಜಿಲ್ಲಾ ಉಪಾಧ್ಯಕ್ಷ ಅರುಣ್‌ ಕುಮಾರ್‌ಗೌಡ, ಲಕ್ಷ್ಮೀದೇವಿ ಇತರರು ಇದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want