LatestMysore

ಸರಗೂರಿನಲ್ಲಿ ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಕಾಮಗಾರಿ ವೀಕ್ಷಿಸಿದ ಶಾಸಕರು

ಸರಗೂರು(ಸರಗೂರು ದಾಸೇಗೌಡ): ಇಲ್ಲಿನ ಬಸ್ ನಿಲ್ದಾಣದ ಸಮೀಪದಲ್ಲಿ ನೂತನವಾಗಿ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ  ಶ್ರೀ ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಶಾಸಕರಾದ ಅನಿಲ್ ಚಿಕ್ಕಮಾದು ರವರು ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದರು.

ಬಳಿಕ ಮಾತನಾಡಿ, ಈಗ 62 ಲಕ್ಷಕ್ಕೂ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದು, ಈ ಸಂಬಂಧ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸುಪ್ರೀತ್ ರವರಿಗೆ ಶೀಘ್ರದಲ್ಲಿಯೇ  ಸಮುದಾಯ ಭವನದ ಕೆಲಸವನ್ನು ಪೂರ್ಣಗೊಳಿಸಿ ಭವನವನ್ನು ಸದ್ಯದಲ್ಲಿಯೇ ಉದ್ಘಾಟಿಸಬೇಕು ಎಂದರು.

ಎಚ್.ಡಿ ಕೋಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಕೀಲ ಕಂದೇಗಾಲ ಶಿವರಾಜ್ ಮಾತನಾಡಿ, ತಾಲೂಕಿನ ಶಾಸಕರಾದ ಅನಿಲ್  ಚಿಕ್ಕಮಾದುರವರು ಸರಗೂರು ಹಾಗೂ ಎಚ್.ಡಿ ಕೋಟೆ ತಾಲೂಕಿನಾದ್ಯಂತ ನೂರಾರು ಕೋಟಿಗಳ ವೆಚ್ಚದಲ್ಲಿ ಅನುದಾನಗಳನ್ನು ತಂದು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಯಾವ ಶಾಸಕರು ಮಾಡದೆ ಇದ್ದ ಕಾರ್ಯಕ್ರಮಗಳನ್ನು ಈ ಯುವ ಶಾಸಕರು ವಿಧಾನಸೌಧದಲ್ಲಿ ಚುಕ್ಕೆ ಕಾರ್ಯಕ್ರಮ ಮೂಲಕ ವಿಧಾನಸೌಧದಲ್ಲಿ ದ್ವನಿ ಎತ್ತಿ, ಎಚ್ ಡಿ ಕೋಟೆ ಸರಗೂರು ಅವಳಿ ತಾಲೂಕಿಗೆ ಹೆಚ್ಚಿನ ಅನುದಾನ ತಂದು ಕಾರ್ಯಕ್ರಮಗಳು ನಡೆಯುತ್ತಿವೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು,  ಗುತ್ತಿಗೆದಾರ ಕೋಟೆ ಪರಶಿವಮೂರ್ತಿ, ಕೋಟೆ ತಾಲೂಕು ಕಾಂಗ್ರೆಸ್ ಪಕ್ಷದ ಮಹಿಳಾಧ್ಯಕ್ಷೆ ಸೌಮ್ಯ ಮಂಜುನಾಥ್, ಸರಗೂರು ಯುವ ಘಟಕದ ಕಾಂಗ್ರೆಸ್ ಅಧ್ಯಕ್ಷ ವಕೀಲ ಶಿವರಾಜು, ಸರಗೂರು ಮಾದಿಗ ಸಮಾಜದ ಯಜಮಾನರುಗಳಾದ ವೆಂಕಟೇಶ, ಸ್ವಾಮಿ, ರಾಮಚಂದ್ರ, ರಮೇಶ, ಹಂಚೀಪುರದ ಸಮಾಜದ ಸುರೇಶ ಹಾಗೂ ಯಜಮಾನರು, ಇನ್ನಿತರ ಗ್ರಾಮದ ಸಮಾಜದ ಯಜಮಾನರು, ಅಂತರಸಂತೆ ಅಶೋಕ್, ಶಾಸಕರ ಆಪ್ತ ಕಾರ್ಯದರ್ಶಿ   ಮಂಜುನಾಥ್ ಶೆಟ್ಟಿ, ಸುದರ್ಶನ್, ಸಿದ್ದರಾಜು, ಚಿಕ್ಕರವರು ಇನ್ನಿತರರು ಹಾಜರಿದ್ದರು.

admin
the authoradmin

Leave a Reply

Translate to any language you want