LatestMysore

ಸರಗೂರಿನಲ್ಲಿ ಗಾಣಿಗ ಸಮಾಜ -ಸೇವಾಭಿವೃದ್ದಿ ಟ್ರಸ್ಟ್   5ನೇ ವಾರ್ಷಿಕೋತ್ಸವ.. ಸ್ವರ್ಣ ಗಣಪತಿ ಉತ್ಸವ

ಸರಗೂರು(Saraguru Dasegowda): ಪಟ್ಟಣದ ಮಹಾವೀರ ಸರ್ಕಲ್ ಬಳಿ ಇರುವ ಮಹಾಗಣಪತಿ ದೇವಸ್ಥಾನದಲ್ಲಿ ಗಾಣಿಗ ಸಮಾಜ ಹಾಗೂ ಸೇವಾಭಿವೃದ್ದಿ ಟ್ರಸ್ಟ್ ವತಿಯಿಂದ 5 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಹಬ್ಬದ ಅಂಗವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದ ಗಾಣಿಗ ಸಮಾಜದ ಸಮಿತಿ ಮುಖಂಡರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು ಪಲ್ಲಕ್ಕಿ ಮೂಲಕ ಸ್ವರ್ಣ ಗಣಪತಿ ಉತ್ಸವ ನಡೆಯಿತು. ನಂತರ ಮಹಾಗಣಪತಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ದೇವಸ್ಥಾನದ ಮುಂಭಾಗದಲ್ಲಿ ಬೆಳಗಿನ ಜಾವದಲ್ಲಿ ಮಹೋತ್ಸವದ ಹಾಗೂ ಶಿವರಾತ್ರಿ ಹಬ್ಬ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಕಟ್ಟಿ,  ರಂಗೋಲಿ ಬಿಡಿಸಿ, ವಿದ್ಯುತ್ ದೀಪಗಳಿಂದ ದೇವಸ್ಥಾನ ಹಾಗೂ ಇವರ ಜನಾಂಗದ ಬೀದಿಗಳು ಘಮ ಘಮಿಸುತಿದ್ದವು.

ದೇವಾಲಯದಲ್ಲಿ ಮುಂಜಾನೆಯಿಂದಲೆ ಹೋಮ-ಹವನ ನಡೆಸಿ, ಗಣಪತಿ ಹೋಮ ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ನವಗ್ರಹ ಹೋಮ, ದುರ್ಗಹೋಮ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.  ಕಪಿಲಾ ನದಿಗೆ ತೆರಳಿ ಗಂಗೆ ಪೂಜೆ ನಡೆಸಿ, ಪೂರ್ಣಕುಂಭ ಕಳಶದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ವಿಶೇಷ ಪೂಜೆ ನಡೆಸಿ, ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು. ನಂತರ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಬೆಂಗಳೂರಿನ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಸಂಸ್ಥಾಪಕರಾದ ಶ್ರೀ ಪೂರ್ಣನಂದಪುರಿ ಸ್ವಾಮೀಜಿಗಳು ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಸಮಾಜದ ಯುವಕರಲ್ಲಿ ಸಂಸ್ಕಾರ ಮತ್ತು ಶಿಕ್ಷಣವನ್ನು ಬಿತ್ತುವುದು. ಪ್ರತಿಯೊಬ್ಬ ವ್ಯಕ್ತಿ ಶಿಕ್ಷಣ ಪಡೆದಾಗ ಮಾತ್ರ ಗಾಣಿಗ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಕಾಣಲಿದೆ. ಆದ್ದರಿಂದ ಗಾಣಿಗ ಸಮಾಜದ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಗಾಣಿಗ ಸಮಾಜ ನನಗೆ ಸಾಕಷ್ಟು ಕೊಡುಗೆ ನೀಡಿದೆ. ಈ ಸಮಾಜ ಸದೃಢವಾಗಲು ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕು. ಉಳ್ಳವರು, ಹಿಂದುಳಿದವರ ನೆರವಿಗೆ ಧಾವಿಸಬೇಕು ಆಗ ಮಾತ್ರ ಗಾಣಿಗ ಸಮಾಜ ಉನ್ನತ ಮಟ್ಟಕ್ಕೆ ಏರಲಿದೆ ಎಂದರು.

ಗಾಣಿಗರ ಸಮುದಾಯಕ್ಕೆ ತನ್ನದೇ ಆದ ಪರಂಪರೆ, ಸಂಸ್ಕೃತಿ, ಭಕ್ತಿ, ಶ್ರದ್ಧೆ,ಹೌದಾರ್ಯತೆ ಇದೆ. ಯಾವುದೇ ಕೆಲಸ ಕೊಟ್ಟರೂ ಚಾಚೂ ತಪ್ಪದೇ ಅಚ್ಚುಕಟ್ಟಾಗಿ ಮಾಡುವ ಚಾಣಕ್ಷತನ ಈ ಸಮಾಜದವರಿಗಿದೆ. ಎಲ್ಲರೂ ಭರವಸೆಯ ವ್ಯಕ್ತಿಗಳಾಗಬೇಕು. ಶ್ರೀಮಠದ ಆಸ್ತಿಯನ್ನು ಸಂರಕ್ಷಣೆ ಮಾಡಿದ ಕೀರ್ತಿ ಇಲ್ಲಿನ ಗಾಣಿಗರ ಸಮುದಾಯದ ಹಿರಿಯರಿಗೆ ಸಲ್ಲುತ್ತದೆ. ದುಡಿಯುವ ಹಾಗೂ ಕೊಡುವ ಸಮುದಾಯ ಇದಾಗಿದೆ ಎಂದು ಆರ್ಶಿವಚನ ನೀಡಿದರು.

ನಿಮ್ಮ ಮಕ್ಕಳನ್ನು ಶಿಕ್ಷಣ ನೀಡುವಲ್ಲಿ ನಿರ್ಲಕ್ಷ ವಹಿಸಿದಲ್ಲಿ ಬೆಂಗಳೂರಿನ ನಮ್ಮ ಮಠಕ್ಕೆ ಕಳಿಸಿ ನಾವು ಶಿಕ್ಷಣ ಮತ್ತು ಆರೋಗ್ಯ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆವೆ, ವಿಧ್ಯಾಭ್ಯಾಸದ ತೊಂದರೆಯಾಗದಂತೆ ನೋಡಿಕೊಳ್ಳಲು ಶ್ರಮ ಪಡುತ್ತೇವೆ ಎಂದು ಮಕ್ಕಳ ಪೋಷಕರಿಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಶಿವಲಿಂಗಶೆಟ್ಟಿ, ಗೌರವಾಧ್ಯಕ್ಷ ಹೆಚ್. ಮಾದಶೆಟ್ಟಿ, ಉಪಾಧ್ಯಕ್ಷ ನಂಜುಂಡಶೆಟ್ಟಿ, ಕಾರ್ಯದರ್ಶಿ ವಿ. ವೆಂಕಟರಾಮು, ಖಜಾಂಚಿ ಕೆಂಡಗಣ್ಣಸ್ವಾಮಿ, ಸಂಘಟನಾ ಕಾರ್ಯದರ್ಶಿ ದಿನೇಶ್ ಕುಮಾರ್, ಯಜಮಾನರಾದ ಸೋಮಶೆಟ್ಟಿ, ಮಹಾದೇವಶೆಟ್ಟಿ, ಚಿಕ್ಕ ಯಜಮಾನರಾದ ಬಸವಶೆಟ್ಟಿ, ವೆಂಕಟಪ್ಪ, ಗಡಿ ಯಜಮಾನರಾದ ಕೃಷ್ಣಶೆಟ್ಟಿ, ಸಮಿತಿ ಸದಸ್ಯರಾದ ಹೊನ್ನಮ್ಮನಕಟ್ಟೆ ದಿನೇಶ್, ಬಸವರಾಜು, ಚಂದ್ರ ಹೆಚ್.ಡಿ ಕೋಟೆ, ಶಿವಣ್ಣ, ನಾಗಶೆಟ್ಟಿ ಎಸ್, ಸಣ್ಣಸ್ವಾಮಶೆಟ್ಟಿ, ಬಿಎಸ್ಎನ್ಎಲ್ ನಾಗರಾಜು, ಕಾರಯ್ಯ, ಡ್ರೈ  ವೆಂಕಟೇಶ್, ಎನ್ ಮಾದೇವ, ಎಲೆಕ್ಟ್ರಿಕಲ್ ನಾಗರಾಜು

ಪಟ್ಟಣ ಪಂಚಾಯತಿ ಅಧ್ಯಕ್ಷೆ ಚೈತ್ರಾಸ್ವಾಮಿ, ಸದಸ್ಯ ಶ್ರೀನಿವಾಸ, ದಿವ್ಯಾ ನವೀನ್ ಕುಮಾರ್, ನಾಯಕ ಸಮಾಜದ ಬಸವರಾಜು, ಈಡಿಗ ಸಮಾಜದ ವೈನ್ಸ್ ಕರಿಯಪ್ಪ, ವೀರಶೈವ ಸಮಾಜದ ಎಸ್.ಎನ್ ಮೋಹನಕುಮಾರ್,  ನಿವೃತ್ತ ಪಿಡಿಓ ಮಲ್ಲೇಶ್, ಲಿಂಗಚಾರ್, ವಕೀಲ ಶ್ರೀನಿವಾಸ, ಗುತ್ತಿಗೆದಾರ ಬಸವರಾಜು, ತೊಗಟವೀರ ಸಮಾಜದ ನಾಗರಾಜರಾಮ, ಡಾ ಚೈತ್ರಾ, ಪ್ರಧಾನ ಅರ್ಚಕ ಸೋಮಶೇಖರ್, ಶ್ರೀನಿವಾಸ, ವೆಂಕಟೇಶ್ ಹಾಗೂ ಗಾಣಿಗ ಸಮಾಜದ ಮುಖಂಡರು, ಯುವ ಮುಖಂಡರುಗಳು ಸೇರಿದಂತೆ ಎಲ್ಲಾ ಜನಾಂಗದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ರಾತ್ರಿ ಸರಗೂರಿನ ಧ್ರುವತಾರೆ ಮೆಲೋಡಿಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

admin
the authoradmin

Leave a Reply

Translate to any language you want