LatestMysore

ಕುಲಕಸುಬು ನಂಬಿರುವ ಕುಂಬಾರ ಜನಾಂಗಕ್ಕೆ ಸರ್ಕಾರಿ ನಿವೇಶನ ಗುರುತಿಸುವ ಭರವಸೆ

ಸರಗೂರು(Saragur Dasegowda): ಕುಲಕಸುಬು ನಂಬಿ ಜೀವನ ನಡೆಸುತ್ತಿರುವ ತಾಲೂಕಿನ ಕುಂಬಾರ ಜನಾಂಗಕ್ಕೆ ಸರಕಾರಿ ನಿವೇಶನ ಗುರುತಿಸಲಾಗುವುದು ಎಂದು ತಹಸೀಲ್ದಾರ್ ಮೋಹನಕುಮಾರಿ ಹೇಳಿದ್ದಾರೆ.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಕುಂಬಾರ ಗುಂಡಯ್ಯ ಅಭಿವೃದ್ಧಿ ಸಂಘದಿಂದ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ‘ಬದುಕಿನ ಸಮಸ್ಯೆಗಳನ್ನು ನೇರ ನಿಷ್ಟುರವಾಗಿ ತ್ರಿಪದಿಯ ವಚನಗಳ ಮೂಲಕ ಸಮಾನತೆ ಸಾರಿದ ಮಹಾನ್ ಸಂತ ಕವಿ ಸರ್ವಜ್ಞ. ಇಂಥವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರೂ ಶಿಕ್ಷಣ ಪಡೆದು ಮುಂದೆ ಬರಬೇಕು ಎಂದರಲ್ಲದೆ, ನಿವೇಶನದ ಬಗ್ಗೆ ಶಾಸಕರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಶ್ರೀ ಕುಂಬಾರ ಗುಂಡಯ್ಯ ಅಭಿವೃದ್ಧಿ ಸಂಘದ ಸರಗೂರು ಅಧ್ಯಕ್ಷ ಸಂದ್ಯಾ ಗೋಭಿ ಮಾಲೀಕ ಎಸ್.ಆರ್. ರಂಗಸ್ವಾಮಿ, ಆನಂದ ಮೈಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ವತಿಯಿಂದ ಹದಿನೈದಕ್ಕೂ ಹೆಚ್ಚಿನ ಸಾಧಕ ಗಣ್ಯರನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ ಸ್ವಾಮಿ,  ಸದಸ್ಯರಾದ ನೂರಾಳಸ್ವಾಮಿ,ಮುಖಂಡ ಭಜರಂಗಿರಾಮು, ಉಪಾಧ್ಯಕ್ಷ ಕೆ.ಮಾದೇವಶೆಟ್ಟಿ ಕಾರ್ಯದರ್ಶಿ ಕೆ.ಆರ್. ರಾಮಶೆಟ್ಟಿ ಸದಸ್ಯರಾದ ನಾಗೇಂದ್ರ, ಸಿದ್ದರಾಜು, ರಂಗಶೆಟ್ಟಿ, ನಾಗರಾಜಶೆಟ್ಟಿ, ಗ್ರೇಟ್ ತಹಶೀಲ್ದಾರ್ ಪರಶಿವಮೂರ್ತಿ, ಶಿರಸ್ತೇದಾರ್  ಮನೋಹರ್, ಆರ್‌ ಐ ಮುಜೀಬ್, ರವಿಚಂದ್ರ, ಶ್ರೀನಿವಾಸ್, ಕೊತ್ತೆಗಾಲ ನಂಜಪ್ಪ, ತೆರಣಿಮುಂಟಿ ನಾಗೇಂದ್ರ, ಕಂಪ್ಯೂಟರ್ ರವಿ, ನಾಗರಾಜ್ ಶೆಟ್ಟಿ, ಪಶು ಸಂಗೋಪನೆ ಇಲಾಖೆಯ ಪಾಟೀಲ್ ಇಲಾಖೆ ಯ ಇನ್ನಿತರ ಅಧಿಕಾರಿಗಳು,ಅಣ್ಣಯ್ಯಸ್ವಾಮಿ, ದೇವರಾಜು, ದೊಡ್ಡಯ್ಯ ಮೊದಲಾದವರಿದ್ದರು.

admin
the authoradmin

Leave a Reply

Translate to any language you want